ಅಪ್ಪನ ನೆನೆಯುತ್ತಾ ಸೃಜನ್ ಗಂಟಲು ಕಟ್ಟಿಬಂತು
ಅನಿತಾ ಭಟ್ ಮಾತನಾಡಿದರು, ನನ್ನದು ಸಾಗರ, ನಮ್ಮ ತಂದೆಯವರು ಸರ್ಕಾರಿ ಕೆಲಸದಲ್ಲಿದ್ದ ಕಾರಣ ಎಲ್ಲಾ ಊರುಗಳಲ್ಲೂ ಅಲೆಡಾಡಬೇಕಾದಂತಹ ಪರಿಸ್ಥಿತಿ ಇತ್ತು. ಕೆಲವು ಘಟನೆಗಳ ಕಾರಣ ತುಂಬಾ ಸ್ವಾರ್ಥ ಸ್ವಭಾವದ ನಾನು ಕೈಕೊಯ್ದುಕೊಂಡೆ, ವಿಷ ಕುಡಿದೆ, ಬಾವಿಗೂ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಒಂದೆರಡು ದಿನ ಕೋಮಾದಲ್ಲೂ ಇದ್ದೆ. ಬಳಿಕ ನಮ್ಮ ತಂದೆ ಬುದ್ಧಿವಾದ ಹೇಳಿದರು. ಬೆಂಗಳೂರಿಗೆ ಬಂದ ಮೇಲೆ ಆಂಕರಿಂಗ್ ಮಾಡುತ್ತಿದ್ದೆ.
ಕೆಲವು ಸೀರಿಯಲ್ ಗಳಲ್ಲೂ ಮಾಡಿದೆ. ಬಳಿಕ ಮೊದಲ ಸಿನಿಮಾ 'ಸೈಕೋ' ಚಿತ್ರದಲ್ಲಿ ಚಾನ್ಸ್ ಸಿಕ್ತು. ಈಗ ನಮ್ಮ ಅಪ್ಪ ಅಮ್ಮ ನಾನಿಲ್ಲ ಎಂದರೆ ಉಸಿರಾಡುವುದೂ ಕಷ್ಟ. ಅವರ ಸಲುವಾಗಿ ನಾನು ಚೆನ್ನಾಗಿರಬೇಕು ಎಂದೇ ದೇವರಲ್ಲಿ ಸದಾ ಬೇಡಿಕೊಳ್ಳುತ್ತೇನೆ ಎಂದರು.

ದೇಹದಾನದ ಪತ್ರವನ್ನು ನಮ್ಮ ಅಕ್ಕನಿಗೆ ಹೇಳಿ ಬರೆಸಿದ್ದರು. ದೇಹದಾನ ಎಂಬುದು ಬಹಳ ದೊಡ್ಡ ಪ್ರೊಸೀಜರ್. ನಾನು ಸತ್ತಾಗ ನೀನು ಅಳಬಾರದು ಎಂದು ಅಪ್ಪ ಪ್ರಮಾಣ ಮಾಡಿಸಿಕೊಂಡಿದ್ದರು. ನನಗೆ ಈಗಲೂ ನೆನಪಿದೆ ಎಂಎಸ್ ರಾಮಯ್ಯ ಆಸ್ಪತ್ರೆ 8.30 ಇರಬಹುದು. ಓಕೆ ಡ್ಯಾಡ್ ಸೀಯೂ ಎಂದು ಹೇಳಿಬಂದಿದ್ದೆ ಎಂದು ಹೇಳಬೇಕಾದರೆ ಅವರ ಗಂಟಲು ಕಟ್ಟಿಬಂತು...ಮುಂದೆ ಅವರಿಗೆ ಹೇಳಲು ಸಾಧ್ಯವಾಗಲಿಲ್ಲ.
ಬಳಿಕ ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಆಗ ಅಲ್ಲೇ ಇದ್ದ ಅಮ್ಮ ನಾನೂ ಸತ್ತು ಹೋಗ್ತೀನಿ ಎಂದರು. ಆಗ ನಾನು ಯಾರಿಗಾಗಿ ಬದುಕಲಿ ಎಂದೆ. ಇಂದು ಈ ಮಟ್ಟಕ್ಕೆ ಬೆಳೆಯಲು, ಪ್ರೀತಿಯಿಂದ, ಆತ್ಮವಿಶ್ವಾಸದಿಂದ ಜನರ ಮುಂದೆ ನಿಲ್ಲಲು ಕಾರಣ ನನ್ನ ತಾಯಿ. ಬದುಕನ್ನು ಕಲಿಸಿದ್ದು ನನ್ನ ತಂದೆ, ಬದುಕೋದನ್ನ ಕಲಿಸಿಕೊಟ್ಟದ್ದು ನನ್ನ ತಾಯಿ ಎಂದು ಹೇಳುವ ಹೊತ್ತಿಗೆ ಸೃಜನ್ ಕಣ್ಣುಗಳು ಕಂಬನಿಯಿಂದ ತುಂಬಿ ಬಂದಿದ್ದವು.
ಎಲ್ಲರ ಆತ್ಮಕಥೆ ಕೇಳಿದ ಮೇಲೆ ಮನೆಯಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಗೌರವ ಪ್ರೀತಿಗಳು ಮೂಡಿಬರುತ್ತಿವೆ. ನನ್ನಲ್ಲಿರುವ ಎಲ್ಲಾ ನೋವನ್ನು ಹೇಳಬೇಕು ಎಂದುಕೊಂಡಿದ್ದೇನೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ಅನಿತಾ ಭಟ್ ಗೋಳಾಡಿದರು. ಮನೆಯ ಮಹಿಳಾ ಸದಸ್ಯರು ಅವರನ್ನು ಸಮಾಧಾನಪಡಿಸಿದರು.
ನಾನೇ ಬೆಸ್ಟ್ ಟಾಸ್ಕ್ ಗಾಗಿ ಒಂದರಿಂದ ಹದಿನಾಲ್ಕರವರೆಗೆ ನಂಬರ್ ಕೊಡಲಾಗಿತ್ತು. ಯಾರು ಬೆಸ್ಟ್ ಅನ್ನಿಸುತ್ತಾರೋ ಅವರು ಆ ನಂಬರ್ ಬಳಿ ನಿಂತುಕೊಳ್ಳಬೇಕು. ಮೊದಲ ಸ್ಥಾನದಲ್ಲಿ ಶಕೀಲಾ ನಿಂತರು. ಎರಡನೇ ಸ್ಥಾನದಲ್ಲಿ ನಿಂತಿದ್ದ ಲಯ ಅವರನ್ನು ನೀತೂ ಆಕ್ಷೇಪ ವ್ಯಕ್ತಪಡಿಸಿದರು. ತಾವು ಆ ಸ್ಥಾನಕ್ಕೆ ಅರ್ಹರಲ್ಲ ಎಂದರು. ಅದರೆ ಲಯ ಅವರು ಸಮರ್ಥಿಸಿಕೊಂಡರು.
ಎಲ್ಲರೂ ತಮ್ಮ ವೃತಿ ಜೀವನದಲ್ಲಿ ಹತ್ತಿದ ಮೆಟ್ಟಿಲಿಗೆ ಅನುಗುಣವಾಗಿ ನಂಬರ್ ಪ್ರಕಾರ ನಿಂತರು. ಮೊದಲ ಸ್ಥಾನದಲ್ಲಿ ಶಕೀಲಾ ಬಳಿಕ ಲಯ, ಅಕುಲ್, ಹರ್ಷಿಕಾ, ನೀತೂ, ಅನುಪಮಾ...ಹೀಗೆ ಎಲ್ಲರೂ ನಿಂತರು. ಕೆಲವರು ಯಾವುದೇ ನಂಬರ್ ಆದರೂ ಪರ್ವಾಗಿಲ್ಲ ಎಂದೂ. ಇನ್ನೂ ಕೆಲವರು ನಂಬರ್ ಗಾಗಿ ನಾನು ಯಾವತ್ತೂ ಆಸೆಪಟ್ಟಿಲ್ಲ ಎಂದೂ ಹೇಳಿಕೊಂಡರು.


Click it and Unblock the Notifications











