BBK12: ಫಿನಾಲೆ ಆರಂಭಕ್ಕೂ ಮುನ್ನ ವಿನ್ನರ್ ಹೆಸರು ಬಹಿರಂಗಪಡಿಸಿದ ವಿಕಿಪಿಡಿಯ
ಬಿಗ್‌ಬಾಸ್ ಸೀಸನ್-12 ಗ್ರ್ಯಾಂಡ್ ಫಿನಾಲೆಗೆ ಮುನ್ನ ವಿನ್ನರ್ ಯಾರು ಎನ್ನುವ ಚರ್ಚೆ ನಡೀತಿದೆ. ವಿಕಿಪಿಡಿಯಾದಲ್ಲಿ ಈಗಾಗಲೇ ವಿಜೇತರ ಹೆಸರು ಘೋಷಣೆ ಆಗಿಬಿಟ್ಟಿದೆ. ಜನ ಯಾವುದೇ ಮಾಹಿತಿ ಬೇಕು ಅಂದರೆ ಮೊದಲಿಗೆ ವಿಕಿಪಿಡಿಯ ಪೇಜ್ ಓಪನ್ ಮಾಡ್ತಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿಕಿಪಿಡಿಯ ಪೇಜ್ ಇದೆ.
Bigg Boss kannada 12 ವಿಕಿಪಿಡಿಯ ಪೇಜ್ ಬಹಳ ಹಿಂದೆಯೇ ಕ್ರಿಯೇಟ್ ಆಗಿತ್ತು. ಪ್ರತಿವಾರದ ಅಪ್‌ಡೇಟ್ ಅನ್ನು ಅಲ್ಲಿ ಕೊಡಲಾಗುತ್ತದೆ. ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಬಗ್ಗೆ ಅಪ್‌ಡೇಟ್ ಮಾಡಲಾಗುತ್ತದೆ. ಇದೀಗ ಫಿನಾಲೆಗೂ ಮುನ್ನ ವಿಕಿಪಿಡಿಯಾದಲ್ಲಿ ವಿಜೇತರ ಹೆಸರು ಬಹಿರಂಗವಾಗಿದೆ. ಕಳೆದ ಬಾರಿ ಕೂಡ ಹನುಮಂತ ವಿನ್ನರ್ ಎಂದು ಕೆಲ ಗಂಟೆಗಳ ಮುನ್ನ ವಿಕಿಪಿಡಿಯಾದಲ್ಲಿ ದಾಖಲಿಸಲಾಗಿತ್ತು.

ರಕ್ಷಿತಾ, ಅಶ್ವಿನಿ ಗೌಡ, ರಘು, ಕಾವ್ಯಾ, ಧನುಷ್ ಹಾಗೂ ಗಿಲ್ಲಿ ಫಿನಾಲೆ ಹಂತಕ್ಕೆ ಏರಿದ್ದಾರೆ. 6 ಮಂದಿ ಫೈನಲಿಸ್ಟ್‌ಗಳಾಗಿ ಫಿನಾಲೆ ತಲುಪಿದ್ದಾರೆ. ಕಲರ್‌ಫುಲ್ ಪರ್ಫಾರ್ಮನ್ಸ್‌ಗಳ ಮೂಲಕ ಶೋ ಕಳೆ ಕಟ್ಟಲಿದೆ. ಆದರೆ ಶೋ ಆರಂಭಕ್ಕೂ ಮುನ್ನ ಗಿಲ್ಲಿ ನಟ ವಿನ್ನರ್ ಎಂದು ವಿಕಿಪಿಡಿಯ ಪೇಜ್‌ನಲ್ಲಿ ಅಪ್‌ಡೇಟ್ ಮಾಡಲಾಗಿದೆ. ರಕ್ಷಿತಾ ಮೊದಲ ರನ್ನರ್ ಅಪ್ ಎಂದು ಪೋಸ್ಟ್ ಮಾಡಿದ್ದಾರೆ.
ಪದೇ ಪದೇ ವಿಕಿಪಿಡಿಯ ಪೇಜ್‌ನಲ್ಲಿ ವಿನ್ನರ್ ಯಾರು ಎನ್ನುವ ಬಗ್ಗೆ ಅಪ್‌ಡೇಟ್ ಮಾಡಲಾಗ್ತಿದ್ದು ಒಮ್ಮೆ ರಕ್ಷಿತಾ ವಿನ್ನರ್ ಎಂದು ಮಗದೊಮ್ಮೆ ರಘು ವಿನ್ನರ್ ಅಂತ ನಮೂದಿಸಲಾಗ್ತಿದೆ. ಇದು ಸಹಜವಾಗಿಯೇ ವಿಕಿಪಿಡಿಯ ಪೇಜ್ ಹುಡುಕಾಡುವವರಿಗೆ ಗೊಂದಲ ಉಂಟು ಮಾಡಿದೆ.
ಸೀಸನ್ 12 ಆರಂಭವಾದ ದಿನದಿಂದ ಗಿಲ್ಲಿ ಆಟಕ್ಕೆ ವೀಕ್ಷಕರು ಮನ ಸೋತಿದ್ದಾರೆ. ಒಳ್ಳೆ ಎಂಟರ್‌ಟೈನರ್ ಎನಿಸಿಕೊಂಡ ಗಿಲ್ಲಿ ಶೋ ಗೆಲ್ಲುವ ಸುಳಿವು ಸಿಕ್ಕಿದೆ. ಗಿಲ್ಲಿ ಗೆಲ್ಲೋದು ಪಕ್ಕಾ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ದಾಖಲೆ ಮಟ್ಟದ ಮತಗಳು ಗಿಲ್ಲಿಗೆ ಸಿಕ್ಕಿದೆ ಎನ್ನಲಾಗ್ತಿದೆ. ಕೆಲವೇ ನಿಮಿಷಗಳಲ್ಲಿ ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದೆ.
ವಿಕಿಪಿಡಿಯ ಪೇಜ್ ಅನ್ನು ಯಾರು ಬೇಕಾದರೂ ಎಡಿಟ್ ಮಾಡಬಹುದು. ಯಾರೋ ಗಿಲ್ಲಿ ಅಭಿಮಾನಿಗಳು ಅಪ್‌ಡೇಟ್ ಮಾಡಿರಬಹುದು. ಹಾಗಾಗಿ ಅಂತಿಮ ಕ್ಷಣಗಳವರೆಗೆ ಕಾಯೋಣ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಶ್ವಿನಿ ಗೌಡ ರನ್ನರ್ ಅಪ್ ಆಗಬಹುದು ಎನ್ನುವುದು ಬಹುತೇಕರ ಲೆಕ್ಕಾಚಾರ. ಆದರೆ ರಕ್ಷಿತಾ ನಿಜಕ್ಕೂ ಮೊದಲ ರನ್ನರ್ ಆಗ್ತಾರಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.
ವಿಜೇತ ಸ್ಪರ್ಧಿಗೆ ಬಹಳ ವಿಶೇಷವಾಗಿ ಡಿಸೈನ್ ಮಾಡಿರುವ ಬಿಗ್‌ಬಾಸ್ ಟ್ರೋಫಿ ಸಿಗಲಿದೆ. ಜೊತೆಗೆ 50 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ರನ್ನರ್ ಅಪ್ ಆಗುವವರಿಗೂ ಬಹುಮಾನಗಳು ಕಾಯ್ತಿದೆ. ಇನ್ನು ಕಲರ್‌ಫುಲ್ ಪರ್ಫಾರ್ಮೆನ್ಸ್, ಕಾಮಿಡಿ, ಭಾವನಾತ್ಮಕ ಕ್ಷಣಗಳು ಫಿನಾಲೆ ವೇದಿಕೆಯಲ್ಲಿ ಇರಲಿದೆ. ಸುದೀಪ್ 12ನೇ ಬಾರಿ ಶೋ ನಿರೂಪಣೆ ಮಾಡಿ ಸಕ್ಸಸ್ ಕಂಡಿದ್ದಾರೆ.


Click it and Unblock the Notifications











