»   » ಹುಚ್ಚ ವೆಂಕಟ್ ಗೆ 'ರಪ್' ಅಂತ ಬಾರಿಸ್ತಿದ್ರಂತೆ ರೆಹಮಾನ್.!

ಹುಚ್ಚ ವೆಂಕಟ್ ಗೆ 'ರಪ್' ಅಂತ ಬಾರಿಸ್ತಿದ್ರಂತೆ ರೆಹಮಾನ್.!

Posted By:
Subscribe to Filmibeat Kannada

'ಬಿಗ್ ಬಾಸ್' ನೀಡಿದ 'ಆಳು-ಅರಸ' ಟಾಸ್ಕ್ ನಲ್ಲಿ ಹುಚ್ಚ ವೆಂಕಟ್ ಮತ್ತು ಟಿವಿ9 ಸುದ್ದಿ ವಾಹಿನಿ ಆಂಕರ್ ರೆಹಮಾನ್ ನಡುವೆ ಆದ ಜಟಾಪಟಿಯನ್ನ ನೀವೆಲ್ಲಾ ಕಣ್ಣಾರೆ ಕಂಡಿದ್ದೀರಾ.

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಎದುರಿಗೆ ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿದ ಬಳಿಕ ಹುಚ್ಚ ವೆಂಕಟ್ ಗೆ ರೆಹಮಾನ್ ಕ್ಲಾಸ್ ತೆಗೆದುಕೊಂಡರು.

huccha-venkat-rahman

ಮನೆಯಿಂದ ನಿರ್ಗಮಿಸುವ ಮುನ್ನ ಹುಚ್ಚ ವೆಂಕಟ್ ರೆಹಮಾನ್ ಗೆ ವಾರ್ನಿಂಗ್ ಕೊಟ್ರು. ಇಷ್ಟಾದ್ರೂ ಸುಮ್ಮನಿರದ ರೆಹಮಾನ್ ನಿನ್ನೆ ಮತ್ತೆ ಹುಚ್ಚ ವೆಂಕಟ್ ಮ್ಯಾಟರ್ ತೆಗೆದರು. [ರೆಹಮಾನ್ ಗೆ ಯಾಕೆ ಹುಚ್ಚ ವೆಂಕಟ್ ಮೇಲೆ ಅಷ್ಟು ಕೋಪ?]

''ನನ್ನ ಮೇಲೆ ಏನಾದ್ರೂ ಕೈ ಎತ್ತಿದ್ರೆ 'ರಪ್' ಅಂತ ಹೊಡೀತಿದ್ದೆ'' ಅಂತ ರವಿ ಮುರೂರುಗೆ ರೆಹಮಾನ್ ಹೇಳ್ತಿದ್ರು.

ಒಂದ್ವೇಳೆ ಹುಚ್ಚ ವೆಂಕಟ್ ಗೆ ರೆಹಮಾನ್ ಹೊಡೆದಿದ್ರೆ, ಇಬ್ಬರ ನಡುವೆ ಏನ್ ವ್ಯತ್ಯಾಸ ಇರ್ತಿತ್ತೋ.??!

English summary
In conversation with Singer Ravi Muroor, Tv9 Kannada Anchor Rahman said that he would have raised his hand on Huccha Venkat in Bigg Boss Kannada 3. Read the article to know what Rahman said on Day 23 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada