For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್: ಡ್ಯಾನ್ಸರ್ ಜಯಶ್ರೀ ಎಕ್ಸಿಟ್ ಗೆ ಕಾರಣವೇನು?

  By ಜೇಮ್ಸ್ ಮಾರ್ಟಿನ್
  |

  ಸಾಮಾಜಿಕ ಜಾಲ ತಾಣಗಳಲ್ಲಿ ಕಂಡು ಬಂದ ಚರ್ಚೆಯಂತೆ ಡ್ಯಾನ್ಸರ್ ಜಯಶ್ರೀ ಅವರು ಕನ್ನಡದ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಡೇಂಜರ್ ಜೋನ್ ನಲ್ಲಿದ್ದ ಸುನಾಮಿ ಕಿಟ್ಟಿ ಸೇಫ್ ಆಗಿದ್ದಾರೆ.

  ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮಾತಿನ ಚಕಮಕಿ, ಹುಚ್ಚ ವೆಂಕಟ್ ಸೇರಿದಂತೆ ಕೆಲ ಸ್ಪರ್ಧಿಗಳಿಗೆ ಕಿಚ್ಚನ ಕಿವಿಮಾತು ಕೇಳಿ ಬಂದಿತು.

  ವಾರದ ಆರಂಭದಿಂದಲೂ ನಾನೇ ಈ ವಾರ ಮನೆಯಿಂದ ಹೊರಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಕೊರಗುತ್ತಿದ್ದ ಜಯಶ್ರೀ ಅವರಿಗೆ ಮನೆಯ ಒಳಗೆ-ಹೊರಕ್ಕೆ ಸರಿಯಾದ ಬೆಂಬಲ ಸಿಗಲಿಲ್ಲ.[ಮನೆಯಿಂದ ಹೊರಬಿದ್ದ ಜಯಶ್ರೀ: ಫೇಸ್ ಬುಕ್ಕಿನಲ್ಲಿ ಮಿಶ್ರ ರಂಗು!]

  ಮನೆಯಿಂದ ಹೊರಕ್ಕೆ ಹೋಗಲು ಕಾರಣ?: ಸುನಾಮಿ ಕಿಟ್ಟಿ ಅವರು ಬಲಿಷ್ಠ ಸ್ಪರ್ಧಿಯಾಗಿದ್ದು, ಸಾರ್ವಜನಿಕವಾಗಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಹೀಗಾಗಿ ನನ್ನನ್ನು ಜನ ವೋಟ್ ಔಟ್ ಮಾಡಿರುತ್ತಾರೆ ಎಂದು ಜಯಶ್ರೀ ಹೇಳಿಕೊಂಡಿದ್ದಾರೆ.

  ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಜಯಶ್ರೀ ಬಗ್ಗೆ ಬೇರೆಯದ್ದೇ ಕಥೆ ಕಂಡು ಬಂದಿವೆ. ಜಯಶ್ರೀಯನ್ನು ಕೆಲವರು ಡವ್ ರಾಣಿ ಎಂದರೆ, ಮತ್ತೆ ಕೆಲವರು ಅಯ್ಯೋ ಪಾಪ ಎಂದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮಾಡಿಸಿ, ಅಯ್ಯಪ್ಪ, ಚಂದನ್ ಗೆ ಬೋರ್ ಆಗುತ್ತೆ ಎಂದಿದ್ದಾರೆ. 'ಮೂಡಿ' ಆಗಿದ್ದ ಮಾತ್ರ ಮನೆಯಿಂದ ಹೊರಕ್ಕೆ ಕಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಕಂಡು ಬಂದಿದೆ.

  ಹುಚ್ಚ ವೆಂಕಟ್ ಜೊತೆ ಮುನಿಸು

  ಹುಚ್ಚ ವೆಂಕಟ್ ಜೊತೆ ಮುನಿಸು

  ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕ್ಷಣದಿಂದಲೇ ಹುಚ್ಚ ವೆಂಕಟ್ ಗಮನ ಸೆಳೆದಿದ್ದ ಜಯಶ್ರೀ ಅವರು ಹುಚ್ಚನಲ್ಲಿ ಪ್ರೇಮದ ರಂಗು ಮೂಡುವಂತೆ ಮಾಡಿದ್ದರು. ಒಂದಲ್ಲ ಎರಡು ಬಾರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಹುಚ್ಚನ ಕೋಪ ಕಡಿಮೆಯಾಗಲು ಕಾರಣವಾಗಿದ್ದ ಜಯಶ್ರೀ ಜೊತೆಗೆ ವೆಂಕಟ್ ಕೊನೆಗೆ ಮಾತಿನ ಚಕಮಕಿ ನಡೆಸಿದರು. ಮುನಿಸು ಮುರಿಯಲೇ ಇಲ್ಲ

  ಜಯಶ್ರೀಗೆ ಮುಳುವಾದ ಆಕೆಯ ಮನಸ್ಥಿತಿ

  ಜಯಶ್ರೀಗೆ ಮುಳುವಾದ ಆಕೆಯ ಮನಸ್ಥಿತಿ

  ಹೌದು, ನಾನು split personality ಹೊಂದಿದ್ದೇನೆ. ನನಗೆ ಟ್ರಿಗರ್ ಆದರೆ ನಾನು ಮಾತಾಡುವ ರೀತಿಯೇ ಬೇರೆ. ನನಗೆ ಇಲ್ಲ ಕಂಫರ್ಟ್ ಇಲ್ಲ. ನಾನು ಮನೆಯಿಂದ ಹೊರಕ್ಕೆ ಹೋಗುತ್ತೇನೆ ಎಂದು ಅನ್ನಿಸಿತು. ಮನೆಯವರಲ್ಲೂ ಹಲವರಿಗೆ ಇದು ಬೇಕಿತ್ತು. ನನ್ನ ದ್ವಂದ್ವ ಮನಸ್ಥಿತಿಗೆ ನಾನೇ ಕಾರಣ. ಈ ಬಗ್ಗೆ ಯಾರೂ ನನಗೆ ಸಲಹೆ ನೀಡಬೇಕಾಗಿಲ್ಲ ಎಂದು ಜಯಶ್ರೀ ಹೇಳಿದರು.

  ಜಯಶ್ರೀ ಪರ ನಿಲ್ಲದ ಹುಚ್ಚ ವೆಂಕಟ್

  ಜಯಶ್ರೀ ಪರ ನಿಲ್ಲದ ಹುಚ್ಚ ವೆಂಕಟ್

  ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕ್ಷಣದಿಂದಲೇ ಹುಚ್ಚ ವೆಂಕಟ್ ಅವರು ಜಯಶ್ರೀ ಜೊತೆ ಚೆನ್ನಾಗಿ ಮಾತನಾಡಿಕೊಂಡಿದ್ದರು. ನನ್ನ ಚಿತ್ರದಲ್ಲಿ ನಟಿಸುತ್ತೀರಾ ಎಂದು ಕೇಳಿದ್ದರು. ಜಯಶ್ರೀ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದರು. ತುಂಡುಡುಗೆ ತೊಡಲು ಅನುಮತಿಯನ್ನು ನೀಡಿದ್ದರು. ಅದರೆ, ಈ ವಾರದಲ್ಲಿ ಜಯಶ್ರೀ ಪರ ವೆಂಕಟ್ ನಿಲ್ಲಲೇ ಇಲ್ಲ. ಸಭ್ಯ ಸ್ಪರ್ಧಿಯಂತೆ ಎಫ್ ಪದ ಬಳಸಬೇಡಿ ಎಂದು ಕೊನೆಯಲ್ಲಿ ಡೈಲಾಗ್ ಹೊಡೆದರು. ಜಯಶ್ರೀ ಪರ ಹುಚ್ಚ ನಿಂತಿದ್ದರೆ ಜನರು ವೋಟ್ ಮಾಡಿದ್ದರೋ ಏನೋ...

