»   » 'ಬಿಗ್ ಬಾಸ್' ಇಂದಿನ ಸಂಚಿಕೆ; ಗಳಗಳನೆ ಅಳುವ ಪೂಜಾ ಗಾಂಧಿ

'ಬಿಗ್ ಬಾಸ್' ಇಂದಿನ ಸಂಚಿಕೆ; ಗಳಗಳನೆ ಅಳುವ ಪೂಜಾ ಗಾಂಧಿ

Posted By:
Subscribe to Filmibeat Kannada

ಮಳೆ ಹುಡುಗಿ ಪೂಜಾ ಗಾಂಧಿ ನಿನ್ನೆಯಷ್ಟೇ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಜೊತೆ 'ಬಿಗ್ ಬಾಸ್' ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಹೆಣ್ಮಕ್ಕಳ ಉಡುಗೆ ವಿಚಾರವಾಗಿ ಹುಚ್ಚ ವೆಂಕಟ್ ರನ್ನ ಕೆರಳಿಸಿದ್ದ ಪೂಜಾ ಗಾಂಧಿ ಇಂದು ಕಣ್ಣೀರಧಾರೆ ಸುರಿಸುತ್ತಾರೆ.

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಇಂದಿನ ಟಾಸ್ಕ್ ಪ್ರಕಾರ ಮಾಸ್ಟರ್ ಆನಂದ್ ಧೀರೇಂದ್ರನ ಅವತಾರ ತಾಳಿದ್ರೆ, 'ಅಭಿನೇತ್ರಿ' ಪೂಜಾ ಗಾಂಧಿ ಕಲ್ಪನಾ ಆಗ್ತಾರೆ. ಧೀರೇಂದ್ರ-ಕಲ್ಪನಾ ಡ್ಯುಯೆಟ್ ನಡುವೆ 'ಬಿಗ್ ಬಾಸ್' ಮನೆಯ ಗ್ಲಾಸ್ ಒಡೆದುಹೋಗುತ್ತೆ.

Bigg Boss Kannada 3 day 2 sneak peek : Pooja Gandhi cries

ಇದಕ್ಕೆ ಶಿಕ್ಷೆಯಾಗಿ ಮಾಸ್ಟರ್ ಆನಂದ್ ಮತ್ತು ಪೂಜಾ ಗಾಂಧಿ ಕೈ ಮೇಲೆ ಮಾಡಿಕೊಂಡು ನಿಲ್ಲಬೇಕು. ಅತಿಯಾದ ನೋವಿನಿಂದ ಪೂಜಾ ಗಾಂಧಿ ಗಳಗಳನೆ ಅತ್ತು, ಮನೆಗೆ ವಾಪಸ್ ಹೋಗುವ ಬಗ್ಗೆ ಮಾತನಾಡುತ್ತಾರೆ. [ವೆಂಕಟ್ ಹುಚ್ಚನ್ನು ಕೆರಳಿಸಿದ ಪೂಜಾಗಾಂಧಿ ಮಿನಿ ಸ್ಕರ್ಟ್!]

ಇಂದಿನ 'ಬಿಗ್ ಬಾಸ್-3' ಸಂಚಿಕೆ ನೋಡುವ ಕುತೂಹಲ ನಿಮಗೆ ಇದ್ದರೆ, ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿ ಟ್ಯೂನ್ ಮಾಡಿ.....

English summary
Kannada Actress Pooja Gandhi cries in Bigg Boss Kannada 3. This episode will telecast today at 9 pm in Colors Kannada Channel. Don't miss to watch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada