BBK12: ನಂಗೆ ಕೊರೊನಾ ಬಂದ್ಬಿಡ್ತಾ, ಗಿಲ್ಲಿ ನಗೆ ಚಟಾಕಿ; ರಕ್ಷಿತಾ ಭ್ರಮೆಗೆ ಚುಚ್ಚಿದ ಕಾವ್ಯಾ, ಧ್ರುವಂತ್, ರಾಶಿಕಾ

ಮತ್ತೆ ವೀಕೆಂಡ್ ಬಂದಿದೆ. ಬಿಗ್‌ಬಾಸ್ ಸೀಸನ್ 12ರಲ್ಲಿ ಮತ್ತೊಂದು ಪಂಚಾಯ್ತಿ ನಡೀತಿದೆ. ಭಾನುವಾರದ ಎಪಿಸೋಡ್‌ ಸಖತ್ ಮನರಂಜನೆ ತುಂಬಿಕೊಂಡಿದೆ. ಈ ವಾರ ಕೂಡ ಯಾವುದೇ ಎಲಿಮಿನೇಟ್ ಇಲ್ಲ ಎನ್ನಲಾಗ್ತಿದೆ. ಸೀಕ್ರೆಟ್ ರೂಮ್‌ನಲ್ಲಿದ್ದ ರಕ್ಷಿತಾ, ಧ್ರುವಂತ್ ಮತ್ತೆ ದೊಡ್ಮನೆ ಒಳಗೆ ಬಂದಿದ್ದಾರೆ.

ಈ ವಾರ ಎಲಿಮಿನೇಟ್ ಇಲ್ಲದಿದ್ದರೂ ಇಬ್ಬರೂ ಬಿಗ್‌ಬಾಸ್‌ ಜರ್ನಿ ಮುಗಿಸಿ ಹೊರ ಬರಲಿದ್ದಾರೆ. ಅತಿಥಿಗಳಾಗಿ ಮನೆ ಒಳಗೆ ಹೋಗಿದ್ದ ರಜತ್ ಹಾಗೂ ಚೈತ್ರಾ ಹೊರಗೆ ಬರುವ ಸಮಯ ಬಂದಿದೆ. ಸದ್ಯ 'ಸೂಪರ್ ಸಂಡೇ ವಿತ್ ಸುದೀಪ' ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮನೆ ಮಂದಿಗೆ ಸುದೀಪ್ ಫನ್ನಿ ಟಾಸ್ಕ್ ಕೊಟ್ಟಿದ್ದಾರೆ. ಗಿಲ್ಲಿ ಮತ್ತೊಮ್ಮೆ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

Bigg Boss Kannada 12 No Elimination This Week Gilli Steals the Show in Super Sunday with Sudeep

ಇಬ್ಬಿಬ್ಬರಿಗೆ ಒಟ್ಟಿಗೆ ಕಣ್ಣು ಕಟ್ಟಿ ಅವರ ಮುಂದೆ ಒಂದಷ್ಟು ತಿಂಡಿ ತಿನಿಸು ಇಡಲಾಗಿದೆ. ಕೈಯಿಂದ ಮುಟ್ಟದೇ ಟೇಸ್ಟ್ ಮಾಡಿ, ವಾಸನೆ ನೋಡಿ ಆ ತಿನಿಸು ಏನು ಎಂದು ಗುರ್ತಿಸಬೇಕು, ನೇರವಾಗಿ ಹೆಸರು ಹೇಳದೇ ಸುಳಿವು ಕೊಡಬೇಕು ಎಂದು ಟಾಸ್ಕ್ ಕೊಟ್ಟಿದ್ದಾರೆ. ರಜತ್ ಹಾಗೂ ಗಿಲ್ಲಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಟಾಸ್ಕ್ ಕೊಡಲಾಗಿದೆ. ಟೇಸ್ಟ್ ಮಾಡಿ ಆ ತಿನಿಸುಗಳು ಯಾವುದು ಎಂದು ಗುರ್ತಿಸಲು ಇಬ್ಬರೂ ಪರದಾಡಿದ್ದಾರೆ.

ಗಿಲ್ಲಿ ತಿನಿಸಿನ ಟೇಸ್ಟ್ ನೋಡಿ ಗುರ್ತಿಸಲು ಸಾಧ್ಯವಾಗದೇ "ನನಗೆ ಕೊರೋನಾ ಬಂದಿದ್ಯಾ" ಎಂದು ಜೋಕ್ ಮಾಡಿದ್ದಾರೆ. ಅದನ್ನು ಕೇಳಿ ಎಲ್ಲರೂ ನಕ್ಕಿದ್ದಾರೆ. ಗಿಲ್ಲಿ ಕಾಮಿಡಿ ಟೈಮಿಂಗ್ ಸೂಪರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕೊನೆಗೆ "ಸೋತು ಬಿಡೋಣ ಬಿಡೋಲೋ" ಎಂದು ರಜತ್ ಹೇಳಿದ್ದಾರೆ. ಕೊನೆಗೆ "ಪಕ್ಕಾ ಸೋತ್ವಿ" ಎಂದು ಗಿಲ್ಲಿ ನಗೆ ಚಟಾಕಿ ಹಾರಿಸಿದ್ದಾರೆ.

ಮತ್ತೊಂದು ಪ್ರೋಮೊದಲ್ಲಿ ಸ್ಪರ್ಧಿಗಳ ತಲೆಗೆ ಬಲೂನುಗಳನ್ನು ಕಟ್ಟಿ ಟಾಸ್ಕ್ ಕೊಟ್ಟಿದ್ದಾರೆ. ಯಾರು ಯಾರ ಬಗ್ಗೆ ಯಾವ ಭ್ರಮೆಯಲ್ಲಿದ್ದಾರೆ ಎನ್ನುವುದನ್ನು ಹೇಳಿ ಸೂಜಿಯಿಂದ ಬಲೂನ್ ಒಡೆದು ಹಾಕುವ ಟಾಸ್ಕ್ ಅದು. "ಫ್ರೆಂಡ್‌ಶಿಪ್ ಹೆಸರಿನಲ್ಲಿ ನಾನು ರಘು ಅಣ್ಣನಿಗೆ ಅವಮಾನ ಮಾಡಿ ನೋವು ಮಾಡ್ತಿದ್ದೀನಿ ಎನ್ನುವ ಭ್ರಮೆಯಲ್ಲಿದ್ದಾರೆ. ಅದು ಸುಳ್ಳು" ಎಂದು ಗಿಲ್ಲಿ ಹೇಳಿ ಗಿಲ್ಲಿ ಬಲೂನ್ ಒಡೆದು ಹಾಕಿದ್ದಾರೆ.

ರಕ್ಷಿತಾ ನಾನು ಇಲ್ಲದೇ ಬಿಗ್‌ಬಾಸ್ ಮನೆಯಲ್ಲಿ ಸ್ಪಾರ್ಕ್ ಇರಲ್ಲ ಎನ್ನುವ ಭ್ರಮೆಯಲ್ಲಿದ್ದಾಳೆ. ಓವರ್ ಕಾನ್ಪಿಡೆನ್ಸ್ ಇದೆ ಎಂದು ಹೇಳಿ ಕಾವ್ಯಾ ಬಲೂನ್ ಒಡೆದಿದ್ದಾರೆ. ಇದೇ ತರಹದ ಕಾರಣಗಳನ್ನು ಕೊಟ್ಟು ರಾಶಿಕಾ ಹಾಗೂ ಧ್ರುವಂತ್ ಕೂಡ ರಕ್ಷಿತಾ ತಲೆಗೆ ಕಟ್ಟಿದ್ದ ಬಲೂನ್‌ಗಳನ್ನು ಒಡೆದಿದ್ದಾರೆ. ಫಿನಾಲೆಗೆ ಇನ್ನು 3 ವಾರ ಮಾತ್ರ ಬಾಕಿಯಿದೆ. ಸದ್ಯ ಮನೆಯೊಳಗೆ 11 ಮಂದಿ ಸ್ಪರ್ಧಿಗಳಿದ್ದಾರೆ. ಹಾಗಾಗಿ ಮುಂದಿನ ವೀಕೆಂಡ್ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆಯಿದೆ.

ಶನಿವಾರದ ಪಂಚಾಯ್ತಿ ಕೂಡ ಕಳೆ ಕಟ್ಟಿತ್ತು. ಗಿಲ್ಲಿ ವಿಭಿನ್ನ ರೀತಿಯ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದರು. ಅದು ಯಾಕೆ ಎಂದು ಸುದೀಪ್ ಕೇಳಿ ಕಾಲೆಳೆದಿದ್ದರು. ಇನ್ನು ಕಿರಿಕ್ ವೇಳೆ ಕಾವ್ಯಾ ಅವರ ತಾಯಿಯನ್ನು ಎಳೆದು ತಂದ ಅಶ್ವಿನಿ ಗೌಡಗೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ಬಾರಿ ಬಿಗ್‌ಬಾಸ್ ಶೋ 100 ದಿನಕ್ಕೆ ಮುಕ್ತಾಯವಾಗುತ್ತಾ? ಅಥವಾ ಅದಕ್ಕಿಂತ ಹೆಚ್ಚು ದಿನ ಮುಂದುವರೆಯುತ್ತಾ ಕಾದು ನೋಡಬೇಕಿದೆ.

ಸದ್ಯಕ್ಕೆ ಗಿಲ್ಲಿನೇ ಗೆಲ್ಲೋದು ಎನ್ನುವ ಚರ್ಚೆ ನಡೀತಿದೆ. ಮತ್ತೊಂದು ಕಡೆ ಮಹಿಳಾ ಸ್ಪರ್ಧಿಗೆ ಟ್ರೋಫಿ ಸಿಗಬಹುದು ಎನ್ನುವ ಊಹಾಪೋಹ ಶುರುವಾಗಿದೆ. ರಕ್ಷಿತಾ, ಗಿಲ್ಲಿ, ಅಶ್ವಿನಿ ಗೌಡ ಫಿನಾಲೆವರೆಗೂ ಹೋಗುತ್ತಾರೆ ಎನ್ನಲಾಗ್ತಿದೆ.

More from Filmibeat

Read more about: bigg boss 12 bigg boss gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X