BBK12: "ನನ್ ಮದ್ವೆಗೆ ಏನಾದ್ರೂ ಪ್ರಾಬ್ಲಂ ಆದ್ರೆ ಗಿಲ್ಲಿನೇ ಕಾರಣ"; ಇದೇನಿದು ಕಾವ್ಯಾ ಹೊಸ ವರಸೆ

ಕಲರ್ಸ್ ಕನ್ನಡ ಬಿಗ್‌ಬಾಸ್ ಸೀಸನ್-12ರಲ್ಲಿ ಗಿಲ್ಲಿ ಹಾಗೂ ಕಾವ್ಯಾ ಫ್ರೆಂಡ್‌ಶಿಪ್ ಗೊತ್ತೇಯಿದೆ. ಗಿಲ್ಲಿ ಮಾತ್ರ ಕಾವು ಕಾವು ಎಂದು ಆಕೆಯ ಹಿಂದೆ ಬಿದ್ದಿದ್ದಾರೆ. ಆರಂಭದಲ್ಲಿ ಸುಮ್ಮನಿದ್ದ ಕಾವ್ಯಾ ಬಳಿಕ ಇದೆಲ್ಲಾ ನನಗೆ ಇಷ್ಟವಿಲ್ಲ, ನನ್ನ ರೇಗಿಸಬೇಡ ಎಂದು ಉಲ್ಟಾ ಹೊಡೆದಿದ್ದರು.

ಗಿಲ್ಲಿ ಹಾಗೂ ಕಾವ್ಯಾ ಇಬ್ಬರೂ ಫಿನಾಲೆ ತಲುಪಿದ್ದಾರೆ. ನಾನು ಕಾವ್ಯಾನ ಫಿನಾಲೆವರೆಗೂ ಕರ್ಕೊಂಡ್ ಹೋಗ್ತೀನಿ ಎಂದು ಗಿಲ್ಲಿ ಹೇಳುತ್ತಿದ್ದರು. ಅಚ್ಚರಿ ಎನ್ನುವಂತೆ ಕಾವ್ಯಾ ಕೂಡ 6 ಮಂದಿ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ ಶೋ 100 ದಿನ ಪೂರೈಸಿದೆ. ಕೊನೆ ವಾರದಲ್ಲಿ ಯಾವುದೇ ಟಾಸ್ಕ್ ಇಲ್ಲದೇ ಸ್ಪರ್ಧಿಗಳು ಆರಾಮಾಗಿ ಇದ್ದಾರೆ.

Bigg Boss Kannada 12 Gilli Kavya Friendship Turns Tense Viral Conversation Shocks Fans

ಧ್ರುವಂತ್ ಮಿಡ್‌ ವೀಡ್ ಎಲಿಮಿನೇಟ್ ಆಗಿ ಹೊರ ಬಂದ ಮೇಲೆ ಮನೆಯಲ್ಲಿ ಈಗ 6 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಚೆನ್ನಾಗಿ ತಿನ್ನುತ್ತಾ ಅಲ್ಲಿ ಇಲ್ಲಿ ಕೂತು ಮಾತನಾಡುತ್ತಾ ಮನೆ ಮಂದಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಮನೆಯ ಸ್ಪರ್ಧಿಗಳಿಗೆ ವಿಶೇಷವಾಗಿ ಬಗೆಬಗೆಯ ಭಕ್ಷ್ಯ ಭೋಜನ ಕಳುಹಿಸಿಕೊಟ್ಟಿದ್ದರು. ಇನ್ನು ಸ್ಪರ್ಧಿಗಳು ಬಿಗ್‌ಬಾಸ್ ಬಳಿ ತಮ್ಮ 3 ಬೇಡಿಕೆಗಳನ್ನು ಇಟ್ಟಿದ್ದರು. ಅದರಲ್ಲಿ ಒಂದೊಂದು ಬೇಡಿಕೆಯನ್ನು ಪೂರೈಸಲಾಯಿತು.

