»   » 'ಬಿಗ್ ಬಾಸ್' ಮನೆಯಿಂದ ಈ ವಾರ ಗೇಟ್ ಪಾಸ್ ಯಾರಿಗೆ?

'ಬಿಗ್ ಬಾಸ್' ಮನೆಯಿಂದ ಈ ವಾರ ಗೇಟ್ ಪಾಸ್ ಯಾರಿಗೆ?

Posted By:
Subscribe to Filmibeat Kannada

ಕಳೆದ ವಾರ ಕ್ರಿಕೆಟರ್ ಅಯ್ಯಪ್ಪ 'ಅಪಶ್ರುತಿ' ಶುರುಮಾಡಿದ ನಂತರ ಇದೀಗ 'ಬಿಗ್ ಬಾಸ್' ಮನೆಯಲ್ಲಿ ಕೊಂಚ ಬದಲಾವಣೆ ಆಗಿದೆ. ಅಯ್ಯಪ್ಪ-ಚಂದನ್ 'ಮಾಸ್ಟರ್ ಪ್ಲಾನ್' ವರ್ಕೌಟ್ ಆಗಿದೆ. ಇಬ್ಬರ ನಿರೀಕ್ಷೆಯಂತೆ ಮಾಸ್ಟರ್ ಆನಂದ್ ನಾಮಿನೇಟ್ ಆಗಿದ್ದಾರೆ.

ಸುನಾಮಿ ಕಿಟ್ಟಿ ಮತ್ತು ಗಗನಸಖಿ ನೇಹಾ ಗೌಡಗೆ ಎಲಿಮಿನೇಷನ್ ಟೆನ್ಷನ್ ಹೊಸದೇನಲ್ಲ. ವಾರ ವಾರ ತಪ್ಪದೇ ನಾಮಿನೇಟ್ ಆಗುತ್ತಿರುವ ಈ ಇಬ್ಬರು ಈ ವಾರವೂ ನಿಮ್ಮ ಎಸ್.ಎಂ.ಎಸ್ ನಿರೀಕ್ಷೆಯಲ್ಲಿದ್ದಾರೆ.['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಎರಡನೇ ಬಾರಿಗೆ 'ಅಣ್ಣ' ರೆಹಮಾನ್ ನಾಮಿನೇಟ್ ಆಗಿದ್ದಾರೆ. ಹಾಗಾದರೆ, ಈ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಗೇಟ್ ಪಾಸ್ ಯಾರಿಗೆ? ಮುಂದೆ ಓದಿ...

ರೆಹಮಾನ್-ನೇಹ ಪ್ಲಾನ್ ಮಾಡ್ತಿದ್ದಾರಾ?

''ಬಿಗ್ ಬಾಸ್' ಮನೆಯಲ್ಲಿ ಇನ್ನೂ ಕೆಲವು ದಿನಗಳು ಇರುವುದು ಹೇಗೆ ಅಂತ ಹೇಳಿಕೊಡ್ತೀವಿ'' ಅಂತ ನೇಹ ಗೌಡ ಅಯ್ಯಪ್ಪ ರವರನ್ನ ಹೊರಗೆ ಕರೆಯುತ್ತಿದ್ದರಂತೆ. ಈ ತರಹದ ಚಟುವಟಿಕೆ ಸರಿಯಿಲ್ಲ ಅನ್ನುವ ಕಾರಣ ಕೊಟ್ಟು ಮಾಸ್ಟರ್ ಆನಂದ್, ನೇಹ ಮತ್ತು ರೆಹಮಾನ್ ರನ್ನ ನಾಮಿನೇಟ್ ಮಾಡಿದರು.[ಡೇಂಜರ್ ಝೋನ್ ನಲ್ಲಿ ನಾಲ್ಕನೇ ಬಾರಿ ; ನೇತ್ರ ಮೇಲೆ ಕಿಟ್ಟಿ ಗರಂ]

ಕೃತಿಕಾಗೂ ಆನಂದ್ ಗೂ ಆಗ್ಬರಲ್ಲ.!

ಮೊದಲಿನಿಂದಲೂ ಕೃತಿಕಾ ಮತ್ತು ಆನಂದ್ ನಡುವೆ ಅಷ್ಟಕಷ್ಟೆ. ಇದೇ ಕಾರಣಕ್ಕೆ ಕೃತಿಕಾ ಮಾಸ್ಟರ್ ಆನಂದ್ ಮತ್ತು ನೇಹ ಗೌಡ ಹೆಸರನ್ನ ನಾಮಿನೇಟ್ ಮಾಡಿದರು.

ಚಂದನ್ ಮಾಸ್ಟರ್ ಪ್ಲಾನ್.!

ಚಂದನ್ ಈ ಹಿಂದೆಯೇ ಪ್ಲಾನ್ ಮಾಡಿದಂತೆ ಮಾಸ್ಟರ್ ಆನಂದ್ ಮತ್ತು ನೇಹರನ್ನ ನಾಮಿನೇಟ್ ಮಾಡಿದರು.

ಅಯ್ಯಪ್ಪ ಮಾಡಿದ್ದೂ ಅದನ್ನೇ.!

ಇತ್ತ ಅಯ್ಯಪ್ಪ ಕೂಡ ಮಾಸ್ಟರ್ ಆನಂದ್ ಹೆಸರನ್ನ ಹೇಳಿದರು. ಜೊತೆಗೆ ರೆಹಮಾನ್ ರನ್ನ ಹೊರ ಹಾಕಲು ಇಚ್ಛಿಸಿದರು.

ಶ್ರುತಿ ವೋಟ್ ಯಾರಿಗೆ?

ಶ್ರುತಿ ಆಯ್ಕೆ - ರೆಹಮಾನ್ ಮತ್ತು ನೇಹ ಗೌಡ

ನೇಹ ನಾಮಿನೇಟ್ ಮಾಡಿದ್ದು ಯಾರನ್ನ?

ನೇಹ ಆಯ್ಕೆ - ಚಂದನ್, ಕೃತಿಕಾ

ಕಿಟ್ಟಿ ವೋಟ್ ಮಾಡಿದ್ದು?

ಕಿಟ್ಟಿ ಆಯ್ಕೆ - ನೇಹ ಮತ್ತು ಅಯ್ಯಪ್ಪ

ರೆಹಮಾನ್ ಆಯ್ಕೆ...

ನಟಿ ಶ್ರುತಿ ಮತ್ತು ಆನಂದ್ ರನ್ನ ರೆಹಮಾನ್ ಹೊರಹಾಕಲು ಇಚ್ಛಿಸಿದರು.

ಭಾವನಾ ವೋಟ್....

ನಟಿ ಶ್ರುತಿ ಮತ್ತು ರೆಹಮಾನ್ ರನ್ನ ಭಾವನಾ ನಾಮಿನೇಟ್ ಮಾಡಿದರು.

ನೇರವಾಗಿ ನಾಮಿನೇಟ್ ಆದ ಕಿಟ್ಟಿ

ಮನೆಯ ಕ್ಯಾಪ್ಟನ್ ಆಗಿದ್ದ ನೇತ್ರ ಕಿಟ್ಟಿಯನ್ನ ನಾಮಿನೇಟ್ ಮಾಡಿದ ಪರಿಣಾಮ, ಸುನಾಮಿ ಕಿಟ್ಟಿ ನೇರವಾಗಿ ನಾಮಿನೇಟ್ ಆದರು.

ಈ ಬಾರಿ ನಿಮ್ಮ ವೋಟ್ ಯಾರಿಗೆ?

ಮಾಸ್ಟರ್ ಆನಂದ್, ನೇಹ ಗೌಡ, ರೆಹಮಾನ್, ಸುನಾಮಿ ಕಿಟ್ಟಿ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ. ಈ ನಾಲ್ವರಲ್ಲಿ ನೀವು ಯಾರಿಗೆ ಸಪೋರ್ಟ್ ಮಾಡ್ತೀರಾ? ಯಾರನ್ನ ಹೊರಹಾಕಲು ಇಚ್ಛಿಸುತ್ತೀರಾ?

ಕಾಮೆಂಟ್ ಮಾಡಿ.....

ನಾಲ್ಕನೇ ಬಾರಿ ನಾಮಿನೇಟ್ ಆಗಿರುವ ಕಿಟ್ಟಿ 'ಬಿಗ್ ಬಾಸ್' ಮನೆಯಿಂದ ಔಟ್ ಆಗ್ಬೇಕಾ? ಇಲ್ಲ ಮನರಂಜನೆ ನೀಡದ ನೇಹ ಹೊರಹೋಗ್ಬೇಕಾ? ನಿಮ್ಮ ಅಭಿಪ್ರಾಯವನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....

    English summary
    Master Anand, Rehman, Neha Gowda and Tsunami Kitti are nominated for this week elimination. Check who nominated whom in Bigg Boss Kannada 3.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada