ಆದಿ ಲೋಕೇಶ್ ಬಿಚ್ಚಿಟ್ಟ ತನ್ನ ಒಂಟಿ ಕಣ್ಣಿನ ಸೀಕ್ರೆಟ್

By ಉದಯರವಿ
<ul id="pagination-digg"><li class="previous"><a href="/tv/bigg-boss-kannada-2-neethu-secret-out-086454.html">« Previous</a>

ಬಳಿಕ ಸಂತೋಷ್ ಹೇಳಿದ ಸೀಕ್ರೆಟ್ ತುಂಬಾ ಇಂಟರೆಸ್ಟಿಂಗ್ ಆಗಿತ್ತು. ಹಣಕಾಸು ತೊಂದರೆಯಿಂದ ನಾನು ಕಾಲೇಜು ಓದಲು ಸಾಧ್ಯವಾಗಲಿಲ್ಲ. ನಾನು ಓದಿದ್ದದ್ದು ಪಿಯುಸಿ. ಆದರೆ ರೆಸ್ಯೂಮೆಯಲ್ಲಿ ಬಿ.ಕಾಂ ಎಂದು ಬರೆದಿದ್ದೆ. ಐದು ಕಂಪನಿಗಳಲ್ಲಿ ಸುಳ್ಳು ಹೇಳಿ ಕೆಲಸ ಮಾಡಿದ್ದೇನೆ. ಅದೂ ಫಾರ್ಚ್ಯೂನ್ 500 ಕಂಪನಿಗಳಲ್ಲಿ ಎಂಬುದು ವಿಶೇಷ. ಅವರ ಹೆಚ್ ಆರ್ ಪ್ರೋಸಸ್ ತುಂಬಾ ಟಫ್ ಇರುತ್ತದೆ. ಬಳಿಕ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿದೆ. ಬಿ.ಕಾಂ ಮಾಡಿದ್ದೇನೆ ಎಂದು ಹೇಳಿ ಆರು ವರ್ಷ ಬೆಸ್ಟ್ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಎರಡನೇ ಸೀಕ್ರೆಟ್ ಎಂದರೆ ನನ್ನ ಜೀವನದಲ್ಲಿ ಹತ್ತು ಸಾವಿರ ನೋಡಿಯೇ ಇರಲಿಲ್ಲ. ಅದೇ ಸಮಯದಲ್ಲಿ ನನ್ನ ಗೆಳೆಯನ ತಂಗಿ ಸೀಮೆಎಣ್ಣೆ ಸ್ಟೌವ್ ಸಿಡಿದು ಗಾಯಗೊಂಡಿದ್ದರು. ಆಗ ದುಡ್ಡು ಬೇಕಾಗಿತ್ತು. ಆ ಸಂದರ್ಭದಲ್ಲಿ ಒಂದು ಕೆಲಸವನ್ನು ಒಪ್ಪಿಕೊಂಡೆ. ಒಂದು ಪೊಟ್ಟಣವನ್ನು ಯಾವುದೇ ಕಾರಣಕ್ಕೂ ತೆಗೆದು ನೋಡಬಾರದು ಎಂಬ ಕಂಡೀಷನ್ ಮೇಲೆ ಅದನ್ನು ಇನ್ನೊಬ್ಬರಿಗೆ ಸೇರಿಸಬೇಕಾಗಿತ್ತು. ಇದಕ್ಕಾಗಿ ರು.15 ಸಾವಿರ ಕೊಡ್ತೀನಿ ಎಂದರು.

Aadhi Lokesh
ಸರಿ ಎಂದು ಬೈಕ್ ನಲ್ಲಿ ತೆಗೆದುಕೊಂಡು ಹೋಗಬೇಕಾದರೆ ಪೊಲೀಸರ ಕೈಗೆ ಸಿಕ್ಕಿಬೀಳುವುದರಲ್ಲಿದ್ದೆ. ಆದರೆ ಆ ಪೊಟ್ಟಣವನ್ನು ಪೆಟ್ರೋಲ್ ಟ್ಯಾಂಕ್ ನಲ್ಲಿ ಹಾಕಿ ಬಚಾವಾದೆ ಎಂದರು. ಅದರಲ್ಲಿ ಏನಿತ್ತು ಎಂಬುದನ್ನು ಮಾತ್ರ ಅವರು ಹೇಳಲಿಲ್ಲ.

ಬಳಿಕ ಆದಿ ಲೋಕೇಶ್ ಮಾತನಾಡುತ್ತಾ, ಇದುವರೆಗೂ ಯಾರಿಗೂ ಗೊತ್ತಿಲ್ಲದ ವಿಷಯ ಇದು. ಕೇವಲ ನನ್ನ ತಾಯಿ ಮತ್ತು ನನಗೆ ಮಾತ್ರ ಗೊತ್ತಿರುವ ಸಂಗತಿ ಇದು. ನನಗೆ ಕಾಣೋದೇ ಒಂದು ಕಣ್ಣು. ಎಡಗಣ್ಣು ನನಗೆ ಕಾಣುವುದಿಲ್ಲ. ಇನ್ನೊಂದು ಕಣ್ಣು ಸುಮ್ಮನೆ ಇದೆ. ಆದರೆ ಇನ್ನೊಂದು ಮುಚ್ಚಿಕೊಂಡರೆ ನಾನು ಕುರುಡನಂತೆಯೇ. ಹುಟ್ಟಿದಾಗಿನಿಂದ ನನಗೆ ಈ ಸಮಸ್ಯೆ ಇದೆ. ಈ ಸೀಕ್ರೆಟ್ ಯಾರಿಗೂ ಗೊತ್ತಿರಲಿಲ್ಲ. ಇದೀಗ ನಿಮ್ಮ ಮುಂದೆ ಹೇಳಿಕೊಳ್ಳುತ್ತಿದ್ದೇನೆ ಎಂದರು. ಈ ಸೀಕ್ರೆಟ್ ಕೇಳುತ್ತಿದ್ದಂತೆ ಎಲ್ಲರೂ ಗರಬಡಿದವರಂತಾದರು.

ಬಳಿಕ ಎಲ್ಲರ ಸೀಕ್ರೆಟ್ ಬಗ್ಗೆ ಚರ್ಚಿಸಿದರು. ಡಬ್ಬಾ ಸೀಕ್ರೆಟ್ ಎಂದರೆ ರೋಹಿತ್ ಹೇಳಿದ್ದು ಎಂದು ಅಕುಲ್ ಎಲ್ಲರೆ ಜೊತೆ ಹೇಳಿಕೊಂಡರು. ಇದಕ್ಕಾಗಿ ರೋಹಿತ್ ಸ್ವಲ್ಪ ಬೇಸರದಲ್ಲಿದ್ದ. ನಿಜವಾಗಿಯೂ ಹೇಳಬೇಕೆಂದರೆ ಅವರು ಹೇಳಿದ್ದು ಸೀಕ್ರೆಟ್ ತರಹ ಇರಲಿಲ್ಲ.

ರಹಸ್ಯ ಚಕ್ರದ ಬಗ್ಗೆ ಮನೆಯಲ್ಲಿ ಭಾರಿ ಚರ್ಚೆ ನಡೆಯಿತು. ದೀಪಿಕಾ ಅವರು ತಮ್ಮ ಸೀಕ್ರೆಟ್ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದರು. ಆದರೆ ನೀತೂ ಅವರಿಗೆ ಧೈರ್ಯ ತುಂಬಿದರು ನೀನೇನು ಹೆಸರು ಹೇಳಲಿಲ್ಲವಲ್ಲ. ಡೋಂಟ್ ವರಿ ಎಂದು ಧೈರ್ಯ ತುಂಬಿದರು. ಈ ಬಾರಿಯ ಸೀಕ್ರೆಟ್ ಗಳಿಂದ ಮನೆಯಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಇನ್ನಷ್ಟು ಗೌರವ, ನಂಬಿಕೆಗಳು ಬಂದಿರುವುದು ಕಂಡಿತು. ಮುಂದೇನು ಎಂಬುದು ನೋಡಬೇಕು.

<ul id="pagination-digg"><li class="previous"><a href="/tv/bigg-boss-kannada-2-neethu-secret-out-086454.html">« Previous</a>

More from Filmibeat

English summary
Bigg Boss Kannada 2, day 25th highlights. While Deepika revealed that she has someone whom she loves dearly and Santhosh revealed that he never went to college, it was Aadhi's secret that shocked everyone. He said that he has been blind from one eye since his birth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X