»   » ಒಂದೇ ಒಂದು ವೋಟ್ ನಿಂದ ಬಚಾವ್ ಆದ ನಟಿ ಶ್ರುತಿ!

ಒಂದೇ ಒಂದು ವೋಟ್ ನಿಂದ ಬಚಾವ್ ಆದ ನಟಿ ಶ್ರುತಿ!

Posted By:
Subscribe to Filmibeat Kannada

ಶನಿವಾರ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ನಟಿ ಶ್ರುತಿ ವಿರುದ್ಧ ಎಲ್ಲರೂ ದನಿ ಎತ್ತಿದ್ದನ್ನ ನೋಡಿದ್ರೆ, ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಟಿ ಶ್ರುತಿ ಹೆಸರು ಪಕ್ಕಾ ಅಂತ 'ಬಿಗ್ ಬಾಸ್' ವೀಕ್ಷಕರು ಭಾವಿಸಿದ್ದರು.

ಆದ್ರೆ, ವೀಕ್ಷಕರ ಊಹೆ ಉಲ್ಟಾ ಆಗಿದೆ. ಒಂದೇ ಒಂದು ವೋಟ್ ನಿಂದಾಗಿ ನಟಿ ಶ್ರುತಿ ಈ ವಾರ ಡೇಂಜರ್ ಝೋನ್ ನಿಂದ ಬಚಾವ್ ಆಗಿದ್ದಾರೆ. ['ಅಮ್ಮ' ಶ್ರುತಿ - 'ಅಕ್ಕ' ಸುಷ್ಮಾ ನಡುವೆ 'ಬಿಗ್' ವಾರ್.!]

ಮೊಟ್ಟ ಮೊದಲ ಬಾರಿಗೆ ಕ್ರಿಕೆಟರ್ ಅಯ್ಯಪ್ಪ ಎಲಿಮಿನೇಷನ್ ಭೀತಿ ಎದುರಿಸುವಂತಾಗಿದೆ. ಜೊತೆಗೆ ಚಂದನ್, ಕೃತಿಕಾ, ಮಿತ್ರ ಮತ್ತು ರೆಹಮಾನ್ ಈ ವಾರ ನಾಮಿನೇಟ್ ಆಗಿದ್ದಾರೆ.

ಎಲಿಮಿನೇಷನ್ ಗೆ ಯಾರ್ಯಾರು ಯಾರ್ಯಾರನ್ನ ನಾಮಿನೇಟ್ ಮಾಡಿದರು ಎಂಬುದನ್ನು ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಅಯ್ಯಪ್ಪ ಈ ಬಾರಿ ಮಿಸ್ ಮಾಡ್ಲಿಲ್ಲ!

ಕನ್ ಫೆಶನ್ ರೂಮ್ ಗೆ ಎಂಟ್ರಿಕೊಡುತ್ತಲೇ ಕ್ರಿಕೆಟರ್ ಎನ್.ಸಿ.ಅಯ್ಯಪ್ಪ ನಟಿ ಶ್ರುತಿ ಮತ್ತು ಆಪ್ತ ಗೆಳೆಯ ಚಂದನ್ ಹೆಸರು ತೆಗೆದುಕೊಂಡರು. [ಡವ್ ರಾಣಿ ಕೃತಿಕಾ-ಶ್ರುತಿಗೆ ವೋಟ್ ಮಾಡ್ಬೇಡಿ ಪ್ಲೀಸ್!]

ಕೃತಿಕಾಗೆ ಅಯ್ಯಪ್ಪ ಅಷ್ಟಕಷ್ಟೆ

ನಟಿ ಕೃತಿಕಾ, ಅಯ್ಯಪ್ಪ ಮತ್ತು ರೆಹಮಾನ್ ರವರನ್ನ ನಾಮಿನೇಟ್ ಮಾಡಿದರು. ['ಅಮ್ಮ' ಶ್ರುತಿ ಬಗ್ಗೆ ಗರಂ ಆಗಿರುವ 'ಅಕ್ಕ' ಸುಷ್ಮಾ]

ರೆಹಮಾನ್ ಆಯ್ಕೆ...

ಚಂದನ್ ಮತ್ತು ಕೃತಿಕಾರನ್ನ ರೆಹಮಾನ್ ನಾಮಿನೇಟ್ ಮಾಡಿದರು.

ಪೂಜಾ ಗಾಂಧಿ ವೋಟ್ ಯಾರಿಗೆ?

ಚಂದನ್ ಮತ್ತು ಶ್ರುತಿ ರವರನ್ನ ಪೂಜಾ ಗಾಂಧಿ 'ಬಿಗ್ ಬಾಸ್' ಮನೆಯಿಂದ ಹೊರಹಾಕಲು ಇಚ್ಛಿಸಿದರು.

ಮಿತ್ರ ಚಾಯ್ಸ್...

ಶ್ರುತಿ ಮತ್ತು ರೆಹಮಾನ್ ರನ್ನ ಮಿತ್ರ ನಾಮಿನೇಟ್ ಮಾಡಿದರು.

ಸುನಾಮಿ ಕಿಟ್ಟಿ

ಸುನಾಮಿ ಕಿಟ್ಟಿ ಆಯ್ಕೆ - ರೆಹಮಾನ್, ಅಯ್ಯಪ್ಪ

ಸುಷ್ಮಾ ವೀರ್

ಸುಷ್ಮಾ ವೀರ್ ಆಯ್ಕೆ - ಕೃತಿಕಾ, ಚಂದನ್

ಗೌತಮಿ

ಗೌತಮಿ ಆಯ್ಕೆ - ರೆಹಮಾನ್, ಕೃತಿಕಾ

ಚಂದನ್

ಚಂದನ್ ಆಯ್ಕೆ - ಪೂಜಾ ಗಾಂಧಿ, ಅಯ್ಯಪ್ಪ

ಶ್ರುತಿ

ಶ್ರುತಿ ಆಯ್ಕೆ - ಅಯ್ಯಪ್ಪ, ಕೃತಿಕಾ

ಮಾಸ್ಟರ್ ಆನಂದ್

ಮಾಸ್ಟರ್ ಆನಂದ್ ಆಯ್ಕೆ - ಚಂದನ್, ಕೃತಿಕಾ

ಕ್ಯಾಪ್ಟನ್ ಆಯ್ಕೆ ಯಾರು?

ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಭಾವನಾ ಬೆಳಗೆರೆ ಮಿತ್ರರವರನ್ನ ನೇರವಾಗಿ ನಾಮಿನೇಟ್ ಮಾಡಿದರು.

ಒಂದೇ ವೋಟ್ ನಿಂದ ಬಚಾವ್ ಆದ ಶ್ರುತಿ!

ಮಿತ್ರ, ಪೂಜಾ ಗಾಂಧಿ ಮತ್ತು ಅಯ್ಯಪ್ಪ ನಟಿ ಶ್ರುತಿಯನ್ನ ನಾಮಿನೇಟ್ ಮಾಡಿದರು. ಆದ್ರೆ ಶ್ರುತಿಗೆ ಕೇವಲ ಮೂರು ವೋಟ್ ಬಿದ್ದ ಕಾರಣ ಈ ವಾರ ಎಲಿಮಿನೇಷನ್ ಭೀತಿಯಿಂದ ಪಾರಾಗಿದ್ದಾರೆ.

ಹೆಚ್ಚು ವೋಟ್ ಚಂದನ್ ಮತ್ತು ಕೃತಿಕಾಗೆ!

ನಟ ಚಂದನ್ ಮತ್ತು ಕೃತಿಕಾಗೆ ತಲಾ 5 ವೋಟ್ ಗಳು ಬಿದ್ದ ಕಾರಣ ನಾಮಿನೇಟ್ ಆದರು. ಇನ್ನೂ ಭಾವನಾ 'ಕೃಪಾ ಕಟಾಕ್ಷ'ದಿಂದ ಮಿತ್ರ ನೇರವಾಗಿ ನಾಮಿನೇಟ್ ಆದರು.

ಹೊಸ ಎಂಟ್ರಿ ಅಯ್ಯಪ್ಪ!

ನಾಲ್ಕು ವೋಟ್ ಪಡೆದ ಪರಿಣಾಮ ಕ್ರಿಕೆಟರ್ ಅಯ್ಯಪ್ಪ ಮೊಟ್ಟ ಮೊದಲ ಬಾರಿ ನಾಮಿನೇಟ್ ಆಗಿದ್ದಾರೆ. ಇನ್ನೂ ರೆಹಮಾನ್ ಕೂಡ 4 ವೋಟ್ ಪಡೆದು ಡೇಂಜರ್ ಝೋನ್ ನಲ್ಲಿದ್ದಾರೆ.

ನಿಮ್ಮ ವೋಟ್ ಯಾರಿಗೆ?

ಮಿತ್ರ, ಅಯ್ಯಪ್ಪ, ಚಂದನ್, ಕೃತಿಕಾ ಮತ್ತು ರೆಹಮಾನ್....ಈ ಐವರಲ್ಲಿ ನೀವು ಯಾರನ್ನ 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ಇಚ್ಛಿಸುತ್ತೀರಾ ಎಂಬುದನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....

    English summary
    Kannada Actor Chandan, Kruthika, Rehman, Mithra and Aiyappa are nominated for this week elimination. Check who nominated whom in Bigg Boss Kannada 3.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada