»   » ರೆಹಮಾನ್ ಗೆ ಸುದೀಪ್ ಕೊಟ್ಟ ಶಾಕ್ ಮತ್ತು ಸರ್ ಪ್ರೈಸ್!

ರೆಹಮಾನ್ ಗೆ ಸುದೀಪ್ ಕೊಟ್ಟ ಶಾಕ್ ಮತ್ತು ಸರ್ ಪ್ರೈಸ್!

Posted By:
Subscribe to Filmibeat Kannada

ವೀಕ್ಷಕರ ನೆಚ್ಚಿನ ಸ್ಪರ್ಧಿ ಮಾತ್ರ ಉಳಿದುಕೊಳ್ಳುತ್ತಾರೆ ಎನ್ನುವ ಕಾರಣ ನೀಡಿ ಮನೆಯ ಎಲ್ಲಾ ಸದಸ್ಯರನ್ನ 'ಬಿಗ್ ಬಾಸ್' ಈ ವಾರ ನೇರವಾಗಿ ನಾಮಿನೇಟ್ ಮಾಡಿದರು.

ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದ ಗೌತಮಿ ಗೌಡ ಮತ್ತು ಸುನಾಮಿ ಕಿಟ್ಟಿ ಈ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದ್ದರು.

rehman

ಎರಡು ಎಲಿಮಿನೇಷನ್ ಅಂತ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ಆರಂಭದಲ್ಲೇ ಶಾಕ್ ನೀಡಿದ ಕಿಚ್ಚ ಸುದೀಪ್, ಸುನಾಮಿ ಕಟ್ಟಿ ಮತ್ತು ಗೌತಮಿ ಗೌಡ ಎಲಿಮಿನೇಟ್ ಆಗುತ್ತಿರುವ ಸ್ಪರ್ಧಿಗಳು ಅಂತ ಅನೌನ್ಸ್ ಮಾಡಿದ ಕೂಡಲೆ ಮತ್ತೊಂದು ಟ್ವಿಸ್ಟ್ ನೀಡಿದರು.

ಗೌತಮಿ ಗೌಡ ಮತ್ತು ಸುನಾಮಿ ಕಿಟ್ಟಿ ಸೇರಿ ಸೇಫ್ ಆಗಿರುವ ಆರು ಸ್ಪರ್ಧಿಗಳಲ್ಲಿ ಒಬ್ಬರನ್ನ ನೇರವಾಗಿ ಎಲಿಮಿನೇಟ್ ಮಾಡಬೇಕು ಅಂತ ಸುದೀಪ್ ಹೇಳಿದ್ರು. ಚರ್ಚೆ ಬಳಿಕ ಗೌತಮಿ ಮತ್ತು ಕಿಟ್ಟಿ ಖ್ಯಾತ ಕನ್ನಡ ಸುದ್ದಿ ವಾಹಿನಿ ಟಿವಿ 9 ಕನ್ನಡ ನಿರೂಪಕ ರೆಹಮಾನ್ ರನ್ನ ಔಟ್ ಮಾಡಲು ನಿರ್ಧರಿಸಿದರು.

ಸುದೀಪ್ ಆಜ್ಞೆ ಮೇರೆಗೆ ಲಗೇಜ್ ಪ್ಯಾಕ್ ಮಾಡಿಕೊಂಡು ರೆಹಮಾನ್ ಕೂಡ 'ಬಿಗ್ ಬಾಸ್' ಮನೆಯಿಂದ ಹೊರಬರಲು ಸಿದ್ಧರಾದರು. ಕಾರಣವೇ ಇಲ್ಲದೆ ರೆಹಮಾನ್ ಹೆಸರನ್ನ ಗೌತಮಿ ಹೇಳಿದ್ದಕ್ಕೆ ಮಾಸ್ಟರ್ ಆನಂದ್ ಜಗಳಕ್ಕೆ ನಿಂತರು. [ಗೌತಮಿ ಔಟ್ ಆಗಿದ್ದು ಓಕೆ! ಸುನಾಮಿ ಕಿಟ್ಟಿ ಯಾಕೆ?]

ಎಲ್ಲವನ್ನೂ ವೀಕ್ಷಿಸಿದ ಸುದೀಪ್ ಕೊನೆಗೆ 'ರೆಹಮಾನ್ ಈಸ್ ಸೇಫ್. ವೀಕ್ಷಕರ ಇಚ್ಛೆಯಂತೆ ಈ ವಾರ ಕಿಟ್ಟಿ ಮತ್ತು ಗೌತಮಿ ಮಾತ್ರ ಹೊರ ಬರುತ್ತಿದ್ದಾರೆ' ಅಂತ್ಹೇಳಿ ಸರ್ ಪ್ರೈಸ್ ನೀಡಿದರು.

English summary
TV9 Anchor Rehman was about to get eliminated from Bigg Boss Kannada 3 show with the twist given by Sudeep in 'Vaarada Kathe Kicchana Jothe' program. Luckily, Rehman became safe.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada