ಸೀಕ್ರೆಟ್ ಸರ್ಜರಿ ಬಗ್ಗೆ ಬಾಯ್ಬಿಟ್ಟ ನೀತೂ ಶೆಟ್ಟಿ
ಈ ವಾರದ ರಹಸ್ಯ ಚಕ್ರ ಎಂಬ ಟಾಸ್ಕ್ ಸಖತ್ ಇಂಟರೆಸ್ಟಿಂಗ್ ಆಗಿತ್ತು. ಒಂದು ಚಕ್ರ ತಿರುಗಿಸಬೇಕು. ಅದರಲ್ಲಿನ ಬಾಣದ ಗುರುತು ಯಾವ ಸದಸ್ಯನ ಹೆಸರಿನ ಬಳಿ ನಿಲ್ಲುತ್ತದೋ ಅವರು ತಮ್ಮ ಒಂದು ರಹಸ್ಯವನು ಮನೆಯ ಸದಸ್ಯರಿಗೆ ತಿಳಿಸಬೇಕು.
ಮೊದಲ ಸಲ ಚಕ್ರ ತಿರುಗಿಸಿದಾಗ ಅದು ನಿಂತಿದ್ದು ಅನುಪಮಾ ಭಟ್ ಅವರ ಫೋಟೋ ಬಳಿ. ಅವರು ಹೇಳಿದ ಸೀಕ್ರೆಟ್ ಏನೆಂದರೆ, ತಾನು ಎಂಟನೇ ತರಗತಿ ಓದುಗಾಗ ಒಬ್ಬ ಟೀಚರ್ ಬಂದು ನನ್ನ ಬಳಿ ಐ ಲವ್ ಯೂ ಎಂದು ಹೇಳಿದ್ದರು ಎಂದು. ಅದು ನನ್ನ ಜೀವನದಲ್ಲಿ ತುಂಬಾ ಶಾಕಿಂಗ್ ವಿಚಾರ ಎಂದರು.

ಆದರೆ ಎಷ್ಟು ಪ್ರಯತ್ನಿಸಿದರೂ ನನ್ನ ಒರಿಜಿನಲ್ ಶೇಪ್ ಬರಲಿಲ್ಲ. ಹಾರ್ಮೋನ್ ಸಮತೋಲನ ತಪ್ಪಿ ತುಂಬಾ ಸಮಸ್ಯೆಗಳನ್ನು ಎದುರಿಸುವಂತಾಯಿತು. ಬೇರೆಯವರ ಸಲಹೆ ಕೇಳಿ ಈ ರೀತಿ ಸಮಸ್ಯೆಗೆ ಸಿಲುಕಿದೆ ಎಂದು ಅವರು ತಮ್ಮ ಅನುಭವವನ್ನು ತಿಳಿಸಿದರು.
ಮೂರನೇ ಬಾರಿ ಚಕ್ರ ಬಂದು ನಿಂತಿದ್ದು ದೀಪಿಕಾ ಅವರ ಹೆಸರಿನ ಬಳಿ. ತನ್ನ ಜೀವನದಲ್ಲಿ ಎಂಟ್ರಿಯಾದ ವ್ಯಕ್ತಿಯೊಬ್ಬರ ಬಗ್ಗೆ ಹೇಳಿದರು. ಏಳೆಂಟು ವರ್ಷಗಳಿಂದ ಗೆಳೆಯರಾಗಿದ್ದವು. ಕಳೆದ ವರ್ಷ ಅವರ ಕಸಿನ್ ಮದುವೆಯಲ್ಲಿ ಸಿಕ್ಕಿದ್ದರು. ಅವರಿಗೆ ಇಲ್ಲಿಂದಲೇ ಪ್ರೀತಿಯನ್ನು ವ್ಯಕ್ತಪಡಿಸಿದರು. ಮದುವೆ ಒಪ್ಪಿಗೆಯನ್ನು ತಿಳಿಸಿದರು. ಈ ಮೂಲಕ ಆರೆಂಜ್ ಸಿಗ್ನಲ್ ಇದ್ದ ಅವರ ಲವ್ ಗ್ರೀನ್ ಸಿಗ್ನಲ್ ಪಡೆದುಕೊಂಡಿತು.
ಬಳಿಕ ಚಕ್ರ ನಿಂತಿದ್ದು ರೋಹಿತ್ ಅವರ ಹೆಸರಿನ ಮುಂದೆ. ಸ್ಕೂಲ್ ಡೇಸ್ ನಲ್ಲಿ ನಾನು ವೆರಿ ಬ್ಯಾಡ್ ಗೈ. ಎಲ್ಲರಿಗೂ ತುಂಬಾ ತೊಂದರೆ ಕೊಟ್ಟಿದ್ದೀನಿ. ಅವರೆಲ್ಲರೆಲ್ಲರನ್ನೂ ಈಗ ಸಾರಿ ಕೇಳಿಕೊಳ್ಳುತ್ತೇನೆ ಎಂದರು. ಅದು ಹೇಗೆ ಸೀಕ್ರೇಟ್ ಏನೋ ಅವರಿಗೇ ಅರ್ಥವಾಗಬೇಕು.


Click it and Unblock the Notifications











