BBK 12: ಮೋಷನ್, ಎಮೋಷನ್.. ರಕ್ಷಿತಾ ಶೆಟ್ಟಿ ಮಾತಿಗೆ ಅವಕ್ಕಾದ ಕಿಚ್ಚ ಸುದೀಪ್
ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ 13ನೇ ದಿನಕ್ಕೆ ಕಾಲಿಟ್ಟಿದೆ. 2ನೇ ವೀಕೆಂಡ್ ಕಿಚ್ಚನ ಪಂಚಾಯ್ತಿ ವೀಕ್ಷಕರನ್ನು ರಂಜಿಸುತ್ತಿದೆ. ಈ ವಾರ ಯಾವುದೇ ಎಲಿಮಿನೇಷನ್ ನಡೆಯಲಿಲ್ಲ. ಮೊದಲ ವಾರವೇ ಇಬ್ಬರು ಮನೆಯಿಂದ ಹೊರಬಂದಿದ್ದರು. ಹಾಗಾಗಿ ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎನ್ನುವುದು ಗೊತ್ತಾಗುತ್ತಿದೆ.
ಶನಿವಾರ ಕಿಚ್ಚನ ಪಂಚಾಯ್ತಿ ರಂಗೇರಿತ್ತು. ಸುದೀಪ್ ತಮ್ಮದೇ ಶೈಲಿಯಲ್ಲಿ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಬಳಿಕ ಎಲಿಮಿನೇಷನ್ ಇಲ್ಲ ಎಂದು ಹೇಳಿ ಸ್ಪರ್ಧಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇವತ್ತು(ಅಕ್ಟೋಬರ್ 12) 'ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ' ಎಪಿಸೋಡ್ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೊ ಬಂದು ವೈರಲ್ ಆಗುತ್ತಿದೆ.

ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ ಆಗಿರುವ ರಕ್ಷಿತಾ ಶೆಟ್ಟಿ ತಮ್ಮ ವಿಭಿನ್ನ ಶೈಲಿಯ ಮಾತಿನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮೂಲತಃ ಉಡುಪಿಯವರಾದ ರಕ್ಷಿತಾ ತುಳು, ಕನ್ನಡ ಮತ್ತು ಹಿಂದಿ ಮಿಶ್ರಿತ ಮಾತಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಬಹಳ ಕನ್‌ಫ್ಯೂಸ್ ಆಗಿ ಮಾತನಾಡುವ ಆಕೆಯ ಮಾತಿಗೆ ಸುದೀಪ್ ಕಕ್ಕಾಬಿಕ್ಕಿಯಾಗಿದ್ದಾರೆ. ಅದನ್ನೇ ಪ್ರೋಮೊದಲ್ಲಿ ಹೈಲೆಟ್ ಮಾಡಲಾಗಿದೆ.
ಬಿಗ್‌ಬಾಸ್ ಅಂದ್ರೆ ಏನು? ಎಂದು ರಕ್ಷಿತಾ ಶೆಟ್ಟಿ ಅವರನ್ನು ಸುದೀಪ್ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ "ಇದು ಲೈಫಿದ ಚಾಲೆಂಜ್" ಎಂದು ಹೇಳಿ ಕಣ್ಣುಬಾಯಿ ಬಿಟ್ಟಿದ್ದಾರೆ. ಬಿಗ್‌ಬಾಸ್‌ನ ಪ್ರಮೋಟ್ ಮಾಡಿ ಅಂದ್ರೆ ಹೇಗೆ ಮಾಡ್ತೀರಾ ಎಂದಾಗ ಕ್ಯಾಮರಾ ಎದುರು ನಿಂತು "ಒಂದು ಕಂಟೆಸ್ಟೆಂಟ್‌ನಲ್ಲಿ ಎಂಥ ಉಂಟು ಸೆಕೆಂಡ್ ಕಂಟೆಸ್ಟೆಂಟ್‌ನಲ್ಲಿ ಇರಲ್ಲ. ಮೋಷನ್ಸ್, ಎಮೋಷನ್" ಅಂತೆಲ್ಲಾ ತಮ್ಮದೇ ದಾಟಿಯಲ್ಲಿ ಮಾತನಾಡಿದ್ದಾರೆ. ಅದು ಸುದೀಪ್ ಸೇರಿ ಮನೆಮಂದಿಯನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದೆ.
ರಕ್ಷಿತಾ ಶೆಟ್ಟಿ ಮಾತು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕಿದಾರೆ. ರಾತ್ರಿ ವೀಕ್ಷಕರಿಗೂ ಭರ್ಜರಿ ಮನರಂಜನೆ ಕಾದಿದೆ. ಇತ್ತೀಚೆಗೆ ಬಿಗ್‌ಬಾಸ್ ಶೋಗೆ ಸಂಕಷ್ಟ ಎದುರಾಗಿತ್ತು. ಜಾಲಿವುಡ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಶೋ ಚಿತ್ರೀಕರಣ ಮಾಡಲಾಗುತ್ತಿದೆ. ಆ ಸ್ಟುಡಿಯೋಗೆ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್ ಕೊಟ್ಟಿತ್ತು. ತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಸರಿಯಾಗಿ ಮಾಡ್ತಿಲ್ಲ ಎಂದು ನೋಟಿಸ್ ನೀಡಿತ್ತು. ಪ್ರತಿಕ್ರಿಯಿಸದೇ ಇದ್ದಾಗ ಗೇಟ್ ಬೀಗ ಹಾಕಿತ್ತು.
ಜಾಲಿವುಡ್ ಸ್ಟುಡಿಯೋ ಬಾಗಿಲು ಬಂದ್ ಆಗುತ್ತಿದ್ದಂತೆ ಬಿಗ್‌ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳನ್ನು ರಾಮನಗರದ ಈಗಲ್‌ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. 2 ದಿನಗಳ ಕಾಲ ಎಲ್ಲರೂ ಅಲ್ಲೇ ಇದ್ದರು. ಬಳಿಕ ರಿಲೀಫ್ ಸಿಕ್ಕಿ ದೊಡ್ಮನೆಯಲ್ಲಿ ಆಟ ಮುಂದುವರೆಯುಂತಾಯಿತು. ಹಾಗಾಗಿ ಮತ್ತೆ ಶೋ ಕಳೆ ಕಟ್ಟಿದೆ. ಎರಡ್ಮೂರು ದಿನ ಸ್ಪರ್ಧಿಗಳು ಮನೆಯಲ್ಲಿ ಇರಲಿಲ್ಲ, ಹಾಗಾಗಿ ಈ ವಾರ ಎಲಿಮಿನೇಷನ್ ಬೇಡ ಎಂದು ನಿರ್ಧರಿಸಿದಂತೆ ಕಾಣ್ತಿದೆ.
ಸೆಪ್ಟೆಂಬರ್ 28ರಂದು ಪ್ರಸಾರವಾಗಿದ್ದ ಬಿಗ್‌ಬಾಸ್ 12 ಗ್ರ್ಯಾಂಗ್ ಪ್ರೀಮಿಯರ್ ಎಪಿಸೋಡ್ ಭರ್ಜರಿ ಟಿಆರ್‌ಪಿ ಪಡೆದಿತ್ತು. ಹಾಗಾಗಿ ಶನಿವಾರ ಶೂಟ್ ಮುಗಿಸಿದ ಸುದೀಪ್ ತಂಡದ ಜೊತೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಾರ ಮನೆಯಿಂದ ಹೊರಬರಲು ಧನು, ಅಶ್ವಿನಿ ಗೌಡ, ಜಾನ್ವಿ, ರಕ್ಷಿತಾ ಶೆಟ್ಟಿ ಒಂಟಿಗಳಲ್ಲಿ ನಾಮಿನೇಟ್ ಆಗಿದ್ದರು. ಮಾಳು-ಸ್ಪಂದನಾ ಸೋಮಣ್ಣ, ಅಭಿ-ಅಶ್ವಿನಿ, ಮಂಜು ಭಾಷಿಣಿ-ರಿಷಿಕಾ ಜಂಟಿಗಳಲ್ಲಿ ನಾಮಿನೇಟ್ ಆಗಿದ್ದರು. ಆದರೆ ಯಾರೂ ಕೂಡ ಎಲಿಮಿನೇಟ್ ಆಗಲ್ಲ ಎನ್ನಲಾಗ್ತಿದೆ.


Click it and Unblock the Notifications











