BBK 12: ನಾನು ನಿಮಗಿಂತ ದೊಡ್ಡವಳು, ನೀವು ಆಂಟಿ ಲವ್ವರಾ?- ಅಭಿ ಕಾಲೆಳೆದ ಜಾಹ್ನವಿ
ಬಿಗ್‌ಬಾಸ್ ಕನ್ನಡ ಸೀಸನ್ 12 ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಶೋ 6 ದಿನಕ್ಕೆ ಕಾಲಿಟ್ಟಿದ್ದು ಕಿಚ್ಚನ ಮೊದಲ ಪಂಚಾಯ್ತಿಗೆ ಕ್ಷಣಗಣನೆ ಶುರುವಾಗಿದೆ. ಮನೆಯೊಳಗೆ ಈಗಾಗಲೇ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದ್ದು ಈ ವಾರ ಯಾರು ಮನೆಯಿಂದ ಹೊರಗೆ ಹೋಗುತ್ತಾ ಎನ್ನುವ ಕುತೂಹಲ ಮೂಡಿದೆ.
ಶೋ ಆರಂಭದ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಆಕೆ ಮತ್ತೆ ಮನೆಯೊಳಗೆ ಹೋಗುತ್ತಾರಾ ಇಲ್ವಾ? ಎನ್ನುವ ಚರ್ಚೆ ನಡೀತಿದೆ. ಈ ಬಾರಿ ಶೋನಲ್ಲಿ ಭಾರೀ ಸರ್‌ಪ್ರೈಸ್‌ಗಳು ಕಾಯ್ತಿದೆ. ಸ್ಪರ್ಧಿಗಳ ನಡುವೆ ಸಂಘರ್ಷ ಶುರುವಾಗಿದೆ. ಗಲಾಟೆ, ಗದ್ದಲದ ನಡುವೆ ಫನ್ನಿ ಮೊಮೊಂಟ್ಸ್ ಕೂಡ ಗಮನ ಸೆಳೆಯುತ್ತಿದೆ. ಸದ್ಯ ಜಾಹ್ನವಿ ಹಾಗೂ ಅಭಿಷೇಕ್ ನಡುವಿನ ಸಂಭಾಷಣೆ ಸಖತ್ ವೈರಲ್ ಆಗುತ್ತಿದೆ.

ನೀವು ಆಂಟಿ ಲವ್ವರಾ? ಎಂದು ಅಭಿಷೇಕ್ ಬಳಿ ಜಾಹ್ನವಿ ಹೇಳಿರುವುದು ಗಮನ ಸೆಳೆದಿದೆ. ಅಶ್ವಿನಿ ಹಾಗೂ ಜಾನ್ವಿ ಜಂಟಿಯಾಗಿ ಬಿಗ್‌ಬಾಸ್ ಮನೆಯೊಳಗೆ ಇದ್ದಾರೆ. ಅಶ್ವಿನಿಯನ್ನು ಆಗಾಗ್ಗೆ ಅಭಿ ಫ್ಲಟ್ ಮಾಡುವ ಪ್ರಯತ್ನ ಮಾಡುತ್ತಾರೆ. ಇದನ್ನು ನೋಡಿ ಜಾಹ್ನವಿ ಮಾತಲ್ಲೇ ಅಭಿಷೇಕ್ ಕಾಲೆಳೆದಿದ್ದಾರೆ. ಅದಕ್ಕೆ ಅಶ್ವಿನಿ ರಿಯಾಕ್ಷನ್ ವೈರಲ್ ಆಗುತ್ತಿದೆ.
'ನಿನ್ನಿಂದಲೇ ನಿನ್ನಿಂದಲೇ' ಎಂದು ಅಭಿ ಹಾಡಿದನ್ನು ನೋಡಿ ಅಶ್ವಿನಿ, ಜಾಹ್ನವಿ ನಿಮಗಾಗಿ ಹಾಡು ಹಾಡ್ತಿದ್ದಾರೆ ಎಂದು ಆಕೆಯ ಗಮನ ಸೆಳೆದಿದ್ದಾರೆ. ಬಳಿಕ ಮೂವರ ನಡುವೆ ವಯಸ್ಸಿನ ಬಗ್ಗೆ ಚರ್ಚೆ ಆಗಿದೆ. ಅಭಿ ತಮ್ಮ ವಯಸ್ಸು ಹೇಳುತ್ತಿದ್ದಂತೆ "ನಿಮಗಿಂತ ನಾನು 10 ವರ್ಷ ದೊಡ್ಡವಳು, ನಿಮಗೆ ದೊಡ್ಡವರೆಂದರೆ ಇಷ್ಟವೇ? ಎಂದು ಪ್ರಶ್ನಿಸಿದ್ದಾರೆ. ಅಭಿ, ಹೌದು ಎನ್ನುತ್ತಿದ್ದಂತೆ, ನೀವು ಆಂಟಿ ಲವ್ವರಾ? ಎಂದು ಜಾಹ್ನವಿ ನಗೆ ಚಟಾಕಿ ಹಾರಿಸಿದ್ದಾರೆ. ಕೂಡಲೇ ಅಶ್ವಿನಿ ಗೊಳ್ ಎಂದು ನಕ್ಕಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕೂಡಲೇ ನೀವು ಆಂಟಿ ಎಂದು ಒಪ್ಪಿಕೊಳ್ತೀರಾ ಎಂದು ಅಭಿ ಕೇಳಿದ್ದಾರೆ. "ನಾನು ಆಂಟಿ ಅಲ್ಲ, ಈ ವಯಸ್ಸಿಗೆ ಸಮಾಜ ಅದೇ ರೀತಿ ಕರೆಯುತ್ತದೆ. ಆದರೆ ನಾನು ಆಂಟಿ ರೀತಿ ಕಾಣದಂತೆ ನನ್ನ ದೇಹವನ್ನು ನೋಡಿಕೊಂಡಿದ್ದೇನೆ" ಎಂದಿದ್ದಾರೆ. ಮತ್ತೊಂದು ಕಡೆದ ಕಲರ್ಸ್ ಕನ್ನಡ ವಾಹಿನಿ 6ನೇ ದಿನದ ಪ್ರೋಮೊ ರಿಲೀಸ್ ಮಾಡಿದೆ. ಈ ವಾರದ ನಾಮಿನೇಷನ್ ಭಾರೀ ಕುತೂಹಲ ಮೂಡಿಸಿದೆ.
8 ಜನರ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿದೆ. ಯಾರಿಗೆ ಈ ವಾರ ಗೇಟ್ ಪಾಸ್ ಎಂದು ಸರ್‌ಪ್ರೈಸ್ ಆಗಿ ಪ್ರೋಮೊ ಬಂದಿದೆ. ಈಗಾಗಲೇ ರಕ್ಷಿತಾ ಎಲಿಮಿನೇಟ್ ಆಗಿರುವುದರಿಂದ ಈ ವಾರ ಮತ್ತೊಬ್ಬರು ಹೊರಗೆ ಬರುವುದು ಅನುಮಾನ ಎನ್ನಲಾಗ್ತಿದೆ. ಒಂದು ವೇಳೆ ಒಬ್ಬರು ಹೊರಗೆ ಬಂದರೆ, ರಕ್ಷಿತಾ ಒಳಗೆ ವಾಪಸ್ ಹೋಗುವ ಸಾಧ್ಯತೆ ಕೂಡ ಇದೆ.
ಈ ಬಾರಿ ಬಿಗ್‌ಬಾಸ್ ಕನ್ನಡ ಶೋನಲ್ಲಿ ಎರಡು ಫಿನಾಲೆ ಇರಲಿದೆಯಂತೆ. 3ನೇ ವಾರವೇ ಒಂದು ಫಿನಾಲೆ ನಡೆಯಲಿದ್ದು ಗುಂಪು ಗುಂಪಾಗಿ ಕೆಲವರು ದೊಡ್ಮನೆ ಆಟಕ್ಕೆ ಗುಡ್ ಬೈ ಹೇಳುವ ಸಾಧ್ಯತೆಯಿದೆ. ಪ್ರತಿ ಬಾರಿ ಹೊಸ ಹೊಸ ಪ್ರಯತ್ನದೊಂದಿಗೆ ಬಿಗ್‌ಬಾಸ್ ಶೋ ಮೂಡಿ ಬರುತ್ತಿದೆ. ಈ ಬಾರಿ 'ಎಕ್ಸ್‌ಪೆಕ್ಟ್ ದಿ ಅನ್ ಎಕ್ಸ್‌ಪೆಕ್ಟ್' ಹೆಸರಿನಲ್ಲಿ ಮತ್ತಷ್ಟು ಟ್ವಿಸ್ಟ್ ಕೊಟ್ಟು ಆಟವನ್ನು ರಂಗೇರಿಸುವ ಪ್ರಯತ್ನ ನಡೀತಿದೆ.
ಈ ಬಾರಿ ಬಿಗ್‌ಬಾಸ್ ಮನೆಗೆ 19 ಮಂದಿ ಸ್ಪರ್ಧಿಗಳು ಎಂಟ್ರಿ ಆಗಿದ್ದರು. ಮೊದಲ ದಿನವೇ ಒಬ್ಬರು ಎಲಿಮಿನೇಟ್ ಆಗಿದ್ದರು. ಇನ್ನು ಒಂಟಿಯಾಗಿ ಕೆಲವರು, ಜಂಟಿಯಾಗಿ ಕೆಲವರು ಮನೆ ಒಳಗೆ ಹೋಗಿದ್ದಾರೆ.


Click it and Unblock the Notifications











