BBK12: ಗಿಲ್ಲಿಗೆ ತನ್ನ ಮಾತೇ ಮುಳ್ಳಾಗುತ್ತಾ? ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ವರಸೆ ಬದಲಾಯ್ತಾ?
ಬಿಗ್‌ಬಾಸ್ ಕನ್ನಡ ಸೀಸನ್ 12 ಈ ಬಾರಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಗಿಲ್ಲಿ ನಟನ ಕಾಮಿಡಿ, ಮಾತಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಬೇರೆ ಸ್ಪರ್ಧಿಗಳನ್ನು ಮಾತಲ್ಲೇ ಕಾಲೆಳೆಯುವುದು ಬಿಟ್ಟು ಗಿಲ್ಲಿಗೆ ಬೇರೆನೂ ಗೊತ್ತಿಲ್ಲ ಎನ್ನುವವರು ಇದ್ದಾರೆ. ಅತಿಯಾದ ಆತ್ಮವಿಶ್ವಾಸ ಆತನಿಗೆ ಹಿನ್ನಡೆ ಆಗುತ್ತಾ ಎನ್ನುವ ಚರ್ಚೆ ಕೂಡ ನಡೀತಿದೆ.
ಸದ್ಯ ಹೊಸದಾಗಿ ಬಂದಿರುವ ಪ್ರೋಮೊದಲ್ಲಿ ಗಿಲ್ಲಿ ಹಾಗೂ ದೃವಂತ್ ನಡುವೆ ವಾಕ್ಸಮರ ನಡೆದಿರುವುದು ಗೊತ್ತಾಗುತ್ತಿದೆ. ಸದಾ ಬೇರೆಯವರ ಕಾಲೆಳೆಯುವುದು ಬಿಟ್ಟು ನೀನು ಏನು ಅನ್ನುವುದು ತೋರಿಸಿ ನೋಡೋಣ ಎಂದು ಗಿಲ್ಲಿಗೆ ದೃವಂತ್ ಸವಾಲ್ ಹಾಕಿದ್ದಾರೆ. "ಅದು ಮಾಡಿದ್ದಕ್ಕೆ ಕಿಚ್ಚನ ಚಪ್ಪಾಳೆ ಬಂದಿದ್ದು" ಎಂದು ಗಿಲ್ಲಿ ತಿರುಗೇಟು ನೀಡಿದ್ದಾರೆ.

ಗಿಲ್ಲಿ ತಮ್ಮ ಕಾಮಿಡಿ ಡೈಲಾಗ್ಸ್, ಜೋಕ್‌ಗಳಿಂದಲೇ ವೀಕ್ಷಕರ ಗಮನ ಸೆಳೆದವರು. ಪ್ರಾಪರ್ಟಿ ಕಾಮಿಡಿ ಎನ್ನುತ್ತಾ ಬೇರೆ ಬೇರೆ ಶೋಗಳಲ್ಲಿ ವೀಕ್ಷಕರು, ತೀರ್ಪುಗಾರರನ್ನು ರಂಜಿಸಿದ್ದರು. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಆತನ ಜೋಕ್‌ಗಳಿಗೆ ನಟ ಶಿವರಾಜ್‌ಕುಮಾರ್ ಕೂಡ ಫಿದಾ ಆಗಿದ್ದರು. ಅದೇನೋ ಗೊತ್ತಿಲ್ಲ ಗಿಲ್ಲಿ ತಲೆಯಲ್ಲಿ ಕೂತುಬಿಟ್ಟಿದ್ದಾನೆ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ತಮ್ಮ ಮಾತಿನಿಂದ ಅಷ್ಟರಮಟ್ಟಿಗೆ ಮೋಡಿ ಮಾಡುತ್ತಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಮಾತು ಅತಿಯಾಯಿತು ಎನ್ನುವವರು ಇದ್ದಾರೆ. ಸಹ ಸ್ಪರ್ಧಿಗಳು ಇದೇ ವಿಚಾರದ ಬಗ್ಗೆ ಈಗ ಚರ್ಚಿಸಿದ್ದಾರೆ. ಏನು ಗಿಲ್ಲಿ ಗಿಲ್ಲಿ ಗಿಲ್ಲಿ ಎಂದು ಅಶ್ವಿನಿ ಮೊದಲಿಗೆ ಮಾತನಾಡಿರುವುದನ್ನು ನೋಡಬಹುದು. ಬಳಿಕ ಗಾರ್ಡನ್ ಏರಿಯಾದಲ್ಲಿ ಗಿಲ್ಲಿ, ಚಂದ್ರಪ್ರಭ, ದೃವಂತ್, ರಾಶಿಕಾ, ಜಾಹ್ನವಿ, ದೃವಂತ್ ಎಲ್ಲರೂ ಕೂತು ಮಾತನಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದಿದೆ.
