»   » ಕೋಮಲ್ ಗೆ ಸಿಕ್ಕಾಪಟ್ಟೆ ಬೇಜಾರ್ ಆಗ್ಬಿಟಿದ್ಯಂತೆ.! ಯಾಕ್ ಗೊತ್ತಾ?

ಕೋಮಲ್ ಗೆ ಸಿಕ್ಕಾಪಟ್ಟೆ ಬೇಜಾರ್ ಆಗ್ಬಿಟಿದ್ಯಂತೆ.! ಯಾಕ್ ಗೊತ್ತಾ?

Posted By:
Subscribe to Filmibeat Kannada

ತೆರೆ ಮೇಲೆ ಕೋಮಲ್ ಬಂದ್ರು ಅಂದ್ರೆ ಸಾಕು, ಪ್ರೇಕ್ಷಕರಿಗೆ ನಗೆ ಹೊನಲು ಗ್ಯಾರೆಂಟಿ. ಕೋಮಲ್ ರವರ ಹಾವ-ಭಾವ, ಕಾಮಿಡಿ ಟೈಮಿಂಗ್ ಕನ್ನಡ ಸಿನಿ ಪ್ರಿಯರಿಗಂತೂ ಸಖತ್ ಇಷ್ಟ.

ತೆರೆಮೇಲೆ ಎಲ್ಲರನ್ನ ನಗೆಗಡಲಲ್ಲಿ ತೇಲಿಸುವ ಕೋಮಲ್, ನಿಜ ಜೀವನದಲ್ಲೂ ಹಾಗೇ ಇರಬಹುದು ಅಂತ ನೀವು ಭಾವಿಸಿದ್ರೆ, ನಿಮ್ಮ ಊಹೆ ಸುಳ್ಳು. ಯಾಕಂದ್ರೆ, ರಿಯಲ್ ಲೈಫ್ ನಲ್ಲಿ ಕೋಮಲ್ ಡೆಡ್ ಆಪೋಸಿಟ್. [ಕೋಮಲ್ ಕುರಿತ ಅಂತೆ-ಕಂತೆ ಪುರಾಣಕ್ಕೆ ಪೂರ್ಣ ವಿರಾಮವಿಟ್ಟ ಜಗ್ಗೇಶ್]

ಕೋಮಲ್ ವ್ಯಕ್ತಿತ್ವದ ಬಗ್ಗೆ ನಾವೀಗ ಮಾತನಾಡುವುದಕ್ಕೂ ಒಂದು ಕಾರಣ ಇದೆ. ಮುಂದೆ ಓದಿ....

ಕೋಮಲ್ ಅಪ್ ಸೆಟ್ ಆಗಿದ್ದಾರೆ

ತೆರೆಮೇಲೆ ಸದಾ ನಗುನಗುತ್ತಾ ಇರುವ ಕೋಮಲ್ ಈಗ ಅಪ್ ಸೆಟ್ ಆಗಿದ್ದಾರಂತೆ. ಅದಕ್ಕೆ ಕಾರಣ 'ಬಿಗ್ ಬಾಸ್' ಅಂದ್ರೆ ನೀವು ನಂಬಲೇಬೇಕು. [ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!]

ಬೇಜಾರು ಮಾಡಿಕೊಂಡಿದ್ದಾರೆ ಕೋಮಲ್

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ನಟ ಕೋಮಲ್ ಭಾಗವಹಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿತ್ತು. ಇದರಿಂದ ಕೋಮಲ್ ತುಂಬಾ ಬೇಜಾರು ಮಾಡಿಕೊಂಡಿದ್ದಾರೆ.

ಬೇಜಾರು ಮಾಡಿಕೊಳ್ಳುವಂಥದ್ದು ಏನಿದೆ?

ಕಳೆದ ಬಾರಿ ಆಗಲಿ, ಈ ಬಾರಿ ಆಗಲಿ....'ಬಿಗ್ ಬಾಸ್' ರಿಯಾಲಿಟಿ ಶೋಗಾಗಿ ಕಲರ್ಸ್ ವಾಹಿನಿಯವರು ಕೋಮಲ್ ಜೊತೆ ಮಾತುಕತೆ ಮಾಡಿಲ್ಲ. ಹೀಗಿದ್ದರೂ, ಪದೇ ಪದೇ ಅವರ ಹೆಸರು ಕೇಳಿಬರುತ್ತಿರುವುದರಿಂದ ಕೋಮಲ್ ಬೇಸರ ಮಾಡಿಕೊಂಡಿದ್ದಾರೆ.

ಎಷ್ಟೇ ದುಡ್ಡು ಕೊಟ್ಟರೂ ಬರಲ್ಲ!

ಒಂದ್ವೇಳೆ ಕಲರ್ಸ್ ವಾಹಿನಿಯವರು ಮಾತುಕತೆ ನಡೆಸಿದರೂ, 'ದೊಡ್ಡ ಮೊತ್ತ' ಕೊಡುವುದಾಗಿ ಹೇಳಿದರೂ 'ಬಿಗ್ ಬಾಸ್' ಮನೆಯೊಳಗೆ ಬರಲು ಕೋಮಲ್ ಒಪ್ಪಿಕೊಳ್ಳುವುದಿಲ್ಲವಂತೆ.

ಕಾರಣ ಏನು?

ನಟ ಕೋಮಲ್ ತುಂಬಾ ಅಂತರ್ಮುಖಿ. ಹೀಗಾಗಿ, 'ಬಿಗ್ ಬಾಸ್' ಮಾತ್ರ ಅಲ್ಲ, ಯಾವುದೇ ಗೇಮ್ ಶೋ ಆಗಲಿ ಅಥವಾ ಸ್ಟೇಜ್ ಶೋ ಆಗಲಿ, ಅದರಲ್ಲಿ ಭಾಗವಹಿಸಲು ಅವರು ಹಿಂಜರಿಯುತ್ತಾರೆ.

ಕೋಮಲ್ ಮುಂದಿನ ಸಿನಿಮಾ ಯಾವುದು?

'ಕತೆ-ಚಿತ್ರಕತೆ-ನಿರ್ದೇಶನ ಪುಟ್ಟಣ್ಣ' ಮತ್ತು 'ಡೀಲ್ ರಾಜಾ' ಚಿತ್ರಗಳ ಬಳಿಕ ಕೋಮಲ್ ಯಾವ ಸಿನಿಮಾ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.

English summary
Rumours have once again surfaced that Kannada Actor Komal will take part in 'Bigg Boss Kannada-4' reality show has made the Actor upset

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada