BBK 12: ದೊಡ್ಮನೆಯಲ್ಲಿ ಹೈಡ್ರಾಮಾ; ರಕ್ಷಿತಾಗೆ ಹೊಡ್ದೆಬಿಟ್ರಾ ಅಶ್ವಿನಿ ಗೌಡ?
ಬಿಗ್‌ಬಾಸ್ ಕನ್ನಡ 12 ಶೋ ಮತ್ತೊಂದು ವೀಕೆಂಡ್ ಪಂಚಾಯ್ತಿಗೆ ಸಿದ್ದವಾಗಿತ್ತು. ಜೊತೆಗೆ ಮೊದಲ ಗ್ರ್ಯಾಂಡ್ ಫಿನಾಲೆಗೂ ಕ್ಷಣಗಣನೆ ಶುರುವಾಗಿದೆ. ಅರ್ಧಕರ್ಧ ಸ್ಪರ್ಧಿಗಳು ಈ ವಾರ ದೊಡ್ಮನೆ ಆಟ ಮುಗಿಸಿ ಹೊರಬರುವ ಲೆಕ್ಕಾಚಾರ ಶುರುವಾಗಿದೆ. ವಾರದ ಮಧ್ಯದಲ್ಲೇ ಸತೀಶ್ ಹೊರ ಬಂದಿದ್ದಾರೆ.
ಆಟದ ಕಿಚ್ಚು ಹೆಚ್ಚುತ್ತಿದೆ. ಮುಖ್ಯವಾಗಿ ರಕ್ಷಿತಾ ಶೆಟ್ಟಿ ಆರ್ಭಟಕ್ಕೆ ಮನೆ ಮಂದಿ ಸುಸ್ತಾಗಿದ್ದಾರೆ. ಆಕೆಯ ಮಾತುಗಳು ಅಶ್ವಿನಿ ಗೌಡ, ಜಾಹ್ನವಿ ಎಲ್ಲರನ್ನು ಕೆಣಕುತ್ತಿದೆ. ಸಹಜವಾಗಿಯೇ ಮನೆ ರಣರಂಗವಾಗುತ್ತಿದೆ. ಹೊಸ ಪ್ರೊಮೋದಲ್ಲಿ ಕೂಡ ಅದು ಹೈಲೆಟ್ ಆಗಿದೆ. ವ್ಯಕ್ತಿತ್ವದ ಆಟ ವೈಯಕ್ತಿಕ ಆಗೋಯ್ತಾ? ಎಂದು ಬಿಗ್‌ಬಾಸ್ ಹೊಸ ಪ್ರೋಮೊ ಬಂದಿದೆ.

ಮಿಡ್ ವೀಕ್ ಎಲಿಮಿನೇಷನ್‌ಗೆ ತಮ್ಮ ಹೆಸರನ್ನು ರಕ್ಷಿತಾ ಸೂಚಿಸಿದ್ದು ಅದಕ್ಕೆ ಕೊಟ್ಟ ಕಾರಣ ಜಾಹ್ನವಿ ಅವರ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಅವಳ ಬಳಿ ಮಾತನಾಡುತ್ತೀನಿ ಎಂದು ಮನೆ ಮಂದಿ ಮುಂದೆ ಹೇಳುತ್ತಿರುತ್ತಾರೆ. ನನ್ನನ್ನು ಚೈಲ್ಡ್ ಅಂದುಕೊಂಡಿದ್ದೀಯಾ? ನನಗೆ ಮೆಚ್ಯುರಿಟಿ ಇಲ್ವಾ? ಎಂದು ಜಾಹ್ನವಿ ಕೇಳಿದಾಗ ಹೌದು ನೀವು ಚೈಲ್ಡ್ ಎಂದಿದ್ದಾರೆ ರಕ್ಷಿತಾ ಶೆಟ್ಟಿ.
ದೊಡ್ಡ ನಾಗವಲ್ಲಿ ನೀವು, ಅವ್ರು ಇವ್ರು ಅಂತ ಅಶ್ವಿನಿ ಗೌಡ ತಂಟೆಗೆ ಹೋಗಿದ್ದು ಕೂಡಲೇ ಆಕೆ ಕೆಂಡಾಮಂಡಲವಾಗಿದೆ. ಹೊಡೆಯುವಂತೆ ನುಗ್ಗಿಬಂದು ಅಬ್ಬರಿಸಿ ನಿನ್ನ ಡ್ರಾಮಾ ಬಾತ್‌ರೂಮ್‌ನಲ್ಲಿ ಮಾಡು ಎಂದು ಕೂಗಾಡಿದ್ದಾರೆ. ಆದರೆ ಅದಕ್ಕೆಲ್ಲಾ ರಕ್ಷಿತಾ ತಲೆಕೆಡಿಸಿಕೊಳ್ಳದೇ ನನ್ನಿಷ್ಟ 100 ಸಲ ಹೋಗ್ತೀನಿ, ಇದು ನಿಮ್ಮ ಮನೆ ವಾಶ್ ರೂಮಾ ಎಂದು ತಿರುಗೇಟು ಕೊಟ್ಟಿದ್ದಾರೆ.
ಬಿಗ್‌ಬಾಸ್ ಮನೆಗೆ ಬಂದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಹೊರಬರುವ ಶಿಕ್ಷೆ ಅನುಭವಿಸಿದ್ದರು. ಆಕೆಯನ್ನು ಮನೆಯಿಂದ ಹೊರ ಕಳುಹಿಸಲು ಜಾಹ್ನವಿ ಕೊಟ್ಟಿದ್ದ ಕಾರಣ ರಕ್ಷಿತಾ ಬೇಸರಕ್ಕೆ ಕಾರಣವಾಗಿತ್ತು. ಮೊದಲ ವಾರಾಂತ್ಯದಲ್ಲೇ ರಕ್ಷಿತಾ ಮನೆಗೆ ವಾಪಸ್ ಹೋಗಿದ್ದರು. ಅಂದಿನಿಂದಲೂ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ.
ಸತೀಶ್ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಆದರೆ ಕಲರ್ ಕನ್ನಡ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಧೃವಂತ್ ಎಲಿಮಿನೇಟ್ ಎಂದು ಪೋಸ್ಟ್ ಮಾಡಿ ಬಳಿಕ ಡಿಲೀಟ್ ಮಾಡಿದ್ದಾಗಿ ಚರ್ಚೆ ಶುರುವಾಗಿದೆ. ಸಣ್ಣ ಎಡವಟ್ಟಿನಿಂದ ಈ ರೀತಿ ಆಗಿರುವ ಸಾಧ್ಯತೆಯಿದೆ. ಅಥವಾ ಬಿಗ್‌ಬಾಸ್ ಮನೆಯಿಂದ ಹೊರಬರುವ ಮುಂದಿನ ಸ್ಪರ್ಧಿ ಧೃವಂತ್ ಆಗಿರುತ್ತಾರಾ? ಎನ್ನುವ ಅನುಮಾನ ಕೂಡ ಮೂಡಿದೆ.
ಒಟ್ಟು 19 ಮಂದಿ ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದರು. ಮೊದಲ ವಾರವೇ ಅಮಿತ್ ಹಾಗೂ ಕರಿಬಸಪ್ಪ ಎಲಿಮಿನೇಟ್ ಆಗಿದ್ದರು. ಈ ವೀಕೆಂಡ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ನಾಲ್ಕೈದು ಮಂದಿಯನ್ನು ಎಲಿಮಿನೇಟ್ ಮಾಡಿ ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಕಳುಹಿಸುವ ಪ್ರಯತ್ನ ನಡೀತಿದೆ. ಈ ಹಿಂದೆ ಬಿಗ್‌ಬಾಸ್ ಮನೆಗೆ ಹೋಗುತ್ತಾರೆ ಎಂದು ಹೇಳಲಾಗಿದ್ದ ಸಂಭಾವ್ಯ ಸ್ಪರ್ಧಿಗಳೇ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಲಿದ್ದಾರೆ.
ವಾರದ ಹಿಂದೆ ಬಿಗ್‌ಬಾಸ್ ಶೋ ನಡೆಯುವ ಅನುಮಾನ ಇತ್ತು. ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದು ಸ್ಪರ್ಧಿಗಳೆಲ್ಲಾ ಈಗಲ್‌ಟನ್ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದರು. ಆದರೆ ಸಮಸ್ಯೆ ಬಗೆಹರಿದು ಮತ್ತೆ ದೊಡ್ಮನೆ ಆಟ ಶುರುವಾಗಿದೆ. ಇದು ಸಹಜವಾಗಿಯೇ ವೀಕ್ಷಕರ ಸಂತಸಕ್ಕೆ ಕಾರಣವಾಗಿದೆ.


Click it and Unblock the Notifications











