BBK12: ಬಿಗ್‌ಬಾಸ್ ಮನೆಯಲ್ಲಿ 'ಡೆವಿಲ್' ಸಿನಿಮಾ ಬಗ್ಗೆ ಮಾತು? ದರ್ಶನ್ ಚಿತ್ರಕ್ಕೆ ಶುಭ ಕೋರಿದ್ರಾ ಕಿಚ್ಚ?

ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಹೊರಗಡೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಗಿಲ್ಲಿ ನಟ ಕೂಡ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೈಲರ್‌ನಲ್ಲಿ ಅವರ ಸಣ್ಣ ಝಲಕ್ ಕೂಡ ನೋಡಿದ್ದೇವೆ.

ಕಳೆದ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಉಗ್ರಂ ಮಂಜು ಸ್ಪರ್ಧಿಯಾಗಿ ಇದ್ದರು. ಆದರೆ ಇದೇ ರೀತಿ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ಮಂಜು ಕೂಡ ನಟಿಸಿದ್ದು ಗೊತ್ತೇಯಿದೆ. ಆಗ ಶೋನಲ್ಲಿ ಚಿತ್ರದ ಟ್ರೈಲರ್ ಪ್ರಸಾರ ಮಾಡಿದ್ದರು. ಮಂಜು ಹಾಗೂ 'ಮ್ಯಾಕ್ಸ್' ಚಿತ್ರತಂಡಕ್ಕೆ ಶುಭ ಕೋರಲಾಗಿತ್ತು. ಈ ಬಾರಿ ಗಿಲ್ಲಿ ಮನೆಯೊಳಗೆ ಇರುವುದರಿಂದ 'ಡೆವಿಲ್' ಚಿತ್ರದ ಟ್ರೈಲರ್ ಪ್ರಸಾರ ಮಾಡಿ ಶುಭ ಕೋರಬಹುದಲ್ಲ ಎಂದು ಕೆಲವರು ಪ್ರಶ್ನಿಸಿದ್ದರು.

Bigg Boss Kannada 12 Will Sudeep Wish Devil Team Gilli s Role Sparks Debate Over Equal Promotion

ಉಗ್ರಂ ಮಂಜು ಹಾಗೂ ಗಿಲ್ಲಿ ಇಬ್ಬರೂ ಬಿಗ್‌ಬಾಸ್ ಸ್ಪರ್ಧಿಗಳು ಅಂದಮೇಲೆ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಯಾಕೆ? ಸಮಾನತೆ ಬೇಡವೇ? ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರ್ಷಗಳಿಂದ ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹೆಸರು ಕೇಳಿಸುತ್ತಿಲ್ಲ. ದರ್ಶನ್ ನಟನೆಯ ಸಿನಿಮಾ ಸಾಂಗ್ ಅನ್ನು ಕೂಡ ಪ್ಲೇ ಮಾಡುತ್ತಿಲ್ಲ. ಅದು ಗೊತ್ತಿರುವ ಸತ್ಯ. ಹಾಗಾಗಿ 'ಡೆವಿಲ್' ಚಿತ್ರದ ಟ್ರೈಲರ್ ಪ್ಲೇ ಮಾಡುತ್ತಿಲ್ಲ ಎಂದು ಎಲ್ಲರೂ ಭಾವಿಸಿದ್ದಾರೆ.

ಈಗಾಗಲೇ ಬಿಗ್‌ಬಾಸ್ 12 ಈ ಭಾನುವಾರ(ಡಿಸೆಂಬರ್ 7)ದ ಎಪಿಸೋಡ್ ಚಿತ್ರೀಕರಣವಾಗಿದೆ. ಶೋನಲ್ಲಿ 'ಡೆವಿಲ್' ಚಿತ್ರಕ್ಕೆ ಶುಭ ಕೋರಲಾಗಿದೆ ಎನ್ನುವ ಊಹಾಪೋಹ ಶುರುವಾಗಿದೆ. ಗಿಲ್ಲಿ ಚಿತ್ರದಲ್ಲಿ ನಟಿಸಿರುವ ಕಾರಣ ಸುದೀಪ್ ಅವರಿಗೆ ಶುಭ ಕೋರಿದ್ದಾರೆ ಎಂದು ಹೇಳಲಾಗ್ತಿದೆ. ಇದು ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ಕಾದು ನೋಡಬೇಕಿದೆ. ಇದೇ ಗುರುವಾರ(ಡಿಸೆಂಬರ್ 11) 'ಡೆವಿಲ್' ಸಿನಿಮಾ ಬಿಡುಗಡೆಯಾಗಲಿದೆ.

Bigg Boss Kannada 12 Will Sudeep Wish Devil Team Gilli s Role Sparks Debate Over Equal Promotion

ಈ ಹಿಂದೆ ಬಿಗ್‌ಬಾಸ್ ವೇದಿಕೆಯಲ್ಲಿ ಸಿನಿಮಾಗಳ ಪ್ರಚಾರ ದೊಡ್ಡದಾಗಿ ನಡೀತಿತ್ತು. ಚಿತ್ರತಂಡದವರನ್ನು ವೇದಿಕೆಗೆ ಕರೆಸಿ ಮಾತನಾಡಿಸುತ್ತಿದ್ದರು. ಸುದೀಪ್ ಹಾಗೂ ದರ್ಶನ್ ಆತ್ಮೀಯ ಸ್ನೇಹಿತರಾಗಿದ್ದಾಗ ದರ್ಶನ್ ಹಾಡುಗಳು ಮನೆಯಲ್ಲಿ ಪ್ಲೇ ಆಗುತ್ತಿತ್ತು. ರಕ್ಷಿತಾ ಒಮ್ಮೆ ವೇದಿಕೆಗೆ ಬಂದಾಗ 'ಸುಂಟರಗಾಳಿ ಸುಂಟರಗಾಳಿ' ಹಾಡು ಹಾಕಿ ಸುದೀಪ್ ಕೂಡ ಜೊತೆಗೆ ಹೆಜ್ಜೆ ಹಾಕಿದ್ದರು. ಅವರಿಬ್ಬರು ದೂರಾದ ಬಳಿಕ ಎಲ್ಲವೂ ನಿಂತು ಹೋಗಿತ್ತು.

ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇಂತಹ ಸಮಯದಲ್ಲೇ 'ಡೆವಿಲ್' ಸಿನಿಮಾ ಬಿಡುಗಡೆ ಆಗ್ತಿದೆ. ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿ ಚಿತ್ರವನ್ನು ಬರಮಾಡಿಕೊಳ್ಳಲು ಮುಂದಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಾಮಿಡಿ ವೀಡಿಯೋಗಳ ಮೂಲಕ ಗಿಲ್ಲಿ ಮೋಡಿ ಮಾಡಿದ್ದರು. ಕಾಮಿಡಿ ಕಿಲಾಡಿಗಳು, ಡಿಕೆಡಿ ಸೇರಿದಂತೆ ಕೆಲ ಶೋಗಳಲ್ಲಿ ಭಾಗವಹಿಸಿ ವೀಕ್ಷಕರ ಗಮನ ಸೆಳೆದಿದ್ದಾರೆ. ತಮ್ಮ ಪ್ರಾಪರ್ಟಿ ಕಾಮಿಡಿ ಜೋಕ್‌ಗಳಿಂದ ನೋಡುಗರನ್ನು ರಂಜಿಸುತ್ತಾರೆ. ಉದ್ದದ್ದ ಡೈಲಾಗ್‌ಗಳ ಕಾಮಿಡಿ ವೀಡಿಯೋಗಳ ಮೂಲಕ ಮೋಡಿ ಮಾಡುತ್ತಾರೆ. ಹಾಗಾಗಿ ನಿಧಾನವಾಗಿ ಸಿನಿಮಾ ಅವಕಾಶಗಳು ಸಿಗಲು ಪ್ರಾರಂಭವಾಗಿದೆ.

'ಡೆವಿಲ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಗಿಲ್ಲಿ ನಟಿಸಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದಮೇಲೆ ಮತ್ತಷ್ಟು ಅವಕಾಶಗಳು ಹುಡುಕಿ ಬರಲಿದೆ. 'ಡೆವಿಲ್' ಟ್ರೈಲರ್‌ ನೋಡಿ ಪೊಲೀಸ್ ಇನ್ಸ್‌ಪೆಕ್ಟರ್ ಎದುರು ಕೂತು "ಪಿಸಿ ಎಸಿ ಹಾಕಮ್ಮ ಬಹಳ ಸೆಕೆ" ಎಂದು ಗಿಲ್ಲಿ ಡೈಲಾಗ್ ಹೊಡೆದಿದ್ದಾರೆ. ವಿಶೇಷ ಅಂದ್ರೆ ಟ್ರೈಲರ್ ಬರುವ ಸಮಯದಲ್ಲಿ ಗಿಲ್ಲಿ ಬಿಗ್‌ಬಾಸ್ ಮನೆಯಲ್ಲಿ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದರು. ಎರಡನ್ನೂ ಲಿಂಕ್ ಮಾಡಿ ನೆಟ್ಟಿಗರು ಮೀಮ್ಸ್ ಕ್ರಿಯೇಟ್ ಮಾಡಿ ಟ್ರೋಲ್ ಮಾಡಿದ್ದರು.

More from Filmibeat

Read more about: devil bigg boss 12 gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X