ಸುನಾಮಿ ಕಿಟ್ಟಿ ಮುಖಕ್ಕೆ ಮಸಿ; ಕಣ್ಣೀರಿಟ್ಟ ನಟಿ ಶ್ರುತಿ

By Harshitha

ಮಾತಿನಲ್ಲಿ ಒರಟು ಇರಬಹುದು. ಇತರರ ಜೊತೆ ಸಲುಗೆ ಇಂದ ಮಾತನಾಡಬಹುದು. ಆದ್ರೆ, ಬೇರೆಯವರ ತರಹ ಹಿಂದೆ ಒಂದು ಮುಂದೆ ಇನ್ನೊಂದು ಮಾತನಾಡುವ ಬುದ್ದಿ ಸುನಾಮಿ ಕಿಟ್ಟಿಗಿಲ್ಲ. ಅದನ್ನ ನೀವು ಕೂಡ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಗಮನಿಸಿರುತ್ತೀರಾ.

ಹೀಗಿದ್ದರೂ, 'ಬಿಗ್ ಬಾಸ್' ಮನೆ ಸದಸ್ಯರಿಗೆ ಸುನಾಮಿ ಕಿಟ್ಟಿ ಕಂಡ್ರೆ ಆಗಲ್ಲ. ಆಗಾಗ, ಒಂದಲ್ಲಾ ಒಂದು ಕಾರಣಕ್ಕೆ ಕಿಟ್ಟಿಯನ್ನ ಟಾರ್ಗೆಟ್ ಮಾಡುವ ಇತರೆ ಸ್ಪರ್ಧಿಗಳು ನಿನ್ನೆ ಸುನಾಮಿ ಕಿಟ್ಟಿ ಮುಖಕ್ಕೆ ಮಸಿ ಬಳಿದು ಅವಮಾನಿಸಿದರು. [ವೀಕ್ಷಕರು ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್ ಇವರೇ.!]

ಮನೆ ಸದಸ್ಯರು ಪರಸ್ಪರ ಮನಸ್ಸು ಮತ್ತು ಹೃದಯ ಎಷ್ಟು ಅರಿತುಕೊಂಡಿದ್ದಾರೆ ಅನ್ನುವುದನ್ನ ಪರೀಕ್ಷಿಸುವುದಕ್ಕೆ 'ಬಿಗ್ ಬಾಸ್' ನಿನ್ನೆ 'ನಾಕ್ ಆಫ್' ಅನ್ನುವ ವಿಶೇಷ ಚಟುವಟಿಕೆ ನೀಡಿದ್ದರು. ಅದರಲ್ಲಿ ಬಹುತೇಕ ಮಂದಿ ಒಂದೊಂದು ಕಾರಣ ಕೊಟ್ಟು ಕಿಟ್ಟಿ ಮುಖಕ್ಕೆ ಮಸಿ ಬಳಿದರು. ಮುಂದೆ ಓದಿ.....

ಕಿಟ್ಟಿ ಮುಖಕ್ಕೆ ಮಸಿ ಬಳಿದವರ್ಯಾರು?

ಕಿಟ್ಟಿ ಮುಖಕ್ಕೆ ಮಸಿ ಬಳಿದವರ್ಯಾರು?

'ಮನೆಯಲ್ಲಿ ಹೆಚ್ಚು ಮನುಷ್ಯತ್ವ ಇಲ್ಲದ ವ್ಯಕ್ತಿ' ಅಂತ ಅಯ್ಯಪ್ಪ, 'ಮನೆಯಲ್ಲಿ ಗಲೀಜಾಗಿರುವ ವ್ಯಕ್ತಿ' ಅಂತ ಕೃತಿಕಾ, 'Worst Attitude' ಅಂತ ನೇಹ ಗೌಡ, 'ನಂಬಿಕೆಗೆ ಅರ್ಹ ಅಲ್ಲ' ಅಂತ ನೇತ್ರ, 'Crooked ವ್ಯಕ್ತಿ' ಅಂತ ಪೂಜಾ ಗಾಂಧಿ ಮತ್ತು 'ಮನೆಯಲ್ಲಿ ತಾವು ದ್ವೇಷಿಸುವ ವ್ಯಕ್ತಿ' ಅಂತ ನಟಿ ಶ್ರುತಿ ಕಾರಣ ನೀಡಿ ಸುನಾಮಿ ಕಿಟ್ಟಿ ಮುಖಕ್ಕೆ ಮಸಿ ಬಳಿದರು. [ಹುಚ್ಚ ವೆಂಕಟ್ ಔಟ್ ಆದ್ಮೇಲೆ 'ಬಿಗ್ ಬಾಸ್' TRP ಏನಾಯ್ತು?]

ಬೇಸರಗೊಂಡ ಕಿಟ್ಟಿ

ಬೇಸರಗೊಂಡ ಕಿಟ್ಟಿ

ಒಟ್ಟು ಆರು ಸದಸ್ಯರು ತಮಗೆ ಮಸಿ ಬಳಿದಿದ್ದಕ್ಕೆ ಸುನಾಮಿ ಕಿಟ್ಟಿ ಬೇಸರಗೊಂಡಿದ್ದರು. ಅದ್ರಲ್ಲೂ ನಟಿ ಶ್ರುತಿ ಮತ್ತು ನೇಹ ಗೌಡ ಕೊಟ್ಟ ಕಾರಣ ಅವರನ್ನ ಕೆರಳಿಸಿತ್ತು. [ನಟಿ ಶ್ರುತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಪಶ್ರುತಿ.!]

ಅಳಲು ತೋಡಿಕೊಂಡ ಕಿಟ್ಟಿ

ಅಳಲು ತೋಡಿಕೊಂಡ ಕಿಟ್ಟಿ

''ಇವತ್ತು ನನಗೆ ಮಸಿ ಬಳಿದಿದ್ದಾರೆ. ನಾಳೆ ಕರ್ನಾಟಕದ ಜನ ಅವರಿಗೆ ಮಸಿ ಬಳಿಯುತ್ತಾರೆ. ಇನ್ಮುಂದೆ ಸೈಲೆಂಟ್ ಆಗಿರಲ್ಲ. ಎಲ್ಲರ ಗ್ರಹಚಾರ ಬಿಡಿಸುತ್ತೇನೆ'' ಅಂತ ಕಿಟ್ಟಿ ಕ್ಯಾಮರಾ ಮುಂದೆ ತಮ್ಮ ಅಳಲನ್ನ ತೋಡಿಕೊಳ್ತಿದ್ರು.

ಕಿಟ್ಟಿ ಪರ ಆನಂದ್

ಕಿಟ್ಟಿ ಪರ ಆನಂದ್

'ಬಿಗ್ ಬಾಸ್' ಮನೆಯ ಅರ್ಧಕರ್ಧ ಸದಸ್ಯರು ಕಿಟ್ಟಿ ವಿರುದ್ಧ ಮಾತನಾಡಿದ್ದರೆ, ಮಾಸ್ಟರ್ ಆನಂದ್ ಮಾತ್ರ ''ಬಿಗ್ ಬಾಸ್' ಮನೆಯಲ್ಲಿರುವ ಅರ್ಹ ಸದಸ್ಯ'' ಅಂತ ಕಿಟ್ಟಿಗೆ ಹಾರ ಹಾಕಿದ್ರು.

ಶ್ರುತಿಗೆ ಬೇಸರ

ಶ್ರುತಿಗೆ ಬೇಸರ

ಇನ್ನೂ ಕೃತಿಕಾ ನಟಿ ಶ್ರುತಿಯನ್ನ 'ಅಮ್ಮ-ಅಮ್ಮ' ಅಂತ ಹೇಳಿಕೊಂಡು ಓಡಾಡುವುದನ್ನ ಖಂಡಿಸಿ ಮಾಸ್ಟರ್ ಆನಂದ್, ಕೃತಿಕಾ ಮುಖಕ್ಕೆ ಮಸಿ ಬಳಿದದ್ದು ನಟಿ ಶ್ರುತಿಗೆ ಬೇಸರವಾಯ್ತು.

ಕಣ್ಣೀರಿಟ್ಟ ಶ್ರುತಿ

ಕಣ್ಣೀರಿಟ್ಟ ಶ್ರುತಿ

''ಬಳ್ಳಿಗೆ ಹೂ ಭಾರವೇ. ತಾಯಿಗೆ ಮಕ್ಕಳು ಭಾರವೇ . I LOVE YOU ALL. ಇಂತಹ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ಅಂತದ್ರಲ್ಲಿ ನನಗೆ ಸಿಗುತ್ತಿದೆ. ದಯವಿಟ್ಟು ಅದನ್ನ ಕಡಿಮೆ ಮಾಡ್ಬೇಡಿ. ಕೃತಿಕಾ ನನ್ನ ಮಗಳಿದ್ದಹಾಗೆ'' ಅಂತ ನಟಿ ಶ್ರುತಿ ಕಣ್ಣೀರಿಟ್ಟರು.

ಪರಸ್ಪರ ಹಾರ ಬದಲಾಯಿಸಿಕೊಂಡ ರೆಹಮಾನ್-ನೇಹ ಗೌಡ

ಪರಸ್ಪರ ಹಾರ ಬದಲಾಯಿಸಿಕೊಂಡ ರೆಹಮಾನ್-ನೇಹ ಗೌಡ

ಇನ್ನೂ ಇದೇ ಚಟುವಟಿಕೆಯಲ್ಲಿ 'Best Attitude' ಅಂತ ರೆಹಮಾನ್ ಗೆ ನೇಹಾ ಹಾರ ಹಾಕಿದ್ರೆ, 'ಉತ್ತಮ ನಡತೆ ಇರುವ ಸದಸ್ಯ' ಅಂತ ನೇಹ ಗೌಡಗೆ ರೆಹಮಾನ್ ಹಾರ ಹಾಕಿದ್ದು ಮತ್ತೊಮ್ಮೆ ಎಲ್ಲರ ಕಣ್ಣರಳಿಸಿತು.

More from Filmibeat

English summary
'Indian' and 'Dancing Star' reality show winner Tsunami Kitty was inked by other 'Bigg Boss Kannada-3' Housemates. Read the article to know what all happened on Day 32 in Bigg Boss Kannada 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X