ಮನೆಯ ಮೊದಲ ಕ್ಯಾಪ್ಟನ್ ಆಗಿ ಸೃಜನ್ ಲೋಕೇಶ್

By Rajendra
<ul id="pagination-digg"><li class="previous"><a href="/tv/bigg-boss-kannada-2-day-four-highlights-085876.html">« Previous</a>

ಮತದಾನದ ಬಗ್ಗೆ ವಿವರ ನೀಡುತ್ತ್ತಿದ್ದ ಆದಿ ಲೋಕೇಶ್ ಹಾಗೂ ಅಕುಲ್ ನಡುವೆ ಮಾತಿನ ಚಕಮಕಿಯೂ ನಡೆಯಿತು. ನಗುನಗುತ್ತಾ ಹೇಳಬೇಕಾಗಿತ್ತು ಅದನ್ನು ಬಿಟ್ಟು ಆದಿ ಲೋಕೇಶ್ ಸೀರಿಯಸ್ ಆಗಿ ಮಾತನಾಡುವುದು ತಮಗೆ ಇಷ್ಟವಿಲ್ಲ ಎಂದು ಅಕುಲ್ ಹೇಳಿದರು. ಬಿಗ್ ಬಾಸ್ ಕಂಡ್ರೆ ನಮಗೆ ಗೌರವ ಆದರೆ ಬಿಗ್ ಬಾಸ್ ತರಹ ಆಡುವವರೆಂದರೆ ನಮಗಾಗಲ್ಲ ಎಂದೂ ಹೇಳಿದರು. ಈ ವಿಚಾರವಾಗಿ ಒಂದು ಸಣ್ಣ ಮನಸ್ತಾಪದ ಸನ್ನಿವೇಶ ಮನೆಯಲ್ಲಿ ಎದುರಾಯಿತು.

ಬಹುತೇಕ ಮಂದಿ ಸೃಜನ್ ಅವರಿಗೆ ಓಟಾಕಿದರೆ ಸಂತೋಷ್ ಮಾತ್ರ ಹರ್ಷಿಕಾಗೆ ಓಟ್ ಮಾಡಿದ. ಹರ್ಷಿಕಾ ತಮ್ಮ ಓಟನ್ನು ತಮಗೆ ಹಾಕಿಕೊಂಡರು. ಆದರೆ ಸೃಜನ್ ಮಾತ್ರ ಹರ್ಷಿಕಾಗೆ ಹಾಕಿದರು. ಅದಕ್ಕೆ ಅವರು ಕೊಟ್ಟ ಕಾರಣ. ಒಬ್ಬ ನಟಿಯಾಗಿ ಅವರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿರುತ್ತಾರೆ. ಅದರೆ ಒಂದು ಜವಾಬ್ದಾರಿ ವಹಿಸಿದರೆ ಅವರು ಹೇಗೆ ನಿರ್ಧರಿಸುತ್ತಾರೆ ಎಂಬ ಕುತೂಹಲ ತಮಗಿದೆ. ಅದನ್ನು ತಿಳಿದುಕೊಳ್ಳಲು ಅವರಿಗೆ ಓಟ್ ಹಾಕುತ್ತಿದ್ದೇನೆ ಎಂದರು.

Bigg Boss highlights
ಏತನ್ಮಧ್ಯೆ ಎಲ್ಲರೂ ಸೃಜನ್ ಅವರನ್ನು ಬಹುಮತದೊಂದಿಗೆ ಗೆಲ್ಲಿಸಿದರು. ಮನೆಯ ಮೊದಲ ಕ್ಯಾಪ್ಟನ್ ಆಗಿ ಸೃಜನ್ ಅವರು ಆಯ್ಕೆಯಾದರು. ಮನೆಯ ನಿಬಂಧನೆಗಳನ್ನು ಮುರಿಯದಂತೆ ಅವರು ನೋಡಿಕೊಳ್ಳುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ವಹಿಸಿದರು.

ಸಂತೋಷ್ ಮಾತ್ರ ಎಲ್ಲರೊಂದಿಗೂ ಕಣ್ಣಾಮುಚ್ಚಾಲೆ ಆಡುತ್ತಿರುವುದು. ಸೃಜನ್ ಮೊದಲ ದಿನದಿಂದಲೇ ಕ್ಯಾಪ್ಟನ್ ತರಹ ಇದ್ದರು ಎಂದು ಶಕೀಲಾ ಅಂದರೆ. ಇನ್ನೊಂದು ಕಡೆ ಮನೆಯವರೆಲ್ಲರೂ ನನಗೆ ಜ್ಞಾಪಕ ಬಂದರು, ಪಕ್ಕದಲ್ಲೇ ಕುಳಿತಂತೆ ಅನ್ನಿಸಿತು ಎಂದು ನೀತೂ ಒದ್ದೆ ಕಣ್ಣನ್ನು ಒರೆಸಿಕೊಂಡರು.

ಲಯೇಂದ್ರ ಅವರು ಎಲ್ಲದಕ್ಕೂ ಮೀನನ್ನು ನೆನಪಿಸಿಕೊಳ್ಳುವುದು ಬಹಳ ತಮಾಷೆಯಾಗಿ ಕಾಣುತ್ತಿದೆ. ಬಿಗ್ ಬಾಸ್ ಮನೆಗೆ ಒಬ್ಬ ಕ್ಯಾಪ್ಟನ್ ಬಂದಂತಾಗಿದೆ. ಈ ಕ್ಯಾಪ್ಟನ್ ಒಂದು ವಾರ ಕಾಲ ಮನೆಯನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯಕ್ಕೆ ಮನೆಯಲ್ಲಿ ಎಲ್ಲವೂ ಕೂಲ್ ಕೂಲ್.

<ul id="pagination-digg"><li class="previous"><a href="/tv/bigg-boss-kannada-2-day-four-highlights-085876.html">« Previous</a>

More from Filmibeat

English summary
Bigg Boss Kannada 2 Day four highlights. Do you think Rohith's argumentative nature is going to lead him to being the odd one in the house? Srujan Lokesh selected for captain of the house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X