ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ಗೆ ಸೆಡ್ಡು ಹೊಡೆದ ಬಿಗ್ ಬಾಸ್, ಕಿಚ್ಚನ ಪಂಚಾಯ್ತಿಗೆ ಮನ ಸೋತ ಕನ್ನಡಿಗರು

ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರತಿ ವಾರ ಇಲ್ಲಿಯೂ ಕೂಡ ಹಾವು ಏಣಿಯ ಆಟ ನಡೆಯುತ್ತಲೇ ಇರುತ್ತೆ. ಈ ವಾರ ಮೇಲೆ ಇರುವ ಧಾರಾವಾಹಿ ಮುಂದಿನ ವಾರ ಪ್ರೇಕ್ಷಕರ ಅವಕೃಪೆಗೆ ಪಾತ್ರವಾದರೆ.. ನಿರಾಸೆ ಮಾಡಿದ ಧಾರಾವಾಹಿಯಲ್ಲಿ ಏಕಾಏಕಿ ಬದಲಾವಣೆಯಾಗುತ್ತೆ. ಹಣೆಬರಹ ಬದಲಾಗುತ್ತೆ. ಎಲ್ಲವೂ ಇಲ್ಲಿ ಅನಿಶ್ಚಿತತೆ. ಪ್ರತಿ ವಾರ..

ಹೀಗೆ ಇರುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಈ ಧಾರಾವಾಹಿಯೇ ಮೊದಲ ಸ್ಥಾನ ಬರಬಹುದು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಹಿಂದೆಯೆಲ್ಲ ಪ್ರೇಕ್ಷಕರಿಂದ ಕಡೆಗಣಿಸಲಾದ ಧಾರಾವಾಹಿ ಕೆಲವೊಮ್ಮೆ ಅಚ್ಚರಿ ಎಂಬಂತೆ ಅದೇ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತೆ.

Bigg Boss Kannada 12 Goes Viral on TRP Charts Week 49 Brings Record-Breaking Numbers

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸದ್ಯ ಕನ್ನಡದಲ್ಲಿ ''ಬಿಗ್ ಬಾಸ್'' ಕಲರವ ಶುರುವಾಗಿದೆ. ಈ ಹಿನ್ನೆಲೆ ಈ ಸ್ಫರ್ಧೆ ಸದ್ಯ ರೋಚಕತೆಯಿಂದ ಕೂಡಿದೆ. ಬೇರೆ ಎಲ್ಲ ಧಾರಾವಾಹಿಗಳ ಮೇಲೆ ಬಿಗ್ ಬಾಸ್ ಪರಿಣಾಮ ಬೀರುವ ಭಯ ಕಿರುತೆರೆಯ ಹಲವರಲ್ಲಿ ಇದ್ದೇ ಇದೆ.

ಸದ್ಯ ಇದೇ ಭಯ ಈ ವಾರ ನಿಜಾ ಆಗಿದ್ದು ಈ ವಾರದ ಟಿಆರ್‌ಪಿ ರೇಸ್‌ನಲ್ಲಿ ಬಿಗ್ ಬಾಸ್ ಮತ್ತೊಮ್ಮೆ ದಾಖಲೆ ಬರೆದಿದೆ. ನಂಬರ್ ಒನ್ ಸ್ಥಾನ ಅಲಂಕರಿಸಿದೆ.

ಹೌದು, ಮತ್ತೊಬ್ಬರ ಖಾಸಗಿ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಕಾರ್ಯಕ್ರಮ ''ಬಿಗ್ ಬಾಸ್‌''ನ ಜನ ನೋಡುತ್ತಲೇ ಬೈಯ್ಯುತ್ತಾರೆ. ಬೈಯ್ಯುತ್ತಲೇ ನೋಡುತ್ತಾರೆ. ಈ ಬಾರಿ ಕೂಡ ಈ ಧೋರಣೆ ಬದಲಾಗಿಲ್ಲ. ಬದಲಿಗೆ ಗಿಲ್ಲಿಯ ಗೇಮ್ ಪ್ಲ್ಯಾನ್‌ಗೆ ಹಲವರು ಮನ ಸೋತಂತೆ ಇದೆ. ತಪ್ಪದೇ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವರ ಸಂಖ್ಯೆ ಕೂಡ ಹೆಚ್ಚಾದಂತೆ ಇದೆ. ಇಷ್ಟೇ ಅಲ್ಲ ಕಿಚ್ಚನ ಪಂಚಾಯ್ತಿ ಕಟ್ಟೆಯ ಎದುರು ಕೂಡ ಜನ ಸಮೂಹ ಕಂಡು ಬಂದಂತೆ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಈ ವಾರ ''ಬಿಗ್ ಬಾಸ್'' ಮತ್ತೊಮ್ಮೆ ಕರುನಾಡಿನ ನಂಬರ್ ಒನ್ ಶೋ ಆಗಿ ಹೊರ ಹೊಮ್ಮಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಬಿಗ್ ಬಾಸ್''ನ ವೀಕೆಂಡ್ ಕಾರ್ಯಕ್ರಮಕ್ಕೆ 12.7 ಟಿವಿಆರ್ ಈ ವಾರ ಸಿಕ್ಕಿದೆ.

