ವಿಚ್ಛೇದನದ ಬಗ್ಗೆ ಶಕೀಲಾ ಬಳಿ ಅನಿತಾ ಪ್ರಸ್ತಾಪ
ಇನ್ನೊಂದು ಕಡೆ ಅನಿತಾ ಮತ್ತು ಶಕೀಲಾ ನಡುವೆ ಪಿಸಪಿಸ ಮಾತುಕತೆ ನಡೆದಿತ್ತು. ತಮ್ಮ ಮಗಳಿಗೆ ಈಗ ಹದಿನಾರು ವರ್ಷ. ನನ್ನ ಪತಿಗೆ ವಿಚ್ಛೇದನ ನೀಡಿದ್ದೇನೆ. ಮಗಳು ನನ್ನ ಜೊತೆಗೇ ಇದ್ದಾರೆ ಎಂದೂ ಸಣ್ಣ ಧ್ವನಿಯಲ್ಲಿ ಯಾರಿಗೂ ಕೇಳಿಸದಂತೆ ಮಾತನಾಡಿಕೊಂಡರು. ಆದರೆ ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿರುವ ಪ್ರತಿಯೊಬ್ಬರ ಕಿವಿಗೂ ಅವರ ಮಾತುಗಳು ಬಿದ್ದವು.
ಮೊದಲ ದಿನದಿಂದಲೂ ಅಕುಲ್ ಗೂ ನನಗೂ ಆಗುತ್ತಿಲ್ಲ. ನನ್ನ ಜೊತೆಗೆ ಕತ್ತಿ ಮಸೆಯುತ್ತಾ ಜಗಳಕ್ಕೆ ಬರುತ್ತಾನೆ ಎಂದು ಹೇಳಿದರು ನೀತೂ. ಅವನು ನನ್ನೊಂದಿಗೆ ಮಾತನಾಡಬೇಕಾದರೆ ತುಂಬಾ ಪರ್ಸನಲ್ ಆಗುತ್ತಾನೆ ಎಂದು ಸಂತೋಷ್ ಬಳಿ ನೀತೂ ಹೇಳಿಕೊಂಡರು.

ಸೃಜನ್ ಅವರಿಗೆ ಪಂಜರದಲ್ಲಿಡುವ ಶಿಕ್ಷೆ. ಅದನ್ನು ನೋಡಿಕೊಳ್ಳುವವರು ರೋಹಿತ್. ಊಟ ಅಲ್ಲೇ ಮಾಡಬೇಕು. ಬಾತ್ ರೂಮಿಗೆ ಹೋಗಬೇಕಾದರೆ ಮಾತ್ರ ಪಂಜರದಿಂದ ಬಿಡುಗಡೆ. ಬಿಗ್ ಬಾಸ್ ಮುಂದಿನ ಆದೇಶದವರೆಗೂ ಅವರಿಗೆ ಈ ಶಿಕ್ಷೆ. ಸೃಜನ್ ಅವರಿಗೆ ಶಿಕ್ಷೆ ಬಿದ್ದ ಬಳಿಕ ಎಲ್ಲರಿಗೂ ತುಂಬಾ ಬೇಸರವಾದರು.
ಅಂತೂ ಇಂತೂ ಸೃಜನ್ ಅವರಿಗೆ ಮಧ್ಯರಾತ್ರಿ ವೇಳೆಗೆ ಪಂಜರದಿಂದ ಬಿಡುಗಡೆ ಮಾಡಲಾಯಿತು. ನಾನು ಸೈಕಾಲಜಿಯಲ್ಲಿ ಫಸ್ಟ್ ರ್ಯಾಂಕ್. ಯಾರು ಏನು ಎಂಬುದು ನನಗೆ ಗೊತ್ತು ಎಂದು ನೀತೂ ಅವರು ಸಂತೋಷ್ ಬಳಿ ಕೊಚ್ಚಿಕೊಂಡರು. ಇನ್ನು ಮೊದಲ ದಿನ ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎಂಬುದು ಶನಿವಾರ (ಜು.5) ರಾತ್ರಿ ಗೊತ್ತಾಗಲಿದೆ. ಈ ವಾರ ಎಲಿಮಿನೇಟ್ ಆಗುತ್ತಿರುವ ಮೊದಲ ಸೆಲೆಬ್ರಿಟಿ ಯಾರು ಎಂಬ ಬಗ್ಗೆ ಕುತೂಹಲ ಇದ್ದೆ ಇದೆ.


Click it and Unblock the Notifications











