'ಬಿಗ್ ಬಾಸ್' ಮನೆಯಿಂದ ಆರ್.ಜೆ ನೇತ್ರ ಔಟ್?
ಏಳು ವಾರಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿ ಜಾಗರೂಕರಾಗಿ ಆಟವಾಡಿದ್ದ ಆರ್.ಜೆ ನೇತ್ರ ಈ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಔಟ್ ಆಗಿದ್ದಾರಂತೆ!
'ಕಲರ್ಸ್ ಕನ್ನಡ' ವಾಹಿನಿ ಮೂಲಗಳಿಂದ ಲೀಕ್ ಆಗಿರುವ ಸುದ್ದಿ ಪ್ರಕಾರ, ಈ ವಾರ ನೇತ್ರ 'ಬಿಗ್ ಬಾಸ್' ಮನೆಯಿಂದ ನಿರ್ಗಮಿಸಿದ್ದಾರೆ.

ಕೆಲವೇ ನಿಮಿಷಗಳ ಹಿಂದೆಯಷ್ಟೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ಶೂಟಿಂಗ್ ಮುಗಿದಿದೆ. ಅದರಲ್ಲಿ ಕಿಚ್ಚ ಸುದೀಪ್ ವಾರದ ಕಿಚ್ಚಿನ ಕಥೆಯನ್ನಿಟ್ಟುಕೊಂಡು ಪಂಚಾಯಿತಿ ಮಾಡಿದ ಬಳಿಕ ಆರ್.ಜೆ ನೇತ್ರ ರವರನ್ನ ಹೊರಗಡೆ ಕರೆದಿದ್ದಾರಂತೆ. [ಆರ್.ಜೆ ನೇತ್ರಗೆ ಮೊಟ್ಟೆ ಹೊಡೆದ 'ಬಿಗ್ ಬಾಸ್' ಮನೆ ಸದಸ್ಯರು]
ಆರ್.ಜೆ ನೇತ್ರ ರವರು ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು. ಕಳೆದ ವಾರ 'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ 'ಶ್ರುತಿ ಹೋಟೆಲ್' ಸೋತ ಕಾರಣ, ತಂಡದಲ್ಲಿದ್ದ ಶ್ರುತಿ, ನೇತ್ರ, ಕಿಟ್ಟಿ, ರೆಹಮಾನ್ ಮತ್ತು ಕೃತಿಕಾ ನಾಮಿನೇಟ್ ಆಗಿದ್ದರು.
ಇತರರಿಗಿಂತ ಅತಿ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ಆರ್.ಜೆ.ನೇತ್ರ ಔಟ್ ಆಗಿದ್ದಾರೆ ಅಂತ ಹೇಳಲಾಗಿದೆ.
More from Filmibeat
English summary
According to Colors Kannada sources, RJ Netra is eliminated from Bigg Boss Kannada 3 this week.
bigg boss kannada 3 bigg boss reality show tv colors channel shruthi ಬಿಗ್ ಬಾಸ್ ಕನ್ನಡ 3 ಬಿಗ್ ಬಾಸ್ ರಿಯಾಲಿಟಿ ಶೋ ಟಿವಿ ಕಲರ್ಸ್ ವಾಹಿನಿ ಶ್ರುತಿ


Click it and Unblock the Notifications











