BBK12: ಇನ್ನು ಮುಂದೆ ಮಾತಾಡ್ಸಲ್ಲ; ಮುರಿದು ಬಿತ್ತು ಗಿಲ್ಲಿ- ಕಾವು ಸ್ನೇಹ!
ಬಿಗ್‌ಬಾಸ್ ಸೀಸನ್ 12ರಲ್ಲಿ ಗಿಲ್ಲಿ ನಟ ಹಾಗೂ ನಟಿ ಕಾವ್ಯಾ ಶೈವ ನಡುವಿನ ಬಾಂಧವ್ಯ ಗೊತ್ತೇಯಿದೆ. ಇಬ್ಬರೂ ಕೈಗೆ ದಾರ ಕಟ್ಟಿಕೊಂಡು ಜಂಟಿಯಾಗಿ ಮನೆ ಒಳಗೆ ಪ್ರವೇಶಿಸಿದ್ದರು. ದಾರ ತೆಗೆದರೂ ಇಬ್ಬರೂ ಸ್ನೇಹ ಮುಂದುವೆರೆದಿತ್ತು. ಸದಾ ಕಾವು ಕಾವು ಎಂದು ಗಿಲ್ಲಿ ಆಕೆಯ ಹಿಂದೆ ಇರುತ್ತಿದ್ದರು. ಈಗ ಅದಕ್ಕೆ ಬ್ರೇಕ್ ಬಿದ್ದಂತೆ ಕಾಣ್ತಿದೆ.
ಗಿಲ್ಲಿ ಹಾಗೂ ಕಾವ್ಯ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಅರ್ಥದಲ್ಲೇ ಕೆಲವರು ಮಾತನಾಡುತ್ತಾರೆ. ಮನೆಯೊಳಗಿನ ಒಂದಷ್ಟು ಮೊಮೆಂಟ್ಸ್ ಅದಕ್ಕೆ ಇಂಬುಕೊಡುವಂತೆ ಇರುವುದು ಸುಳ್ಳಲ್ಲ. ಆಕೆಯನ್ನು ಗಿಲ್ಲಿ ಸದಾ ರೇಗಿಸುವುದು, ತನ್ನ ಕಾವು ಬಗ್ಗೆ ಯಾರಾದರೂ ಮಾತನಾಡಿದರೆ ತಿರುಗೇಟು ಕೊಡುವುದು ಮಾಡುತ್ತಿದ್ದರು. ಒಟ್ಟಾರೆ ಆಕೆಯ ಬೆಂಬಲಕ್ಕೆ ನಿಂತಿದ್ದರು. ಕೆಲವೊಮ್ಮೆ ಇದು ಅತಿಯಾಯಿತು ಎನ್ನುವವರು ಇದ್ದಾರೆ.

ಸಹ ಸ್ಪರ್ಧಿಗಳು ಕೂಡ ಕಾವು ಕಾವು ಎಂದು ಓಡಾಡುತ್ತಾ ಕಾಮಿಡಿ ಮಾಡುವುದು ಬಿಟ್ಟರೆ ಗಿಲ್ಲಿ ಬೇರೆನು ಮಾಡ್ತಾನೆ ಎಂದಿದ್ದರು. ಸದ್ಯ ಗಿಲ್ಲಿ ಹಾಗೂ ಕಾವ್ಯ ನಡುವೆ ಭಿನ್ನಾಭಿಪ್ರಾಯ ಮೂಡಿ ಹುಸಿಮುನಿಸು ಶುರುವಾಗಿದೆ. ಇದೀಗ ಅದಕ್ಕೆ ಸಂಬಂಧಿಸಿದ ಹೊಸ ಪ್ರೋಮೊ ಕಲರ್ಸ್ ಕನ್ನಡ ಹಂಚಿಕೊಂಡಿದೆ. ಇದನ್ನು ನೋಡಿದರೆ ಇಬ್ಬರ ಫ್ರೆಂಡ್‌ಶಿಪ್ ಮುರಿದು ಬಿತ್ತಾ ಎನ್ನುವಂತಾಗಿದೆ.
'ಹಾರ್ಟ್ ಬ್ರೇಕಿಗಿಂತ ನೋವು ಈ ಫ್ರೆಂಡ್‌ಶಿಪ್ ಬ್ರೇಕಪ್' ಎಂದು ಕ್ಯಾಪ್ಷನ್ ಕೊಟ್ಟು ಪ್ರೋಮೊ ತೇಲಿಬಿಟ್ಟಿದ್ದಾರೆ. ಏನ್ ನಿನ್ನ ಪ್ರಾಬ್ಲಂ, ಮಾತು ಬಿಟ್ಟಿದ್ಯಾರು? ನನ್ನನ್ನು ಕಾವು ಕಾವು ಅಂತ ರೇಗಿಸಬೇಡ ಎಂದು ಗಿಲ್ಲಿಗೆ ಕಾವ್ಯಾ ಎಚ್ಚರಿಕೆ ಕೊಟ್ಟಿದ್ದು ಗೊತ್ತೇಯಿದೆ. ಆದರೆ ಸಾಧ್ಯವೇ ಇಲ್ಲ ಎಂದು ಗಿಲ್ಲಿ ಹೇಳಿದ್ದರು. ಬಳಿಕ ಗಿಲ್ಲಿ ಜೊತೆ ಕಾವ್ಯಾ ಮಾತು ಬಿಟ್ಟಿದ್ದರು. ಇದೇ ವಿಚಾರದ ಬಗ್ಗೆ ಮತ್ತೆ ಇಬ್ಬರ ನಡುವೆ ಚರ್ಚೆ ನಡೆದಿದೆ.
