BBK12: ಧ್ರುವಂತ್, ಅಶ್ವಿನಿಗೆ ಮಾತ್ರವಲ್ಲ ಗಿಲ್ಲಿಗೂ ಚಪ್ಪಾಳೆ! ಅರೇ, ಏನಿದು ಟ್ವಿಸ್ಟ್?
ಮತ್ತೊಂದು ವೀಕೆಂಡ್.. ಮತ್ತೆ ಬಿಗ್‌ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯ್ತಿ ನಡೆದಿದೆ. ಒಬ್ಬರಲ್ಲ ಇಬ್ಬರಿಗೆ ಈ ವಾರ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಈ ವಾರದ ಆಟದ ಬಗ್ಗೆ ಭಾರೀ ಚರ್ಚೆ ನಡೆದು ಸರಿ ತಪ್ಪುಗಳ ವಿಶ್ಲೇಷಣೆ ಮಾಡಲಾಗಿದೆ. ಹುಲಿ, ಸಿಂಹ ಹಾಗೂ ಕತ್ತೆಯ ಕಥೆ ಹೇಳಿ ಸುದೀಪ್ ಕೆಲವರಿಗೆ ತಿವಿದಿದ್ದಾರೆ. ಮತ್ತೊಂದು ಕಡೆ ಸ್ಪರ್ಧಿಗಳಿಗೆ ಎಲಿಮಿನೇಷನ್ ಭಯ ಹುಟ್ಟಿಸಿದ್ದಾರೆ.
ಮುಖ್ಯವಾಗಿ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಪಂಚಾಯ್ತಿಯಲ್ಲಿ ಬಹಳ ಚರ್ಚೆ ನಡೀತು. ರಕ್ಷಿತಾ, ರಾಶಿಕಾಗೆ ಕಿಚ್ಚನ ಮಾತಿನ ಚಾಟಿ ಬೀಸಿದರು. ಸೀಸನ್ 12ರಲ್ಲಿ ಕೊನೆಯದಾಗಿ ಕಿಚ್ಚನ ಚಪ್ಪಾಳೆ ಅಶ್ವಿನಿ ಅವರಿಗೆ ಸಿಕ್ಕಿದೆ. ಈ ವಾರ ಇಡೀ ಮನೆ ಮಂದಿ ಅಶ್ವಿನಿಗೆ ಉತ್ತಮ ಎಂದು ಹೇಳಿದ್ದರು. ಛಲ, ಫೋಕಸ್, ನಿರ್ಧಾರ, ತಾಳ್ಮೆಯಿಂದ ಆಡಿ ಯಶಸ್ಸು ಕಂಡ ಅಶ್ವಿನಿಗೆ ಪ್ರಶಂಸೆ ಸಿಕ್ಕಿದೆ. ಆರಂಭದಲ್ಲಿ ಎಡವಿದರೂ ಬಳಿಕ ಎಚ್ಚೆತ್ತುಕೊಂಡು ಬದಲಾದ ಅಶ್ವಿನಿ ಅವರನ್ನು ಸುದೀಪ್ ಕೊಂಡಾಡಿದ್ದಾರೆ.

12 ಸೀಸನ್‌ಗಳಲ್ಲಿ ಆ ವಾರದಲ್ಲಿ ಉತ್ತಮವಾಗಿ ಆಡಿದವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತಿತ್ತು. ಕೆಲವೊಮ್ಮೆ ಸ್ಕಿಪ್ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಇಡೀ ಸೀಸನ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಕಿಚ್ಚನ ಚಪ್ಪಾಳೆ ಗೌರವ ಸಿಕ್ಕಿದೆ. ಧ್ರುವಂತ್ ಆ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಆರಂಭದಲ್ಲಿ ಆಟ ಅರ್ಥ ಮಾಡಿಕೊಳ್ಳಲು ಹೆಣಗಾಡಿದ್ದ ಧ್ರುವಂತ್ ಬಳಿಕ ಆಟದ ಗತಿ ಬದಲಿಸಿದ್ದರು. ಎರಡೇ ವಾರಕ್ಕೆ ಮನೆಯಿಂದ ಹೊರ ಬರುತ್ತಾರೆ ಎಂದುಕೊಂಡಿದ್ದವರು ಫಿನಾಲೆವರೆಗೂ ಬಂದಿದ್ದಾರೆ. ಹಾಗಾಗಿ ವಿಶೇಷವಾಗಿ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
ಇಡೀ ಸೀಸನ್‌ನಲ್ಲಿ ಅತ್ಯುತ್ತಮ ಪ್ರದರ್ಶನಕ್ಕೆ ಧ್ರುವಂತ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಗಿಲ್ಲಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಧ್ರುವಂತ್ ಖಂಡಿತ ಇದಕ್ಕೆ ಅರ್ಹ ಅಲ್ಲ. ಅದನ್ನು ಕೊಡುವ ಅವಶ್ಯಕತೆ ಕೂಡ ಇರಲಿಲ್ಲ. ಒಂದು ವೇಳೆ ಕೊಡಬೇಕು ಎಂದುಕೊಂಡಿದ್ದರೂ ಗಿಲ್ಲಿಗೆ ಕೊಡಬೇಕಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಗಿಲ್ಲಿಗೆ ಕಿಚ್ಚನ ಚಪ್ಪಾಳೆ ಸಿಗದಿದ್ದರೆ ಏನು "ಇಡೀ ಕರ್ನಾಟಕದ ಚಪ್ಪಾಳೆ" ಸಿಕ್ಕಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೆಂಡ್ ಹುಟ್ಟಾಕ್ಕಿದೆ.

ಧ್ರುವಂತ್ ಹಾಗೂ ಅಶ್ವಿನಿಗೆ ಸಿಕ್ಕಿರುವುದು ಸಮಾಧಾನಕರ ಬಹುಮಾನ.. ಗಿಲ್ಲಿ ವಿನ್ನರ್ ಪಟ್ಟ ಸಿಗುತ್ತೆ.. ಅದು ಬಿಟ್ಟು ಇಂತಹ ಪ್ರಶಂಸೆಗಳೆಲ್ಲಾ ಬೇರೆಯವರಿಗೆ ಸಿಕ್ಕರೆ ಸಿಗಲಿ ಬಿಡಿ.. ಟ್ರೋಫಿನೆ ಸಿಗೋವಾಗ ಕಿಚ್ಚನ ಚಪ್ಪಾಳೆ ದೊಡ್ಡ ವಿಷಯವಲ್ಲ. ಈಗಾಗಲೇ ಗಿಲ್ಲಿ, ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದಾರೆ ಅಲ್ವಾ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಈಗಾಗಲೇ ಬಿಗ್‌ಬಾಸ್ ಕನ್ನಡ ಸೀಸನ್ 12 ಶತ ದಿನೋತ್ಸವ ಆಚರಿಸಿ ಮುನ್ನುಗ್ಗುತ್ತಿದೆ. ಸದ್ಯ 8 ಮಂದಿ ಮನೆ ಒಳಗೆ ಉಳಿದುಕೊಂಡಿದ್ದಾರೆ. ವೀಕೆಂಡ್ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಮುಂದಿನ ವಾರದ ಮಧ್ಯೆ ಮತ್ತೊಬ್ಬರು ಹೊರ ಬರುವ ನಿರೀಕ್ಷೆಯಿದೆ. ಹಾಗಾಗಿ ಅಂತಿಮವಾಗಿ 6 ಜನ ಫಿನಾಲೆ ವೇದಿಕೆ ಏರಲಿದ್ದಾರೆ. ಈಗಾಗಲೇ ಧನುಷ್ ಫಿನಾಲೆ ಟಿಕೆಟ್ ಪಡೆದಿದ್ದಾರೆ.
ನಾನೇ ಮೊದಲು ಫಿನಾಲೆಗೆ ಹೋಗಬೇಕಿತ್ತು ಎಂದು ಗಿಲ್ಲಿ ಹೇಳಿದ್ದಾರೆ. ಅದೇ ಕಾರಣಕ್ಕೆ ಧನುಷ್ ಫಿನಾಲೆಗೆ ಹೋಗಿದ್ದು ಇಷ್ಟವಾಗಲಿಲ್ಲ ಎಂದು ಹೇಳಿದ್ದಾರೆ. ಕಾವ್ಯಾ ಹಾಗೂ ನಿಮ್ಮಲ್ಲಿ ಯಾರು ಸೇಫ್ ಆಗಬೇಕು ಎನ್ನುವ ಸುದೀಪ್ ಪ್ರಶ್ನೆಗೆ ನಾನು ಎಂದು ಗಿಲ್ಲಿ ಹೇಳಿದ್ದಾರೆ. ರಕ್ಷಿತಾ ಕೂಡ ಇದೇ ಮಾತು ಹೇಳಿದ್ದು ಸುದೀಪ್ ಯಾವುದೇ ಸಂಬಂಧಗಳು ಮನೆಯಲ್ಲಿ ಬೇಡ ಎಂದು ಸಲಹೆ ಕೊಟ್ಟಿದ್ದಾರೆ.


Click it and Unblock the Notifications











