»   » 'ಲವ್ ಬರ್ಡ್ಸ್' ಅಯ್ಯಪ್ಪ-ಪೂಜಾನ 'ಬಿಗ್ ಬಾಸ್' ಮನೆಯಿಂದ ಓಡ್ಸಿ!

'ಲವ್ ಬರ್ಡ್ಸ್' ಅಯ್ಯಪ್ಪ-ಪೂಜಾನ 'ಬಿಗ್ ಬಾಸ್' ಮನೆಯಿಂದ ಓಡ್ಸಿ!

Posted By:
Subscribe to Filmibeat Kannada

ದುಬೈ ಏರ್ ಪೋರ್ಟ್ ನಲ್ಲಿ ಪರಿಚಯವಾದ ಕ್ರಿಕೆಟರ್ ಎನ್.ಸಿ.ಅಯ್ಯಪ್ಪ ಜೊತೆ 'ಬಿಗ್ ಬಾಸ್' ಮನೆಯಲ್ಲಿ ಲಾಕ್ ಆದ್ಮೇಲೆ ನಟಿ, 'ಮುಂಗಾರು ಮಳೆ' ಬೆಡಗಿ ಪೂಜಾ ಗಾಂಧಿಗೆ ಪ್ಯಾರ್ ಆಗ್ಬಿಟ್ಟಿದೆ.

ಪ್ರೇಮದ ಅಮಲಿನಲ್ಲಿ ತೇಲುತ್ತಿರುವ ನಟಿ ಪೂಜಾ ಗಾಂಧಿ 'ಡ್ಯಾನ್ಸ್ ರಾಜಾ ಡ್ಯಾನ್ಸ್' ಟಾಸ್ಕ್ ನಲ್ಲಿ ಅಯ್ಯಪ್ಪ ಜೊತೆ ಡ್ಯುಯೆಟ್ ಹಾಡಿದ್ದೇ ಹಾಡಿದ್ದು. ಸಾಲದಕ್ಕೆ ಅಯ್ಯಪ್ಪ ಕೈ ಹಿಡಿದು, ಅಪ್ಪಿಕೊಂಡಿದ್ದೂ ಆಯ್ತು.[ತಬ್ಬಿಕೊಂಡ್ರು, ಕಣ್ ಹೊಡೆದ್ರು, ಕೈ ಹಿಡಿದ್ರು ಅಯ್ಯಪ್ಪ-ಪೂಜಾ!]

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಂದ ಮೇಲೆ ಅಯ್ಯಪ್ಪ ಜೊತೆ ಡೇಟಿಂಗ್ ಮಾಡ್ತೀನಿ ಅಂತ ಪೂಜಾ ಗಾಂಧಿ ಓಪನ್ ಆಗಿ ಹೇಳ್ಬಿಟ್ಟಿದ್ದಾರೆ.

ಇಬ್ಬರ ಲವ್ವಿ-ಡವ್ವಿ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಟಿ.ಆರ್.ಪಿ ತಂದುಕೊಟ್ಟಿರಬಹುದು. ಆದ್ರೆ, ವೀಕ್ಷಕರಿಗೆ ಮಾತ್ರ ಇದು ರುಚಿಸಿಲ್ಲ. 'ಬಿಗ್ ಬಾಸ್' ಮನೆಯನ್ನ ಕಾಫಿ ಡೇ ಮಾಡಿಕೊಂಡಿರುವ ಪೂಜಾ ಗಾಂಧಿ ಮತ್ತು ಅಯ್ಯಪ್ಪ ರನ್ನ ಮೊದಲು ಓಡಿಸಿ ಅಂತ ವೀಕ್ಷಕರು ಹಠ ಹಿಡಿದಿದ್ದಾರೆ. [ಪೂಜಾ ಗಾಂಧಿ ಮತ್ತು ಅಯ್ಯಪ್ಪ ನಡುವೆ ಸಂಥಿಂಗ್ ಸಂಥಿಂಗ್?]

ಈ ವಾರ ಎಲಿಮಿನೇಷನ್ ಗೆ ಅಯ್ಯಪ್ಪ ನಾಮಿನೇಟ್ ಆಗಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಅಂತ 'ಅಯ್ಯಪ್ಪರವರನ್ನ ಹೊರಗಟ್ಟಿ' ಎನ್ನುವ ಅಭಿಯಾನ ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಶುರುವಾಗಿದೆ.

ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು ಹಾಕಿರುವ ಕಾಮೆಂಟ್ ಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ನಾನ್ ಸೆನ್ಸ್!

''ಬಿಗ್ ಬಾಸ್' ಮನೆಯನ್ನ ಕಾಫಿ ಡೇ ಮಾಡಿಕೊಂಡಿರುವ ಅಯ್ಯಪ್ಪ-ಪೂಜಾ ಗಾಂಧಿಯನ್ನ ಓಡಿಸಿ. ಇಬ್ಬರ ರೋಮ್ಯಾನ್ಸ್ ನೋಡೋಕೆ ಆಗ್ತಿಲ್ಲ'' ಅನ್ನೋದು ಹೆಂಗಳೆಯರ ಅಭಿಪ್ರಾಯ. [ಅಯ್ಯಪ್ಪ ಬಳಿ ತಮ್ಮ ನಿಶ್ಚಿತಾರ್ಥ ಬ್ರೇಕಪ್ ರಹಸ್ಯ ಬಿಚ್ಚಿಟ್ಟ ಪೂಜಾ ಗಾಂಧಿ]

ಅಸಹ್ಯ!

ಅಯ್ಯಪ್ಪ-ಪೂಜಾ ಗಾಂಧಿ ಲವ್ ಸ್ಟೋರಿ ಇಷ್ಟ ಪಡದ ವೀಕ್ಷಕರು ಹಾಕಿರುವ ಕಾಮೆಂಟ್ಸ್ ಇವು.

ಡಬಲ್ ಗೇಮ್!

''ನಿಜ ಜೀವನದಲ್ಲಿ ಗರ್ಲ್ ಫ್ರೆಂಡ್ ಇದ್ದರೂ ಪೂಜಾ ಗಾಂಧಿ ಜೊತೆ ಅಯ್ಯಪ್ಪ ಆಟವಾಡುತ್ತಿದ್ದಾರೆ'' ಅನ್ನೋದು ಕೆಲವರ ಅಭಿಪ್ರಾಯ.

ಆಟದ ವಸ್ತು!

ಅಯ್ಯಪ್ಪ ನಡವಳಿಕೆ ಬಗ್ಗೆ ಬೇಸರಗೊಂಡ ವೀಕ್ಷಕರು ಕಾಮೆಂಟ್ ಮಾಡಿರುವುದು ಹೀಗೆ!

ಅಯ್ಯಪ್ಪ ಕಿಕ್ ಔಟ್

'ಅಯ್ಯಪ್ಪ ಕಿಕ್ ಔಟ್ ಆಗ್ಬೇಕು' ಎನ್ನುವ ಕಾಮೆಂಟ್ ಗಳೇ ಹೆಚ್ಚು.

ಡವ್ ರಾಜಾ

ಕೃತಿಕಾ 'ಡವ್ ರಾಣಿ' ಆಗಿದ್ರೆ, ಅಯ್ಯಪ್ಪ 'ಡವ್ ರಾಜಾ' ಅಂತೆ!

ಅಯ್ಯಪ್ಪ ಮಾಸ್ಟರ್ ಪ್ಲಾನ್!

ವೀಕ್ಷಕರ ಬಾಯಲ್ಲಿ ಅಯ್ಯಪ್ಪ ರವರ ಮಾಸ್ಟರ್ ಪ್ಲಾನ್ ಕೇಳಿ...

ಪೂಜಾ ಕೈಗೆ ಪಕ್ಕಾ ಚೊಂಬು!

ಅಯ್ಯಪ್ಪ ರವರನ್ನ ನಂಬಿರುವ ಪೂಜಾ ಗಾಂಧಿ ಕೈಗೆ ಚೊಂಬು ಗ್ಯಾರೆಂಟಿ ಅಂತೆ!

ಚಂದನ್ ಗೆ ವೋಟ್ ಮಾಡಿ...

ಅಯ್ಯಪ್ಪ ವಿರುದ್ಧ ನಿಂತಿರುವ ವೀಕ್ಷಕರು ಚಂದನ್ ಗೆ ಸಪೋರ್ಟ್ ಮಾಡುತ್ತಿದ್ದಾರೆ.

ಚಂದನ್-ರೆಹಮಾನ್ ಗೆ ಸಪೋರ್ಟ್

ಚಂದನ್ ಮತ್ತು ರೆಹಮಾನ್ ರನ್ನ ಕೆಲ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ಈ ಬಾರಿ ಚಂದನ್ ಸೇಫ್?

ವೀಕ್ಷಕರ ಕಾಮೆಂಟ್ ಗಳನ್ನ ನೋಡ್ತಿದ್ರೆ, ಈ ಬಾರಿ ಚಂದನ್ ಸೇಫ್ ಆಗ್ತಾರಾ? [ಒಂದೇ ಒಂದು ವೋಟ್ ನಿಂದ ಬಚಾವ್ ಆದ ನಟಿ ಶ್ರುತಿ!]

ಕೃತಿಕಾ ಕಥೆ ಏನು?

ಕೃತಿಕಾ ಔಟ್ ಆಗ್ಬೇಕು ಅಂತ ಬಹುತೇಕ ವೀಕ್ಷಕರು ಪಟ್ಟು ಹಿಡಿದ್ದಾರೆ. [ಡವ್ ಮಾಡದೆ 'ಬಿಗ್ ಬಾಸ್' ಡವ್ ರಾಣಿ ಕೃತಿಕಾನ ಆಚೆ ಹಾಕ್ಬೇಕ್!]

ಯಾರು ಹೊರ ಹೋಗ್ತಾರೆ?

ವೀಕ್ಷಕರ ಇಚ್ಛೆಯಂತೆ ಡ್ರಾಮಾ ಕ್ವೀನ್ ಕೃತಿಕಾ ಹೋಗ್ತಾರಾ ಇಲ್ಲ ಅಯ್ಯಪ್ಪ ಗೇಟ್ ಪಾಸ್ ಪಡೆಯುತ್ತಾರಾ ಅಂತ ಕಾದು ನೋಡ್ಬೇಕು.

ನಿಮ್ಮ ಅಭಿಪ್ರಾಯ ಏನು?

ಈ ವಾರ ನಾಮಿನೇಟ್ ಆಗಿರುವ ಕೃತಿಕಾ, ಚಂದನ್, ಅಯ್ಯಪ್ಪ, ರೆಹಮಾನ್ ಮತ್ತು ಮಿತ್ರರವರ ಪೈಕಿ ಯಾರು ಔಟ್ ಆಗ್ಬೇಕು ಅಂತ ನೀವು ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Viewers of Bigg Boss Kannada 3 in majority want Aiyappa and Pooja Gandhi to get eliminated.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada