BBK 12: ಮೊದಲ ದಿನವೇ 18 ಸ್ಪರ್ಧಿಗಳಿಗೆ ಬಿಗ್ ಶಾಕ್; ರಕ್ಷಿತಾ ಶೆಟ್ಟಿ ಎಲಿಮಿನೇಟ್?

ಬಿಗ್‌ಬಾಸ್ ಕನ್ನಡ ಸೀಸನ್-12 ಭರ್ಜರಿಯಾಗಿ ಆರಂಭವಾಗಿದೆ. ನಿನ್ನೆ(ಸೆಪ್ಟೆಂಬರ್ 28) ನಡೆದ ಗ್ರ್ಯಾಂಡ್ ಓಪನಿಂಗ್‌ನಲ್ಲಿ ವಿವಿಧ ಕ್ಷೇತ್ರಗಳ 19 ಮಂದಿ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ವೇದಿಕೆಯಿಂದ ಮನೆಯೊಳಗೆ ಕಳುಹಿಸಿದ್ದರು. ವಿಪರ್ಯಾಸ ಅಂದ್ರೆ ಮೊದಲ ದಿನವೇ ಒಬ್ಬರನ್ನು ಬಿಗ್‌ಬಾಸ್ ಎಲಿಮಿನೇಟ್ ಮಾಡಿರುವಂತೆ ಕಾಣ್ತಿದೆ.

ದೊಡ್ಮನೆಯಲ್ಲಿ ಸ್ಪರ್ಧಿಗಳು ಮೊದಲ ದಿನ ಕಳೆಯುತ್ತಿದ್ದಾರೆ. ಮನೆಯ ಯಾವ ಮೂಲೆಯಲ್ಲಿ ಏನಿದೆ? ಆಟ ಹೇಗೆ ಎಂದು ಗೊತ್ತಾಗುವ ಮುನ್ನವೇ ಒಬ್ಬರಿಗೆ ಗೇಟ್ ಪಾಸ್ ಕೊಡಲು ಬಿಗ್‌ಬಾಸ್ ಎಂಟ್ರಿಯಾಗಿದೆ. ಇದು ಸಹಜವಾಗಿಯೇ ಮನೆ ಮಂದಿಗೆ ಶಾಕ್ ಆಗಿದೆ. ಮನೆಯ ಬಾಗಿಲು ಓಪನ್ ಆಗಿದ್ದು ಯಾರು ಹೊರ ಹೋಗುತ್ತಾರೆ ಎನ್ನುವುದು ರಾತ್ರಿ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

Bigg Boss Kannada 12 Begins with a Bang First-Day Elimination Twist Leaves Housemates Stunned

ಹಾಯ್ ಹೇಳೋಕೂ ಮುನ್ನವೇ ಟಾಟಾ-ಬಾಯ್ ಹೇಳೋದು ಯಾರು? ಎಂದು ಬಿಗ್‌ಬಾಸ್ ಮನೆಯ ಮೊದಲ ದಿನದ ಪ್ರೋಮೊ ರಿಲೀಸ್ ಆಗಿದೆ. ಸ್ಪರ್ಧಿಗಳೆಲ್ಲಾ ಮನೆಯಲ್ಲಿ ಓಡಾಡಿಕೊಂಡು ಆರಾಮಾಗಿ ಇದ್ದಾಗಲೇ ಬಿಗ್‌ಬಾಸ್ ಧ್ವನಿ ಕೇಳಿಸಿದೆ. ನಾನು ಬಂದಿರುವುದು ಸ್ವಾಗತ ಹೇಳುವುದಕ್ಕೆ ಅಲ್ಲ, ನಿಮ್ಮಲ್ಲಿ ಒಬ್ಬರಿಗೆ ವಿಆದಯ ಹೇಳಲು. ಪರಸ್ಪರ ಚರ್ಚಿಸಿ ಒಬ್ಬರಿಗೆ ಮುಖ್ಯ ದ್ವಾರ ತೋರಿಸಿ ಎಂದು ಬಿಗ್‌ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ.

ಬಿಗ್‌ಬಾಸ್ ಮಾತು ಕೇಳಿ ಸ್ಪರ್ಧಿ ಕಣ್ಣು, ಬಾಯಿ ಬಿಟ್ಟು ಶಾಕ್ ಆಗಿದ್ದಾರೆ. ತಮ್ಮತಮ್ಮಲ್ಲೇ ಚರ್ಚೆ ಆರಂಭಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಎರಡ್ಮೂರು ದಿನ ಉಳಿಯುವ ಆಸೆಯಿತ್ತು ಎಂದು ಗಾಯಕ ಮಾಳು ನಿಪನಾಳ ಹೇಳಿದ್ದಾರೆ. ಸ್ಪಂದನಾಗೆ ಹೊರಗಡೆ ತುಂಬಾ ಅವಕಾಶ ಸಿಗಬಹುದು ಅಶ್ವಿನಿ ಗೌಡ ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಪ್ಪು ತಪ್ಪಾಗಿ ಮಾತಾಡಿ ಫೇಮಸ್ ಆಗುವುದು ಇರುತ್ತೆ ಎಂದು ರಕ್ಷಿತಾ ಶೆಟ್ಟಿ ಬಗ್ಗೆ ಜಾಹ್ನವಿ ಹೇಳಿದಂತೆ ಕಾಣ್ತಿದೆ. ರಕ್ಷಿತಾ ಮನೆಯಿಂದ ಹೊರಗಡೆ ಬರಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಆದರೆ ನಿಜಕ್ಕೂ ಮೊದಲ ದಿನ ಎಲಿಮೇಷನ್ ಆಗುತ್ತಾ? ಇದು ಬರೀ ಟ್ವಿಸ್ಟ್ ಅಷ್ಟೇನಾ? ಎನ್ನುವುದನ್ನು ಕಾದು ನೋಡಬೇಕಿದೆ.

ರಾತ್ರಿ 9.30ಕ್ಕೆ ಬಿಗ್‌ಬಾಸ್ ಎಪಿಸೋಡ್‌ಗಳು ಪ್ರಸಾರವಾಗಲಿದೆ. ಶನಿವಾರ ಹಾಗೂ ಭಾನುವಾರ ಮಾತ್ರ 'ವಾರದ ಕತೆ ಕಿಚ್ಚನ ಜೊತೆ' ರಾತ್ರಿ 9.30ಕ್ಕೆ ಶುರುವಾಗಲಿದೆ. ಈ ಬಾರಿಯ ಬಿಗ್‌ಬಾಸ್‌ ಸ್ಪರ್ಧಿಗಳು ಇಂಟ್ರೆಸ್ಟಿಂಗ್ ಆಗಿ ಇದ್ದಾರೆ ಎಂದು ಸುದೀಪ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ನಟರಾದ ಧನುಷ್, ಕಾಕ್ರೋಚ್ ಸುಧಿ, ಗಿಲ್ಲಿ ನಟ, ಚಂದ್ರಪ್ರಭ, ಅಭಿಷೇಕ್, ಧ್ರುವಂತ್ ನಟಿಯರಾದ ಅಶ್ವಿನಿ ಗೌಡ, ಜಾಹ್ನವಿ, ಸ್ಪಂದನಾ, ಅಶ್ವಿನಿ ಎಸ್. ಎನ್, ರಾಶಿಕಾ ಶೆಟ್ಟಿ, ಮಂಜುಭಾಷಿಣಿ, ಕಾವ್ಯ ಶೈವ ಅದೇ ರೀತಿ ಬಾಡಿಬಿಲ್ಡರ್ ಕರಿಬಸಪ್ಪ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ರಕ್ಷಿತಾ ಶೆಟ್ಟಿ, ಮಲ್ಲಮ್ಮ ಇನ್ನು ಆರ್‌ಜೆ ಅಮಿತ್ ಹಾಗೂ ಡಾಗ್ ಸತೀಶ್ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.

ಬಿಗ್‌ಬಾಸ್ 12 ಗ್ರ್ಯಾಂಡ್ ಓಪನಿಂಗ್ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿತ್ತು. ಮುಂದೆ 100 ದಿನಗಳ ಕಾಲ ದೊಡ್ಮನೆ ಒಳಗೆ ಆಟ ಮುಂದುವರೆಯಲಿದೆ. ಕೆಲವರು ನೇಮು ಫೇಮು ಬೇಕು ಎಂದು ಬಿಗ್‌ಬಾಸ್ ಶೋಗೆ ಬಂದಿದ್ದಾರೆ. ಕೆಲವರಿಗೆ ಹೆಸರು ಬೇಕಂತೆ, 50 ಲಕ್ಷ ರೂ. ಬಹುಮಾನದ ಮೇಲೆ ಕೆಲವರು ಕಣ್ಣಿಟ್ಟಿದ್ದಾರೆ. ಯಾರು ಕೊನೆಯವರೆಗೂ ಉಳಿದುಕೊಳ್ತಾರೆ? ಎಂದು ಕಾದು ನೋಡಬೇಕಿದೆ.

More from Filmibeat

English summary
Shock in Bigg Boss Kannada Season 12: One Contestant to Exit on Opening Day
Read more about: bigg boss bigg boss 12
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X