'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಮಾಧುರಿ ಇಟಗಿ.!
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಕಾರ್ಯಕ್ರಮದ ಮೂರನೇ ಆವೃತ್ತಿಯ ಮೊದಲ ವಾರದ ಎಲಿಮೇಷನ್ ಮುಗಿದಿದೆ. 'ರ್ಯಾಂಬೋ' ನಟಿ, ಮಿಸ್ ಕರ್ನಾಟಕ ಖ್ಯಾತಿಯ ಮಾಧುರಿ ಇಟಗಿ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದ್ದಿದ್ದಾರೆ.
ನಟಿ ಮಾಧುರಿ ಇಟಗಿ ತುಂಬಾ ಸೈಲೆಂಟ್ ಹುಡುಗಿ. ಯಾರೊಂದಿಗೂ ಹೆಚ್ಚು ಮಾತನಾಡುವುದಿಲ್ಲ. ಅವರ ಪರಿಚಯ ಸರಿಯಾಗಿ ಆಗಿಲ್ಲ ಅನ್ನುವ ನೆಪವೊಡ್ಡಿ ಗಗನಸಖಿ ನೇಹಾ ಗೌಡ, ಭಾವನಾ ಬೆಳಗೆರೆ, ಸುನಾಮಿ ಕಿಟ್ಟಿ ಮತ್ತು ಆರ್.ಜೆ ನೇತ್ರ ನಾಮಿನೇಟ್ ಮಾಡಿದ್ದರು.

ನಾಮಿನೇಟ್ ಆದವರ ಪೈಕಿ ಗಾಯಕ ರವಿ ಮುರೂರು ಮೊದಲು ಸೇಫ್ ಆದರೆ, ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಸುನಾಮಿ ಕಿಟ್ಟಿ ನಂತರ ಸೇಫ್ ಆಗಿ ನಿಟ್ಟುಸಿರು ಬಿಟ್ಟರು. ['ಬಿಗ್ ಬಾಸ್-3'; ಈ ವಾರ ಔಟ್ ಆಗುವವರು ಯಾರು?]
ಕಿರುತೆರೆ ನಟಿ ಕೃತಿಕಾಗೆ ಹೋಲಿಸಿದರೆ ವೀಕ್ಷಕರಿಂದ ಅತಿ ಕಡಿಮೆ ವೋಟ್ಸ್ ಪಡೆದಿದ್ದ ನಟಿ ಮಾಧುರಿ ಇಟಗಿ 'ಬಿಗ್ ಬಾಸ್-3' ಮನೆಯಿಂದ ಹೊರನಡೆದರು. ಇದ್ದ ಒಂದು ವಾರದಲ್ಲಿ ಯಾರೊಂದಿಗೂ ಗಲಾಟೆ ಮಾಡಿಕೊಳ್ಳದೇ, ಯಾರಿಂದಲೂ ಬೆಟ್ಟು ಮಾಡಿ ತೋರಿಸಿಕೊಳ್ಳದ ನಟಿ ಮಾಧುರಿ ಇಟಗಿ, ಮನೆಯ ಎಲ್ಲಾ ಸದಸ್ಯರ ಪ್ರೀತಿಗೆ ಪಾತ್ರರಾಗಿದ್ದರು.


Click it and Unblock the Notifications











