For Quick Alerts
  ALLOW NOTIFICATIONS  
  For Daily Alerts

  ಕನ್ನಡ 'ಬಿಗ್ ಬಾಸ್' ಸೀಸನ್ 3 ಗೆಲುವಿನ ಪಟ್ಟ ಯಾರಿಗೆ?

  By Harshitha
  |

  ಈ ವಾರ 'ಬಿಗ್ ಬಾಸ್' ಮನೆಯಿಂದ 'ಇವರು' ಹೊರಗೆ ಹೋಗಲೇಬೇಕು. ಫೈನಲ್ ಗೆ ಅಯ್ಯಪ್ಪ ಬರಬಾರದು, ಸುನಾಮಿ ಕಿಟ್ಟಿ ಸೇಫ್ ಆಗ್ಬೇಕು....ಅಂತ ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಇಷ್ಟು ದಿನ ಆಗ್ರಹಿಸುತ್ತಿದ್ದ ಕನ್ನಡ ಜನತೆ, ಇದೀಗ 'ಬಿಗ್ ಬಾಸ್-3' ವಿನ್ನರ್ ಯಾರಾಗಬೇಕು ಅಂತ ನಿರ್ಧಾರ ಮಾಡಿದ್ದಾರೆ.

  ಎಲ್ಲರಿಗೂ ಸಖತ್ ಮನರಂಜನೆ ನೀಡಿರುವ ಮಾಸ್ಟರ್ ಆನಂದ್ 'ಬಿಗ್ ಬಾಸ್-3' ವಿನ್ನರ್ ಆಗುವುದಕ್ಕೆ ಲಾಯಕ್ಕು ಅಂತ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

  ನಟಿ ಶ್ರುತಿ, ನಟಿ ಪೂಜಾ ಗಾಂಧಿ, ರೆಹಮಾನ್ ಮತ್ತು ನಟ ಚಂದನ್ ಗೆ ಹೋಲಿಸಿದರೆ ಮಾಸ್ಟರ್ ಆನಂದ್ 'ದಿ ಬೆಸ್ಟ್' ಅನ್ನೋರೇ ಮೆಜಾರಿಟಿ. ಕೆಲ ಹಾರ್ಡ್ ಕೋರ್ ಫ್ಯಾನ್ಸ್ ಮಾತ್ರ ಚಂದನ್, ಶ್ರುತಿ, ಪೂಜಾ ಗಾಂಧಿ ಗೆ ಸಪೋರ್ಟ್ ಮಾಡುತ್ತಿದ್ದಾರೆ. [ನಟಿ ಶ್ರುತಿ 'ಬಿಗ್ ಬಾಸ್' ಮನೆಗೆ ಬಂದಿರುವುದು ಯಾಕೆ ಗೊತ್ತಾ?]

  ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ 'ಬಿಗ್ ಬಾಸ್-3' ವೀಕ್ಷಕರು ಮಾಡಿರುವ ಕಾಮೆಂಟ್ ಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

  ಮಾಸ್ಟರ್ ಆನಂದ್ ನ ವಿನ್ನರ್ ಮಾಡಿ....

  ಮಾಸ್ಟರ್ ಆನಂದ್ ನ ವಿನ್ನರ್ ಮಾಡಿ....

  ನ್ಯಾಯ ಅನ್ನೋದು ಇದ್ರೆ ಮಾಸ್ಟರ್ ಆನಂದ್ ಅವರನ್ನ ಗೆಲ್ಲಿಸಿ, ಇಲ್ಲಾಂದ್ರೆ ಮುಂದಿನ 'ಬಿಗ್ ಬಾಸ್' ನೋಡೋದೇ ಇಲ್ಲ ಅಂತಿದ್ದಾರೆ ವೀಕ್ಷಕರು. [ಇವರೆಲ್ಲರಿಗೂ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ಮುಖ್ಯ! ಯಾಕೆ ಗೊತ್ತಾ?]

  ಚಂದನ್ ನ ಗೆಲ್ಲಿಸಿ.!

  ಚಂದನ್ ನ ಗೆಲ್ಲಿಸಿ.!

  ರೆಹಮಾನ್ ವಿನ್ ಆದರೆ ವೇಸ್ಟ್. ಆನಂದ್, ಶ್ರುತಿ ಮತ್ತು ಪೂಜಾ ಗಾಂಧಿ ಆಗಲೇ ಜನಪ್ರಿಯತೆ ಪಡೆದಿದ್ದಾರೆ. 'ಬಿಗ್ ಬಾಸ್' ಟೈಟಲ್ ನಿಂದ ಲೈಫ್ ಚೇಂಜ್ ಆಗ್ಬೇಕು ಅಂದ್ರೆ ಚಂದನ್ ಗೆಲ್ಲಬೇಕು ಅನ್ನೋದು ಅವರ ಅಭಿಮಾನಿಗಳ ಆಶಯ. ಅಂದ್ಹಾಗೆ, ಈ ಕಾಮೆಂಟ್ ಗೆ ಸಿಕ್ಕಿರುವ ಲೈಕ್ಸ್ ಎಷ್ಟು ಅಂತ ಒಮ್ಮೆ ನೋಡಿ....

  ಆನಂದ್ 'ದಿ ಬೆಸ್ಟ್'

  ಆನಂದ್ 'ದಿ ಬೆಸ್ಟ್'

  ಸದಾ ಮನರಂಜನೆ ನೀಡುತ್ತಾ, ಯಾರೊಂದಿಗೂ ಜಗಳ ಮಾಡಿಕೊಳ್ಳದ ಆನಂದ್ 'ದಿ ಬೆಸ್ಟ್' ಅನ್ನೋದು ವೀಕ್ಷಕರ ಅಭಿಪ್ರಾಯ.

  ಆನಂದ್ ಗೆದ್ದರೆ ಸಂತೋಷ!

  ಆನಂದ್ ಗೆದ್ದರೆ ಸಂತೋಷ!

  ಮಾಸ್ಟರ್ ಆನಂದ್ 'ಬಿಗ್ ಬಾಸ್-3' ಗೆದ್ದೇ ಗೆಲ್ಲುತ್ತಾರೆ ಅನ್ನೋ ವಿಶ್ವಾಸ ಕೆಲವರಿಗೆ.

  ಫಿಕ್ಸಿಂಗ್ ಆಗಿದ್ಯಾ?

  ಫಿಕ್ಸಿಂಗ್ ಆಗಿದ್ಯಾ?

  'ಬಿಗ್ ಬಾಸ್-3' ವಿನ್ನರ್ ಆಗಿ ರೆಹಮಾನ್ ಫಿಕ್ಸ್ ಆಗಿದ್ದಾರೆ ಅಂತ ಆಗಲೇ ಯಾರೋ ಗುಲ್ಲೆಬ್ಬಿಸಿದ್ದಾರೆ.

  ಚಂದನ್ ವಿನ್ನರ್ ಅನ್ನೋದು ಕನ್ಫರ್ಮ್?

  ಚಂದನ್ ವಿನ್ನರ್ ಅನ್ನೋದು ಕನ್ಫರ್ಮ್?

  ಇನ್ನೂ ಕೆಲವರು 'ಬಿಗ್ ಬಾಸ್-3' ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಚಂದನ್ ವಿನ್ನರ್, ಪೂಜಾ ಗಾಂಧಿ ರನ್ನರ್ ಅಂತ ಹೇಳ್ತಾವ್ರೆ ಸ್ವಾಮಿ.!!!!

  ಶ್ರುತಿ ಅಭಿಮಾನಿಗಳ ಮಾತು....

  ಶ್ರುತಿ ಅಭಿಮಾನಿಗಳ ಮಾತು....

  ನಟಿ ಶ್ರುತಿ ಅಭಿಮಾನಿಗಳು ಕೂಡ ಸುಮ್ಮನೆ ಕೂತಿಲ್ಲ. ತಮ್ಮ ನೆಚ್ಚಿನ ನಟಿ ಗೆಲ್ಲಬೇಕು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುಮಾಡಿದ್ದಾರೆ.

  ಶ್ರುತಿ ನಡವಳಿಕೆ ಅತ್ತ್ಯುತ್ತಮ

  ಶ್ರುತಿ ನಡವಳಿಕೆ ಅತ್ತ್ಯುತ್ತಮ

  ಯಾರು ಏನೇ ಅಂದ್ರೂ, ಇತರರಿಗಿಂತ ನಟಿ ಶ್ರುತಿ ನಡವಳಿಕೆ ಅತ್ತ್ಯುತ್ತಮ. ಹೀಗಾಗಿ ಶ್ರುತಿ ಗೆಲ್ಲಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ.

  ಆನಂದ್ ಯಾಕೆ ಗೆಲ್ಲಬೇಕು?

  ಆನಂದ್ ಯಾಕೆ ಗೆಲ್ಲಬೇಕು?

  ಮಾಸ್ಟರ್ ಆನಂದ್ ಯಾಕೆ ಗೆಲ್ಲಬೇಕು ಅನ್ನೋದಕ್ಕೆ ಇಲ್ಲೊಬ್ಬರು ಕಾರಣ ಕೊಟ್ಟಿದ್ದಾರೆ. ಓದಿ....

  ಚಂದನ್ ಲಾಯಕ್ಕಲ್ಲ!

  ಚಂದನ್ ಲಾಯಕ್ಕಲ್ಲ!

  ಒಂದ್ಕಡೆ ಚಂದನ್ ಗೆಲ್ಲಲಿ ಅಂತ ಕೆಲವರು ಹೇಳ್ತಿದ್ರೆ, ಇನ್ನೂ ಕೆಲವರು ಚಂದನ್ ಫೈನಲ್ ಗೆ ಲಾಯಕ್ಕಲ್ಲ ಅಂತಿದ್ದಾರೆ.

   ಪೂಜಾ ಗಾಂಧಿಗೆ ವೋಟ್ ಮಾಡಿ

  ಪೂಜಾ ಗಾಂಧಿಗೆ ವೋಟ್ ಮಾಡಿ

  ಪೂಜಾ ಗಾಂಧಿಯನ್ನ ಗೆಲ್ಲಿಸಿ ಅನ್ನೋರೂ ಇದ್ದಾರೆ ಸ್ವಾಮಿ.

  ಶ್ರುತಿಗೆ ನಮ್ಮ ಮತ!

  ಶ್ರುತಿಗೆ ನಮ್ಮ ಮತ!

  ವೈಯುಕ್ತಿಕ ಜೀವನದಲ್ಲಿ ತುಂಬಾ ನೋವು ಅನುಭವಿಸಿರುವ ನಟಿ ಶ್ರುತಿ ತಮ್ಮ ಮಗಳಿಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವುದರಿಂದ ಅವರಿಗೆ ವೋಟ್ ಹಾಕ್ತೀವಿ ಅಂತಾರೆ ಕೆಲವರು

  ಪೂಜಾ ಗಾಂಧಿ ಮುಗ್ಧೆ ಅಲ್ಲ!

  ಪೂಜಾ ಗಾಂಧಿ ಮುಗ್ಧೆ ಅಲ್ಲ!

  ಚಿತ್ರರಂಗ ಮತ್ತು ರಾಜಕೀಯದಲ್ಲಿ ಎಲ್ಲಾ ತರಹದ ಜನ ನೋಡಿರುವ ಪೂಜಾ ಗಾಂಧಿ ಮುಗ್ಧೆ ಅಲ್ಲ. ಹೀಗಾಗಿ ಅವರಿಗೆ ವೋಟ್ ಮಾಡ್ಬೇಡಿ ಅನ್ನೋದು ಕೆಲವರ ಅಭಿಪ್ರಾಯ.

  ಇಲ್ಲಿದೆ ನೋಡಿ ಉಲ್ಟಾ ಕಾಮೆಂಟ್!

  ಇಲ್ಲಿದೆ ನೋಡಿ ಉಲ್ಟಾ ಕಾಮೆಂಟ್!

  ಇನ್ನೊಂದ್ಕಡೆ ಪೂಜಾ ಗಾಂಧಿಯನ್ನ ಗೆಲ್ಲಿಸಿ. ಆಗಲಾದರೂ, ಮುಗ್ಧತೆಗೆ ಗೆಲುವು ಸಿಕ್ಕಿದ ಹಾಗೆ ಆಗುತ್ತೆ ಅನ್ನೋ ವಾದ ಇತರರದ್ದು.

  ನಿಮ್ಮ ಅಭಿಪ್ರಾಯ ಏನು?

  ನಿಮ್ಮ ಅಭಿಪ್ರಾಯ ಏನು?

  'ಬಿಗ್ ಬಾಸ್' ಸ್ಪರ್ಧಿಗಳ ಬಗ್ಗೆ ಎಲ್ಲಾ ತರಹದ ಕಾಮೆಂಟ್ ಗಳನ್ನ ನಿಮ್ಮ ಮುಂದೆ ಇಟ್ಟಿದ್ದೀವಿ. ಮಾಸ್ಟರ್ ಆನಂದ್, ಚಂದನ್, ಪೂಜಾ ಗಾಂಧಿ, ಶ್ರುತಿ ಮತ್ತು ರೆಹಮಾನ್.... ಇವರಲ್ಲಿ ನಿಮ್ಮ ಮತ ಯಾರಿಗೆ? 'ಬಿಗ್ ಬಾಸ್-3' ವಿನ್ನರ್ ಯಾರಾಗಬೇಕು ಅನ್ನೋದು ನಿಮ್ಮ ಆಸೆ? ನಿಮ್ಮ ಆಶಯವನ್ನ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

  English summary
  Majority of Bigg Boss Kannada 3 Viewers want Master Anand to be the Winner. Check out the viewers reaction here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X