ಬಿಗ್ ಬಾಸ್ ನಲ್ಲಿ 'ಆ ಕಚಕ್' ಡವ್ ರಾಣಿ ದೀಪಿಕಾ
ಸುವರ್ಣ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವೇಗದಲ್ಲಿ ಸಾಗಿಹೋಗುತ್ತಿದೆ. ಮನೆಯಲ್ಲಿ ಬಹುತೇಕ ಎಲ್ಲರೂ ಹೊಂದಿಕೊಳ್ಳುತ್ತಿದ್ದಾರೆ ಎನ್ನಿಸುತ್ತಿದ್ದರೂ. ಇನ್ನೂ ಕೆಲವರು ಐವತ್ತು ದಿನ ಕಳೆದಿದ್ದರೂ ಎಲ್ಲರೊಂದಿಗೂ ಹೊಂದಿಕೊಂಡಿಲ್ಲ.
ಈ ಹೊಂದಾಣಿಕೆ, ಮನಸ್ತಾಪ, ಒಳಜಗಳ ನಡುವೆ ಬಿಗ್ ಬಾಸ್ ರಿಯಾಲಿಟಿ ಶೋ ಅರುವತ್ತ ಐದನೇ ದಿನಕ್ಕೆ ವೀಕ್ಷಕರ ಜೊತೆಗೆ ಹೆಜ್ಜೆಹಾಕಿದೆ. ಅರುವತ್ತೈದನೇ ದಿನವೂ ನಾಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ. ಬಿಗ್ ಬಾಸ್ ಏನೋ ಹೊಸದಾಗಿ ಪ್ಲಾನ್ ಮಾಡಿದ್ದಾರೆ ಎಂಬ ಆತಂಕ ಮನೆಯ ಸದಸ್ಯರ ನಡುವೆ ಇದೆ.
ಏತನ್ಮಧ್ಯೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಲಗ್ಜುರಿ ಬಜೆಟ್ ಟಾಸ್ಕ್ ನೀಡಿದರು. ಅದುವೆ 'ಬಿಬಿ ಟಿವಿ' ಟಾಸ್ಕ್. ಈ ಟಾಸ್ಕ್ ಪ್ರಕಾರ ಟಿವಿಯಲ್ಲಿ ಮೂಡಿಬರುವಂತೆ ಎಲ್ಲರೂ ಒಂದು ಕಾರ್ಯಕ್ರಮ ನಡೆಸಿಕೊಡಬೇಕು. ಸಿನಿಮಾ ಪ್ರೊಮೋಷನ್, ವಾರ್ತೆಗಳು, ಕ್ರೈಂ ರಿಪೋರ್ಟ್, ಟಾಕ್ ಶೋ, ಧಾರಾವಾಹಿ ಹೀಗೆ.

ಹೀಗೂ ಉಂಟೇ ಸ್ಟೈಲಲ್ಲಿ ಗಮನಸೆಳೆದ ರೋಹಿತ್
ಈ ಲಗ್ಜುರಿ ಬಜೆಟ್ ಟಾಸ್ಕ್ ನ ಕ್ರಿಯೇಟಿವ್ ಹೆಡ್ ಗುರುಪ್ರಸಾದ್ ಎಂದು ಬಿಗ್ ಬಾಸ್ ಹೇಳಿದರು. ಮೊದಲು 'ಹೀಗೂ ಉಂಟೇ' ಸ್ಟೈಲ್ ನಲ್ಲಿ ರೋಹಿತ್ ಪಟೇಲ್ ಮಾತಾಡಿದ್ದು ನಿಜಕ್ಕೂ ಸೊಗಸಾಗಿತ್ತು. ಇಷ್ಟು ಬಾಯೇ ಬಿಡಲ್ಲ ಎಂಬಂತಿದ್ದ ರೋಹಿತ್ ಈ ಟಾಸ್ಕ್ ನಲ್ಲಿ ಮಾತ್ರ ಎಲ್ಲರ ಗಮನಸೆಳೆದರು.

ದಿನವೂ ಮಿನುಗೋ ಚೈತ್ರವೇ ಧಾರಾವಾಹಿ
ನಮ್ಮ ಮನೆಯಲ್ಲಿ ದಿನವೂ ಮಿನುಗೋ ಚೈತ್ರವೇ ಎಂಬ ಧಾರಾವಾಹಿಯಲ್ಲಿ ಶ್ವೇತಾ, ಅಕುಲ್, ಅನುಪಮಾ ಮತ್ತು ಸಂತೋಷ್ ಪಾತ್ರಧಾರಿಗಳಾಗಿ ತಮ್ಮದೇ ಆದಂತಹ ಒಂದು ಕಥೆಯನ್ನು ಆಯ್ಕೆ ಮಾಡಿ ಅಭಿನಯಿಸಿದರು. ಇದೂ ಒಂದು ರೀತಿ ತಮಾಷೆಯಾಗಿಯೇ ಇತ್ತು.

'ಮಾತು ಮನೆಕೆಡಿಸಿತು' ಕಾರ್ಯಕ್ರಮ
ಬಳಿಕ 'ಮಾತು ಮನೆಕೆಡಿಸಿತು' ಕಾರ್ಯಕ್ರಮವನ್ನು ಶ್ವೇತಾ ಚೆಂಗಪ್ಪ ನಡೆಸಿಕೊಟ್ಟರು. ಮಜಾ ಸ್ಟಾರ್ ಸೃಜನ್ ಹಾಗೂ ಡವ್ ರಾಣಿ ದೀಪಿಕಾ ಕಾಮಯ್ಯ ಇಂದು ತಮ್ಮ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. 'ಆ ಕಚಕ್' ಎಂಬ ಚಿತ್ರದ ಪ್ರಮೋಷನ್ ಗಾಗಿ ಈ ತಾರೆಗಳಾಗಿ ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಹೇಳಿದ ಶ್ವೇತಾ.

ಡಬ್ ರಾಣಿಯಾದ ದೀಪಿಕಾ ಕಾಮಯ್ಯ
ನಾನು ತುಂಬಾ ಡವ್ ಮಾಡ್ತೀನಿ, ಸೆಟ್ ನಲ್ಲಿ ಹುಡುಗರ ಜೊತೆ ಎಲ್ಲರ ಜೊತೆ ಡವ್ ಮಾಡ್ತೀನಿ ಅದಕ್ಕೆ ತಮಗೆ ಡವ್ ರಾಣಿ ಎಂಬ ಹೆಸರು ಬಂದಿದೆ ಎಂದರು. ಕಡೆಗೆ ಈ ಕಾರ್ಯಕ್ರಮವೂ ವೀಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಯಿತು.

ಸುದೀಪ್ ಅವರಿಗೆ ಬಿಗ್ ಬಾಸ್ ಹುಟ್ಟುಹಬ್ಬ
ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳನ್ನು ತಿಳಿಸಲು ಬಿಗ್ ಬಾಸ್ ಅವಕಾಶ ಕಲ್ಪಿಸಿದರು. ಎಲ್ಲರೂ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.

ನೀತೂ ಬರ್ತ್ ಡೇ ಸೆಲೆಬ್ರೇಟ್
ಹೊರಗಡೆಯಿಂದ ನೀತೂಗೆ ಆದಿ ಲೋಕೇಶ್ ಶುಭಾಶಯ ಹೇಳಿದರು. ಜೊತೆಗೆ ಆದಿ ಅವರು ನೀತೂ ಜೊತೆಗೆ ಕಳೆದ ಫೋಟೋಗಳನ್ನು ಕಳುಹಿಸಿದ್ದರು. ಎಲ್ಲರೂ ಬಿಗ್ ಬಾಸ್ ಮನೆಯಲ್ಲಿ ನೀತೂ ಬರ್ತ್ ಡೇ ಸೆಲೆಬ್ರೇಟ್ ಮಾಡಿದರು.

ಕಣ್ಣೀರಾಗಿ ಹರಿದ ನೀತೂ ಆನಂದ
ಎಲ್ಲರ ಪ್ರೀತಿಗೆ ಕರಗಿದ ನೀತೂ ಅವರು ಆನಂದವನ್ನೂ ತಡೆದುಕೊಳ್ಳಲಾಗದೆ ಆನಂದಭಾಷ್ಪ ಸುರಿಸಿದರು. ಅವರ ಸಂಭ್ರಮವೆಲ್ಲಾ ಕಣ್ಣೀರಾಗಿ ಹರಿಯಿತು. ಬಳಿಕ ಬಿಗ್ ಬಾಸ್ ತರಿಸಿದ್ದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಭ್ರಮಿಸಿದರು.

ಗುರುಪ್ರಸಾದ್ ಅವರಿಗೆ ಹೊಂದಾಣಿಕೆ ಸಮಸ್ಯೆ
ಬಿಗ್ ಬಾಸ್ ಅರುವತ್ತೈದನೇ ದಿನ ಒಬ್ಬೊಬ್ಬರನ್ನಾಗಿ ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದು, ಒಂದೇ ಪ್ರಶ್ನೆ ಒಂದೇ ಉತ್ತರ. ಮನೆಯಲ್ಲಿ ಹೊಂದಾಣಿಕೆಯಾಗದೆ ಸಹಬಾಳ್ವೆ ನಡೆಸಲು ಹೆಣಗುತ್ತಿರುವ ಒಬ್ಬರ ಹೆಸರು ಎಂದಾಗ ಎಲ್ಲರೂ ಸೂಚಿಸಿದ ಹೆಸರು ಗುರುಪ್ರಸಾದ್. ಆದರೆ ಕಾರಣಗಳು ಮಾತ್ರ ಭಿನ್ನವಾಗಿದ್ದವು. ಆದರೆ ಗುರುಪ್ರಸಾದ್ ಸೂಚಿಸಿದ ಹೆಸರು ರೋಹಿತ್.

ಮೆಚ್ಚಿನವರನ್ನು ನೆನೆದು ಕಣ್ಣೀರಿಟ್ಟ ದೀಪಿಕಾ
ತನ್ನ ಮೆಚ್ಚಿನವರನ್ನು ನೆನೆದು ಹಾಸಿಗೆಯಲ್ಲೇ ಮಲಗಿ ಕಣ್ಣೀರಿಟ್ಟ ದೀಪಿಕಾ ಕಾಮಯ್ಯ. ಮನೆಯಿಂದ ಯಾವುದೇ ಮೆಸೇಜ್ ಬಂದಿಲ್ಲ. ಒಂದೇ ಒಂದು ಮೆಸೇಜ್ ಫ್ರಮ್ ರಾಜ್ ಕಡೆಯಿಂದ ಬರಲಿ ಎಂದು ಕಣ್ಣೀರಿಟ್ಟರು ದೀಪಿಕಾ.

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಇಲ್ಲ
ಇಂದು ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಆಗಲಿಲ್ಲ. ನಾಮಿನೇಷನ್ ಯಾವ ರೀತಿ ತಿರುವು ಪಡೆಯುತ್ತದೋ ಕಾದು ನೋಡಿ ಎಂದು ಬಿಗ್ ಬಾಸ್ ಪ್ರಶ್ನಾರ್ಥಕ ಚಿಹ್ನೆ ಇಟ್ಟಿದ್ದಾರೆ. ಎಲ್ಲರೂ ನಾಮಿನೇಷನ್ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











