»   » ಇಂದು 'ಬಿಗ್ ಬಾಸ್' ಮನೆಯಿಂದ ಯಾರು ಔಟ್?

ಇಂದು 'ಬಿಗ್ ಬಾಸ್' ಮನೆಯಿಂದ ಯಾರು ಔಟ್?

Posted By:
Subscribe to Filmibeat Kannada

ಕಳೆದ ವಾರ 'ಚೇರ್ ವಾರ್' ಟಾಸ್ಕ್ ನಲ್ಲಿ ನೇರ ನಾಮಿನೇಷನ್ ಬ್ಯಾಡ್ಜ್ ಧರಿಸಿದ ನಟಿ ಶ್ರುತಿ, ಮಾಸ್ಟರ್ ಆನಂದ್, ಸುನಾಮಿ ಕಿಟ್ಟಿ, ಕೃತಿಕಾ ಮತ್ತು ಪೂಜಾ ಗಾಂಧಿ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ.

ವೀಕ್ಷಕರ ಇಚ್ಛೆಯಂತೆ ಕಳೆದ ವಾರವೇ ನಟಿ ಕೃತಿಕಾ 'ಬಿಗ್ ಬಾಸ್' ಮನೆಯಿಂದ ಹೊರ ನಡೆಯಬೇಕಿತ್ತು. ಆದ್ರೆ, ಕಾಮಿಡಿ ನಟ ಮಿತ್ರ ಔಟ್ ಆದರು.

ಈ ವಾರ ನಟಿ ಶ್ರುತಿ, ಆನಂದ್, ಕಿಟ್ಟಿ ಮತ್ತು ಪೂಜಾ ಗಾಂಧಿ ಅಂತಹ ಸೆಲೆಬ್ರಿಟಿಗಳ ಜೊತೆಗೆ ಕೃತಿಕಾ ನಾಮಿನೇಟ್ ಆಗಿದ್ದಾರೆ. ಜನಪ್ರಿಯತೆ ಲೆಕ್ಕದಲ್ಲಿ ಇತರರಿಗೆ ಹೋಲಿಸಿದರೆ ನಟಿ ಕೃತಿಕಾ ವೀಕ್.

bigg-boss

ಇನ್ನೂ ನಾಮಿನೇಷನ್ ಆಧಾರದಲ್ಲಿ ಕಿಟ್ಟಿಗೆ ಇದು ಏಳನೇ ನಾಮಿನೇಷನ್. ಆರು ಬಾರಿ ವೀಕ್ಷಕರು ಸುನಾಮಿ ಕಿಟ್ಟಿಯನ್ನ ಸೇಫ್ ಮಾಡಿದ್ದಾರೆ. ಈ ಬಾರಿ ಕೂಡ ಕಿಟ್ಟಿಗೆ ವೀಕ್ಷಕರ ಕೃಪೆ ಸಿಗ್ಬಹುದಾ? ['ಬಿಗ್ ಬಾಸ್ ಅಲ್ಲ ಫ್ಲಾಪ್ ಬಾಸ್ ಡೌನ್ ಡೌನ್' ಅಂತಾವ್ರೆ ವೀಕ್ಷಕರು!]

ಹಾಗೇ, 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ಮಂದಿಯಿಂದ 'ವಿಷ' ಪಡೆದಿರುವ ನಟಿ ಶ್ರುತಿ ಬಗ್ಗೆ ಕೂಡ ಸಾಮಾಜಿಕ ಜಾಲಾತಾಣಗಳಲ್ಲಿ ವೀಕ್ಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

ಹೀಗಾಗಿ ಇಂದು ಔಟ್ ಆಗುವವರು ಯಾರು ಅನ್ನೋ ಕುತೂಹಲ ತುಸು ಹೆಚ್ಚು. ಮಾಸ್ಟರ್ ಆನಂದ್, ಕಿಟ್ಟಿ, ಶ್ರುತಿ, ಕೃತಿಕಾ ಮತ್ತು ಪೂಜಾ ಗಾಂಧಿ ಪೈಕಿ ಇಂದು ಯಾರು ಎಲಿಮಿನೇಟ್ ಆಗ್ಬೇಕು ಅಂತ ನಿಮ್ಮ ಅಭಿಪ್ರಾಯ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Master Anand, Tsunami Kitti, Kannada Actress Shruthi, Pooja Gandhi, Kruthika are nominated for this week elimination. Who will get eliminated today?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada