BBK12: ಗ್ರ್ಯಾಂಡ್ ಓಪನಿಂಗ್‌ನಲ್ಲೇ ಬಿಗ್‌ಬಾಸ್ ಟ್ವಿಸ್ಟ್; ಏನಿದು ಒಂಟಿ- ಜಂಟಿ ಟಾಸ್ಕ್

ಬಿಗ್‌ಬಾಸ್ ಕನ್ನಡ ಸೀಸನ್ 12 ಶುಭಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು(ಸೆಪ್ಟೆಂಬರ್ 28) ಸಂಜೆ 6 ಗಂಟೆಗೆ ಶೋ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಬಾರಿ ದೊಡ್ಮನೆ ಆಟಕ್ಕೆ ಮನೆ ಒಳಗೆ ಹೋಗುವ ಮೂವರು ಸ್ಪರ್ಧಿಗಳು ಯಾರು ಎನ್ನುವುದು ರಿವೀಲ್ ಆಗಿದೆ. ಸದ್ಯ ಗ್ರ್ಯಾಂಡ್ ಓಪನಿಂಗ್ ಪ್ರೋಮೊ ಹೊರ ಬಂದಿದೆ.

ಕಿಚ್ಚ ಸುದೀಪ್ ಸ್ಟೈಲಿಶ್ ಅವತಾರದಲ್ಲಿ ಶೋ ನಡೆಸಿಕೊಡುವುದಕ್ಕೆ ವೇದಿಕೆ ಏರಲಿದ್ದಾರೆ. ಈಗಾಗಲೇ ಪ್ರೋಮೊದಲ್ಲಿ ಅದರ ಝಲಕ್ ನೋಡಬಹುದು. ಜಬರ್ದಸ್ತ್ ಡ್ಯಾನ್ಸ್ ಪರ್ಫಾರ್ಮನ್ಸ್‌ಗಳ ಜೊತೆಗೆ ಸಾಕಷ್ಟು ಸರ್‌ಪ್ರೈಸ್‌ಗಳು ಈ ಬಾರಿ ಶೋನಲ್ಲಿ ಇರಲಿದೆ. ಕನ್ನಡ ಬಿಗ್‌ಬಾಸ್‌ ಇತಿಹಾಸದಲ್ಲಿ ಗ್ರ್ಯಾಂಡ್ ಓಪನಿಂಗ್‌ ಮುನ್ನ ಸ್ಪರ್ಧಿಗಳ ಹೆಸರು ರಿವೀಲ್ ಮಾಡಿರುವ ಉದಾಹರಣೆ ಕಮ್ಮಿ. ಆದರೆ ಈ ಬಾರಿ ಆ ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಹಿಂದಿನ ಸೀಸನ್‌ಗಳಿಗಿಂತ ಇದು ವಿಭಿನ್ನ ಎನ್ನುವುದು ಗೊತ್ತಾಗುತ್ತಿದೆ.

Bigg Boss Kannada 12 Kickstarts Tonight Sudeep Brings Singles vs Couples Game Twist

ಇದೀಗ ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲೇ ಒಂಟಿ- ಜಂಟಿ ಎಂದು ಮನೆಯೊಳಗೆ ಹೋಗುವ ಸ್ಪರ್ಧಿಗಳಿಗೆ ಸುದೀಪ್ ಟ್ವಿಸ್ಟ್ ಕೊಟ್ಟಿದ್ದಾರೆ. ಲೈವ್ ವೋಟಿಂಗ್ ಮೂಲಕ ವೇದಿಕೆ ಮುಂಭಾಗದಲ್ಲಿ ಕುಳಿತವರು ಇದನ್ನು ನಿರ್ಧರಿಸಲಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳನ್ನು ಒಂಟಿ ಟೀಮ್ ಹಾಗೂ ಜಂಟಿ ಟೀಂ ಎಂದು ಎರಡು ಭಾಗ ಮಾಡಲಾಗುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯ 'ಕ್ಲಾಟ್ಲೆ ಕಿಚನ್' ರಿಯಾಲಿಟಿ ಶೋ ಮುಕ್ತಾಯವಾಗಿದೆ. ಅದೇ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ಮನೆಗೆ ಹೋಗುವ ಮೂವರು ಸ್ಪರ್ಧಿಗಳು ಹೆಸರು ರಿವೀಲ್ ಆಗಿದೆ. ಉಳಿದ 14 ಮಂದಿ ಯಾರು ಎನ್ನುವುದು ಗ್ರ್ಯಾಂಡ್ ಓಪನಿಂಗ್ ಬಳಿಕ ಗೊತ್ತಾಗಲಿದೆ. ಈಗಾಗಲೇ ಕೆಲವರು ಮನೆಗೆ ಹೋಗುವ ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟ ಕಾಕ್ರೋಚ್ ಸುಧಿ, 'ಸಿಲ್ಲಿ ಲಲ್ಲಿ' ಧಾರಾವಾಹಿ ಖ್ಯಾತಿಯ ನಟಿ ಮಂಜು ಭಾಷಿಣಿ ಹಾಗೂ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದ ಮಲ್ಲಮ್ಮ ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗುತ್ತಿದ್ದಾರೆ. ಇನ್ನುಳಿದಂತೆ ನಟಿ, ನಿರೂಪಕಿ ಜಾಹ್ನವಿ, ನಟ ಶ್ರೇಯಸ್ ಮಂಜು, ಗಿಲ್ಲಿ ನಟ, ನಟಿ ಶಾನ್ವಿ ಶ್ರೀವಾಸ್ತವ ಸೇರಿದಂತೆ 14 ಜನ ಸ್ಪರ್ಧಿಗಳಾಗಿ ಹೋಗುತ್ತಾರೆ ಎನ್ನಲಾಗ್ತಿದೆ. ರಾತ್ರಿ ವೇಳೆಗೆ ಸ್ಪರ್ಧಿಗಳ ಸಂಪೂರ್ಣ ಪಟ್ಟಿ ಸಿಗಲಿದೆ.

"Expect the Unexpected" ಎಂಬ ಥೀಮ್‌ನಲ್ಲಿ ಈ ಬಾರಿ ಬಿಗ್‌ಬಾಸ್ ಸೀಸನ್ ವೀಕ್ಷಕರನ್ನು ರಂಜಿಸಲಿದೆ. ವರ್ಷದಿಂದ ವರ್ಷಕ್ಕೆ ಶೋ ಕ್ರೇಜ್ ಹೆಚ್ಚುತ್ತಲೇ ಇದೆ. ಅದಕ್ಕೆ ಮುಖ್ಯವಾದ ಕಾರಣ ಸುದೀಪ್ ನಿರೂಪಣೆ. ಇನ್ನು ಮುಂದೆ ನಾನು ಬಿಗ್‌ಬಾಸ್‌ ಶೋನಲ್ಲಿ ಮುಂದುವರೆಯುವುದಿಲ್ಲ ಎಂದು ಕಿಚ್ಚ ಕಳೆದ ವರ್ಷ ಹೇಳಿ ಶಾಕ್ ಕೊಟ್ಟಿದ್ದರು. ಆಯೋಜಕರ ಜೊತೆಗಿನ ಭಿನ್ನಾಭಿಪ್ರಾಯದಿಂದ ಈ ನಿರ್ಧಾರಕ್ಕೆ ಬಂದಿದ್ದರು. ಬಳಿಕ ಮಾತುಕತೆ ನಡೆಸಿ ಎಲ್ಲವನ್ನು ಬಗೆಹರಿಸಿಕೊಂಡ ಬಳಿಕ ಮತ್ತೆ ಬಿಗ್‌ಬಾಸ್ ಶೋ ನಿರೂಪಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಸಹಜವಾಗಿಯೇ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು.

ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳಾಗಿ ಕಾಮನ್ ಮ್ಯಾನ್ ಬರ್ತಾರಾ? ವಿವಾದಗಳಿಂದ ಸುದ್ದಿಯಾದವರು ಬರ್ತಾರಾ? ಎನ್ನುವ ಕುತೂಹಲ ಇದ್ದೇ ಇರುತ್ತದೆ. ಈ ಬಾರಿ ಕೂಡ ಯಾರಾದರೂ ವಿವಾದಾತ್ಮಕ ವ್ಯಕ್ತಿಗಳು ಎಂಟ್ರಿ ಕೊಡುತ್ತಾರಾ ಕಾದು ನೋಡಬೇಕಿದೆ. ಈ ಬಾರಿ ನಾಡಹಬ್ಬ ದಸರಾ ಸಂಭ್ರಮದಲ್ಲೇ ಬಿಗ್‌ಬಾಸ್ ಶೋ ಶುರುವಾಗುತ್ತಿದೆ. ನವರಾತ್ರಿ ವಿಶೇಷವಾಗಿ ಮೈಸೂರು ಅರಮನೆಯ ಥೀಮ್‌ನಲ್ಲಿ ದೊಡ್ಮನೆಯನ್ನು ನಿರ್ಮಿಸಲಾಗಿದೆ. ಕರ್ನಾಟಕ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮನೆ ಪ್ರತಿಬಿಂಬಿಸುವಂತಿದೆ.

More from Filmibeat

English summary
Twist Revealed! Bigg Boss Kannada 12 Opens Tonight with Singles vs Couples Format
Read more about: bigg boss bigg boss 12
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X