Bigg Boss Kannada 12 Goes Viral on TRP Charts Week 49 Brings Record-Breaking Numbers

ಇನ್ನೂ ವಾರದ ದಿನಗಳಲ್ಲಿ ಕೂಡ ''ಬಿಗ್ ಬಾಸ್'' ಹವಾ ಕಡಿಮೆಯಾಗಿಲ್ಲ. ಬದಲಿಗೆ ಸೋಮವಾರದಿಂದ ಶುಕ್ರವಾರ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ 9.8 ಟಿವಿಆರ್ ಸಿಕ್ಕಿದೆ. ಅದೇ ಮತ್ತೊಂದು ಕಡೆ ಜೀ ಕನ್ನಡದ ಸುಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋ ''ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮಕ್ಕೆ 9.6 ಟಿವಿಆರ್‌ ಸಿಕ್ಕಿದ್ದು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಭರವಸೆಯನ್ನು ನೀಡಿದ್ದ ''ಕಾಮಿಡಿ ಕಿಲಾಡಿಗಳು'' ಕಾರ್ಯಕ್ರಮಕ್ಕೆ 3.8 ಟಿವಿಆರ್‌ ಸಿಕ್ಕಿದೆ.

ಇನ್ನುಳಿದಂತೆ ''ಬಿಗ್ ಬಾಸ್'' ಮತ್ತು ''ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌'' ಕಾರ್ಯಕ್ರಮಗಳ ಟಿಆರ್‌ಪಿ ಪಕ್ಕಕ್ಕೆ ಇಟ್ಟು ಬೇರೆ ಧಾರಾವಾಹಿಗಳತ್ತ ಕಣ್ಣಾಡಿಸಿದರೆ ಈ ವಾರ ಜೀ ಕನ್ನಡದಲ್ಲಿ ಮೊದಲ ಸ್ಥಾನ ''ಅಣ್ಣಯ್ಯ'' ಪಾಲಾಗಿದೆ. ''ಕರ್ಣ'' ಪೈಪೋಟಿ ನೀಡಿದ್ದು ಒಂದು ಪಾಯಿಂಟ್‌ನಿಂದ ಎರಡನೇ ಸ್ಥಾನಕ್ಕೆ ''ಕರ್ಣ'' ಈ ವಾರ ತೃಪ್ತಿ ಪಟ್ಟಿದ್ದಾನೆ. ''ಅಣ್ಣಯ್ಯ'' 8.7 ಟಿಆರ್‌ಪಿ ಪಡೆದರೆ ''ಕರ್ಣ''ಗೆ 8.6 ಟಿಆರ್‌ಪಿ ಸಿಕ್ಕಿದೆ.

ಉಳಿದಂತೆ ಮೂರನೇ ಸ್ಥಾನದಲ್ಲಿ 8.3 ಟಿಆರ್‌ಪಿ ಪಡೆದ ''ಲಕ್ಷ್ಮೀ ನಿವಾಸ'' ಇದ್ದರೆ ನಾಲ್ಕನೇ ಸ್ಥಾನದಲ್ಲಿ 8.1 ಟಿಆರ್‌ಪಿಯೊಂದಿಗೆ ''ಅಮೃತಧಾರೆ'' ಇದೆ. 6.2 ಟಿಆರ್‌ಪಿ ಪಡೆದ ''ಪುಟ್ಟಕ್ಕನ ಮಕ್ಕಳು'' ಐದನೇ ಸ್ಥಾನದಲ್ಲಿದ್ದರೆ 5.9 ಟಿಆರ್‌ಪಿ ಪಡೆದಿರುವ ಹೊಸ ಧಾರಾವಾಹಿ ''ಆದಿಲಕ್ಷ್ಮೀ ಪುರಾಣ'' ಆರನೇ ಸ್ಥಾನದಲ್ಲಿದೆ. ''ನಾ ನಿನ್ನ ಬಿಡಲಾರೆ''.. ''ಬ್ರಹ್ಮಗಂಟು''.. ''ಶ್ರಾವಣಿ ಸುಬ್ರಮಣ್ಯ''..ಮತ್ತು ''ಶ್ರೀ ರಾಘವೇಂದ್ರ ಮಹಾತ್ಮೆ'' ನಂತರದ ಸ್ಥಾನಗಳಲ್ಲಿವೆ.

More from Filmibeat

English summary
TRP Tsunami! Bigg Boss Kannada 12 smashes records with its highest-ever ratings this season. See how Kiccha Sudeep’s show dominated the TRP charts in Week 49.
Read more about: trp bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X