For Quick Alerts
ALLOW NOTIFICATIONS  
For Daily Alerts

  ಮಧ್ಯರಾತ್ರಿಯಲ್ಲಿ ಆದಿಗೆ ನೀತೂ ಬಿಸಿಬಿಸಿ ಚುಂಬನ!

  By ಉದಯರವಿ
  |

  ಬಿಗ್ ಬಾಸ್ ಮನೆಯಲ್ಲಿ ರಾಜಕೀಯದ ಗಾಳಿ ಬೀಸುತ್ತಿದ್ದು ಹವಾಮಾನ ಬದಲಾಗಿದೆ. ರಾಜಕೀಯ ಟಾಸ್ಕನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದರು. ಅಂತೂ ಇಂತೂ ದೀಪಿಕಾ ಕಾಮಯ್ಯ ನೇತೃತ್ವದ ಕಾವೇರಿ ಪಕ್ಷ ಚುನಾವಣೆಯಲ್ಲಿ ಬಹುಮತ ಪಡೆದುಕೊಂಡು ಗೆದ್ದಿದೆ.

  ಇಪ್ಪತ್ತನಾಲ್ಕನೇ ದಿನದ ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ ಬನ್ನಿ. ಬೆಳಗ್ಗೆ ಎಲ್ಲರಿಗಿಂತಲೂ ಮುಂಚೆ ಎದ್ದು ಮನೆಯಲ್ಲಿ ಅಡುಗೆ, ಕಾಫಿ ಎಲ್ಲಾ ಮಾಡಿದರು ಶ್ವೇತಾ ಚೆಂಗಪ್ಪ. ಈ ರೀತಿ ಮಾಡಿ ತಮ್ಮ ಪಕ್ಷಕ್ಕೆ ಸೆಳೆಯುವ ಹೊಸ ಪ್ರಯತ್ನವನ್ನು ಅವರು ಮಾಡಿದರು.

  ಆದರೆ ಮತದಾನ ಮುಗಿಯುವ ವೇಳೆಗೆ ಶ್ವೇತಾ ಅವರ ಪ್ರಯತ್ನವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು. ಅವರ ತಮಾಷೆನೇ ಅಲ್ಲ ಪಕ್ಷ ಸೋತಿತು. ಈ ಬಗ್ಗೆ ಅವರ ಮುಖದಲ್ಲಿ ಸ್ವಲ್ಪ ಅಸಮಾಧಾನವೂ ಕಾಣುತ್ತಿತ್ತು.

  ಯಾರಿಗೆ ಓಟಾಕುವುದು ಎಂಬ ಬಿಸಿಬಿಸಿ ಚರ್ಚೆ

  ಯಾರಿಗೆ ಓಟಾಗುವುದು ಯಾವ ಪಕ್ಷಕ್ಕೆ ಸೇರುವುದು ಎಂದು ಆದಿ ಮತ್ತು ಸೃಜನ್ ಲೋಕೇಶ್ ಪರಸ್ಪರ ಚರ್ಚಿಸಿದರು. ಸ್ನೇಹ ಎಂದು ನೋಡುವುದಕ್ಕಿಂತ ಯಾರು ಉತ್ತಮ ಎಂದು ನೋಡಿದರೆ ಶ್ವೇತಾ ಪಕ್ಷವೇ ಬೆಟರ್ ಎಂದು ಇಬ್ಬರೂ ತಮ್ಮತಮ್ಮಲ್ಲಿಯೇ ಚರ್ಚಿಸಿದರು.

