BBK12: ದಯವಿಟ್ಟು ಆ ತಪ್ಪು ಮಾಡಬೇಡಿ; ಗಿಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಿಂದ ಮನವಿ ಮಾಡಿದ್ದೇನು?

ಬಿಗ್‌ಬಾಸ್ ಕನ್ನಡ ಸೀಸನ್ 12 ಅಂತಿಮ ಘಟ್ಟ ತಲುಪಿದೆ. ಈಗಾಗಲೇ 100 ದಿನ ಪೂರೈಸಿ ಶೋ ಮುಂದುವರೆದಿದೆ. ಫಿನಾಲೆ ಇನ್ನೆರಡು ವಾರ ಬಾಕಿಯಿದೆ. ಸ್ಪಂದನಾ ಎಲಿಮಿನೇಟ್ ಆಗಿ 8 ಮಂದಿ ಸ್ಪರ್ಧಿಗಳು ಮಾತ್ರ ಮನೆ ಒಳಗೆ ಉಳಿದುಕೊಂಡಿದ್ದಾರೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಗಿಲ್ಲಿ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಿಂದ ವಿಶೇಷ ಮನವಿ ಮಾಡಲಾಗಿದೆ.

ಗಿಲ್ಲಿ ನಟ ಈ ಬಾರಿ ಬಿಗ್‌ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂದು ಹೇಳಲಾಗ್ತಿದೆ. ಗಿಲ್ಲಿ ಬಹಳ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಒಳ್ಳೆ ಎಂಟರ್‌ಟೈನರ್ ಎನಿಸಿಕೊಂಡಿದ್ದಾರೆ. ಆದರೆ ಟಾಸ್ಕ್‌ಗಳ ವಿಚಾರದಲ್ಲಿ ಇತರೆ ಸ್ಪರ್ಧಿಗಳಿಂದ ಹಿಂದೆ ಉಳಿದಿದ್ದಾರೆ. 'ಟಿಕೆಟ್ ಟು ಫಿನಾಲೆ-6' ಆಟದಿಂದ ಹೊರಗುಳಿಯುವಂತಾಗಿದೆ. ಇದೆಲ್ಲದರ ನಡುವೆ ಬಿಗ್‌ಬಾಸ್ ಟ್ರೋಫಿ ಗೆಲ್ಲಲು ಜನರ ವೋಟ್ ಬಹಳ ಮುಖ್ಯ. ಆ ಬಗ್ಗೆ ಗಿಲ್ಲಿ ತಂಡ ಗಮನ ಹರಿಸಿದೆ.

Bigg Boss Kannada 12 Finale Buzz Gilli s Team Appeals Fans to Cast All 99 Votes as Trophy Race Heats Up

ಗಿಲ್ಲಿ ಬಿಗ್‌ಬಾಸ್ ಮನೆ ಒಳಗೆ ಇದ್ದರೂ ಅವರ ಆಪ್ತರು ಸೋಶಿಯಲ್ ಮೀಡಿಯಾ ಖಾತೆ ಹ್ಯಾಂಡಲ್ ಮಾಡುತ್ತಿದ್ದಾರೆ. ಗಿಲ್ಲಿ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು ಗಿಲ್ಲಿ ಬೆಂಬಲಿಸಿ ಸಾಕಷ್ಟು ಪೋಸ್ಟ್ ಮಾಡಲಾಗುತ್ತಿದೆ. ಅದನ್ನು ಅಭಿಮಾನಿಗಳು ಲೈಕ್, ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಸದ್ಯ 8.52 ಲಕ್ಷ ಮಂದಿ ಗಿಲ್ಲಿ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಶೀಘ್ರದಲ್ಲೇ 10 ಲಕ್ಷದ ಗಡಿ ದಾಟುವ ನಿರೀಕ್ಷೆಯಿದೆ.

ವೋಟಿಂಗ್ ವಿಚಾರದಲ್ಲಿ ಇದೀಗ ಗಿಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮನವಿ ಮಾಡಲಾಗಿದೆ. "ಗಿಲ್ಲಿ ಅಭಿಮಾನಿಗಳಲ್ಲಿ ವಿಶೇಷ ಮನವಿ. ಫಿನಾಲೆ ಹತ್ತಿರದಲ್ಲೇ ಇದೆ. ಮನೆಯೊಳಗೆ ಗಿಲ್ಲಿ ಅವರ ಆಟ ಆಡ್ತಿದ್ದಾರೆ. ಮನೆ ಹೊರಗೆ ನಾವು ನೀವು ಎಲ್ಲಾ ಸೇರಿ ನಮ್ಮ ಖಾತೆಯ 99 ವೋಟ್‌ಗಳನ್ನು ಗಿಲ್ಲಿಗೆ ಮಾತ್ರ ಹಾಕೋಣ. ಇಷ್ಟು ದೂರ ಬಂದ ಪಯಣಕ್ಕೆ ಅರ್ಥ ತುಂಬುವ ಹೊಣೆ ಈಗ ನಮ್ಮೆಲ್ಲರ ಮೇಲಿದೆ. ನಿಮ್ಮ ಅತ್ಯಮೂಲ್ಯ ಮತಗಳನ್ನು ಗಿಲ್ಲಿಗೆ ಮಾತ್ರ ನೀಡಿ. ಯಾವುದೇ ಕಾರಣಕ್ಕೂ ವೋಟ್‌ ಡಿವೈಡ್ ಮಾಡಬೇಡಿ" ಪೋಸ್ಟ್ ಮಾಡಿದ್ದಾರೆ.

ಜಿಯೋ ಹಾಟ್‌ಸ್ಟರ್ ಚಂದಾದಾರರು ಬಿಗ್‌ಬಾಸ್ ಸ್ಪರ್ಧಿಗಳಿಗೆ ವೋಟ್ ಮಾಡುವ ಅವಕಾಶ ಇದೆ. ಒಬ್ಬರು 99 ವೋಟ್ ಮಾಡಬಹುದು. ಅದೇ ಕಾರಣಕ್ಕೆ ಗಿಲ್ಲಿ ಅಭಿಮಾನಿಗಳು ಕೂಡ ಬೇರೆ ಬೇರೆ ಸ್ಪರ್ಧಿಗಳಿಗೆ ವೋಟ್ ಮಾಡುತ್ತಿದ್ದರು. ಗಿಲ್ಲಿ ಆಪ್ತರು ಎನ್ನುವ ಕಾರಣಕ್ಕೆ ಕಾವ್ಯಾ, ರಕ್ಷಿತಾಗೂ ವೋಟ್ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಆ ರೀತಿ ಆಗುವುದು ಬೇಡ ಎಲ್ಲಾ 99 ವೋಟ್‌ಗಳನ್ನು ಗಿಲ್ಲಿಗೆ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವೋಟ್ ಕಾರಣಕ್ಕೆ ಫಲಿತಾಂಶ ಯಾವ ರೀತಿ ಬೇಕಾದರೂ ಬದಲಾಗಿ ಬಿಡಬಹುದು. ಅದೇ ಕಾರಣಕ್ಕೆ ಗಿಲ್ಲಿ ಅಧಿಕೃತವ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಹೀಗೆ ಮನವಿ ಮಾಡಿಕೊಳ್ಳಲಾಗ್ತಿದೆ. ದಿನ ಕಳೆದಂತೆ ಆಟ ರೋಚಕವಾಗುತ್ತದೆ. ಯಾರು ಫಿನಾಲೆಗೆ ಹೋಗುತ್ತಾರೆ, ಯಾರು ಟ್ರೋಫಿ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಇಂತಹ ಸಮಯದಲ್ಲಿ ಯಾವುದೇ ಒಂದು ತಪ್ಪು ಹೆಜ್ಜೆ ಕಂಟಕವಾಗಿಬಿಡಬಹುದು. ವೋಟ್ ವಿಚಾರದಲ್ಲಿ ಕೂಡ ಈ ತಪ್ಪು ಆಗಬಾರದು ಎಂದು ಗಿಲ್ಲಿ ಆಪ್ತರು ಹೀಗೆ ಮನವಿ ಮಾಡಿಕೊಂಡಿದ್ದಾರೆ.

ಗಿಲ್ಲಿ ಕ್ರೇಜ್ ಜೋರಾಗಿದೆ. ಇತರೆ ಸ್ಪರ್ಧಿಗಳ ಕುಟುಂಬದವರು ಕೂಡ ಗಿಲ್ಲಿ ಆಟಕ್ಕೆ ಜೈ ಎಂದಿದ್ದಾರೆ. ಹಾಗಾಗಿ ಆತನಿಗೆ ಹೆಚ್ಚು ವೋಟ್‌ಗಳು ಬೀಳುವುದರಲ್ಲಿ ಅನುಮಾನವಿಲ್ಲ. ಆದರೆ ದಾಖಲೆ ಮಟ್ಟದಲ್ಲಿ ವೋಟ್ ಮಾಡಿ ಗೆಲ್ಲಿಸೋಣ ಎಂದು ಅಭಿಮಾನಿಗಳು ಪಣ ತೊಟ್ಟಿದ್ದಾರೆ. ನಾವೆಲ್ಲರೂ 99 ವೋಟ್‌ಗಳನ್ನು ಗಿಲ್ಲಿಗೆ ಹಾಕ್ತೀವಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

Read more about: bigg boss 12 gilli bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X