BBK12: ಗೆದ್ದ ಧ್ರುವಂತ್; 'ಟಿಕೆಟ್ ಟು ಫಿನಾಲೆ 6' ಟಾಸ್ಕ್ ರೇಸ್‌ನಿಂದ ಹೊರಬಿದ್ದ ಗಿಲ್ಲಿ
ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ 100ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆಗೆ ದಿನಗಣನೆ ಶುರುವಾಗಿದೆ. ಯಾರು ಫಿನಾಲೆಗೆ ಹೋಗುತ್ತಾರೆ ಎಂದು ನಿರ್ಧರಿಸುವ ಸಮಯ ಬಂದಿದೆ. 'ಟಿಕೆಟ್ ಟು ಫಿನಾಲೆ' ಟಾಸ್ಕ್‌ಗೆ ಶುರುವಾಗುತ್ತಿದೆ. ಆದರೆ ಅದನ್ನು ಮುನ್ನ ಗಿಲ್ಲಿಗೆ ಶಾಕ್ ಎದುರಾಗಿದೆ.
ಸೋಮವಾರ ನಾಮಿನೇಷನ್ ಪ್ರಕ್ರಿಯೆ ಬಳಿಕ ಮತ್ತೆ ಟಾಸ್ಕ್‌ಗಳು ಶುರುವಾಗಿದೆ. ಆರಂಭದಲ್ಲೇ 'ಟಿಕೆಟ್ ಟು ಫಿನಾಲೆ' ಟಾಸ್ಕ್‌ಗಳನ್ನು ಆಡಲು ಅರ್ಹತೆ ಗಿಟ್ಟಿಸಲು ಬಿಗ್‌ಬಾಸ್ ಬೇರೆ ಟಾಸ್ಕ್ ಕೊಟ್ಟಿದ್ದಾರೆ.

'ಟಿಕೆಟ್ ಟು ಟಾಪ್ 6' ಆಟದಿಂದ ಹೊರಗಿಡಲು ಕ್ಯಾಪ್ಟನ್ ಧನುಷ್ ಅವರು ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಧ್ರುವಂತ್ ಹೆಸರನ್ನು ಧನುಷ್ ತೆಗೆದುಕೊಂಡರು. ಬಳಿಕ ಧ್ರುವಂತ್ ತಮ್ಮನ್ನು ತಾವು ಸಮರ್ಥರು ಎಂದು ಸಾಬೀತು ಮಾಡಿಕೊಂಡು ತಮ್ಮ ಎದುರಾಳಿಯನ್ನು ಆಯ್ಕೆ ಮಾಡಿಕೊಂಡು ಟಾಸ್ಕ್ ಆಡಬೇಕಾಯಿತು. ಹಿಂದು ಮುಂದು ನೋಡದೇ ಗಿಲ್ಲಿಯನ್ನು ಆಯ್ಕೆ ಮಾಡಿಕೊಂಡರು.
ಗಿಲ್ಲಿ ಟಾಸ್ಕ್ ಆಡಲು ಹಿಂದೇಟು ಹಾಕುತ್ತಾನೆ. ಟಾಸ್ಕ್ ವಿಚಾರದಲ್ಲಿ ತಪ್ಪಿಸಿಕೊಂಡೇ ಬಂದಿದ್ದಾನೆ ಎಂದರು. ಬಳಿಕ ಇಬ್ಬರೂ ಚೆಂಡನ್ನು ಎಸೆಯುವ ಟಾಸ್ಕ್ ಆಡಿದರು. ತೀವ್ರ ಪೈಪೋಟಿಯಿಂದ ಆಟದಲ್ಲಿ ಧ್ರುವಂತ್ ಗೆದ್ದಬಿಟ್ಟರು. ಹಾಗಾಗಿ ಗಿಲ್ಲಿ 'ಟಿಕೆಟ್ ಟು ಟಾಪ್ 6' ಆಟದಿಂದ ಹೊರಗುಳಿದರು. ಧ್ರುವಂತ್ ಹೇಳಿದಂತೆ ಟಾಸ್ಕ್‌ಗಳನ್ನು ಆಡುವುದರಲ್ಲಿ ಗಿಲ್ಲಿ ಹಿಂದೆ ಬಿದ್ದರು. 'ಚುಚ್ಚೋದೆ ನನ್ನ ಬ್ಯುಸಿನೆಸ್ಸು' ಟಾಸ್ಕ್ ಗೆದ್ದ ಧ್ರುವಂತ್ 'ಟಿಕೆಟ್ ಟು ಫಿನಾಲೆ-6'ಗೆ ಮೊದಲ ಟಿಕೆಟ್ ಪಡೆಯುವ ಓಟದಲ್ಲಿ ಸ್ಥಾನ ಪಡೆದಿದ್ದಾರೆ. ಗಿಲ್ಲಿ ಇಷ್ಟು ದಿನ ಧ್ರುವಂತ್ ಅವರನ್ನು ರೇಗಿಸುತ್ತಿದ್ದರು. ಟಾಸ್ಕ್ ಗೆದ್ದ ಧ್ರುವಂತ್ ಸಂಭ್ರಮ ಜೋರಾಗಿತ್ತು.

ಈ ಸೋಲು ಗಿಲ್ಲಿಗೆ ಮಾತ್ರವಲ್ಲ ಮನೆ ಮಂದಿ ಹಾಗೂ ಆತನ ಅಭಿಮಾನಿಗಳಗೂ ಶಾಕ್ ತಂದಿದೆ. ಗಿಲ್ಲಿ ಮುಂದಿನ ಫಿನಾಲೆ ನಡೆ ಏನು ಎಂದು ಆತಂಕ ಶುರುವಾಗಿದೆ. ಗಿಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತಾರೆ ಎಂದು ಸಾಕಷ್ಟು ಜನ ಹೇಳುತ್ತಾ ಬರ್ತಿದ್ದಾರೆ. ಮುಂದಿನ ದಿನಗಳಲ್ಲಿ ಫಿನಾಲೆ ರೇಸ್ ಮತ್ತಷ್ಟು ಕಠಿಣವಾಗಲಿದೆ. ಸದ್ಯ ಮನೆಯಲ್ಲಿ 8 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವಾರದ ನಡುವೆ ಮಿಡ್ ನೈಟ್ ಎಲಿಮಿನೇಷನ್ ನಡೆಯುತ್ತದೆ ಎಂದು ಹೇಳಲಾಗ್ತಿದೆ.
ಇಬ್ಬರು ಹೊರಬಂದು 6 ಮಂದಿ ಫಿನಾಲೆಗೆ ಹೋಗಬೇಕಿದೆ. ಹಾಗಾಗಿ ಮುಂದೆ ಆಟ ಮತ್ತಷ್ಟು ರೋಚಕವಾಗಿ ಇರಲಿದೆ. ಗಿಲ್ಲಿ, ಅಶ್ವಿನಿ, ಧ್ರುವಂತ್, ರಕ್ಷಿತಾ ಫಿನಾಲೆಗೆ ಹೋಗುವುದು ಪಕ್ಕಾ ಎನ್ನಲಾಗ್ತಿದೆ. ಹಾಗಿದ್ದರೆ ಎಲಿಮಿನೇಟ್ ಆಗಿ ಹೊರಬರುವ ಇನ್ನಿಬ್ಬರು ಯಾರು ಎನ್ನುವ ಚರ್ಚೆ ಶುರುವಾಗಿದೆ. ಇನ್ನೆರಡು ವಾರ ಬಿಗ್‌ಬಾಸ್ ಶೋ ಮತ್ತಷ್ಟು ಇಂಟ್ರೆಸ್ಟಿಂಗ್ ಆಗಿ ಇರಲಿದೆ.
ಜನವರಿ 18ರಂದು ಬಿಗ್‌ಬಾಸ್ 12 ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆಯಿದೆ. ಗೆದ್ದ ಸ್ಪರ್ಧಿಗೆ 50 ಲಕ್ಷ ರೂ. ಬಹುಮಾನ ಸಿಗಲಿದೆ. ಫಿನಾಲೆವರೆಗೂ ಹೋಗುವವರಿಗೆ ನಗದು ಬಹುಮಾನದ ಜೊತೆಗೆ ಉಡುಗೊರೆಗಳು ಸಿಗಲಿದೆ. ಗಿಲ್ಲಿಯನ್ನು ವಿನ್ನರ್ ಆಗಿ ನೋಡಲು ಸಾಕಷ್ಟು ಜನ ಕಾಯುತ್ತಿದ್ದಾರೆ. ಅಶ್ವಿನಿ ಗೌಡ ಗೆಲ್ಲಬಹುದು ಎನ್ನುವ ಲೆಕ್ಕಾಚಾರವೂ ನಡೀತಿದೆ. ಹಾಗಾಗಿ ಶೋ ಕುತೂಹಲ ಮೂಡಿಸಿದೆ.
ಟಾಸ್ಕ್‌ಗಳಲ್ಲಿ ಗಿಲ್ಲಿ ಮೊದಲಿನಿಂದಲೂ ಹಿನ್ನಡೆ ಅನುಭವಿಸುತ್ತಾ ಬರ್ತಿದ್ದಾರೆ. ಗಿಲ್ಲಿಗಿಂತ ಇತರರು ಟಾಸ್ಕ್ ಚೆನ್ನಾಗಿ ಆಡುತ್ತಿದ್ದಾರೆ. ಮುಂದೆ ಕೂಡ ಧನುಷ್, ಧ್ರುವಂತ್, ರಘು ಹಾಗೂ ಅಶ್ವಿನಿ ಗೌಡ ಟಾಸ್ಕ್‌ಗಳಲ್ಲಿ ಗಿಲ್ಲಿಗೆ ಟಫ್ ಕಾಂಪಿಟೇಷನ್ ಕೊಡಲಿದ್ದಾರೆ. ಗಿಲ್ಲಿ ನಟ ಒಳ್ಳೆ ಎಂಟರ್‌ಟೈನರ್ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಹಾಗಾಗಿ ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











