BBK12: ಫಿನಾಲೆಗೂ ಮುನ್ನ ರಾಗ ಬದಲಿಸಿದ ಖ್ಯಾತ ಜ್ಯೋತಿಷಿ; ಹಾಗಿದ್ರೆ ಬಿಗ್‌ಬಾಸ್ ವಿನ್ನರ್ ಯಾರು?

ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಪ್ರೀ ಫಿನಾಲೆ ಎಪಿಸೋಡ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಸುದೀಪ್ ಫಿನಾಲೆ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಗೆಲ್ಲೋದು ಯಾರು ಎನ್ನುವ ಚರ್ಚೆ ಮುಂದುವರೆದಿದೆ.

ಅಶ್ವಿನಿ ಗೌಡ, ಗಿಲ್ಲಿ, ರಕ್ಷಿತಾ, ಕಾವ್ಯಾ, ರಘು ಹಾಗೂ ಧನುಷ್ ಫಿನಾಲೆ ಎಂಟ್ರಿ ಕೊಟ್ಟಿದ್ದಾರೆ. ಕೊನೆ ಹಂತದಲ್ಲಿ ಧ್ರುವಂತ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಈ 6 ಜನರಲ್ಲಿ ಗೆಲ್ಲೋದು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಗಿಲ್ಲಿ ಗೆಲ್ತಾನೆ ಎಂದು ಅಭಿಮಾನಿಗಳು ಫಿಕ್ಸ್ ಆಗಿಬಿಟ್ಟಿದ್ದಾರೆ. ಇನ್ನು ಬಿಗ್‌ಬಾಸ್ ಫಿನಾಲೆ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ಕೂಡ ದಿಢೀರನೆ ರಾಗ ಬದಲಿಸಿದ್ದಾರೆ. ಗಿಲ್ಲಿ ಬಿಗ್‌ಬಾಸ್ ಶೋ ಗೆಲ್ಲಲ್ಲ ಎಂದು ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು. ಆದರೆ ಈಗ ಹೊಸ ಕಥೆ ಹೇಳ್ತಿದ್ದಾರೆ.

Bigg Boss Kannada 12 Finale Prashanth Kini Modifies Prediction While Gilli s Record Votes buzz

ಪ್ರಶಾಂತ್ ಕಿಣಿ ನುಡಿದಿದ್ದ ಕೆಲ ಭವಿಷ್ಯ ನಿಜವಾಗಿತ್ತು. ಹಾಗಾಗಿ ಸಾಕಷ್ಟು ಜನ ಅವರನ್ನು ಫಾಲೋ ಮಾಡುತ್ತಾರೆ. ಟ್ವಿಟ್ಟರ್‌ನಲ್ಲಿ ಆಕ್ಟೀವ್ ಆಗಿರುವ ಕಿಣಿ ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಬಿಗ್‌ಬಾಸ್ ಕನ್ನಡ 12ರಲ್ಲಿ ಯಾರು ಗೆಲ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳ ಪ್ರಶ್ನೆಗೆ 2 ತಿಂಗಳ ಹಿಂದೆ ಪ್ರತಿಕ್ರಿಯಿಸಿದ್ದರು. ಗಿಲ್ಲಿ ಬಿಗ್‌ಬಾಸ್ ಶೋನಲ್ಲಿ ಗೆಲ್ಲುವುದಿಲ್ಲ. ಮಹಿಳಾ ಸ್ಪರ್ಧಿಯೊಬ್ಬರು ಈ ಬಾರಿ ಗೆಲ್ತಾರೆ. ಟಾಪ್ 3 ಹಂತಕ್ಕೆ ಗಿಲ್ಲಿ ನಟ, ಕಾವ್ಯ ಶೈವ ಹಾಗೂ ರಕ್ಷಿತಾ ಶೆಟ್ಟಿ ಹೋಗುತ್ತಾರೆ ಎಂದು ಕೂಡ ಕಿಣಿ ಭವಿಷ್ಯ ನುಡಿದಿದ್ದರು.

ಬಿಗ್‌ಬಾಸ್ ಫಿನಾಲೆಗೆ ಒಂದು ದಿನ ಬಾಕಿ ಇರುವಾಗ ತಮ್ಮದೇ ಹಳೇ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿ ಜ್ಯೋತಿಷಿ ಪ್ರಶಾಂತ್ ಕಿಣಿ ಪ್ರತಿಕ್ರಿಯಿಸಿದ್ದಾರೆ. "ನಾನು ಗಿಲ್ಲಿ ಬಿಗ್ ಬಾಸ್ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದೆ. ಅದರರ್ಥ ಗಿಲ್ಲಿ ನಟ ವಿರುದ್ಧ ನನಗೆ ಯಾವುದೇ ದ್ವೇಷವಿಲ್ಲ.. ಗಿಲ್ಲಿ ಗೆಲ್ಲಲು ಅತ್ಯಂತ ಅರ್ಹ ಸ್ಪರ್ಧಿ... ಹಿಂದಿನ ಸೀಸನ್‌ಗಳಲ್ಲಿ ಅರ್ಹ ಸ್ಪರ್ಧಿಗಳೇ ಕೆಲವರು ಬಿಗ್ ಬಾಸ್ ಗೆಲ್ಲಲು ಸಾಧ್ಯವಾಗಲಿಲ್ಲ" ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿ "ಗಿಲ್ಲಿ ನಟ ಬಿಗ್ ಬಾಸ್ ಶೋ ಗೆಲ್ಲುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ.. ಒಬ್ಬ ಸ್ಪರ್ಧಿಗೆ ಆ ದೇಶದ ದೊಡ್ಡ ಸೂಪರ್‌ಸ್ಟಾರ್‌ಗಳ ಬೆಂಬಲ ಸಿಕ್ಕರೆ ಸ್ಪರ್ಧೆಯ ಅಗತ್ಯವೇ ಇರಲ್ಲ ಎನ್ನುವುದು ನನ್ನ ಅಭಿಪ್ರಾಯ.. ಅದರಿಂದ ಇತರ ಸ್ಪರ್ಧಿಗಳಿಗೆ ಅನ್ಯಾಯವಾಗುತ್ತದೆ.. ಗಿಲ್ಲಿ ನಟ ಅವರನ್ನು ವಿಜೇತರೆಂದು ಘೋಷಿಸಿ ಬಿಗ್ ಬಾಸ್ ಕಾರ್ಯಕ್ರಮವನ್ನು ಮುಗಿಸಿ" ಎಂದು ಪ್ರಶಾಮತ್ ಕಿಣಿ ಬರೆದುಕೊಂಡಿದ್ದಾರೆ.

ಗಿಲ್ಲಿ ದಾಖಲೆ ಮತಗಳ ಅಂತರದಿಂದ ಗೆಲ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಪ್ರೀ ಫಿನಾಲೆ ವೇದಿಕೆಯಲ್ಲಿ ಸ್ಪರ್ಧಿಗಳಿಗೆ ಸಿಕ್ಕಿರುವ ಮತಗಳ ಬಗ್ಗೆ ಸುದೀಪ್ ಚರ್ಚಿಸಿದ್ದಾರೆ. ಕಳೆದ ಸೀಸನ್‌ಗೆ ಹೋಲಿಸಿದರೆ ಈ ಸೀಸನ್ ರೀಚ್ ಬಹಳ ದೊಡ್ಡದಾಗಿದೆ. ವೀಕ್ಷಕರಿಗೆ ಆಸಕ್ತಿ ಹೆಚ್ಚಾಗಿದೆ. ಕಳೆದ ಸೀಸನ್ ವಿನ್ನರ್ ಗಳಿಸಿದ ಮತಗಳಿಂದ 7 ಪಟ್ಟು ಹೆಚ್ಚು ಮತಗಳು(ಒಂದು ದಿನ ಬಾಕಿ ಇರುವಾಗ) ಈ ಬಾರಿ ನಂಬರ್ 1 ಸ್ಥಾನದಲ್ಲಿರುವ ಸ್ಪರ್ಧಿಗೆ ಸಿಕ್ಕಿದೆ ಎಂದು ಸುದೀಪ್ ಹೇಳಿದ್ದಾರೆ.

ಕಳೆದ ಸೀಸನ್ ವಿನ್ನರ್ ಹನುಮಂತೆ 5 ಕೋಟಿ 23 ಲಕ್ಷ ಮತಗಳು ಸಿಕ್ಕಿತ್ತು. ಈ ಬಾರಿ ವಿಜೇತ ಸ್ಪರ್ಧಿಗೆ 37 ಕೋಟಿ 49 ಲಕ್ಷ ಮತಗಳು ಸಿಕ್ಕಿರುವುದಾಗಿ ಹೇಳಿದ್ದಾರೆ. ಗಿಲ್ಲಿಗೆ ಇಷ್ಟು ದೊಡ್ಡ ಸಂಖ್ಯೆಯ ಮತಗಳು ಸಿಕ್ಕಿರುವುದು ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಆ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

More from Filmibeat

Read more about: bigg boss bigg boss 12 gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X