»   » 'ಬಿಗ್ ಬಾಸ್' ಮನೆಯಿಂದ ಔಟ್ ಆದ ನಟ ಮಿತ್ರ

'ಬಿಗ್ ಬಾಸ್' ಮನೆಯಿಂದ ಔಟ್ ಆದ ನಟ ಮಿತ್ರ

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಗೆ 'ಅತಿಥಿ'ಯಾಗಿ ಎಂಟ್ರಿಕೊಟ್ಟ ಕಾಮಿಡಿ ನಟ ಮಿತ್ರ ಈ ವಾರ ಎಲಿಮಿನೇಟ್ ಆಗಿದ್ದಾರೆ.

ಎರಡು ವಾರಗಳ ಹಿಂದೆಯಷ್ಟೆ ನಟ ಮಿತ್ರ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದರು. 'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ ಎಲ್ಲಾ ಸದಸ್ಯರಿಗೆ ಬಿಸಿ ಮುಟ್ಟಿಸಿದ್ದರು.

Bigg Boss Kannada 3 - Actor Mithra eliminated

'ಬಿಗ್ ಬಾಸ್' ನೀಡಿದ್ದ 'ತರ್ಲೆ ಟಾಕೀಸ್' ಟಾಸ್ಕ್ ನಲ್ಲಿ 'ಭೋಗಯ್ಯ' ಚಿತ್ರ ನಿರ್ದೇಶನ ಮಾಡಿ 'ಕಿಲ್ಲರ್ ಸೀರಿಯಲ್' ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮನೆಯಲ್ಲಿ ಸಣ್ಣ ಪುಟ್ಟ ಕಿರಿಕ್ ಬಿಟ್ಟರೆ, ಮಿತ್ರ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದರು. [ಒಂದೇ ಒಂದು ವೋಟ್ ನಿಂದ ಬಚಾವ್ ಆದ ನಟಿ ಶ್ರುತಿ!]

ಹೀಗಿದ್ದರೂ, ಮನೆಯ ಕ್ಯಾಪ್ಟನ್ ಭಾವನಾ ಬೆಳಗೆರೆ ಮಿತ್ರರವರನ್ನ ನೇರವಾಗಿ ನಾಮಿನೇಟ್ ಮಾಡಿದರು. ನಟಿ ಕೃತಿಕಾ, ಚಂದನ್, ರೆಹಮಾನ್, ಅಯ್ಯಪ್ಪ ಗಿಂತ ಕಡಿಮೆ ಎಸ್.ಎಂ.ಎಸ್ ಗಳು ಪಡೆದ ಕಾರಣ ಮಿತ್ರ ಈ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ.

English summary
Kannada Actor Mithra is eliminated from Bigg Boss Kannada 3 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada