ಬಿಗ್ ಬಾಸ್‌ ಕನ್ನಡ 12ರಲ್ಲಿ ಭಾಗವಹಿಸುತ್ತಾರಾ ಗಿಚ್ಚಿ ಗಿಲಿಗಿಲಿ ಜಾಹ್ನವಿ ? ಉತ್ತರ ಇಲ್ಲಿದೆ.

ಬಿಗ್ ಬಾಸ್ ಹಲವರ ಕನಸು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಮ್ಮ ಜನ್ಮ ಪಾವನ ಎಂದುಕೊಂಡವರು ಹಲವಾರು ಜನ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದೇ ನಾನಾ ತರಹದ ಸರ್ಕಸನ್ನು ಕೂಡ ಮಾಡುತ್ತಾರೆ. ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರ ಅವರ ಬದುಕಿನಲ್ಲಾಗುವ ಬದಲಾವಣೆಗಳೇನು ಎನ್ನುವುದು ಅವರಿಗೆ ಗೊತ್ತಾದರು ಆ ಭಾಷೆ ಈ ಭಾಷೆ ಎನ್ನದೇ ಎಲ್ಲಾ ಭಾಷೆಯಲ್ಲಿ ಕೂಡ...

ಪ್ರತಿ ವರ್ಷ ಬಿಗ್ ಬಾಸ್ ಜಾತ್ರೆಯಲ್ಲಿ ಭಾಗವಹಿಸುವ ಉತ್ಸಾಹ ಕಂಡು ಬಂದೇ ಬರುತ್ತೆ. ಕನ್ನಡದಲ್ಲಿ ಕೂಡ ಈ ಉತ್ಸಾಹದ ಅಲೆ ಸದ್ಯ ಎದ್ದಿದೆ. ಇದಕ್ಕೆ ಪೂರಕವಾಗಿ ಅವರು ಹೋಗ್ತಾರಂತೆ.. ಇವರು ಹೋಗ್ತಾರಂತೆ.. ಎಂದು ಹಲವರ ಹೆಸರುಗಳನ್ನು ತೇಲಿ ಬಿಡಲಾಗಿದೆ.

Bigg Boss Kannada 12 Is Anchor Jhanvi Going Her Cryptic Response Sparks Speculation

ಹೀಗೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಯಾರು ನಿಜಕ್ಕೂ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನುವುದಕ್ಕೆ ಉತ್ತರ ಕಾರ್ಯಕ್ರಮ ಶುರುವಾದ ದಿನದಂದೇ ಅಧಿಕೃತವಾಗಿ ಸಿಗಲಿದೆಯಾದರೂ ಸದ್ಯ ತಮ್ಮ ಬಗ್ಗೆ ಹಬ್ಬಿರುವ ಸುದ್ದಿಗಳ ಕುರಿತು ಕೆಲವರು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಬಿಗ್ ಬಾಸ್‌ದಿಂದ ಆಫರ್ ಬಂದಿದೆಯಾ ? ಬಂದಿದ್ದರೆ ಹೋಗ್ತಿದ್ದಾರಾ ? ಇಲ್ಲವಾ ? ಎನ್ನುವುದನ್ನು ಕೂಡ ಹೇಳುತ್ತಿದ್ದಾರೆ. ಉದಾಹರಣೆಗೆ ಜಾಹ್ನವಿ.

ಹೌದು, ಜಾಹ್ನವಿ.. ಕನ್ನಡ ಸುದ್ದಿ ಲೋಕದ ಖ್ಯಾತ ಸುದ್ದಿ ವಾಚಕಿ. ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ಕಿರುತೆರೆಯ ಮೇಲೆ ಕೂಡ ಕಣ್ಣಿಟ್ಟಿದ್ದಾರೆ. '' ಗಿಚ್ಚಿ ಗಿಲಿಗಿಲಿ'' ಕಾರ್ಯಕ್ರಮದ ಮೂಲಕ ಮತ್ತು ''ಅಧಿಪತ್ರ'' ಚಿತ್ರದ ಮೂಲಕ ಈಗಾಗಲೇ ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ.

ಇಂಥಾ ಜಾಹ್ನವಿ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಈ ಮಾತು ನಿಜಾ ಆಗುತ್ತಾ..? ಇಲ್ವಾ..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರು ಜಾಹ್ನವಿ ಈ ಕುರಿತು ಮಾತನಾಡಿದ್ದಾರೆ. ಗೊಂದಲದಲ್ಲಿರುವುದಾಗಿ ಹೇಳಿ ನೋಡುಗರನ್ನು ಕೂಡ ಗೊಂದಲಕ್ಕೀಡು ಮಾಡಿದ್ದಾರೆ. ಕುತೂಹಲವನ್ನು ಕೆರಳಿಸಿದ್ದಾರೆ.

ಈ ಕುರಿತು ''ವಿಜಯ ಕರ್ನಾಟಕ'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜಾಹ್ನವಿ ಬಿಗ್ ಬಾಸ್ ಮನೆಗೆ ನಾನು ಹೋಗ್ತೀನಾ ಇಲ್ವಾ ಎನ್ನುವುದಕ್ಕೆ ನನ್ನ ಬಳಿಯೇ ಸದ್ಯಕ್ಕೆ ಉತ್ತರ ಇಲ್ಲ ಎಂದು ಹೇಳಿದ್ದಾರೆ.

Bigg Boss Kannada 12 Is Anchor Jhanvi Going Her Cryptic Response Sparks Speculation

ಮುಂದುವರೆದು ಬಿಗ್ ಬಾಸ್ ಅಂದ್ರೇನೇ ಹಾಗೇ ಅಲ್ಲಿ ಯಾರು ಬರ್ತಾರೆ..? ಯಾರು ಬರಲ್ಲ..? ಎನ್ನುವುದಕ್ಕೆ ಕೊನೆವರೆಗೆ ಉತ್ತರ ಸಿಗಲ್ಲ ಎಂದು ಹೇಳಿರುವ ಜಾಹ್ನವಿ ಹೋಗಬೇಕೆಂಬ ಆಲೋಚನೆ ನನಗೆ ಖಂಡಿತ ಇದೆ. ಆದರೆ ನನಗೆ ಇದುವರೆಗೆ ಆ ತರಹದ ಯಾವ ಕರೆಗಳು ಬಂದಿಲ್ಲ ಎಂದು ಹೇಳಿದ್ದಾರೆ.

ಇನ್ನು ನಾನೇನಾದರೂ ಬಿಗ್ ಬಾಸ್‌ ಮನೆಗೆ ಹೋದರೆ ಇಲ್ಲಿ ಅಮ್ಮ ಮತ್ತು ಮಗನನ್ನು ನೋಡಿಕೊಳ್ಳೋರು ಯಾರು ? ಅವರನ್ನು ಮ್ಯಾನೇಜ್ ಮಾಡೋರು ಯಾರು ? ಎಂಬ ಸಣ್ಣ ಗೊಂದಲ ಕೂಡ ನನಗೆ ಇದೆ ಎಂದು ಹೇಳಿರುವ ಜಾಹ್ನವಿ ಈ ವಿಚಾರದಲ್ಲಿ ಅಮ್ಮನ ಬೆಂಬಲ ನನಗೆ ಇದೆ, ಅವರು ಅವಕಾಶ ಬಂದರೆ ಬಿಡಬೇಡ ಹೋಗು, ನಾನು ನೋಡಿಕೊಳ್ತೀನಿ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಬಿಗ್ ಬಾಸ್ ಗೆ ಅದ್ರದ್ದೇ ಆದ ಮಾನದಂಡಗಳಿವೆ. ಆ ಮನೆಯಲ್ಲಿ ಬಗೆ ಬಗೆಯ ಕ್ಯಾರೆಕ್ಟರ್‌ಗಳಿರಬೇಕು. ಜಗಳ ಆಡೋರು ಬೇಕು.. ಶಾಂತ ಸ್ವಭಾವದರು ಕೂಡ ಇರಬೇಕು. ಈ ಕುರಿತು ಕೂಡ ಮಾತನಾಡಿರುವ ಜಾಹ್ನವಿ ವೆರೈಟಿ ಕ್ಯಾರೆಕ್ಟರ್‌ಗಳನ್ನು ಅವರು ಮೊದಲು ಸೆಲೆಕ್ಟ್ ಮಾಡ್ತಾರೆ ಅವರ ಈ ಕ್ಯಾಟಗರಿಯಲ್ಲಿ ನಾನು ಸೂಕ್ತ ಮತ್ತು ಅರ್ಹ ಅಭ್ಯರ್ಥಿ ಎಂದು ಅವರಿಗೆ ಅನಿಸಿದರೆ ಕರೆಯುತ್ತಾರೆ. ಇಲ್ಲಿಯವರೆಗೆ ನನಗೆ ಯಾವ ಕರೆ ಬಂದಿಲ್ಲ ನೋಡೋಣ ಆ ಸಂದರ್ಭದಲ್ಲಿ ತಲೆಯಲ್ಲಿ ಏನು ಓಡುತ್ತೋ ಹಾಗೇ ಎಂದು ಹೇಳಿದ್ದಾರೆ. ಯಾರಿಗೆ ಗೊತ್ತು ಜಾಹ್ನವಿ ಭಾಗವಹಿಸಿದರು ಭಾಗವಹಿಸಬಹುದು.

More from Filmibeat

English summary
The suspense is real! Anchor Jhanvi's comments on joining Bigg Boss Kannada 12 have left everyone guessing. Is she in or out? Read her full cryptic statement that has the Kannada industry talking.
Read more about: bigg boss biggboss jhanvi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X