BBK12: ಗಿಲ್ಲಿ ಮೇಲೆ ಹಲ್ಲೆ ಮಾಡಿ ರಿಷಾ ಕೂಗಾಟ; ದೊಡ್ಮನೆಯಿಂದ ರಿಷಾ ಹೊರಕ್ಕೆ?

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಿರಿಕ್, ಜಗಳ, ಮಾರಾಮಾರಿ ಹೊಸದಲ್ಲ. ಇದೇ ಕಾರಣಕ್ಕೆ ಕೆಲವರು ಮನೆಯಿಂದ ಎಲಿಮಿನೇಟ್ ಆಗಿ ಹೊರಬಿದ್ದಿರುವ ಉದಾಹರಣೆಗಳಿವೆ. ಇದೀಗ ಬಿಗ್‌ಬಾಸ್ ಕನ್ನಡ 12 ಶೋ ಮನೆಯಲ್ಲಿ ಗಿಲ್ಲಿ ನಟ ಹಾಗೂ ರಿಷಾ ಗೌಡ ನಡುವೆ ಗಲಾಟೆ ನಡೆದಿದೆ.

ಸದ್ಯ ಹೊಸದಾಗಿ ಬಿಡುಗಡೆ ಆಗಿರುವ ಪ್ರೋಮೊದಲ್ಲಿ ರಿಷಾ ಹಾಗೂ ಗಿಲ್ಲಿ ನಡುವೆ ಕಿರಿಕ್ ಆಗಿರುವುದು ಗೊತ್ತಾಗಿದೆ. ಕೋಪದಲ್ಲಿ ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದಾರೆ. ಮನೆಯಲ್ಲಿ ಕೂಗಾಡಿ, ಕಿರುಚಾಡಿ ಗದ್ದಲ ಸೃಷ್ಟಿಸಿದ್ದಾರೆ. ಮನೆ ಮಂದಿ ಇದನ್ನೆಲ್ಲಾ ಮೂಖ ಪ್ರೇಕ್ಷಕರಂತೆ ನೋಡಿ ಸುಮ್ಮನಾಗಿದ್ದಾರೆ. ಬಿಗ್‌ಬಾಸ್ ನಿಮಯದಂತೆ ಯಾರು ಯಾರ ಮೇಲೆ ಕೂಡ ಅವಾಚ್ಯ ಶಬ್ಧ ಬಳಸುವುದು, ಹಲ್ಲೆ ಮಾಡುವುದು ತಪ್ಪು. ಒಂದೇ ವೇಳೆ ಆ ರೀತಿ ಮಾಡಿದರೆ ಎಲಿಮಿನೇಷನ್ ಶಿಕ್ಷೆ ಎದುರಿಸಬೇಕಾಗುತ್ತದೆ.

Bigg Boss Kannada 12 Fierce Clash Between Risha Gowda and Ghilli Sparks Elimination Speculation

ರಿಷಾ ಬಕೆಟ್ ಕೊಡಲ್ವಾ? ನನಗೆ ಗೊತ್ತು ಏನು ಮಾಡಬೇಕೆಂದು ಎನ್ನುತ್ತಾ ರಿಷಾ ಕಬೋರ್ಡ್‌ನಲ್ಲಿದ್ದ ಬಟ್ಟೆಗಳನ್ನು ಎತ್ತಿ ಗಿಲ್ಲಿ ಕೆಳಗೆ ಬಿಸಾಕಿದ್ದಾರೆ. ಸ್ನಾನ ಮಾಡಿ ಹೊರಬಂದು ತಮ್ಮ ಬಟ್ಟೆ ಕೆಳಗೆ ಬಿದ್ದಿರುವುದು ನೋಡಿ ರಿಷಾ ಕೆಂಡಾಮಂಲವಾಗಿ ಕೂಗಾಡಿದ್ದಾರೆ. ಗಿಲ್ಲಿ ಬೆನ್ನಿಗೆ ಬಲವಾಗಿ ಹೊಡೆದಿದ್ದಾರೆ. ಇದನ್ನು ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ. ಚೀಫ್ ಚೀಫ್ ತಮಾಷೆ ಮಾಡ್ತೀಯಾ ಎಂದು ಬಟ್ಟೆಗಳನೆಲ್ಲಾ ಎತ್ತಿ ಬಿಸಾಕಿ ರಿಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲಿಗೆ ಜಗಳ ನಿಂತಿಲ್ಲ. ಮತ್ತೆ ಮತ್ತೆ ಇಬ್ಬರೂ ಕ್ಯಾತೆ ತೆಗೆದು ಜಗಳ ಮಾಡಿದ್ದಾರೆ. ನೂಕಾಟ ತಳ್ಳಾಟ ನಡೆದಿದೆ. ಧನುಷ್ ಕ್ಯಾಪ್ಟನ್ ಆಗಿದ್ದರೂ ಯಾಕೆ ಸುಮ್ಮನೆ ನಿಂತಿದ್ದರು ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ರಕ್ಷಿತಾ ಮಾತ್ರ ಕೊನೆಗೆ ಹೋಗಿ ಇಬ್ಬರ ಜಗಳ ಬಿಡಿಸುವ ಪ್ರಯತ್ನ ಮಾಡಿರುವುದು ಗೊತ್ತಾಗುತ್ತಿದೆ.

ಕ್ಷಮೆ ಕೇಳಿಸಿ ಈ ವಿಚಾರವನ್ನು ಬಿಗ್‌ಬಾಸ್ ಇಲ್ಲಿಗೆ ಬಿಡ್ತಾರಾ? ಅಥವಾ ಬಿಗ್‌ಬಾಸ್ ನಿಮಯದಂತೆ ಸಹಸ್ಪರ್ಧಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ ಅವರನ್ನು ಎಲಿಮಿನೇಟ್ ಮಾಡಿ ಮನೆಯಿಂದ ಹೊರಗಡೆ ಕಳುಹಿಸುತ್ತಾರಾ? ಕಾದು ನೋಡಬೇಕಿದೆ. ಈ ಹಿಂದೆ ರಂಜಿತ್ ಇದೇ ರೀತಿ ಸಹ ಸ್ಪರ್ಧಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಶೋ ಅರ್ಧದಲ್ಲೇ ಬಿಟ್ಟು ಹೊರ ಬರುವಂತಾಗಿತ್ತು. ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದ ಹುಚ್ಚಾ ವೆಂಕಟ್ ಕೂಡ ಪ್ರಥಮ್ ಮೇಲೆ ಹಲ್ಲೆ ಮಾಡಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು.

ಗಿಲ್ಲಿ ಎಲ್ಲರ ಕಾಲೆಳೆಯುತ್ತಾ, ತಮಾಷೆಯಾಗಿ ಎಲ್ಲರಿಗೂ ತಿರುಗೇಟು ನೀಡುತ್ತಾ ಮನೆಯಲ್ಲಿ ಆಟ ಆಡುತ್ತಿದ್ದಾರೆ. ಆದರೆ ಆತನ ವಿರುದ್ಧ ಕೆಲವರಿಗೆ ಅಸಮಾಧಾನ ಇದೆ.

ಬರೀ ತಮಾಷೆ ಮಾಡುತ್ತಾ ಇರೋದೇ ಬಿಗ್‌ಬಾಸ್ ಆಟ ಅಲ್ಲ ಎಂದು ಅಶ್ವಿನಿ ಗೌಡ ಹಾಗೂ ರಿಷಾ ಮಾತನಾಡಿರುವ ವೀಡಿಯೋ ಕೂಡ ವೈರಲ್ ಆಗ್ತಿದೆ. ಇನ್ನು ವೀಕೆಂಡ್ ಎಪಿಸೋಡ್‌ಗಳಲ್ಲಿ ಕಿಚ್ಚನ ಮುಂದೆ ಕೂಡ ಕೆಲವರಿಗೆ ಗಿಲ್ಲಿ ವ್ಯಂಗ್ಯವಾಗಿ ಟಾಂಗ್ ಕೊಡುತ್ತಾ ಬರ್ತಿದ್ದಾರೆ. ಗಿಲ್ಲಿ ಬಿಗ್‌ಬಾಸ್ 12 ವಿನ್ನರ್ ಆಗುತ್ತಾರೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ಇದೆಲ್ಲದರ ನಡುವೆ ಗಿಲ್ಲಿ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ 30 ದಿನಗಳನ್ನು ಪೂರೈಸಿ ಮುಂದುವರೆದಿದೆ. ವೀಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ಕಳೆದ ವಾರ ಮಲ್ಲಮ್ಮ ಎಲಿಮಿನೇಟ್‌ ಆಗಿ ಹೊರ ಬಂದಿದ್ದಾರೆ. ಉತ್ತರ ಕರ್ನಾಟಕ ಮೂಲದ ಮಲ್ಲಮ್ಮ ತಮ್ಮ ಮಾತಿನಿಂದ ಗಮನ ಸೆಳೆದಿದ್ದರು. ವೈಯಕ್ತಿಕ ಕಾರಣಗಳಿಂದ ಮಲ್ಲಮ್ಮ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು. ಇದೇ ಕಾರಣಕ್ಕೆ ಅವರಿಗೆ ವೋಟ್ ಕಮ್ಮಿ ಆಗಿ ಎಲಿಮಿನೇಟ್ ಆಗಿರುವ ಸಾಧ್ಯತೆ ಕೂಡ ಇದೆ.

More from Filmibeat

Read more about: bigg boss 12 sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X