'ಅಮ್ಮ' ಶ್ರುತಿ ಬಗ್ಗೆ ಗರಂ ಆಗಿರುವ 'ಅಕ್ಕ' ಸುಷ್ಮಾ
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ನಟಿ ಶ್ರುತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಪಶ್ರುತಿ ಕೇಳಿ ಬಂತು.
ನಟಿ ಶ್ರುತಿ ''ಕುರಿಮಂದೆ ಕಾಯುವ ಲೀಡರ್ ಆಗುತ್ತಿದ್ದಾರೆ'' ಅಂತ ಸುಷ್ಮಾ ವೀರ್ ನೇರವಾಗಿ ಹೇಳಿದ್ರು. ಅಲ್ಲಿಂದ ಶುರುವಾದ ಶ್ರುತಿ-ಸುಷ್ಮಾ ಜಟಾಪಟಿ ಇನ್ನೂ ನಿಂತಿಲ್ಲ. ['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್.! ನಟಿ ಶ್ರುತಿಗೆ ಕಷ್ಟಕಷ್ಟ!]
ಸುದೀಪ್ ಮುಂದೆ ಶ್ರುತಿ ಆಡಿದ ಮಾತುಗಳನ್ನಿಟ್ಟುಕೊಂಡು ಸುಷ್ಮಾ, ಅಯ್ಯಪ್ಪ ಬಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. 50 ನೇ ದಿನ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಶ್ರುತಿ ಬಗ್ಗೆ ಸುಷ್ಮಾ ಮಾಡಿದ ಕಾಮೆಂಟ್ ಗಳನ್ನ ಅವರ ಮಾತುಗಳಲ್ಲೇ ಓದಿ....ಕೆಳಗಿರುವ ಸ್ಲೈಡ್ ಗಳಲ್ಲಿ....

ಸುಷ್ಮಾ ಅಭಿಪ್ರಾಯವೇನು?
''ನಿಜವಾಗಲೂ ನಂಗೆ ಶ್ರುತಿ ಬಗ್ಗೆ ನಂಬಿಕೆ ಕಡಿಮೆ ಆಯ್ತು. ಅದನ್ನ ನಾನು ಅಲ್ಲೂ ಹೇಳಿದ್ದೆ. ಇಲ್ಲೂ ಹೇಳ್ತಾಯಿದ್ದೀನಿ. ಯಾಕಂದ್ರೆ ಅವರು ಆಟಕ್ಕೆ ಅಂತ ಇಳಿದರೆ ಯಾವ ಮಟ್ಟಕ್ಕೆ ಇಳೀತಾರೆ ಅಂತ ನನಗೂ ಗೊತ್ತಿದೆ'' - ಸುಷ್ಮಾ ವೀರ್ ['ಅಮ್ಮ' ಶ್ರುತಿ - 'ಅಕ್ಕ' ಸುಷ್ಮಾ ನಡುವೆ 'ಬಿಗ್' ವಾರ್.!]

ಕ್ಯಾಮರಾ ನೋಡಿ ಶ್ರುತಿ ಮಾತನಾಡುತ್ತಾರಾ?
''ಕ್ಯಾಮರಾ ಎಲ್ಲಿ ನಾನ್ ಸಿಂಕ್ ಆಗುತ್ತೋ. ಅವಾಗ ಕಿವಿಲಿ ಬಂದು ಮಾತನಾಡುತ್ತಾರೆ'' - ಸುಷ್ಮಾ ವೀರ್ ['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್! ವೀಕ್ಷಕರ ಅಭಿಪ್ರಾಯವೇನು?]

ಭಾವನಾ ಮನವರಿಕೆ ಕಾರ್ಯ
''ನಾನು ಗೌರವದಿಂದ ಅಮ್ಮ ಅಂತ ಕರೀತೀನಿ. ಇವತ್ತಿನ ವರೆಗೂ ನೀವು ನನಗೆ ಪುಟ್ಟ, ಚಿನ್ನಿ ಅಂತ ಕರೆದಿಲ್ಲ. ಬಾನಿ ಬನ್ನಿ, ಹೋಗಿ ಅಂತ ಕರೆದಿದ್ದೀರಾ. ಅದು ಕೇಳುವುದಕ್ಕೆ ಒಂದೊಂದು ಬಾರಿ ಇಷ್ಟ ಆಗುತ್ತೆ. ಇನ್ನೊಂದ್ಸಲಿ ಬೇರೆ ತರಹ ಅನ್ಸುತ್ತೆ. ನಾನು ಅದಕ್ಕೆ ನಿಮಗೆ ಹೇಳಿದ್ದು, ಹಿರಿತನ ಅನ್ನೋದು ಮುಂದಕ್ಕೆ ನಿಮಗೆ ಮುಳುವಾಗಬಹುದು'' ಅಂತ ಶ್ರುತಿಗೆ ಭಾವನಾ ಬೆಳಗೆರೆ ಮನವರಿಕೆ ಮಾಡುತ್ತಿದ್ದರು.

ಕಿಲಾಡಿ ಯಾರು?
''ನನ್ನ ಬಗ್ಗೆ ನಾನು ಮುಚ್ಚಿಟ್ಟುಕೊಂಡಿಲ್ಲ ಯಾವತ್ತೂ. ಮುಂಚೆ ಇಂದ್ಲೂ ನಾನು ವಿವಾದಕ್ಕೆ ಗುರಿಯಾಗಿರುವವಳು. ನೀವು ಆಗಿರುವ ವಿಷಯವನ್ನ ಇಲ್ಲ, ಇಲ್ಲ ಅಂತ ಇಟ್ಕೊಂಡು ಮೊದಲಿನಿಂದಲೂ ವಾದ ಮಾಡಿ, ಸಾಧಿಸಿ, ಅಂತವರನ್ನೆಲ್ಲಾ ಸುಳ್ಳಿ ಅಂತ ಹೇಳಿಸಿದವರು ನೀವು. ಅಂತಹ ದೊಡ್ಡ ಕಿಲಾಡಿ ನೀವು. ಇಲ್ಲಿರುವ ಮಕ್ಕಳು ಯಾರು ಪಾಪ...?'' - ಸುಷ್ಮಾ ವೀರ್

ಎಲ್ಲಾ ನಾಟಕ
''ಪೊಲಿಟಿಕಲ್ ಪಾರ್ಟಿಯಲ್ಲಿ ಸುಳ್ಳು ಅಂತ ಸಾಧಿಸಿದವರು ಇವರು. ಇವರಿಗೆಲ್ಲಾ ಯಾವ ಲೆಕ್ಕಾ. ಯಾವ ಲೆವೆಲ್ ಗೆ ಬೇಕಾದರೂ, ಎಷ್ಟು ದಿನ ಬೇಕಾದರೂ ನಾಟಕ ಮಾಡ್ತಾರೆ'' - ಸುಷ್ಮಾ ವೀರ್

ಏನಾಗುತ್ತೋ...ಆಗಲಿ..!
''ಇದುವರೆಗೂ ನಾನು ಏನೇನು ಮಾತನಾಡಿದ್ದೇನೋ, ಅದೆಲ್ಲಾ ಎಲ್ಲರ ಮನಸ್ಸಲ್ಲೂ ಇದ್ದಿದ್ದೆ. ನಾನು ಜೋರಾಗಿ ಹೇಳಿದ್ದೀನಿ ಅಷ್ಟೆ. ಸುಮ್ಮನ್ನೆ ಅದನ್ನ ಕೆಣಕುತ್ತಿದ್ದರೆ, ಅದೇನಾಗುತ್ತೋ ಆಗಲಿ ಅಂತ ನಾನು ನಿಂತುಬಿಡುತ್ತೇನೆ. ನನಗೆ ಹಿಂದಿಲ್ಲ, ಮುಂದಿಲ್ಲ'' - ಸುಷ್ಮಾ ವೀರ್

ನಿಮಗೆ ಮಾತ್ರನಾ?
''ನನಗೊಂದು ಮಗಳಿದ್ದಾಳೆ ಅಂದ್ರೆ ಬೇರೆಯವರು ಬೇರೆಯವರಿಗೆ ಮಗಳಾಗುವುದಿಲ್ಲವಾ? ನಿಮಗೆ ಒಬ್ಬರಿಗೇನಾ ತಾಯಿತನ ಇರೋದು'' - ಶ್ರುತಿ

ಗೆಲ್ಲುವುದಕ್ಕೆ ಬಂದಿರೋದು!
''ಬಂದಿರುವುದು ಗೆಲ್ಲುವುದಕ್ಕೆ. ಆದ್ರೆ ವಿಷಯವನ್ನ Manipulate ಮಾಡೋದು ಯಾಕೆ. ಬೆಳೆಯುತ್ತಿರುವ ಮಗಳು ಇದ್ದಾಳೆ. ಬಿಟ್ಟು ಬಾ ಅಂತ ಯಾರೂ ಹೇಳಿಲ್ಲ. ಬಿಟ್ಟು ಬಂದಿದ್ದೀಯಾ ಅಂದ್ರೆ ಗೇಮ್ ಗೆಲ್ಲುವುದಕ್ಕೆ ಬಂದಿರುವುದು'' - ಸುಷ್ಮಾ ವೀರ್


Click it and Unblock the Notifications











