»   » ಡವ್ ರಾಣಿ ಕೃತಿಕಾ-ಶ್ರುತಿಗೆ ವೋಟ್ ಮಾಡ್ಬೇಡಿ ಪ್ಲೀಸ್!

ಡವ್ ರಾಣಿ ಕೃತಿಕಾ-ಶ್ರುತಿಗೆ ವೋಟ್ ಮಾಡ್ಬೇಡಿ ಪ್ಲೀಸ್!

Posted By:
Subscribe to Filmibeat Kannada

''ಸದಾ ಅಳುತ್ತಾ ಡ್ರಾಮಾ ಮಾಡುವ ಕೃತಿಕಾ ಮತ್ತು ನಟಿ ಶ್ರುತಿಯನ್ನ 'ಬಿಗ್ ಬಾಸ್' ಮನೆಯಿಂದ ಹೊರಗೆ ಕಳುಹಿಸಿ. ಅವರಿಗೆ ವೋಟ್ ಮಾಡ್ಬೇಡಿ ಪ್ಲೀಸ್.....'' ಹೀಗಂತ ಸಾವಿರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ.

ನಟಿ ಶ್ರುತಿ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ನಾಟಕ ಮಾಡುತ್ತಿದ್ದಾರೆ ಮತ್ತು ಕೃತಿಕಾ ಕೂಡ ಡವ್ ರಾಣಿ. ಹೀಗಾಗಿ ಇಬ್ಬರು ಈ ಬಾರಿ ಸೇಫ್ ಆಗಬಾರದು ಅನ್ನೋದು ವೀಕ್ಷಕರ ಅಭಿಪ್ರಾಯ.

'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ ಸೋತ 'ಶ್ರುತಿ ಹೋಟೆಲ್' ತಂಡದ ಸದಸ್ಯರು ಅಂದ್ರೆ ಶ್ರುತಿ, ಸುನಾಮಿ ಕಿಟ್ಟಿ, ಕೃತಿಕಾ, ನೇತ್ರ ಮತ್ತು ರೆಹಮಾನ್ ಈ ವಾರದ ಎಲಿಮಿನೇಷನ್ ಗೆ ನೇರವಾಗಿ ನಾಮಿನೇಟ್ ಆಗಿದ್ದಾರೆ. [ಅಮ್ಮ ಶ್ರುತಿ-ಮಗಳು ಕೃತಿಕಾ ನಡುವೆ ಮಾತಿನ ಸಮರ]

ಐದು ಜನರ ಪೈಕಿ ಶ್ರುತಿ ಮತ್ತು ಕೃತಿಕಾರವರನ್ನ ಹೊರಗಟ್ಟಿ ಅಂತ 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು ಆಗ್ರಹಿಸಿದ್ದಾರೆ. ಕೆಲವು ಕಾಮೆಂಟ್ಸ್ ಗಳನ್ನ ನಿಮ್ಮ ಮುಂದೆ ಇಡ್ತಿದ್ದೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಈ ಬಾರಿ ಕೃತಿಕಾ ಔಟ್ ಆಗುವುದು ಗ್ಯಾರೆಂಟಿ!

ನಾಮಿನೇಟ್ ಆಗಿರುವ ಐದು ಜನರ ಪೈಕಿ ಕೃತಿಕಾ 'ಬಿಗ್ ಬಾಸ್' ಮನೆಯಿಂದ ಹೊರಹೋಗುವುದು ಖಚಿತ ಅಂತ ಭಾವಿಸಿರುವ ವೀಕ್ಷಕರೊಬ್ಬರು ಹಾಕಿರುವ ಕಾಮೆಂಟ್ ನೋಡಿ....['ಬಿಗ್ ಬಾಸ್-3' ಶೋ ಕ್ವಿಟ್ ಮಾಡ್ತಾರಾ ನಟಿ ಶ್ರುತಿ?]

ಕೃತಿಕಾ-ಶ್ರುತಿಗೆ ವೋಟ್ ಮಾಡ್ಬೇಡಿ....

ಕೃತಿಕಾ ಮತ್ತು ನಟಿ ಶ್ರುತಿ ಡ್ರಾಮಾ ಮಾಡ್ತಿದ್ದಾರೆ. ಅವರಿಗೆ ವೋಟ್ ಮಾಡಬೇಡಿ ಅಂತ ವೀಕ್ಷಕರು ಕೇಳಿಕೊಂಡಿರುವುದು ಹೀಗೆ. ['ಬಿಗ್ ಬಾಸ್' ಮನೆಯಿಂದ ಈ ವಾರ ಗೇಟ್ ಪಾಸ್ ಯಾರಿಗೆ?]

ಮೊದಲು ಕೃತಿಕಾ ಹೋಗ್ಬೇಕು!

ಬರೀ ನಟನೆ ಮಾಡುತ್ತಿರುವ ಕೃತಿಕಾ ಹೊರಹೋಗಬೇಕು ಅಂತಿರುವ ಕಾಮೆಂಟ್ ಗಳೇ ಹೆಚ್ಚು.

ಕಿಟ್ಟಿ ಸೇವ್ ಮಾಡಿ....

ಶ್ರುತಿ ಮತ್ತು ಕೃತಿಕಾರನ್ನ ಹೊರಗೆ ಕಳುಹಿಸಿ ಸುನಾಮಿ ಕಿಟ್ಟಿಯನ್ನ ಸೇವ್ ಮಾಡಿ ಅನ್ನುವವರೇ ಜಾಸ್ತಿ.

ಎರಡು ಎಲಿಮಿನೇಷನ್ ಬೇಕು!

ಪೂಜಾ ಗಾಂಧಿ 'ಬಿಗ್ ಬಾಸ್' ಮನೆಗೆ ವಾಪಸ್ ಬಂದಿದ್ದರಿಂದ ಈ ವಾರ ಎರಡು ಎಲಿಮಿನೇಷನ್ ಇರಬೇಕು. ಹೀಗಾಗಿ ಈ ವಾರ ಕೃತಿಕಾ ಮತ್ತು ಶ್ರುತಿಯವರು ಹೋಗ್ಬೇಕು ಅಂತ ಕೆಲವರು ಆಗ್ರಹಿಸಿದ್ದಾರೆ.

ಕೃತಿಕಾ ಬೇಡ, ಕಿಟ್ಟಿ ಬೇಕು

ಕೃತಿಕಾಗೆ ವೋಟ್ ಮಾಡ್ಬೇಡಿ. ಕಿಟ್ಟಿಗೆ ವೋಟ್ ಹಾಕಿ ಪ್ಲೀಸ್ ಪ್ಲೀಸ್....

ಕಿಟ್ಟಿಗೆ ಅಭಿಮಾನಿಗಳು ಹೆಚ್ಚು!

ಸತತ ಆರನೇ ಬಾರಿ ನಾಮಿನೇಟ್ ಆಗಿರುವ ಕಿಟ್ಟಿ ಇನ್ನೂ 'ಬಿಗ್ ಬಾಸ್' ಮನೆಯಲ್ಲಿ ಸೇಫ್ ಆಗಿದ್ದಾರೆ ಅನ್ನೋದಕ್ಕೆ ಇಂತಹ ಅಭಿಮಾನಿಗಳ ಕೃಪೆ ಕಾರಣ.

ರೆಹಮಾನ್ ಗೂ ವೋಟ್ ಮಾಡಿ....

ಕಳೆದ ವಾರ 'ನೇಹ ಮತ್ತು ರೆಹಮಾನ್'ರನ್ನ ಹೊರಗಟ್ಟಿ ಅಂದಿದ್ದ ವೀಕ್ಷಕರು ಈ ವಾರ ರೆಹಮಾನ್ ಗೆ ವೋಟ್ ಮಾಡಿ ಅಂತ ಹೇಳುತ್ತಿರುವುದು ನಿಜಕ್ಕೂ ಅಚ್ಚರಿ.

ಸಾವಿರಕ್ಕೂ ಹೆಚ್ಚು ಕಾಮೆಂಟ್ ಗಳಿವೆ

ಇವೆಲ್ಲ ಸ್ಯಾಂಪಲ್ ಗಳಷ್ಟೆ. ಇಂತಹ ಸಾವಿರಾರು ಕಾಮೆಂಟ್ ಗಳು 'ಕಲರ್ಸ್ ಕನ್ನಡ ವಾಹಿನಿ' ಫೇಸ್ ಬುಕ್ ಪೇಜ್ ನಲ್ಲಿದೆ.

ನಿಮ್ಮ ವೋಟ್ ಯಾರಿಗೆ?

ನಿಮಗೂ ನಟಿ ಶ್ರುತಿ ಡ್ರಾಮಾ ಮಾಡ್ತಿದ್ದಾರೆ ಅಂತ ಅನಿಸುತ್ತಾ? ಕೃತಿಕಾ ಈ ವಾರ ಹೊರ ಹೋಗ್ಬೇಕಾ? ರೆಹಮಾನ್ ಮತ್ತು ಕಿಟ್ಟಿ ಸೇಫ್ ಆಗ್ಬೇಕಾ? ಐವರಲ್ಲಿ ನಿಮ್ಮ ವೋಟ್ ಯಾರಿಗೆ?

ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ

ಶ್ರುತಿ, ನೇತ್ರ, ಕೃತಿಕಾ, ರೆಹಮಾನ್ ಮತ್ತು ಕಿಟ್ಟಿ ಪೈಕಿ ಈ ವಾರ ಯಾರು ಔಟ್ ಆಗ್ಬೇಕು ಅನ್ನುವ ನಿಮ್ಮ ಅಭಿಪ್ರಾಯವನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

    English summary
    Viewers of Bigg Boss Kannada 3 have taken their Facebook Account to express their support for Tsunami Kitty. Viewers want Kannada Actress Shruthi and Kruthika to get eliminated this week.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada