For Quick Alerts
  ALLOW NOTIFICATIONS  
  For Daily Alerts

  ಇಷ್ಟಾರ್ಥ ಸಿದ್ಧಿಯಾದರೂ, ರೆಹಮಾನ್-ಕೃತಿಕಾ ಅತ್ತಿದ್ದೇಕೆ?

  By Harshitha
  |

  ''ಮೊದಲು ಹೆಣ್ಮಕ್ಕಳಿಗೆ ಪ್ರಾಮುಖ್ಯತೆ ನೀಡಬೇಕಿತ್ತು. ಅವರಿಗೆ ಭಾವನೆಗಳು ಜಾಸ್ತಿ. ನಾನು ಭಾವನೆಗಳನ್ನ ತಡೆಯುತ್ತೇನೆ. ನನ್ನನ್ನ ಬಿಡಬಹುದಿತ್ತು. ಆಯ್ಕೆ ಮಾಡಬಾರದಿತ್ತು.'' ಅಂತ ಹೇಳ್ತಾಯಿದ್ದ ರೆಹಮಾನ್, ತಮ್ಮ 9 ತಿಂಗಳ ಮುದ್ದು ಮಗಳ ಫೋಟೋ ಕೈ ಬರುತ್ತಿದ್ದ ಹಾಗೆ ಅಳುವುದಕ್ಕೆ ಶುರುಮಾಡಿದರು.

  ಇನ್ನೂ ಕೃತಿಕಾ ಕೈಗೆ ಅಮ್ಮ ಹಾಗೂ ಗೆಳತಿ ಶಿವಾನಿ ಫೋಟೋ ಬರುವ ಮೊದಲೇ ಕಣ್ಣೀರಿಡಲು ಪ್ರಾರಂಭಿಸಿದ್ದರು.

  ಅಷ್ಟಕ್ಕೂ ಟಾಸ್ಕ್ ಏನು? 'ಬಿಗ್ ಬಾಸ್-3' ಸ್ಪರ್ಧಿಗಳ ಇಷ್ಟಾರ್ಥಗಳನ್ನ ಕೇಳಿ ತಿಳಿದುಕೊಂಡ 'ಬಿಗ್ ಬಾಸ್', 'ಇಷ್ಟಾರ್ಥ ಸಿದ್ಧಿರಸ್ತು' ಟಾಸ್ಕ್ ನೀಡಿದರು.

  ಟಾಸ್ಕ್ ಪ್ರಕಾರ, ಚಂದನ್ ಮತ್ತು ಸುನಾಮಿ ಕಿಟ್ಟಿ ಬಲೂನ್ ಗಳನ್ನ ಒಡೆದು ಅದರಲ್ಲಿ ಸಿಕ್ಕ ಚೀಟಿಗಳ ಪೈಕಿ, ಮೂರು ಚೀಟಿಗಳನ್ನ ಆಯ್ಕೆ ಮಾಡಬೇಕಿತ್ತು.

  ಸಿಕ್ಕ ಚೀಟಿಗಳನ್ನೆಲ್ಲಾ ಗುಡ್ಡೆ ಹಾಕಿದ ಮೇಲೆ ರೆಹಮಾನ್ ಮಗಳ ಭಾವಚಿತ್ರ, ಕೃತಿಕಾ ತಾಯಿ ಹಾಗೂ ಗೆಳತಿಯ ಭಾವಚಿತ್ರ ಮತ್ತು ಶ್ರುತಿ ಮಗಳ ದೂರವಾಣಿ ಕರೆ ಅಂತ ಬರೆದಿರುವ ಮೂರು ಚೀಟಿಗಳನ್ನ ಚಂದನ್ ಮತ್ತು ಸುನಾಮಿ ಕಿಟ್ಟಿ ಆಯ್ಕೆ ಮಾಡಿದರು. [ಹುಚ್ಚ ವೆಂಕಟ್ ಗೆ ಆವಾಝ್ ಹಾಕಿದ ರೆಹಮಾನ್ ಹೊರಗಟ್ಟಿ.!]

  ಅದರಂತೆ, ರೆಹಮಾನ್ ಗೆ ಮಗಳು ಸಮಾರಾ ಭಾವಚಿತ್ರ, ಕೃತಿಕಾಗೆ ತಾಯಿ ಹಾಗೂ ಗೆಳತಿಯ ಫೋಟೋ ಮತ್ತು ಶ್ರುತಿಗೆ ಮಗಳು ದೂರವಾಣಿ ಕರೆಮಾಡಿದರು. ಮಗಳ ಜೊತೆ ಮಾತನಾಡಿ ಶ್ರುತಿ ಆನಂದಭಾಷ್ಪ ಸುರಿಸಿದರು.

  ಇನ್ನೂ ರೆಹಮಾನ್ ಮತ್ತು ಕೃತಿಕಾ ಭಾವಚಿತ್ರ ಹಿಂದಿರುಗಿಸಬೇಕಿತ್ತು. ಇಬ್ಬರು ವಾಪಸ್ ಕೊಡುವುದಿಲ್ಲ ಅಂತ ಹಠ ಹಿಡಿದ ಮೇಲೆ 'ಬಿಗ್ ಬಾಸ್' ಮನೆ ಬಾಗಿಲುಗಳನ್ನ ಲಾಕ್ ಮಾಡಿ ಭಾವಚಿತ್ರ ವಾಪಸ್ ಕಸಿದುಕೊಂಡರು. ['ಬಿಗ್ ಬಾಸ್' ಮೇಲೆ ರೆಹಮಾನ್ ಮಾಡಿದ ಆರೋಪ ಏನು?]

  ಇದರಿಂದ ಭಾವುಕರಾದ ರೆಹಮಾನ್ ತಮ್ಮ ಬೇಸರವನ್ನ ಹೊರಹಾಕಿದರು. ಇನ್ನೂ ಕೃತಿಕಾ ಕಥೆ ಯಾಕ್ ಕೇಳ್ತೀರಾ ಬಿಡಿ.....

  English summary
  Bigg Boss house witnessed emotional outburst of TV9 Anchor Rehman and Actress Kruthika in 'Ishtartha Siddirasthu' task. Read the article to know what all happened on Day 37 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X