ನಟಿ ಶ್ರುತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಪಶ್ರುತಿ.!
ಸೌಮ್ಯ ಸ್ವಭಾವಕ್ಕೆ ಮತ್ತು ಒಳ್ಳೆಯತನಕ್ಕೆ ಕಳೆದ ನಾಲ್ಕು ವಾರಗಳಲ್ಲಿ 'ಬಿಗ್ ಬಾಸ್' ಮನೆಯಲ್ಲಿ ಮೆಚ್ಚುಗೆ ಗಳಿಸಿದ್ದ ನಟಿ ಶ್ರುತಿ ಮೇಲೆ ಇದೀಗ ಅಪಶ್ರುತಿ ಸ್ವರ ಕೇಳಿಬರುತ್ತಿದೆ.
''ನಟಿ ಶ್ರುತಿ ಸೇಫ್ ಗೇಮ್ ಆಡುತ್ತಿದ್ದಾರೆ. ನಾವೆಲ್ಲರೂ ಅವರನ್ನ ಎತ್ತಿ ಮೇಲಕ್ಕೆ ಕೂರಿಸುತ್ತಿದ್ದೇವೆ. ಹೀಗೆ ಆದರೆ ಅವರು ಫೈನಲ್ ಗೆ ಹೋಗುವುದು ಗ್ಯಾರೆಂಟಿ. ಅದನ್ನ ಕಟ್ ಮಾಡ್ಬೇಕು'' ಅಂತ ನಟಿ ಶ್ರುತಿ ವಿರುದ್ಧ ಮಾಸ್ಟರ್ ಪ್ಲಾನ್ ಶುರುವಾಗುತ್ತಿದೆ.
''ನಾನು ನಾಮಿನೇಟ್ ಆಗ್ತಿದ್ದ ಹಾಗೆ ನಟಿ ಶ್ರುತಿ ನನ್ನ ಹತ್ತಿರ ಸರಿಯಾಗಿ ಮಾತನಾಡುತ್ತಿಲ್ಲ'' ಅಂತ ಪೂಜಾ ಗಾಂಧಿ ಅಪಸ್ವರ ಎತ್ತಿದ್ರೆ, ''ನಟಿ ಶ್ರುತಿ ಬೇಕಾದವರಿಗೆ ಮಾತ್ರ ಮುದ್ದು ಮಾಡ್ತಾರೆ'' ಅಂತ ರೆಹಮಾನ್ ಕಂಪ್ಲೇಂಟ್ ಹೇಳ್ತಾರೆ. ['ಬಿಗ್ ಬಾಸ್' ಮನೆಯಲ್ಲಿ ರಾಜಕೀಯ ದೊಂಬರಾಟ]
'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 30 ನೇ ದಿನ ಶ್ರುತಿ ವಿರುದ್ಧ ನಡೆದ ಮಾತುಕತೆಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಅಪಸ್ವರ ಶುರುಮಾಡಿದ ಪೂಜಾ ಗಾಂಧಿ
ಅಯ್ಯಪ್ಪ ಮತ್ತು ಚಂದನ್ ಜೊತೆ ಮಾತನಾಡುತ್ತಿದ್ದಾಗ, ''ನಾನು ಮಾತನಾಡುತ್ತಿದ್ದರೆ, ನನ್ನ ಮಾತನ್ನ ಅರ್ಧಕ್ಕೆ ನಿಲ್ಲಿಸುತ್ತಾರೆ. ನನಗೆ ಅವರ ಜೀವನದ ಬಗ್ಗೆ ಎಲ್ಲಾ ಗೊತ್ತು. ನಾನು ನಾಮಿನೇಟ್ ಆಗಿದ್ದೀನಿ ನಿಜ. ಅದ್ರೆ, ಅದನ್ನೇ ಇಟ್ಕೊಂಡು Behave ಚೇಂಜ್ ಮಾಡುವುದು ಸರಿಯಲ್ಲ'' ಅಂತ ನಟಿ ಶ್ರುತಿ ಬಗ್ಗೆ ಪೂಜಾ ಗಾಂಧಿ ಹೇಳಿದ್ರು. [ಜೂನಿಯರ್ ವಿಷ್ಣುವರ್ಧನ್ ಬಗ್ಗೆ ನಟಿ ಶ್ರುತಿ ಹೇಳಿದ್ದೇನು?]

ಅಯ್ಯಪ್ಪ ರಿಯಾಕ್ಷನ್ ಏನು?
''ನಾವು ಅವರಿಗೆ ಇಲ್ಲಿ Base ಸೆಟ್ ಮಾಡಿ ಕೊಟ್ಟಿದ್ದೀವಿ. ಏನು ಚೇಂಜ್ ಮಾಡೋಕೆ ಆಗಲ್ಲ. ಅವರನ್ನ ಸ್ಟ್ರಾಂಗ್ ಆಗುವುದಕ್ಕೆ ಬಿಡಬಾರದು. ಅದನ್ನ ಕಟ್ ಮಾಡ್ಬೇಕು. ಅದು ನಿನ್ನಿಂದ ಮಾತ್ರ ಸಾಧ್ಯ. ನಾವೇ ಅವರನ್ನ ಎತ್ತೆತ್ತಿ ಕೂರಿಸಿದ್ದೀವಿ.'' - ಅಯ್ಯಪ್ಪ [ಅಳುಮುಂಜಿ ಶ್ರುತಿಗೂ ಕೋಪ; ಜಗಳಕ್ಕೂ ರೆಡಿಯಾದ ಆನಂದ]

ಚಂದನ್ ಏನ್ ಹೇಳ್ತಾರೆ?
''ಈಗ ನಿಮಗೆಲ್ಲಾ ಅರ್ಥ ಆಯ್ತಾ. ನಾನು ಅವತ್ತೆ ಹೇಳ್ದೆ.'' - ಚಂದನ್

ಶ್ರುತಿ ಬಗ್ಗೆ ಎಲ್ಲಾ ಗೊತ್ತು.!
''ಶ್ರುತಿ ಬಗ್ಗೆ ನನಗೆ ಎಲ್ಲಾ ಗೊತ್ತು. ಅವರ ರಾಜಕೀಯ ಬದುಕು ಕೂಡ ಗೊತ್ತು. I still don't want to get dirty in the talk. ಜೊತೆಗಿದ್ದಾಗ ಚೆನ್ನಾಗಿ ಮಾತನಾಡುತ್ತಾರೆ. ಎಲ್ಲಾ ಕ್ಯಾಮರಾ ಮುಂದೆ. 'ತಾಯಿ' ನಾನು ಅಂತ. ನಾನು ನಾಟಕ ಮಾಡ್ತಿಲ್ಲ. I'm honest. I'm not faking for the camera.'' - ಪೂಜಾ ಗಾಂಧಿ

ಮಧ್ಯರಾತ್ರಿಯಲ್ಲಿ ಭಾರಿ ಚರ್ಚೆ
'ಭಲೇ ಜೋಡಿ' ಟಾಸ್ಕ್ ಮುಗಿದ ಬಳಿಕ ಮಧ್ಯರಾತ್ರಿ ಅಯ್ಯಪ್ಪ, ರೆಹಮಾನ್, ಚಂದನ್, ನೇಹಾ ಗೌಡ, ಭಾವನಾ ಬೆಳಗೆರೆ ಮತ್ತು ನೇತ್ರ ನಟಿ ಶ್ರುತಿ ಬಗ್ಗೆ ಮಾತನಾಡುತ್ತಿದ್ದರು.

ಅಯ್ಯಪ್ಪ ಪಾಯಿಂಟ್ ಏನು?
''ನಾವು ತಪ್ಪು ಮಾಡ್ತಾಯಿದ್ದೀವಿ. ಮೂರು ವಾರ ಅವರಿಗೆ ಕ್ಯಾಪ್ಟನ್ಸಿ ಕೊಟ್ಟಿದ್ದೀವಿ. ಟಾಸ್ಕ್ ನಲ್ಲಿ ಗೆದ್ದು ಸಿಕ್ಕರೆ ಓಕೆ. ಹೀಗೆ ಯಾಕೆ. ಎಲ್ಲರಿಗೂ ಚಾನ್ಸ್ ಸಿಗಲಿ. ಮೊದಲು ಎಲ್ಲದಕ್ಕೂ ಅವರನ್ನ ಹೋಗಿ ಕೇಳುವುದನ್ನ ಬಿಡಬೇಕು. ನಮ್ಮ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು. ಅವರ ಮೇನ್ ಟಾರ್ಗೆಟ್ ಪೂಜಾ. ಪೂಜಾ ಇಲ್ಲದೆ ಹೋದರೆ ಆನಂದ್ ಮತ್ತು ಶ್ರುತಿ ಕೊನೆವರೆಗೂ ಉಳಿಯಬಹುದು ಅಂತ'' - ಅಯ್ಯಪ್ಪ.

ತುಪ್ಪ ಸುರಿದ ರೆಹಮಾನ್
''ಶ್ರುತಿ ಮತ್ತು ಆನಂದ್ ಸೇಫ್ ಗೇಮ್ ಆಡ್ತಿದ್ದಾರೆ. ಟಾಸ್ಕ್ ಮುಗಿದ ಮೇಲೆ ಮಳೆಯಲ್ಲಿ ನೆಂದರು ಅಂತ ಆನಂದ್ ನ ಮುದ್ದು ಮಾಡಿದ್ರು. ಟಾಸ್ಕ್ ನಲ್ಲಿ ನಾನೂ ನೆಂದಿದ್ದೆ. ನನ್ನ ಒಂದು ಮಾತು ಕೇಳ್ಲಿಲ್ಲ.'' - ರೆಹಮಾನ್

ನಾವ್ ನಾವ್ ಕಿತ್ತಾಡ್ತಿದ್ದೀವಿ.!
''ಕಿಟ್ಟಿ ಕೂಡ ಅವರ ಜೊತೆ ಸೇರ್ಕೊಂಡು ಆಟವಾಡುತ್ತಿದ್ದಾನೆ. ಅವರೆಲ್ಲಾ ಯಾರೂ ನಾಮಿನೇಟ್ ಆಗುತ್ತಿಲ್ಲ. ನಾವುಗಳು ಕಿತ್ತಾಡಿಕೊಂಡು ಇದ್ದೀವಿ'' - ರೆಹಮಾನ್

ಮುಂದಿನ ವಾರಕ್ಕೆ ಬದಲಾವಣೆ?
'ಬಿಗ್ ಬಾಸ್' ಮನೆಯಲ್ಲಿ ಸದ್ಯ ನಡೆದಿರುವ ಮಾಸ್ಟರ್ ಪ್ಲಾನ್ ವರ್ಕೌಟ್ ಆದರೆ, ಮುಂದಿನ ವಾರ ಅಯ್ಯಪ್ಪ ಅಥವಾ ಚಂದನ್ ಕ್ಯಾಪ್ಟನ್ ಆದ್ರೆ, ಆನಂದ್ ಹಾಗೂ ಶ್ರುತಿ ಪೈಕಿ ಒಬ್ಬರು ನಾಮಿನೇಟ್ ಆಗುವುದು ಪಕ್ಕಾ. ಅದರ ಮಧ್ಯೆ 'ಬಿಗ್ ಬಾಸ್' ಬೇರೇನು ಟ್ವಿಸ್ಟ್ ನೀಡುತ್ತಾರೋ, ಕಾದು ನೋಡ್ಬೇಕು.


Click it and Unblock the Notifications











