BBK12; ಜೋಡಿ ಟಾಸ್ಕ್; ಧ್ರುವಂತ್ ಮೇಲೆ ರಕ್ಷಿತಾ ಗರಂ; ಪ್ರೋಮೊ ವೈರಲ್
ಬಿಗ್‌ಬಾಸ್ 12ರಲ್ಲಿ ಈ ವಾರ ಕ್ಯಾಪ್ಟನ್ ಆಯ್ಕೆಗಾಗಿ ಹೊಸ ಟಾಸ್ಕ್ ಕೊಡಲಾಗಿದೆ. ಜೋಡಿಗಳಾಗಿ ಸ್ಪರ್ಧಿಗಳು ಅಖಾಡಕ್ಕೆ ಇಳಿದಿದ್ದಾರೆ. ಗಿಲ್ಲಿ- ಕಾವ್ಯ, ಮಾಳು- ರಕ್ಷಿತಾ, ರಘು- ಅಶ್ವಿನಿ, ಸೂರಜ್- ರಾಶಿಕಾ, ಅಭಿ-ಸ್ಪಂದನಾ ಹಾಗೂ ರಜತ್-ಚೈತ್ರಾ ಹೀಗೆ ಜೋಡಿಗಳಾಗಿ ಟಾಸ್ಕ್ ಆಡುತ್ತಿದ್ದಾರೆ. ಧ್ರುವಂತ್ ಹಾಗೂ ಧನುಷ್ ಟಾಸ್ಕ್ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಟಾಸ್ಕ್‌ನಲ್ಲಿ ಸ್ಪರ್ಧಿಗಳು ಯಾವುದೇ ತಪ್ಪು ಮಾಡದಂತೆ ಇವರಿಬ್ಬರು ನೋಡಿಕೊಳ್ಳಬೇಕಿದೆ. ಅದೇ ಈಗ ಧ್ರುವಂತ್ ಹಾಗೂ ರಕ್ಷಿತಾ ನಡುವೆ ಕಿರಿಕ್‌ಗೆ ಕಾರಣವಾಗಿದೆ. ಈ ಹಿಂದೆ ಒಮ್ಮೆ ಇಬ್ಬರು ಜಗಳವಾಡಿದ್ದರು. ರಕ್ಷಿತಾ ಕನ್ನಡ ಮಾತನಾಡಲು ಬರಲ್ಲ ಎಂದು ನಾಟಕ ಮಾಡುತ್ತಾರೆ, ವೀಕೆಂಡ್ ಬಂದರೆ ಸುದೀಪ್ ಸರ್ ಮುಂದೆ ಚೆನ್ನಾಗಿಯೇ ಮಾತನಾಡುತ್ತಾರೆ ಎಂದು ಧ್ರುವಂತ್ ವ್ಯಂಗ್ಯವಾಡಿದ್ದರು.

ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಜೋಡಿಗಳಾಗಿ ಸ್ಪರ್ಧಿಗಳು ಟಾಸ್ಕ್ ಆಡುತ್ತಿದ್ದಾರೆ. ಸೂರಜ್ ಹಾಗೂ ರಾಶಿಕಾ ಸ್ಪರ್ಧೆಯಿಂದ ಹೊರ ಗುಳಿದಿದ್ದಾರೆ. ಚೆಂಡುಗಳನ್ನು ಸಂಗ್ರಹಿಸುವ ಆಟದಲ್ಲಿ ರಕ್ಷಿತಾ, ಮಾಳು ನಿಯಮ ಮೀರಿದ್ದಾರೆ ಎಂದು ಧ್ರುವಂತ್ ಹೇಳಿದ್ದು ಇದು ರಕ್ಷಿತಾ ಆಕ್ರೋಶಕ್ಕೆ ಕಾರಣವಾಗಿದೆ.
ಧ್ರುವಂತ್ ಆಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಗರಂ ಆಗಿ ರಕ್ಷಿತಾ ಆಟ ಬಿಟ್ಟು ಕೂಗಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೋಲಿನಿಂದ ಬಿಡಿಯುತ್ತಾ ಆಕ್ರೋಶ ಹೊರ ಹಾಕಿದ್ದಾರೆ. ಹೊಸ ಪ್ರೋಮೊದಲ್ಲಿ ಅದನ್ನು ನೋಡಬಹುದು. ವೀಕೆಂಡ್ ಪಂಚಾಯ್ತಿ ವೇಳೆ ಧ್ರುವಂತ್ ತಾವು ಶೋ ಬಿಟ್ಟು ಹೋಗುವುದಾಗಿ ಸುದೀಪ್ ಅವರ ಮುಂದೆ ಹೇಳಿದ್ದರು. ಮನೆಮಂದಿ ತಮಗೆ ಊಸರವಳ್ಳಿ, ಕಪಟಿ ಎನ್ನುವ ಬಿರುದುಗಳನ್ನು ಕೊಟ್ಟಿದ್ದು ಅವರಿಗೆ ಬೇಸರ ತಂದಿತ್ತು.
ಈ ವಾರ ಕೂಡ ಧ್ರುವಂತ್ ಅವರನ್ನು ಕುಗ್ಗಿಸುವ ಪ್ರಯತ್ನ ನಡೀತು. ಜೋಡಿ ಟಾಸ್ಕ್‌ನಲ್ಲಿ ಆಡಲು ಯಾರೊಬ್ಬರು ಧ್ರುವಂತ್ ಅವರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಮನೆ ಮಂದಿಗೆ ಅವರು ಬೇಡವಾಗಿಬಿಟ್ಟರು. ಹಾಗಾಗಿ ಉಸ್ತುವಾರಿ ಜವಾಬ್ದಾರಿ ಸಿಕ್ಕಿದ್ದು ಅದನ್ನು ಒಪ್ಪಿಕೊಂಡಿದ್ದಾರೆ. 'ರಿಂಗ ರಿಂಗ' ಟಾಸ್ಕ್‌ನಲ್ಲಿ ನ್ಯಾಯಯುತವಾಗಿ ಆಡಿ ಧ್ರುವಂತ್ ಗಮನ ಸೆಳೆದಿದ್ದಾರೆ. ಇದನ್ನು ನೋಡಿ ಈ ವಾರ ಕಿಚ್ಚನ ಚಪ್ಪಾಳೆ ಗ್ಯಾರಂಟಿ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ರಕ್ಷಿತಾ ಕನ್ನಡ ಮಾತನಾಡಲು ಕಷ್ಟಪಡುವ ಬಗ್ಗೆ ಧ್ರುವಂತ್ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಇಬ್ಬರೂ ಚೆನ್ನಾಗಿಯೇ ಇದ್ದರು. ದಿನ ಕಳೆದಂತೆ ಭಿನ್ನಾಭಿಪ್ರಾಯ ಶುರುವಾಗಿತ್ತು. ಮುಖ್ಯವಾಗಿ ರಕ್ಷಿತಾ ಕನ್ನಡ ಮಾತನಾಡಲು ಕಷ್ಟಪಡುವ ವಿಚಾರದ ಬಗ್ಗೆ ವ್ಯಂಗ್ಯ ಮಾಡಿ ಮಾತನಾಡಿದ್ದರು. ಅದು ರಕ್ಷಿತಾ ಅಸಮಾಧಾನಕ್ಕೂ ಕಾರಣವಾಗಿತ್ತು.
"ಎಂತ ಗೊತ್ತುಂಟ ಗಯ್ಸ್" ಎಂದು ಧ್ರುವಂತ್ ಅಣಕವಾಡಿದ್ದರು. "ನಾನು ಕೂಡ ಮಂಗಳೂರಿನವನು. ಆದರೆ, ಮಂಗಳೂರಿನಲ್ಲಿ ಯಾರು ಕೂಡ ರಕ್ಷಿತಾ ರೀತಿ ಮಾತನಾಡುವುದನ್ನು ನೋಡಿಲ್ಲ. ಅಶ್ವಿನಿ ವಿರುದ್ಧ ಮಾತನಾಡುವ ರಕ್ಷಿತಾ, ಸುದೀಪ್ ಸರ್ ಎದುರು ಸೈಲೆಂಟ್ ಆಗಿ ಬಿಡುತ್ತಾರೆ" ಎಂದಿದ್ದರು. ಆದರೆ ಈ ವಿಚಾರದಲ್ಲಿ ರಕ್ಷಿತಾ ಪರ ನೆಟ್ಟಿಗರು ನಿಂತಿದ್ದರು. ಆಕೆ ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದಿದ್ದರು.
ಬಿಗ್‌ಬಾಸ್ ಸೀಸನ್ 12 ಈಗ 65 ದಿನ ಪೂರೈಸಿದೆ. ಇನ್ನು 30 ದಿನಗಳ ಮಾತ್ರ ಬಾಕಿಯಿದೆ. ಕಳೆದ ವಾರ ಜಾಹ್ನವಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. 10 ಮಂದಿ ಬಿಗ್‌ಬಾಸ್ ಜರ್ನಿ ಮುಗಿಸಿ ಇನ್ನು ಮುಂದೆ ಪ್ರತಿವಾರ ತಪ್ಪದೇ ಎಲಿಮಿನೇಷನ್ ಆಗುವ ಸಾಧ್ಯತೆಯಿದೆ. ಇನ್ನು ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಗಿಲ್ಲಿ ಹಾಗೂ ಕಾವ್ಯಾ ಗೆದ್ದಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಎಲ್ಲದ್ದಕ್ಕೂ ಉತ್ತರ ಸಿಗಲಿದೆ.


Click it and Unblock the Notifications