ಕಾವ್ಯಾ: "ನಿನ್ನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ನಾನೇನು ಮಾಡ್ದೆ"
ಗಿಲ್ಲಿ: ರೇಗಿಸಬಾರದು ಅಲ್ವಾ ನಿಂಗೆ ಸರಿ ಬಿಡು. ಮಾತನಾಡವುದೇ ಸಮಸ್ಯೆ ಅಲ್ವಾ? ಮಾತನಾಡದೇ ಇದ್ದರೆ...
ಕಾವ್ಯಾ: ಬೇರೆಯವರು ಹೇಳಿದಾಗ ಸ್ವಾಭಿಮಾನಕ್ಕೆ ಧಕ್ಕೆ ಬರಲಿಲ್ಲ,
ಗಿಲ್ಲಿ: ಊರಿನವರೆಲ್ಲಾ ಬೈಯುವುದಕ್ಕೂ ಮನೆಯವರು ಹೇಳುವುದಕ್ಕೂ ವ್ಯತ್ಯಾಸ ಇಲ್ವಾ? ಮತ್ತೊಮ್ಮೆ ಕೇಳ್ತಿದ್ದೀನಿ...
ಕಾವ್ಯಾ: ಮಾತನಾಡಿಸು, ರೇಗಿಸಬೇಡ..
ಗಿಲ್ಲಿ: ಹಾಗಿದ್ದರೆ ಮಾತನಾಡಿಸುವುದಿಲ್ಲ ಬಿಡು
ಕಾವ್ಯಾ: ಮೂರನೇ ವ್ಯಕ್ತಿ ಆಗಿದ್ದೀನಿ ಅಂದ್ರೆ ಪರವಾಗಿಲ್ಲ, ಮೂರನೇ ವ್ಯಕ್ತಿ ಆಗಿ ಇರ್ತೀನಿ
ಎಂದು ಹೇಳಿ ಕಾವ್ಯಾ ಬೇಸರದಿಂದ ಎದ್ದು ಹೋಗಿದ್ದಾರೆ. ಗಿಲ್ಲಿ ಕೂಡ ಬೇಸರಗೊಂಡಿರುವುದು ಪ್ರೋಮೊದಲ್ಲಿ ನೋಡಬಹುದು. ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರೂ ದೂರಾಗಬೇಡಿ. ನಿಮ್ಮನ್ನು ಒಟ್ಟಿಗೆ ನೋಡಲು ಖುಷಿಯಾಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ಕಾವ್ಯಾ ಹಾಗೂ ಗಿಲ್ಲಿ ನಡುವೆ ಇದೇ ವಿಚಾರದ ಬಗ್ಗೆ ಮಾತುಕತೆ ನಡೆದಿತ್ತು. ನನ್ನನ್ನು ನೀನು ರೇಗಿಸಬೇಡ, ಇದೇ ಮಾತನ್ನು ಮೊದಲ ದಿನದಿಂದಲೂ ಹೇಳ್ತಿದ್ದೀನಿ. ನಾನು ಹೋಗ್ಲಿ ಅಂತ ಸುಮ್ಮನಿದ್ದೆ. ಆದ್ರೆ ನೀನು ನನ್ನನ್ನು ಕಾವು ಕಾವು ಎಂದು ರೇಗಿಸುವುದು ನನಗೆ ಎಫೆಕ್ಟ್ ಆಗ್ತಿದೆ. ಇದನ್ನು ಮುಂದುವರೆಸಬೇಡ, ಆಗ ನೋಡೋಣ ಉಳಿದ ಸ್ಪರ್ಧಿಗಳು ಯಾವ ಕಾರಣ ಕೊಟ್ಟು ಮಾತನಾಡುತ್ತಾರೆ ಎಂದು ಕಾವ್ಯಾ ಹೇಳಿದ್ದರು. ಹಾಗಿದ್ದರೆ ಮಾತನಾಡಿಸುವುದೇ ಇಲ್ಲ ಬಿಡು ಎಂದು ಗಿಲ್ಲಿ ಪ್ರತ್ಯುತ್ತರ ಕೊಟ್ಟಿದ್ದರು. ಯಾಕೆ ಮಾತನಾಡಿಸಲ್ಲ ಅಂದಾಗ ಅದು ನನ್ನಿಷ್ಟ. ಮಾತನಾಡಲೇಬೇಕು ಎಂದು ರೂಲ್ ಬುಕ್‌ನಲ್ಲಿ ಇದ್ಯಾ? ಎಂದು ಕೇಳಿದ್ದರು.
ಗಿಲ್ಲಿ- ಕಾವ್ಯಾ ದೂರಾಗಲ್ಲ ಬಿಡಿ. ಇದೆಲ್ಲಾ ಬೀ ಪ್ರೋಮೊ ಅಷ್ಟೇ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮುಂದೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











