BBK12: ಗ್ರ್ಯಾಂಡ್ ಫಿನಾಲೆ ಹೊತ್ತಲ್ಲಿ ಗಿಲ್ಲಿ ಅಭಿಮಾನಿಗಳನ್ನು ಕೆಣಕಿದ ಜಾಹ್ನವಿ
ಬಿಗ್‌ಬಾಸ್ ಸೀಸನ್ 12ರ ಫಿನಾಲೆಯಲ್ಲಿ ಯಾರು ಗೆಲ್ತಾರೆ ಎನ್ನುವ ಕುತೂಹಲ ಮೂಡಿದೆ. ಗಿಲ್ಲಿ ಬಗ್ಗೆ ವೀಕ್ಷಕರ ಒಲವು ಹೆಚ್ಚಾಗಿದೆ. ದೊಡ್ಡಮಟ್ಟದಲ್ಲಿ ವೋಟ್ ಮಾಡಿ ಗೆಲ್ಲಿಸಬೇಕು ಎಂದು ಅಭಿಮಾನಿಗಳು ಮನಸ್ಸು ಮಾಡಿದ್ದರು. ಇನ್ನು ಗಿಲ್ಲಿ ಕ್ರೇಜ್ ಬಗ್ಗೆ ಕೆಲವರು ಅಣಕವಾಡುವುದು ಇದೆ. ಎಲಿಮಿನೇಟ್ ಆಗಿ ಹೊರಬಂದಾಗ ಜಾನ್ವಿ ಕೂಡ ಈ ಬಗ್ಗೆ ಮಾತನಾಡಿದ್ದರು.
ಗಿಲ್ಲಿ ಕ್ರೇಜ್ ನೋಡಿದ್ರೆ, 'ಜನ ಮರುಳೋ ಜಾತ್ರೆ ಮರುಳೋ' ಎನ್ನುವಂತಿದೆ ಎಂದಿದ್ದರು. ಇದೀಗ ಫಿನಾಲೆ ಹೊತ್ತಲ್ಲಿ ಅದೇ ಮಾತು ಆಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಆಕೆ ಪೋಸ್ಟ್ ಮಾಡಿರುವುದು ವೈರಲ್ ಆಗ್ತಿದೆ. ಈ ಬಗ್ಗೆ ಗಿಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಗಿಲ್ಲಿ ಕ್ರೇಜ್ ಎಲ್ಲೆಲ್ಲೂ ಕಂಡುಬರ್ತಿದೆ. ಈ ಬಗ್ಗೆ ವ್ಯಂಗ್ಯವಾಡುವ ಎರಡೂ ಮೀಮ್‌ಗಳನ್ನು ಜಾನ್ವಿ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ.

ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಸೂಪರ್' ಚಿತ್ರದ ಸಣ್ಣ ವೀಡಿಯೋ ತುಣುಕು ಬಳಸಿ ಮೀಮ್ ಕ್ರಿಯೇಟ್ ಮಾಡಲಾಗಿದೆ. ಭಾರತ ಜನ ಆಳಲು ಅಲ್ಲ, ಆಳಿಸಿಕೊಳ್ಳು ಲಾಯಕ್ಕು ಎಂದು ಹೇಳುವ ಸನ್ನಿವೇಶ ಅದು. ಗಿಲ್ಲಿಗೆ ಹೈಪ್ ಕೊಡುತ್ತಿರುವುದು ನೋಡಿದ್ರೆ ನನಗೆ ಈ ರೀತಿ ಅನ್ನಿಸುತ್ತದೆ ಎಂದು ಮೀಮ್ ಸಾರಾಂಶ. ಇದನ್ನು ಜಾನ್ವಿ ಪೋಸ್ಟ್ ಮಾಡಿ ಅಣಕವಾಡಿದ್ದಾರೆ. ಈ ಬಗ್ಗೆ ಗಿಲ್ಲಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗಿಲ್ಲಿಗೆ ವೋಟು, ಅಶ್ವಿನಿಗೆ ವೋಟು ಅಂತ ತಲೆ ಕೆಡಿಸಿಕೊಳ್ತೀರಲ್ಲ. ಇದೇ ಬುದ್ಧವಂತಿಕೆ ನಮ್ಮ ಚುನಾವಣೆಯಲ್ಲಿ ಯಾಕೆ ತೋರ್ಸಲ್ಲ. ಅಶ್ವಿನಿಗೆ ದುಡ್ಡು ಕೊಟ್ಟು ವೋಟ್ ಖರೀದಿಸುತ್ತಿದ್ದಾರೆ ಎಂದು ಪ್ರತಿಭಟಿಸುವವರು, ನಮ್ಮ ಚುನಾವಣೆ ಸಮಯದಲ್ಲಿ ಯಾಕೆ ಸುಮ್ಮನಿರ್ತೀರಾ ಎಂದು ಪ್ರಶ್ನೆ ಮಾಡುವ ಮತ್ತೊಂದು ಪೋಸ್ಟ್ ಅನ್ನು ಕೂಡ ಜಾನ್ವಿ ಹಂಚಿಕೊಂಡಿದ್ದಾರೆ.
ಇಷ್ಟೆಲ್ಲಾ ಮಾತನಾಡುವವರು ನೀವು ಯಾಕೆ ಬಿಗ್‌ಬಾಸ್ ಶೋಗೆ ಹೋಗಿದ್ರಿ ಎಂದು ಗಿಲ್ಲಿ ಅಭಿಮಾನಿಗಳು ಜಾನ್ವಿಗೆ ತಿರುಗೇಟು ನೀಡುತ್ತಿದ್ದಾರೆ. ಬಿಗ್‌ಬಾಸ್ ಮನೆಗೆ ಆಕೆ 5ನೇ ಸ್ಪರ್ಧಿಯಾಗಿ ಹೋಗಿದ್ದರು. 63 ದಿನಗಳ ಕಾಲ ಮನೆಯಲ್ಲಿ ಇದ್ದು ಬಳಿಕ ಎಲಿಮಿನೇಟ್ ಆಗಿದ್ದರು. ಅಶ್ವಿನಿ ಜೊತೆ ಬಹಳ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬಳಿಕ ಕೆಲ ಭಿನ್ನಾಭಿಪ್ರಾಯ ಮೂಡಿ ದೂರಾಗಿದ್ದರು. ನಂತರ ಮತ್ತೆ ಜೊತೆಯಾಗಿದ್ದರು.
ಸುದ್ದಿವಾಹಿನಿ ನಿರೂಪಕಿಯಾಗಿ ಗಮನ ಸೆಳೆದಿದ್ದ ಜಾಹ್ನವಿ ಬಳಿಕ ಕೆಲ ಶೋಗಳಲ್ಲಿ ಭಾಗವಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟೀವ್ ಆಗಿದ್ದಾರೆ. ಗಿಲ್ಲಿ ಕಾಮಿಡಿ ಬಿಟ್ಟರೆ ಬೇರೆ ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ. ಇದು ವ್ಯಕ್ತಿತ್ವದ ಆಟ. ಅದರಲ್ಲಿ ಆತ ಸೋಲುತ್ತಿದ್ದಾರೆ. ಕ್ರೇಜ್ ನೋಡಿದರೆ ಗಿಲ್ಲಿ ಗೆಲ್ಲುವಂತೆ ಕಾಣ್ತಿದೆ. ಆದರೆ ನನಗೆ ಅಶ್ವಿನಿ ಗೌಡ ಅವರು ಗೆಲ್ಲಬೇಕು ಎಂದು ಜಾಹ್ನವಿ ಮನೆಯಿಂದ ಹೊರಬಂದ ಬಳಿಕ ಹೇಳಿದ್ದರು. ಫಿನಾಲೆ ವೇದಿಕೆಗೂ ಆಕೆ ಬರಲಿಲ್ಲ.
ಗಿಲ್ಲಿ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ದೇಶ ವಿದೇಶಗಳಲ್ಲಿ ಇರುವ ಅಭಿಮಾನಿಗಳು ಗಿಲ್ಲಿ ಗೆಲ್ಲಬೇಕು ಎಂದು ಬೆಂಬಲ ಸೂಚಿಸಿದ್ದರು. ಕೆಲವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗಿಲ್ಲಿ ಗೆಲುವಿಗೆ ಪ್ರಾರ್ಥಿಸಿದ್ದರು. ಎಲ್ಲರೂ ವೋಟ್ ಮಾಡುವಂತೆ ಅಭಿಮಾನಿಗಳು ಖುದ್ದಾಗಿ ಮನವಿ ಮಾಡಿದ್ದರು. ದಾಖಲೆ ಮಟ್ಟದಲ್ಲಿ ಗಿಲ್ಲಿಗೆ ವೋಟ್ ಬಂದಿದೆ. ಕೆಲವರು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ.


Click it and Unblock the Notifications











