BBK12: ಆ ವಿಚಾರವೇ ಧನುಷ್‌ಗೆ ಪ್ಲಸ್, ಮೈನಸ್ ಆಗಿಬಿಡ್ತು; ಮನೆಯ ಅಜಾತಶತ್ರು 5ನೇ ರನ್ನರ್ ಅಪ್
ಬಿಗ್‌ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ರಂಗೇರಿದೆ. ಕಲರ್‌ಫುಲ್ ಪರ್ಫಾರ್ಮೆನ್ಸ್‌ಗಳು, ಕಿಚ್ಚನ ಮಾತು, ಹರಟೆ ಜೊತೆ ಜೊತೆಗೆ ಫಲಿತಾಂಶದ ಕುತೂಹಲ ಮೂಡಿದೆ. ಧನುಷ್ 5ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಬಿಗ್‌ಬಾಸ್-12 ಮಿಸ್ಟರ್ ಪರ್ಫೆಕ್ಷನಿಷ್ಟ್ ಎನಿಸಿಕೊಂಡಿದ್ದ ಧನುಷ್ ಟ್ರೋಫಿ ಗೆಲ್ಲುವ ಆಸೆ ನುಚ್ಚು ನೂರಾಗಿದೆ.
ಟಾಸ್ಕ್‌ಗಳ ವಿಚಾರದಲ್ಲಿ ಧನುಷ್ ಎಲ್ಲರಿಗಿಂತ ಮುಂದಿದ್ದರು. ಆದರೆ ಬಿಗ್‌ಬಾಸ್ ಮನೆಗೆ ಬೇಕಾದ ಅಸಲಿ ಆಟ ಅವರಿಂದ ಹೊರ ಬರಲಿಲ್ಲ. ಟಾಸ್ಕ್ ಮಾಸ್ಟರ್ ಎನಿಸಿಕೊಂಡ ಧನುಷ್ ಇತರ ಸ್ಪರ್ಧಿಗಳ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಎಲ್ಲರೂ ಧನುಷ್ ಅವರನ್ನು ಮೆಚ್ಚಿಕೊಂಡಿದ್ದರು. ತಾನಾಯ್ತು ತನ್ನ ಕೆಲಸ ಆಯ್ತು, ತನ್ನ ಆಟ ಆಯ್ತು ಅಂತ ಧನುಷ್ ಸುಮ್ಮನಿದ್ದುಬಿಟ್ಟರು. ಕೆಲವು ಸಮಯದಲ್ಲಿ ಸ್ಟ್ಯಾಂಡ್ ತಗೋಳ್ಳೊದ್ರಲ್ಲಿ ಎಡವಿದ್ದರು. ಕ್ಯಾಪ್ಟನ್ ಆಗಿದ್ದಾಗಲೂ ಬದಲಾಗಲಿಲ್ಲ. ಯಾರನ್ನು ಎದುರು ಹಾಕಿಕೊಳ್ಳುವ ಗೋಜಿಗೆ ಹೋಗಲೇ ಇಲ್ಲ.

ಇನ್ನುಳಿದ 5 ಮಂದಿಗೂ ಧನುಷ್ ಜೊತೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅಷ್ಟರಮಟ್ಟಿಗೆ ಕ್ಲೀನ್ ಇಮೇಜ್ ಸೃಷ್ಟಿಸಿಕೊಂಡಿದ್ದರು. 'ಗೀತಾ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಧನುಷ್ ಗಮನ ಸೆಳೆದಿದ್ದರು. ಬಿಗ್‌ಬಾಸ್ ಶೋಗೆ 6ನೇ ಸ್ಪರ್ಧಿಯಾಗಿ ಧನುಷ್ ಮನೆ ಒಳಗೆ ಹೋಗಿದ್ದಾರೆ. ರಾಶಿಕಾ ಶೆಟ್ಟಿ ಜೊತೆ ಜಂಟಿಯಾಗಿ ಮನೆ ಒಳಗೆ ಹೋಗಬೇಕಾಯಿತು.
6ನೇ ಸ್ಪರ್ಧಿಯಾಗಿ ಮನೆ ಒಳಗೆ ಹೋಗಿದ್ದ ಧನುಷ್ ಕೊನೆಗೆ 6ನೇ ಸ್ಥಾನದಲ್ಲೇ ಉಳಿದುಬಿಟ್ಟಿದ್ದು ವಿಪರ್ಯಾಸ. "ಮನೆಯಲ್ಲಿ ಧನುಷ್ ಬಹಳ ಸೈಲೆಂಟ್. ಬಿಗ್‌ಬಾಸ್ ಮನೆಯಲ್ಲಿ ಕೂಡ ಅದೇ ರೀತಿ ಇದ್ರು, ನಾನೇ ಸ್ವಲ್ಪ ಜೋರು" ಎಂದು ಧನುಷ್ ಪತ್ನಿ ವೇದಿಕೆಯಲ್ಲಿ ಹೇಳಿದ್ದರು. ಅದೇ ವ್ಯಕ್ತಿತ್ವ ಅವರಿಗೆ ಪ್ಲಸ್ಸು, ಮೈನಸ್ ಆಗಿದ್ದು ಸುಳ್ಳಲ್ಲ.
ಒಟ್ಟಾರೆ ಧನುಷ್ 1 ಕೋಟಿ 27 ಲಕ್ಷ 35 ಸಾವಿರದ 179 ಮತಗಳನ್ನು ಗಳಿಸಿ 6ನೇ ಸ್ಥಾನದಲ್ಲಿ ಉಳಿದರು. ಫಿನಾಲೆಯಿಂದ ಹೊರಬಂದ ಮೊದಲ ಸ್ಪರ್ಧಿ ಎನಿಸಿಕೊಂಡರು. ಧನುಷ್ ವೇದಿಕೆಗೆ ಬರುತ್ತಿದ್ದಂತೆ ತಾಯಿ, ಮಡದಿ ಭಾವುಕರಾಗಿ ಕಣ್ಣೀರು ಹಾಕಿದರು. ಧನುಷ್ ಎಲ್ಲರನ್ನು ಸಮಾಧಾನ ಮಾಡಿದರು. "ನಿಮ್ಮ ವ್ಯಕ್ತಿತ್ವ ಸೂಪರ್" ಎಂದು ನೀವು ಪತ್ರ ಬರೆದಾಗಲೇ ನಾನು ಗೆದ್ದುಬಿಟ್ಟೆ ಸರ್ ಎಂದು ಸುದೀಪ್ ಬಳಿ ಧನುಷ್ ಹೇಳಿದ್ದಾರೆ. 3 ಲಕ್ಷ ಬಹುಮಾನ ಅವರಿಗೆ ಸಿಕ್ಕಿದೆ. ಶೋ ಮುಗಿದ ಬಳಿಕ ನೀವು ತೊಟ್ಟಿರುವ ಜಾಕೆಟ್ ನನಗೆ ಕೊಡಿ ಎಂದು ಸುದೀಪ್ ಬಳಿ ಧನುಷ್ ಮನವಿ ಮಾಡಿದ್ದರು. ಅದಕ್ಕೆ ಸರಿ ಎಂದು ಕಿಚ್ಚ ಒಪ್ಪಿದರು.


Click it and Unblock the Notifications