  ಕಡೆಗೆ ಬೆನ್ನಿಗೆ ಚೂರಿ ಹಾಕಿದ ಆದಿ ಲೋಕೇಶ್

  ಆದರೆ ಕಡೆಗೆ ಆದಿ ಲೋಕೇಶ್ ಮಾಡಿದ್ದೇನೆಂದರೆ ಅವರು ಬೆಂಬಲಿಸುತ್ತಿದ್ದದ್ದು ತಮಾಷೆನೇ ಅಲ್ಲ ಪಕ್ಷವನ್ನು ಬಿಟ್ಟು ಕಾವೇರಿ ಪಕ್ಷಕ್ಕೆ ಓಟಾಕಿದರು. ಇದಕ್ಕೆ ಅವರು ಕೊಟ್ಟ ಕಾರಣ ಫ್ರೆಂಡ್ ಶಿಪ್ ಬಿಡಕ್ಕಾಗಲ್ಲ ಎಂಬುದು.

  ಬದಲಾದ ರಾಜಕೀಯ ಹವಾಮಾನ

  ಮನೆಯಲ್ಲಿ ರಾಜಕೀಯದ ಹವಾಮಾನ ಬದಲಾಗಿದ್ದು, ಎಲ್ಲರೂ ಇದು ಟಾಸ್ಕ್ ಎಂಬುದನ್ನೂ ಮರೆತು ಸೀರಿಯಸ್ ಆಗಿ ಕೆಲಸ ತೊಡಗಿಕೊಂಡಿದ್ದು. ತಮ್ಮ ತಮ್ಮ ಪಕ್ಷಕ್ಕೆ ಸದಸ್ಯರನ್ನು ಸೆಳೆಯಲು ತಂತ್ರ ಪ್ರತಿತಂತ್ರ ಹೆಣೆಯುವಲ್ಲೇ ಸಾಕಷ್ಟು ಕಾಲ ವ್ಯಯಿಸಿದರು.

  ಕಾವೇರಿ ಪಕ್ಷದ ಪಾಲಾದ ಲಗ್ಜುರಿ ಬಜೆಟ್

  ಈ ಸಲದ ಲಗ್ಜುರಿ ಬಜೆಟ್ ಟಾಸ್ಕ್ 'ರಾಜಕೀಯ' ಮುಕ್ತಾಯವಾಗಿ ಈ ಟಾಸ್ಕ್ ನಲ್ಲಿ ಬಹುಮತ ಪಡೆದು ದೀಪಿಕಾ ಅವರ ಕಾವೇರಿ ಪಕ್ಷಕ್ಕೆ ವಿಜಯಮಾಲೆ ಬಿತ್ತು. ತಮಾಷೆನೇ ಅಲ್ಲ ಪಕ್ಷ ಮಾತ್ರ ಸೋತಿತು. ಲಗ್ಜುರಿ ಬಜೆಟ್ ಕಾವೇರಿ ಪಕ್ಷದ ಪಾಲಾಯಿತು.

  ಮನೆಯಲ್ಲಿ ಜೋಡಿ ಹಕ್ಕಿಗಳ ಕಲರವ

  ಆದಿ ಲೋಕೇಶ್ ಅವರು ಇನ್ನೊಂದು ಪಕ್ಷದಲ್ಲಿದ್ದ ನೀತೂಗಾಗಿ ತಾವಿರುವ ಪಕ್ಷವನ್ನೂ ಬಿಟ್ಟು ಓಟು ಮಾಡಿದ್ದಾಗಿ ನೀತೂ ಹೇಳಿಕೊಂಡ. ಒಟ್ಟಾರೆಯಾಗಿ ಈ ಜೋಡಿ ಹಕ್ಕಿಗಳ ಕಲವರ ಮನೆಯಲ್ಲಿ ಜೋರಾಗಿದೆ.

  ಆದಿ ಮತ್ತು ನೀತೂ ನಿಜವಾಗಿಯೂ ಲವ್ ಮಾಡ್ತಾವ್ರಾ?

  ಇಬ್ಬರೂ ಅಂಟಿಕೊಂಡೇ ಓಡಾಡುವುದು, ಅವಕಾಶ ಸಿಕ್ಕಾಗಲೆಲ್ಲಾ ಅಪ್ಪಿಕೊಳ್ಳುವುದು, ಒಬ್ಬರಿಗೊಬ್ಬರು ತುಂಬಾ ಆತ್ಮೀಯವಾಗಿ ಇರುವುದು ಹಲವು ಅನುಮಾನಗಳನ್ನು ವೀಕ್ಷಕರಲ್ಲಿ ಹುಟ್ಟಿಸುತ್ತಿವೆ. ನಿಜವಾಗಲೂ ಇವರು ಲವ್ ಮಾಡ್ತಾ ಇದ್ದಾರಾ? ಎಂಬ ಗುಮಾನಿ ಬರುವಂತಿದೆ ಇವರಿಬ್ಬರ ನಡವಳಿಕೆ.

  ಅವನೊಬ್ಬ ದನಕಾಯೋ ಕ್ಯಾಪ್ಟನ್

  ಇನ್ನೊಂದು ಕಡೆ ಮನೆಯ ಕ್ಯಾಪ್ಟನ್ ಅಕುಲ್ ಬಗ್ಗೆ ಸೃಜನ್ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮನೆಯಲ್ಲಿ ರೇಷನ್ ಹೇಗೆಂದರೆ ಹಾಗೆ ಬಳಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ರೇಷನ್ ಮುಗಿಯುತ್ತದೆ. ಅವನೊಬ್ಬ ದನಕಾಯೋ ಕಾಪ್ಟನ್. ಕೂತುಕೊಂಡು ಸುಮ್ಮನೆ ಹರಟೆ ಹೊಡೀತಾನೇ ಇದ್ದಾನೆ ಎಂದು ಶ್ವೇತಾ ಅವರ ಬಳಿ ಸೃಜನ್ ಬೈದರು.

  ಮನೆಯಲ್ಲಿ ರಾಜಕೀಯ ಚದುರಂಗದಾಟ

  ಮಧ್ಯರಾತ್ರಿವರೆಗೂ ರಾಜಕೀಯದ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಕೆಲವರು ಬೆನ್ನಿಗೆ ಚೂರಿ ಹಾಕಿದರೆ. ಇನ್ನೂ ಕೆಲವರ ರಾಜಕೀಯ ಚರುರಂಗದಾಟ ನಡೆಯಲಿಲ್ಲ. ಇದು ಟಾಸ್ಕ್ ಆಗಿದ್ದರೂ ನಿಜವಾಗಿಯೂ ರಾಜಕೀಯ ಮನೆಯಲ್ಲಿ ಮನೆ ಮಾಡಿದೆ.

  ಮಧ್ಯರಾತ್ರಿಯಲ್ಲಿ ಆದಿಗೆ ನೀತೂ ಬಿಸಿಬಿಸಿ ಚುಂಬನ

  ಬಿಗ್ ಬಾಸ್ ಮನೆಯಲ್ಲಿ ರಾತ್ರಿ ದೀಪ ಆರಿದ ಮೇಲೂ ನೀತೂ, ಆದಿ ಹಾಗೂ ಮಯೂರ್ ಒಬ್ಬರಿಗೊಬ್ಬರು ಅಂಟಿಕೊಂಡೇ ಚರ್ಚಿಸುತ್ತಿದ್ದರು. ಕೊನೆಗೆ ಆದಿಗೆ ಬಿಸಿಬಿಸಿ ಚುಂಬನವನ್ನೂ ನೀತೂ ಕೊಟ್ಟರು. ಆಗ ಸಮಯ ಮಧ್ಯರಾತ್ರಿ ಮೀರಿತ್ತು. ಇನ್ನು ರಾತ್ರಿ ಹೊತ್ತು ಆದಿಗೆ ಸರಿಯಾಗಿ ಯಾಕೆ ನಿದ್ದೆ ಬರುತ್ತಿಲ್ಲ ಎಂಬುದಕ್ಕೆ ಇದೇ ಕಾರಣವಿರಬಹುದೇ?

  English summary
  The luxury budget task continued on day 24 in Bigg Boss house. Among all the participants, only Srujan and Aadhi were the ones who did not join any of the two parties. Here are the day 24th highlights.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more