ಶೋ ಶುರುವಾದ ಮೊದಲ ದಿನದಿಂದಲೂ ಕಾವ್ಯಾರನ್ನು ಗಿಲ್ಲಿ ರೇಗಿಸುತ್ತಲೇ ಇದ್ದಾರೆ. ಜಂಟಿಯಾಗಿ ಇಬ್ಬರೂ ಮನೆ ಒಳಗೆ ಹೋಗಿದ್ದರು. ಬಳಿಕ ಇಬ್ಬರ ಕೈಗೆ ಕಟ್ಟಿದ್ದ ದಾರ ಬಿಚ್ಚಿದರೂ ಸ್ನೇಹ ಮುಂದುವರೆಯಿತು. ಗಿಲ್ಲಿ ಪದೇ ಪದೆ ಆಕೆಯನ್ನು ರೇಗಿಸುತ್ತಾ ಬರ್ತಿದ್ದಾರೆ. ಗಿಲ್ಲಿ ಕೈಗೆ ಕಾವ್ಯಾ ರಾಕಿ ಕಟ್ಟಿದ್ದು ಆಯಿತು. ಆದರೂ ಗಿಲ್ಲಿ ಮಾತ್ರ ನಾನು ನಿನ್ನನ್ನು ಪ್ರೀತಿಸುತ್ತಿದ್ದೀನಿ ಎನ್ನುವಂತೆ ಡೈಲಾಗ್ ಹೊಡೆದುಕೊಂಡು ಓಡಾಡುತ್ತಿದ್ದಾರೆ. ಅತಿ ಎನಿಸಿದಾಗ ಕಾವ್ಯಾ ಬೇಸರ ಹೊರ ಹಾಕಿದ್ದು ಇದೆ. ಆದರೆ ಗಿಲ್ಲಿ ಮಾತ್ರ ಸುಮ್ಮನಾಗಲಿಲ್ಲ.

"ನನ್ ಮದ್ವೆಗೆ ಏನಾದ್ರೂ ಪ್ರಾಬ್ಲಂ ಆದ್ರೆ ಗಿಲ್ಲಿನೇ ಕಾರಣ" ಎಂದು ಕಾವ್ಯಾ ಹೇಳಿರುವುದು ಈಗ ವೈರಲ್ ಆಗ್ತಿದೆ. ಸೋಫಾದಲ್ಲಿ ಕಾವ್ಯಾ, ಗಿಲ್ಲಿ, ರಘು ಹಾಗೂ ರಕ್ಷಿತಾ ಒಟ್ಟಿಗೆ ಕೂತು ಮಾತನಾಡುತ್ತಿರುತ್ತಾರೆ, ಆಗ ಕಾವ್ಯಾಗೆ ಗಿಲ್ಲಿ ಕಣ್ಣ್ ಹೊಡೆದಿದ್ದಾರೆ. ಕೂಡಲೇ ಆಕೆ ಪ್ರತಿಕ್ರಿಯಿಸಿದ್ದು ಇಬ್ಬರು ನಡುವಿನ ಸಂಭಾಷಣೆ ವೀಡಿಯೋ ವೈರಲ್ ಆಗ್ತಿದೆ.

ಕಾವ್ಯಾ: ನನ್ ಮದ್ವೆಗೆ ಏನಾದ್ರೂ ಪ್ರಾಬ್ಲಂ ಆದ್ರೆ ಗಿಲ್ಲಿನೇ ಕಾರಣ.

ಗಿಲ್ಲಿ: ನಾನೇನ್ ಮಾಡ್ದೆ ನಿಂಗೆ..

ಕಾವ್ಯಾ: ಕಣ್ಣ್ ಹೊಡಿತ್ತೀಯಾ.. ರೇಗಿಸ್ಬೇಡ ಅಂದ್ರು ರೇಗಿಸ್ತೀಯಾ..

ಗಿಲ್ಲಿ: ನಾನ್ ಬೇಡ ಅಂದ್ರೆ ಏನ್ ಪ್ರಾಬ್ಲಂ ಆಗುತ್ತೆ.. ನಾನು ಬೇಡ ಅಂದ್ರೆ ತಾನೇ ಪ್ರಾಬ್ಲಂ ಆಗೋದು..

ಕಾವ್ಯಾ: ನೀನು ಎಂತಹ ಕಲಾಕರ್ ಅಂದ್ರೆ..

ಹೀಗೆ ಇಬ್ಬರ ನಡುವೆ ಸಂಭಾಷಣೆ ಮುಂದುವರೆದಿದೆ. ಇದನ್ನು ನೋಡಿ ಇಬ್ಬರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅರೇ ಏನ್ ನಡೀತಿದೆ ಮನೆಯಲ್ಲಿ ಎಂದು ವೀಡಿಯೋ ವೈರಲ್ ಮಾಡ್ತಿದ್ದಾರೆ. ಫ್ಯಾಮಿಲಿ ರೌಂಡ್‌ನಲ್ಲಿ ಕಾವ್ಯಾ ಪೋಷಕರು ಬಿಗ್‌ಬಾಸ್ ಮನೆ ಒಳಗೆ ಬಂದಿದ್ದರು. ಈ ವೇಳೆ ಕಾವ್ಯಾ ತಂದೆ ಗಿಲ್ಲಿಗೆ ಬ್ರೇಸ್‌ಲೇಟ್ ಉಡುಗೊರೆಯಾಗಿ ಕೊಟ್ಟಿದ್ದರು. ಇದೇ ವಿಚಾರದ ಬಗ್ಗೆ ಪಂಚಾಯ್ತಿ ವೇಳೆ ಸುದೀಪ್ ಜೊತೆ ಮಾತನಾಡುತ್ತಾ ಗಿಲ್ಲಿ "ಬ್ರೇಸ್‌ಲೇಟ್‌ನ ಎಂಗೇಜ್‌ಮೆಂಟ್‌ಗೆ ತಂದು ಕೊಡೋದು ನಮ್ಮನೆ ಸಂಪ್ರದಾಯ" ಎಂದು ತಮಾಷೆ ಮಾಡಿದ್ದರು. ಕೂಡಲೇ ಕಾವ್ಯಾ "ನಮ್‌ ಕಡೆ ಎಂಗೇಜ್‌ಮೆಂಟ್‌ಗೆ ರಿಂಗ್‌ ಕೊಡೋದು" ಎಂದು ಪ್ರತಿಕ್ರಿಯಿಸಿದ್ದರು.

ಫ್ಯಾಮಿಲಿ ರೌಂಡ್ ವೇಳೆ "ಗಿಲ್ಲಿ ಯಾವತ್ತೂ ನಿನ್ನ ಬಿಟ್ಟುಕೊಟ್ಟಿಲ್ಲ. ನೀನೂ ಬಿಟ್ಟುಕೊಡಬೇಡ. ಗಿಲ್ಲಿನ ಅಣ್ಣ ಎಂದು ಕರೆಯಬೇಡ. ನೀವು ಫ್ರೆಂಡ್ಸ್" ಎಂದು ಕಾವ್ಯಾಗೆ ತಾಯಿ ಸಾವಿತ್ರಿ ಹೇಳಿದ್ದರು. "ನಿನ್ನ - ಗಿಲ್ಲಿ ಸ್ನೇಹ ಹೊರಗಡೆ ನೆಕ್ಸ್ಟ್‌ ಲೆವೆಲ್ ಇದೆ" ಎಂದು ಕಾವ್ಯಾ ಸಹೋದರ ಹೇಳಿದ್ದು ಬಳಿಕ ಭಾರೀ ಚರ್ಚೆ ಹುಟ್ಟಾಕ್ಕಿತ್ತು.

More from Filmibeat

Read more about: gilli bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X