  ಆನಂದ್ ಜೊತೆ ಕೊನೆ ಕ್ಷಣದಲ್ಲಿ ಕಿರಿಕ್

  ಆನಂದ್ ಜೊತೆ ಕೊನೆ ಕ್ಷಣದಲ್ಲಿ ಕಿರಿಕ್

  ಸುನಾಮಿ ಕಿಟ್ಟಿ ಜೊತೆ ಆಗಾಗ ಮಾತಿನ ಚಕಮಕಿ ನಡೆಸುತ್ತಿದ್ದ ಜಯಶ್ರೀ ಮನಸ್ಥಿತಿಯನ್ನು ಸ್ಪರ್ಶ ಚಿತ್ರದ 'ಹಠವಾದಿ' ನಾಯಕಿಗೆ ಹೋಲಿಸಬಹುದು. ಕೋಪದಲ್ಲಿ ಸಿಡಿಮಿಡಿಗೊಳ್ಳುತ್ತಿದ್ದ ಜಯಶ್ರೀ ನಂತರ ತಣ್ಣಗಾಗಿ ವೆಂಕಟ್ ರನ್ನೇ ಕೆಣಕುತ್ತಿದ್ದರು. ಕೊನೆಗೆ ನನ್ನ ಕೋಪ ಬಹುತೇಕ ಕಡಿಮೆಯಾಗಿದೆ ಎಂದು ಒಪ್ಪಿಕೊಂಡರು. ಅದರೆ, ಕೊನೆ ಕ್ಷಣದಲ್ಲಿ ಆನಂದ್ ಕೊಟ್ಟ ಕಾರಣ ಇಷ್ಟವಾಗದೆ ಎಫ್ ಪದ ಬಳಸಿದ್ದು ಕಿಚ್ಚನ ಹುಬ್ಬೇರಿಸಿತು. ಮನೆಯಲ್ಲಿ ಎಲ್ಲರೂ ಕೊಟ್ಟ ಕಾರಣಗಳು ಅಷ್ಟೇ ಜಯಶ್ರೀಯನ್ನು ಮತ್ತೆ ಸಿಟ್ಟಿಗೇಳುವಂತೆ ಮಾಡಿತು.

  ಜನಪ್ರಿಯತೆಗಷ್ಟೇ ಇಲ್ಲಿ ಬೆಲೆ, ವೋಟಿಂಗ್ ಅಂಕಿ ಅಂಶ ತೋರಿಸಿ

  ಜನಪ್ರಿಯತೆಗಷ್ಟೇ ಇಲ್ಲಿ ಬೆಲೆ, ವೋಟಿಂಗ್ ಅಂಕಿ ಅಂಶ ತೋರಿಸಿ

  ಬಿಗ್ ಬಾಸ್ ಮನೆಗೆ ಬರುವುದು ನಿಮ್ಮಿಷ್ಟ ಇಲ್ಲಿಂದ ಹೊರಕ್ಕೆ ನಿಮ್ಮನ್ನು ಕಳಿಸುವುದು ಪ್ರೇಕ್ಷಕರ ಇಷ್ಟ ಎಂದು ಬಿಗ್ ಬಾಸ್ ನವರು ಕಿವಿ ಮೇಲೆ ಹೂ ಇಡುತ್ತಿದ್ದಾರೆ. ಪೂರ್ವಯೋಜಿತದಂತೆ ಮೊದಲ ವಾರ ಮಾಧುರಿ ನಂತರ ಜಯಶ್ರೀ ಆಮೇಲೆ ನೇಹಾ, ಕೃತಿಕಾ, ರವಿ ಹೀಗೆ ಎಲ್ಲಾ ಫಿಕ್ಸ್ ಆಗಿರುತ್ತದೆ. ಸುನಾಮಿ ಕಿಟ್ಟಿ ಇದ್ದರೆ ಅಯ್ಯೋ ಗಡಿನಾಡಿನ ಕಾಡಿನ ಕೂಸು ಎಂಬ ಸಿಂಪಥಿ ಸಿಗುತ್ತದೆ, ಟಿಆರ್ ಪಿ ಏರುತ್ತದೆ ಎಂಬ ಲೆಕ್ಕಾಚಾರ ಇರಬಹುದು.

  ಸೆಲೆಬ್ರಿಟಿಗಳಿಗೆ ಮಾತ್ರ ಬೆಲೆಯೇ?

  ಸೆಲೆಬ್ರಿಟಿಗಳಿಗೆ ಮಾತ್ರ ಬೆಲೆಯೇ?

  ಸೆಲೆಬ್ರಿಟಿಗಳಿಗೆ ಮಾತ್ರ ಬೆಲೆ ಎಂದರೆ ಜನಸಾಮಾನ್ಯರ ವರ್ಗಕ್ಕೆ ಸೇರುವ ಜಯಶ್ರೀ ಸೇರಿಸಿಕೊಂಡಿದ್ದೇಕೆ? ದೈಹಿಕ ಸಾಮರ್ಥ್ಯದಲ್ಲಿ ರವಿ ಕೂಡಾ ಸೋಲುವಾಗ ಬಂಡಿ ಆಟದಲ್ಲಿ ಜಯಶ್ರೀ ಮಾಡಿದ ತಪ್ಪೇನು ಎಂಬ ಪ್ರಶ್ನೆಗಳಿವೆ. ಜಯಶ್ರೀ ಡ್ಯಾನ್ಸರ್ ಎಂಬ ಕಾರಣಕ್ಕೆ ಮನೆಗೆ ಪ್ರವೇಶ ಸಿಕ್ಕಿತು ಎಂಬುದಾದರೆ, ಎರಡು ವಾರದಲ್ಲಿ ಒಮ್ಮೆ ಕೂಡಾ ಡ್ಯಾನ್ಸಿಂಗ್ ಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ ಏಕೆ?

   ವೆಂಕಟ್ ನನ್ನು ಟ್ರಿಗರ್ ಮಾಡಿದ್ದೇ ಜಯಶ್ರೀ

  ವೆಂಕಟ್ ನನ್ನು ಟ್ರಿಗರ್ ಮಾಡಿದ್ದೇ ಜಯಶ್ರೀ

  ಮನರಂಜನೆ ಉದ್ದೇಶವಾಗಿದೆ ಎಂದರೆ, ವೆಂಕಟ್ ನನ್ನು ಟ್ರಿಗರ್ ಮಾಡಿದ್ದೇ ಜಯಶ್ರೀ, ಮಿಕ್ಕವರು ದೂರ ಉಳಿದಾಗ ಜಯಶ್ರೀ ಮಾತನಾಡಿಸಿ ಹುಚ್ಚನಲ್ಲಿ ಹಾಡು, ಕುಣಿತದ ರಂಗು ತಂದಿದ್ದರು. ಅಯ್ಯಪ್ಪನ ಜೊತೆ ಕಾಣಿಸಿಕೊಂಡರೂ ಜಯಶ್ರೀ ತನ್ನ ಪ್ರೇಮಪ್ರಸಂಗವನ್ನು ನೇತ್ರಾ ಬಳಿ ಹೇಳಿಕೊಂಡರು. ಆದರೆ, ಕಂಟ್ರೋಲ್ ಇಲ್ಲದ ಮಾತು ಬಿಟ್ಟರೆ ಮತ್ತೇನು ಮಾಡದ ಕಿಟ್ಟಿ ಲಕ್ಕಿಯಾಗಿಬಿಟ್ಟ.

  English summary
  Dancer Jayashree has been eliminated from the "Bigg Boss 3" Kannada during the Weekend with Kichcha Sudeep's Show. Tsunami Kitty has turned safe for the second time in a row. They were the only two inmates, who were in the danger zone this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X