»   » ಆರ್.ಜೆ ನೇತ್ರಗೆ ಮೊಟ್ಟೆ ಹೊಡೆದ 'ಬಿಗ್ ಬಾಸ್' ಮನೆ ಸದಸ್ಯರು

ಆರ್.ಜೆ ನೇತ್ರಗೆ ಮೊಟ್ಟೆ ಹೊಡೆದ 'ಬಿಗ್ ಬಾಸ್' ಮನೆ ಸದಸ್ಯರು

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಮುಗಿದಿದೆ. 'ಕಳ್ಳ-ಪೊಲೀಸ್' ಆಟಕ್ಕೆ ಫುಲ್ ಸ್ಟಾಪ್ ಬಿದ್ದಮೇಲೆ ಬರೋಬ್ಬರಿ 5000 ಲಕ್ಷುರಿ ಬಜೆಟ್ ಪಾಯಿಂಟ್ಸ್ ಗಳಿಸಿದ್ದಾರೆ 'ಬಿಗ್ ಬಾಸ್' ಮನೆ ಸದಸ್ಯರು.

ಅಲ್ಲಿಗೆ, ವಾರದ ಕಥೆ ಮುಗಿಯಿತು ಅನ್ನುವ ಹೊತ್ತಿಗೆ 'ಬಿಗ್ ಬಾಸ್' ಎಲ್ಲರಿಗೂ ಕ್ರೇಜಿ ಚಾಲೆಂಜ್ ನೀಡಿದರು. ['ಬಿಗ್ ಬಾಸ್-3 ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಮನೆಯ ಕ್ಯಾಪ್ಟನ್ ಅಯ್ಯಪ್ಪ ಹೊರತು ಪಡಿಸಿ, 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರು ವಿಚಿತ್ರ ಚಾಲೆಂಜ್ ಸ್ವೀಕರಿಸಿ, ಕೊಟ್ಟಿರುವ ಸವಾಲನ್ನು ಪೂರ್ಣಗೊಳಿಸಬೇಕು.

ಅದರಲ್ಲಿ ನೇತ್ರ 'ಬಿಗ್ ಬಾಸ್' ಮನೆಯ ಎಲ್ಲಾ ಸ್ಪರ್ಧಿಗಳಿಂದ ಮೊಟ್ಟೆ ಹೊಡೆಸಿಕೊಂಡರು. ಶ್ರುತಿ ಕಾಲಿನಿಂದ ಚಂದನ್ ಮೇಕಪ್ ಮಾಡಿಸಿಕೊಂಡರು. ಮುಂದೆ ಓದಿ.....

ಸುಷ್ಮಾ ವೀರ್ ಗೆ ಸಿಕ್ಕ ಚಾಲೆಂಜ್ ಏನು?

'ಬಿಗ್ ಬಾಸ್' ಮುಂದಿನ ಆದೇಶದವರೆಗೂ ಸುಷ್ಮಾ ವೀರ್ ಈಜುಕೊಳದಲ್ಲಿ ಲಾಫಿಂಗ್ ಬುದ್ಧನಂತೆ ನಿಲ್ಲಬೇಕಿತ್ತು.

ಪಾಪ...ನೇತ್ರ....

'ಹೊಡಿಮಗ ಹೊಡಿಮಗ' ಹಾಡು ಕೇಳಿಸಿದಾಗಲೆಲ್ಲಾ 'ಬಿಗ್ ಬಾಸ್' ಮನೆ ಸದಸ್ಯರು ನೇತ್ರ ತಲೆಗೆ ಮೊಟ್ಟೆ ಹೊಡೆಯಬೇಕಿತ್ತು. 'ಬಿಗ್ ಬಾಸ್' ಮುಂದಿನ ಆದೇಶ ನೀಡುವವರೆಗೂ ನೇತ್ರ ತಲೆ ತೊಳೆಯುವ ಹಾಗಿರ್ಲಿಲ್ಲ.

ರೊಚ್ಚಿಗೆದ್ದ ಕಿಟ್ಟಿ

ಯಾವುದು ಬರಬಾರದು ಅಂತ ಕಿಟ್ಟಿ ಅಂದುಕೊಂಡಿದ್ದರೋ, ಅದೇ ಚಾಲೆಂಜ್ ಕಿಟ್ಟಿಗೆ ಸಿಕ್ತು. ಪೂಜಾ ಗಾಂಧಿ ಅವರಿಂದ ಕಿಟ್ಟಿ ಹೇರ್ ಕಟ್ ಮಾಡಿಸಿಕೊಳ್ಳಬೇಕಿತ್ತು. ಇಬ್ಬರ ನಡುವೆ ವಾದ-ವಿವಾದ-ವಾಗ್ವಾದವಾದ ನಂತ್ರ ಕಿಟ್ಟಿ ಹೇರ್ ಕಟ್ ಮಾಡಿಸಿಕೊಂಡು ಸವಾಲು ಪೂರ್ಣಗೊಳಿಸಿದರು.

'ಮಮ್ಮಿ' ಕೃತಿಕಾ

ಕಣ್ಣು-ಬಾಯಿ ಬಿಟ್ಟು ಇಡೀ ದೇಹಕ್ಕೆ ಬಿಳಿ ಪಟ್ಟಿ ಕಟ್ಟಿಕೊಳ್ಳುವ ಚಾಲೆಂಜ್ ಸ್ವೀಕರಿಸಿದರು ಕೃತಿಕಾ.

ಚಳಿ ತಾಳದ ರೆಹಮಾನ್

'ಚಳಿ ಚಳಿ ತಾಳೆನು' ಹಾಡು ಕೇಳಿಸಿದಾಗೆಲ್ಲಾ ರೆಹಮಾನ್ ಈಜುಕೊಳಕ್ಕೆ ಹೋಗಿ, ನೀರಲ್ಲಿ ಮುಳುಗಿ ಬಟ್ಟೆ ಬದಲಾಯಿಸಬೇಕಿತ್ತು.

ಆನಂದ್ ಗೆ ಸಿಕ್ಕ ಸವಾಲು

'ಬಿಗ್ ಬಾಸ್' ಮನೆಯ ತಮ್ಮ ಇಷ್ಟದ ಸ್ಪರ್ಧಿಯೊಂದಿಗೆ ಆನಂದ್ ಪ್ಯಾಂಟ್ ಹಂಚಿಕೊಳ್ಳಬೇಕಿತ್ತು. ಆನಂದ್ ಮಿತ್ರರವರೊಂದಿಗೆ ಪ್ಯಾಂಟ್ ಹಂಚಿಕೊಳ್ಳುವುದಕ್ಕೆ ನಿರ್ಧರಿಸಿದರು.

ಚಿತ್ರಾನ್ನ ಚಂದನ್

'ಚಿತ್ರಾನ್ನ ಚಿತ್ರಾನ್ನ' ಹಾಡು ಕೇಳಿಸಿದಾಗೆಲ್ಲಾ ಟೇಬಲ್ ಮೇಲೆ ಇಟ್ಟಿರುವ 10 ಟೊಮೋಟೋ ಹಣ್ಣುಗಳನ್ನ ಹಣೆಯಿಂದ ಜಜ್ಜಬೇಕು. 'ಬಿಗ್ ಬಾಸ್' ಆದೇಶ ನೀಡುವವರೆಗೂ ಚಂದನ್ ಮುಖ ತೊಳೆಯುವಂತಿರಲಿಲ್ಲ.

ಪೂಜಾ ಗಾಂಧಿ ಪಾಡು!

ಕೈಯನ್ನು ಬಳಸದೆ ಬಾಯಿಂದ ಮಾತ್ರ ನಟಿ ಪೂಜಾ ಗಾಂಧಿ ಊಟ ಸೇವಿಸಬೇಕಿತ್ತು.

ಮಿತ್ರ ಚಾಲೆಂಜ್

'ಬಿಗ್ ಬಾಸ್' ನಿಂದ ಆದೇಶ ಬರುವವರೆಗೂ ಮಿತ್ರ ಹಿಮ್ಮುಖವಾಗಿ ನಡೆಯಬೇಕಿತ್ತು.

'ಬೌಬೌ' ಗೌತಮಿ

ಸಂಭಾಷಣೆ ಶುರುಮಾಡುವ ಮೊದಲು 'ಬೌಬೌ' ಅಂತ ಗೌತಮಿ ಹೇಳಬೇಕು. ಅದು ವಿಫಲವಾಗಿದ್ದಕ್ಕೆ ನೇತ್ರಗಿದ್ದ ಮೊಟ್ಟೆ ಹೊಡೆಸಿಕೊಳ್ಳುವ ಚಾಲೆಂಜ್ ಗೌತಮಿಗೆ ವರ್ಗಾವಣೆ ಆಯ್ತು.

ಕಪ್ಪೆ ಆದ ಭಾವನಾ

ಭಾವನಾ ಕಪ್ಪೆಯಂತೆ ಜಿಗಿಯಬೇಕಿತ್ತು.

ಮೇಕಪ್ ಮಾಡಿದ ಶ್ರುತಿ

'ಬಿಗ್ ಬಾಸ್' ಮನೆಯ ಒಬ್ಬ ಸದಸ್ಯರನ್ನ ಆಯ್ಕೆ ಮಾಡಿ ನಟಿ ಶ್ರುತಿ ಕಾಲಿನಿಂದ ಮೇಕಪ್ ಮಾಡಬೇಕಿತ್ತು. ಅದಕ್ಕೆ ಶ್ರುತಿ ಚಂದನ್ ರನ್ನ ಆಯ್ಕೆ ಮಾಡಿ ಮೇಕಪ್ ಮಾಡಿದರು.

ಮನೆ ಕ್ಯಾಪ್ಟನ್ ಆದ ಭಾವನಾ

'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರು ಭಾವನಾ ಬೆಳಗೆರೆಯನ್ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದರು.

English summary
Bigg Boss contestants witnessed crazy challenge. Read the article to know what all happened on Day 47 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada