BBK 12: ಸ್ಟುಡಿಯೋ ಸೀಜ್ ಆಗಿ ಬಿಗ್‌ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಕ್ಕೆ; 15 ದಿನ ಶೋ ಬಂದ್?

ಬಿಗ್‌ಬಾಸ್-12 ರಿಯಾಲಿಟಿ ಶೋಗೆ ಸಂಕಷ್ಟ ಎದುರಾಗದೆ. ಬಿಡದಿ ಬಳಿಕ ಜಾಲಿವುಡ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಶೋ ನಡೆಸಲಾಗುತ್ತಿದೆ. ಆದರೆ ಈಗ ಸ್ಟುಡಿಯೋಗೆ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್ ಕೊಟ್ಟಿದೆ. ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ದೊಡ್ಮನೆ ಒಳಗಿದ್ದ ಸ್ಪರ್ಧಿಗಳು ಹೊರಗೆ ಬಂದಿದ್ದಾರೆ.

ಇದೇ ಸ್ಟುಡಿಯೋ ಒಳಗೆ ಬಿಗ್‌ಬಾಸ್ 12 ಶೋ ಮನೆಯ ಸೆಟ್ ಇದೆ. ಹಾಗಾಗಿ ಶೋ ಮುಂದುವರೆಯುತ್ತಾ? ಎನ್ನುವ ಅನುಮಾನ ಮೂಡಿದೆ. ಜಾಲಿವುಡ್ ಮ್ಯಾನೇಜ್‌ಮೆಂಟ್‌ಗೆ ರಾಮನಗರ ತಹಶೀಲ್ದಾರ್ ತರಾಟೆ ತೆಗೆದುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳು ಸೇರಿ ಸಾಕಷ್ಟು ತಂತ್ರಜ್ಞರು, ಸಿಬ್ಬಂದಿ ಇದ್ದರು. ಹೊರಗೆ ಸ್ಟುಡಿಯೋ ಗೇಟ್‌ಗೆ ಬೀಗ ಬಿದ್ದಿದ್ದು ಬಿಗ್‌ಬಾಸ್ ಮನೆಯಲ್ಲಿ ಇದ್ದವರನ್ನು ಪಕ್ಕದಲ್ಲೇ ಇದ್ದ ಥಿಯೇಟರ್‌ಗೆ ಶಿಫ್ಟ್ ಮಾಡಿರುವುದಾಗಿ ವರದಿಯಾಗಿದೆ.

Bigg Boss Kannada 12 Faces Setback as Pollution Board Seals Jollywood Studio

ಸರಿಯಾಗಿ ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಮಾಡದ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋಸ್‌ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿತ್ತು. ಅದಕ್ಕೆ ಪ್ರತಿಕ್ರಿಯಿಸದ ಕಾರಣ ಕ್ರಮ ಕೈಗೊಂಡು ಇದೀಗ ಬೀಗ ಹಾಕಿದ್ದಾರೆ. ಇದೀಗ 2ನೇ ವಾರಕ್ಕೆ ಬಿಗ್‌ಬಾಸ್ ಶೋಗೆ ಸಂಕಷ್ಟ ಎದುರಾಗಿದೆ.

ಬಿಗ್‌ಬಾಸ್ ಕನ್ನಡ ಮೊದಲ 2 ಸೀಸನ್ ಪುಣೆಯ ಲೋನಾವಾಲದಲ್ಲಿ ನಡೆದಿತ್ತು. ಅಲ್ಲೇ ಮನೆಯ ಸೆಟ್ ಹಾಕಲಾಗುತ್ತಿತ್ತು. ಅಲ್ಲಿಗೆ ಸ್ಪರ್ಧಿಗಳು, ತಂತ್ರಜ್ಞರು, ಸಿಬ್ಬಂದಿ ಹೋಗಬೇಕಿತ್ತು. ಸುದೀಪ್ ಕೂಡ ವೀಕೆಂಡ್ ಎಪಿಸೋಡ್ ಚಿತ್ರೀಕರಣಕ್ಕೆ ಹೋಗುತ್ತಿದ್ದರು. 3ನೇ ಸೀಸನ್‌ಗೆ ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಸೆಟ್ ಹಾಕಿದ್ದರು. ಬಳಿ 6 ಸೀಸನ್ ಅಲ್ಲೇ ನಡೆದಿತ್ತು. ಕೋವಿಡ್ ಸಂಕಷ್ಟದ ಸಮಯದಲ್ಲಿ 'ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1'ಗೂ ಅಲ್ಲೇ ಸೆಟ್ ಹಾಕಿದ್ದರು.

Bigg Boss Kannada 12 Faces Setback as Pollution Board Seals Jollywood Studio

ಬಳಿಕ ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಬಳಿ ಬಿಗ್‌ಬಾಸ್ ಮನೆ ಸೆಟ್ ಹಾಕಿ 2 ಸೀಸನ್ ನಡೆಸಿದ್ದರು. ಈ ಬಾರಿ ಜಾಲಿವುಡ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಶೋ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 28ರಂದು ನಡೆದ ಗ್ರ್ಯಾಂಡ್ ಓಪನಿಂಗ್ ಮೂಲಕ 19 ಮಂದಿ ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದರು. ಮೊದಲ ದಿನವೇ ರಕ್ಷಿತಾ ಶೆಟ್ಟಿ ಹೊರಗೆ ಬಂದಿದ್ದರು. 5 ದಿನಗಳ ಬಳಿಕ ವಾಪಸ್ ದೊಡ್ಮನೆ ಸೇರಿದ್ದರು. ಇನ್ನು ಫಸ್ಟ್ ವೀಕೆಂಡ್‌ನಲ್ಲಿ ಅಮಿತ್ ಹಾಗೂ ಕರಿಬಸಪ್ಪ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ್ದರೂ ಒಳಗೆ ಇರುವ ಬಿಗ್‌ಬಾಸ್ ಸೆಟ್‌ಗೆ ಸಮಸ್ಯೆ ಇಲ್ಲ ಎನ್ನಲಾಗಿತ್ತು. ಇವತ್ತಿನ ಎಪಿಸೋಡ್ ಚಿತ್ರೀಕರಣವಾಗಿದ್ದು ಎಂದಿನಂತೆ ಶೋ ಪ್ರಸಾರ ಆಗಲಿದೆ. ಇನ್ನು ಈ ಬೆಳವಣಿಗೆ ಬೆನ್ನಲ್ಲೇ ಬಿಗ್‌ಬಾಸ್ ಆಯೋಜಕರು ಸಭೆ ನಡೆಸಿ ಚರ್ಚಿಸುತ್ತಿದ್ದರು. ಅಧಿಕಾರಿಗಳು ಬಿಗ್‌ಬಾಸ್ ಮನೆ ಒಳಗೆ ಹೋಗುವ ವೇಳೆಗೆ ಎಲ್ಲರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. 15 ದಿನಗಳ ಕಾಲ ಶೋ ನಿಲ್ಲಿಸಲು ಚಿಂತಿಸುತ್ತಿರುವುದಾಗಿ ಗುಸು ಗುಸು ಶುರುವಾಗಿದೆ. ಅಲ್ಲಿಯವರೆಗೆ ಸ್ಪರ್ಧಿಗಳಲ್ಲಿ ಹೋಟೆಲ್‌ನಲ್ಲಿ ಇರಿಸಲು ತೀರ್ಮಾನಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.

More from Filmibeat

English summary
Karnataka Pollution Board Closes Jollywood Studio, Casting Doubt on Bigg Boss Kannada 12’s Future
Read more about: bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X