ನಯ ನಾಜೂಕು ಕಲಿತಿಕೋ ಎಂದು ರಾಶಿಕಾ ಹೇಳಿದ್ದು ಅದಕ್ಕೆ ಉತ್ತರಿಸಿರುವ ಗಿಲ್ಲಿ "ನಯ ನಾಜೂಕು ನಿನಗೆ ಇಲ್ಲ" ಎಂದಿದ್ದಾರೆ. ಇವತ್ತು ನಿನ್ನ ಬಗ್ಗೆ ಒಳ್ಳೆದು ಮಾತನಾಡಿದ್ರು ಎಂದು ದೃವಂತ್ ಪ್ರತಿಕ್ರಿಯಿಸಿದ್ದಾರೆ. ಅದಕ್ಕೂ ಗಿಲ್ಲಿ ತಿರುಗೇಟು ಕೊಟ್ಟಾಗ ದೃವಂತ್ ಆಕ್ರೋಶಗೊಂಡಿದ್ದಾರೆ. ಬೇರೆಯವರ ಕಾಲು ಎಳೆಯದೇ ನೀನು ಅಂತ ತೋರ್ಸು ಎಂದು ದೃವಂತ್ ಜೋರು ಮಾಡಿದ್ದಾರೆ. ಅದಕ್ಕೆ ಅಶ್ವಿನಿ ಕೂಡ ಬೆಂಬಲವಾಗಿ ನಿಂತಿದ್ದಾರೆ.
ದೃವಂತ್‌ಗೆ ಅಶ್ವಿನಿ ಹೇಳಿಕೊಟ್ಟು ಹೀಗೆ ಮಾತನಾಡಿಸುತ್ತಿದ್ದಾರೆ ಎಂದು ಕೆಲವರು ಪ್ರೋಮೊ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ. ಗಿಲ್ಲಿ ಮಾತು ಅತಿಯಾಯಿತು, ಒಮ್ಮೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ ಎನ್ನುವ ಜಂಭದಿಂದ ಮಾತನಾಡುತ್ತಿದ್ದಾರೆ, ಇದಕ್ಕೆ ವೀಕೆಂಡ್‌ನಲ್ಲಿ ಸುದೀಪ್ ಬಿಸಿ ಮುಟ್ಟಿಸಬೇಕು ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಗಿಲ್ಲಿಗೆ ತಮ್ಮ ಮಾತೇ ಮುಳ್ಳಾಗುತ್ತಾ? ಎಂದು ಕಾದು ನೋಡಬೇಕಿದೆ.
ಗಿಲ್ಲಿ ಬಹಳ ಚೆನ್ನಾಗಿ ಆಡುತ್ತಿದ್ದಾರೆ. ಆತನ ಕಾಮಿಡಿ ಸೂಪರ್. ಆತನಿಗಾಗಿ ನಾವು ಬಿಗ್‌ಬಾಸ್ ಶೋ ನೋಡುತ್ತೇವೆ. ಇಲ್ಲದೇ ಇದ್ದಿದ್ದರೆ ಈ ಬಾರಿ ಶೋ ಪ್ಲಾಫ್ ಆಗುತ್ತಿತ್ತು ಎಂದು ಅಭಿಮಾನಿಗಳು ಬೆಂಬಲ ಸೂಚಿಸುತ್ತಿದ್ದಾರೆ. ಗಿಲ್ಲಿ ನಿಜಕ್ಕೂ ಒಳ್ಳೆ ಆಟ ಆಡುತ್ತಿದ್ದಾರೆ. ಕೆಲವರಿಗೆ ಮಾತಿನ ಮೂಲಕ ಚಾಟಿ ಬೀಸುತ್ತಿದ್ದಾರೆ. ಕೆಲವೊಮ್ಮೆ ನ್ಯಾಯದ ಪರ ತಮ್ಮ ಬೆಂಬಲ ಸೂಚಿಸಿದ್ದಾರೆ. ಇದೇ ಕಾರಣಕ್ಕೆ ಮನೆಯಲ್ಲಿ ಕೆಲವರು ವಿರೋಧ ಕಟ್ಟಿಕೊಂಡಿದ್ದಾರೆ.
ಈ ಬಾರಿ ಬಿಗ್‌ಬಾಸ್ ವಿನ್ನರ್ ಆಗುವುದು ಗಿಲ್ಲಿನೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿರುತ್ತಾರೆ. ಇನ್ನು ಈ ವಾರ ಯಾವುದೇ ಟಾಸ್ಕ್ ಇಲ್ಲದೇ ಸ್ಪರ್ಧಿಗಳು ಆರಾಮಾಗಿ ಇದ್ದಾರೆ. ತಮ್ಮ ತಮ್ಮ ಮನೆಗಳಿಂದ ಪತ್ರಗಳನ್ನು ಪಡೆಯುತ್ತಿದ್ದಾರೆ. ಆದರೆ ಕೆಲವರಕೈಗೆ ಪತ್ರಗಳು ಸಿಕ್ಕರೆ ಮತ್ತೆ ಕೆಲವರು ಪತ್ರ ಓದುವುದರಿಂದ ವಂಚಿತರಾಗುತ್ತಿದ್ದಾರೆ.


Click it and Unblock the Notifications











