»   » ಹುಚ್ಚ ವೆಂಕಟ್ ರನ್ನ ಮೀಟ್ ಮಾಡ್ತಾರಂತೆ ಪೂಜಾ ಗಾಂಧಿ!

ಹುಚ್ಚ ವೆಂಕಟ್ ರನ್ನ ಮೀಟ್ ಮಾಡ್ತಾರಂತೆ ಪೂಜಾ ಗಾಂಧಿ!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಗೆ ಕಾಲಿಟ್ಟ ಮೇಲೆ ಪೂಜಾ ಗಾಂಧಿ ಮೊದಲು ಜಗಳ ಮಾಡಿದ್ದು ಹುಚ್ಚ ವೆಂಕಟ್ ಜೊತೆ. ತುಂಡು ಬಟ್ಟೆ ವಿಷಯಕ್ಕೆ ಹುಚ್ಚ ವೆಂಕಟ್ ಜೊತೆ ವಾಕ್ಸಮರ ನಡೆಸಿದ್ದ ಪೂಜಾ ಗಾಂಧಿ, ಇದೀಗ ಅದೇ ಹುಚ್ಚ ವೆಂಕಟ್ ರನ್ನ ಹಾಡಿ ಹೊಗಳಿದ್ದಾರೆ.

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಂದ ಮೇಲೆ 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರ ಬಗ್ಗೆ ಕಿಚ್ಚ ಸುದೀಪ್ ಜೊತೆ ನಟಿ ಪೂಜಾ ಗಾಂಧಿ ಮನಬಿಚ್ಚಿ ಮಾತನಾಡಿದ್ದಾರೆ. ['ಬಿಗ್ ಬಾಸ್' ಟ್ವಿಸ್ಟ್ ; ಸೀಕ್ರೆಟ್ ರೂಮ್ ನಲ್ಲಿ ನಟಿ ಪೂಜಾ ಗಾಂಧಿ.!]

pooja-gandhi

ಅದ್ರಲ್ಲೂ ಹುಚ್ಚ ವೆಂಕಟ್ ಬಗ್ಗೆ ಪೂಜಾ ಗಾಂಧಿ ಹೇಳಿದಿಷ್ಟು - ''ಮೊದಲ ವಾರ ಭಯ ಇತ್ತು. ಎರಡನೇ ದಿನ ನನಗೆ ಅವರ ಜೊತೆ ಜಗಳ ಆಯ್ತು. ನಂತರ ಮನಸ್ಸಿಂದ ಅಣ್ಣ ಅಂತ ಹೇಳ್ದೆ. ಅವರಿಗೆ ಟಾಸ್ಕ್ ನಿಂದ ಯಾವುದೇ ಸಮಸ್ಯೆ ಆಗ್ಲಿಲ್ಲ. ಟೀ ಮತ್ತು ಚಪಾತಿ ಕೌಂಟ್ ಮಾಡೋದ್ರಿಂದ ಅವರಿಗೆ ಬೇಜಾರ್ ಆಯ್ತು. ನಮಗೆ ಮನೆಯಲ್ಲಿ ತುಂಬಾ ಎಂಟರ್ಟೇನ್ ಮಾಡಿದ್ರು. ನಾನು ಅವರನ್ನ ಹೊರಗಡೆ ಮೀಟ್ ಮಾಡೋಕೆ ಇಷ್ಟ ಪಡುತ್ತೇನೆ.'' [ನಟಿ ಶ್ರುತಿ ಬಗ್ಗೆ 'ಮಳೆ ಹುಡುಗಿ' ಪೂಜಾ ಗಾಂಧಿ ಹೇಳಿದ್ದೇನು?]

pooja-gandhi

ಇಷ್ಟು ಹೇಳಿ ಹುಚ್ಚ ವೆಂಕಟ್ ಗೆ ಪೂಜಾ ಗಾಂಧಿ 5 ಪಾಯಿಂಟ್ ನೀಡಿದರು. ನಟಿ ಶ್ರುತಿ, ಚಂದನ್, ನೇಹ ಗೌಡ ಮತ್ತು ರೆಹಮಾನ್ ಬಗ್ಗೆ ಮಾತ್ರ ಪೂಜಾ ಗಾಂಧಿ ಬೇಸರ ವ್ಯಕ್ತಪಡಿಸಿದರು.

English summary
Kannada Actress Pooja Gandhi expressed her desire to meet Huccha Venkat during 'Super Sunday with Sudeep' Lollypop session.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada