For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್-4: ಈ ವಾರ ಮನೆಯಿಂದ ಹೊರ ಹೋಗೋರು ಯಾರು?

  By Suneetha
  |

  ಎಲ್ಲರೂ ಕಾತರದಿಂದ ಕಾಯುತ್ತಿದ್ದ ಕಿರುತೆರೆ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ-4' ಕೊನೆಗೂ ಆರಂಭವಾಗಿದೆ. ಮೊದಲ ದಿನವೇ ಕೆಲವರ ಹುಚ್ಚಾಟ, ರಂಪಾಟ, ದೂರು-ದುಮ್ಮಾನ ಎಲ್ಲವೂ ಇತ್ತು. ಇದರ ಜೊತೆಗೆ ನಾಮಿನೇಷನ್ ಎಂಬ ಹೊಸ ಸಮಸ್ಯೆ ಕೂಡ ಮನೆಯ ಸದಸ್ಯರಿಗೆ ಎದುರಾಗಿದೆ.

  ಮೊದಲ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆದ ಕಿರಿಕ್ ಕೀರ್ತಿ ಅಲಿಯಾಸ್ ಕೀರ್ತಿ ಕುಮಾರ್ ಅವರಿಗೆ, ಎಲ್ಲಾ ಸೌಲಭ್ಯಗಳು ದೊರೆತವು. ಜೊತೆಗೆ ಮನೆಯ ಸದಸ್ಯರನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವ ವಿಶೇಷ ಅಧಿಕಾರ ದೊರೆಯಿತು.

  ಎಂದಿನಂತೆ ಮನೆ ಕೆಲಸಕ್ಕೆ ಸದಸ್ಯರನ್ನು ಗುಂಪು-ಗುಂಪಾಗಿ ವಿಂಗಡಣೆ ಮಾಡಿದ ನಂತರ, ಸ್ವಲ್ಪ ಗಲಾಟೆ, ತಿಂಡಿ-ತೀರ್ಥ ಮುಗಿಯಿತು. ಸಂಜೆ 5ರ ಸುಮಾರಿಗೆ ನಾಮಿನೇಷನ್ ಪ್ರಕ್ರಿಯೆ ಆರಂಭವಾಯಿತು.['ಬಿಗ್ ಬಾಸ್ ಕನ್ನಡ 4': ಮೊದಲ ದಿನದ ಹೈಲೈಟ್ಸ್]

  ಮೊದಲ ದಿನವೇ 'ಒಳ್ಳೆ ಹುಡುಗ' ಅಂತ ಹೇಳಿಕೊಳ್ಳುವ ನಿರ್ದೇಶಕ ಪ್ರಥಮ್ ಅವರು, ಇಡೀ ಮನೆಯವರ ಕೆಂಗಣ್ಣಿಗೆ ಗುರಿಯಾಗಿ, ನಾಮಿನೇಷನ್ ಗಾಗಿ ಎಲ್ಲರಿಂದ ಅತ್ಯಧಿಕ ಓಟು ಗಿಟ್ಟಿಸಿಕೊಂಡರು. ಯಾರೆಲ್ಲಾ ನಾಮಿನೇಟ್ ಆದರು ನೋಡಲು ಮುಂದೆ ಓದಿ...

  ಕ್ಯಾಪ್ಟನ್ ನಿಂದ ನಾಮಿನೇಷನ್ ಪ್ರಕ್ರಿಯೆ

  ಕ್ಯಾಪ್ಟನ್ ನಿಂದ ನಾಮಿನೇಷನ್ ಪ್ರಕ್ರಿಯೆ

  ಬಿಗ್ ಬಾಸ್ ಕ್ಯಾಪ್ಟನ್ ಕೀರ್ತಿ ಕುಮಾರ್ ಅವರಿಗೆ ನಾಮಿನೇಷನ್ ಪ್ರಕ್ರಿಯೆ ಮಾಡಲು ವಿಶೇಷ ಅಧಿಕಾರ ನೀಡಿದ್ದರು. ಅದರಂತೆ ಅವರು ತಮಗೆ ಬಿಗ್ ಬಾಸ್ ಕೊಟ್ಟ ವಿಶೇಷ ಕ್ಯಾಪ್ಟನ್ ರೂಮ್ ಗೆ ಒಬ್ಬೊಬ್ಬರನ್ನೇ ಕರೆದು, ಅವರ ಅಭಿಪ್ರಾಯದ ಜೊತೆಗೆ ಐದು ಜನರ ಹೆಸರನ್ನು ಹೇಳಲು ಸೂಚಿಸಿದರು.[ಈ ಬಾರಿಯ 'ಬಿಗ್ ಬಾಸ್ 4' ಅರಮನೆಯಲ್ಲಿ ಏನುಂಟು, ಏನಿಲ್ಲ?]

  ರೇಖಾ

  ರೇಖಾ

  1. ಮೋಹನ್, 2. ದೊಡ್ಡ ಗಣೇಶ್, 3. ಕಾವ್ಯ ಶಾಸ್ತ್ರಿ, 4. ಭುವನ್ ಪೊನ್ನಣ್ಣ, 5. ಮಾಳವಿಕಾ ಅವಿನಾಶ್. ಸ್ಪರ್ಶ ನಟಿ ರೇಖಾ ಅವರು ಇವರುಗಳ ಹೆಸರನ್ನು ಸೂಚಿಸಿ ಮನೆಯಿಂದ ಆಚೆ ಕಳುಹಿಸುವಂತೆ ಕೇಳಿಕೊಂಡರು.['ಬಿಗ್ ಬಾಸ್ ಕನ್ನಡ-4' ಶೋನ ಎಲ್ಲಾ ಸ್ಪರ್ಧಿಗಳ ಪರಿಚಯ]

  ವಾಣಿಶ್ರೀ

  ವಾಣಿಶ್ರೀ

  ಪ್ರಥಮ್, ದೊಡ್ಡ ಗಣೇಶ್, ಕಾವ್ಯ ಶಾಸ್ತ್ರಿ, ಸಂಜನಾ, ಭುವನ್ ಪೊನ್ನಣ್ಣ. ಇವರನ್ನು ಕಿರುತೆರೆ ನಟಿ ವಾಣಿಶ್ರೀ ಅವರು ನಾಮಿನೇಟ್ ಮಾಡಿದರು.

  ಕ್ರಿಕೆಟರ್ ದೊಡ್ಡ ಗಣೇಶ್

  ಕ್ರಿಕೆಟರ್ ದೊಡ್ಡ ಗಣೇಶ್

  ವಾಣಿಶ್ರೀ, ರೇಖಾ, ಸಂಜನಾ, ಪ್ರಥಮ್, ಕಾರುಣ್ಯ ರಾಮ್ ನ್ನು ದೊಡ್ಡ ಗಣೇಶ್ ಸೂಚಿಸಿದರು.

  ಸಂಜನಾ ಚಿದಾನಂದ್

  ಸಂಜನಾ ಚಿದಾನಂದ್

  ಪ್ರಥಮ್, ವಾಣಿಶ್ರೀ, ಕಾರುಣ್ಯ ರಾಮ್, ಗಣೇಶ್, ರೇಖಾ ಇವರುಗಳ ಹೆಸರನ್ನು ಕಿರುತೆರೆ ನಟಿ ಸಂಜನಾ ಅವರು ಸೂಚಿಸಿದರು.

  ಕಾವ್ಯ ಶಾಸ್ತ್ರಿ

  ಕಾವ್ಯ ಶಾಸ್ತ್ರಿ

  1. ಪ್ರಥಮ್, ಕಾರಣ: ಎಲ್ಲರಿಗೂ ಸ್ವಲ್ಪ ಹಿಂಸೆ. 2. ಭುವನ್, ಕಾರಣ: ಎಲ್ಲಾ ಕಡೆ ಸಕ್ರೀಯವಾಗಿ ಪಾಲ್ಗೊಳ್ಳುತ್ತಿಲ್ಲ. 3. ಸಂಜನಾ, ಕಾರಣ: ಹೇಳಿಸ್ಕೊಂಡು ಮಾಡೋಕೆ ಬಂದಿದ್ದೀವಿ, ಆದ್ರೆ ಅವಳಿಗೆ ಏನೂ ತೋಚುತ್ತಿಲ್ಲ ಅನ್ಸುತ್ತೆ. 4. ಮೋಹನ್, ಕಾರಣ: ಇದೆಲ್ಲವನ್ನೂ ಮೀರಿ ಬಂದಿದ್ದಾರೆ. ಬಹುಶಃ ಮೋಹನ್ ಅವರಿಗಿಂತ ಹೆಚ್ಚಾಗಿ ಬೇರೆಯವರಿಗೆ ಈ ಬಿಗ್ ಬಾಸ್ ಪಟ್ಟ ಗೆಲ್ಲೋ ಅಗತ್ಯ ಹೆಚ್ಚಿರಬಹುದು. 5. ವಾಣಿಶ್ರೀ. ಅವರ ಪರಿಚಯ ಇಲ್ಲ.

  ಚೈತ್ರಾ

  ಚೈತ್ರಾ

  ಸಂಜನಾ, ಭುವನ್, ಇವರಿಬ್ಬರು ಟಾಸ್ಕ್ ಗೆ ಹೆಚ್ಚಿನ ಇಂಟ್ರೆಸ್ಟ್ ತೋರಿಸಲಿಲ್ಲ. ದೊಡ್ಡ ಗಣೇಶ್, ಇವರು ಟಾಸ್ಕ್ ಮಾಡಿದ್ದಾರೆ ಆದ್ರೆ ಅವರ ಪರಿಚಯ ಇಲ್ಲದ ಕಾರಣ ಹೆಸರು ಹೇಳ್ತಾ ಇದ್ದೇನೆ. ಶೀತಲ್ ಶೆಟ್ಟಿ ಮತ್ತು ನಿರಂಜನ್ ದೇಶಪಾಂಡೆ.

  ಕಾರುಣ್ಯ ರಾಮ್

  ಕಾರುಣ್ಯ ರಾಮ್

  ಭುವನ್, ಅವರಿಗೆ ಟಾಸ್ಕ್ ನಲ್ಲಿ ಸೀರಿಯಸ್ ನೆಸ್ ಇಲ್ಲ. ಸಂಜನಾ, ಅವಳು ಯಾವುದಕ್ಕೂ, ಯಾರ ಜೊತೆನೂ ಬೆರೆಯೋದಿಲ್ಲ. ಶೀತಲ್ ಶೆಟ್ಟಿ, ಅವರು ಇಲ್ಲಿ ಯಾವುದೇ ರೂಲ್ಸ್ ಫಾಲೋ ಮಾಡ್ತಾ ಇಲ್ಲ. ಮಾಳವಿಕಾ, ಚೈತ್ರಾ. ಇವರಲ್ಲಾ ಇಂಗ್ಲೀಷ್ ಜಾಸ್ತಿ ಬಳಕೆ ಮಾಡುತ್ತಾರೆ.

  ಶೀತಲ್ ಶೆಟ್ಟಿ

  ಶೀತಲ್ ಶೆಟ್ಟಿ

  ಪ್ರಥಮ್: ಅವರು ಎಲ್ಲರಿಗೂ ತೊಂದರೆ ಕೊಡ್ತಾರೆ, ಗಣೇಶ್: ಇವರು ಜಾಸ್ತಿ ಕೆಲಸ ಮಾಡದೇ ಬರೀ ಕಾಮೆಂಟ್ ಮಾಡ್ತಾರೆ. ಪರಿಚಯ ಆಗದ ಕಾರಣ, ಕಾರುಣ್ಯ ರಾಮ್ ಮತ್ತು ರೇಖಾ. ಮೋಹನ್.

  ಪ್ರಥಮ್

  ಪ್ರಥಮ್

  ಮೊದಲನೆಯದಾಗಿ ಮಾಳವಿಕಾ ಅವಿನಾಶ್, ಚೈತ್ರಾ: ಚೈತ್ರಾ ಅವರು ಮೊದಲಿನ ಚೈತ್ರಾ ಅಲ್ಲ, ಅವರಿಗೆ ಏನಾಗಿದೆ ಗೊತ್ತಿಲ್ಲ. ಭುವನ್: ಇವರು ಹೊಸಬರೇ ಆಗಿದ್ರು, ನಾನು ಹೊಸಬನೇ. ನಾನು ಸಾಮಾನ್ಯ ಹುಡುಗ. ಕಾವ್ಯ ಶಾಸ್ತ್ರಿ: ಇವರು ಯಾಕೆಂದರೆ, ಅವರು ನನ್ನನ್ನು ಕಂಟ್ರೋಲ್ ಗೆ ತಗೋತಾ ಇದ್ದಾರೆ ಅಂತ ನನಗನ್ನಿಸುತ್ತಿದೆ. ಆದ್ರಿಂದ ನಾನು ಯಾರ ಕಂಟ್ರೋಲ್ ಗೂ ಸಿಗದೆ ಇರಲು ಅವರ ಹೆಸರನ್ನು ಸೂಚಿಸಿದ್ದೇನೆ. ನಿರಂಜನ್ ದೇಶಪಾಂಡೆ: ಇವರಿಗೆ ಕೋಪ ಜಾಸ್ತಿ. ಆದ್ರಿಂದ ಮಾಳವಿಕಾ ಮೇಡಂ ಅವರಿಗೆ ಬೇಕಾದ್ರೆ ಬಿಪಿ ಮಾತ್ರೆ ಕೊಡಿ.

  ಮೋಹನ್

  ಮೋಹನ್

  ಪ್ರಥಮ್, ಸಂಜನಾ, ಭುವನ್, ಕಾವ್ಯ ಶಾಸ್ತ್ರಿ, ವಾಣಿಶ್ರೀ, ಇವರುಗಳ ಹೆಸರನ್ನು ನಟ ಮೋಹನ್ ಅವರು ಸೂಚಿಸಿದರು.

  ಮಾಳವಿಕಾ

  ಮಾಳವಿಕಾ

  ಪ್ರಥಮ್, ಸಂಜನಾ, ಗಣೇಶ್, ವಾಣಿಶ್ರೀ, ಮತ್ತು ಕಾರುಣ್ಯ ರಾಮ್. ಹೆಸರನ್ನು ನಟಿ ಮಾಳವಿಕಾ ಅವಿನಾಶ್ ಅವರು ಸೂಚಿಸಿದರು.

  ನಿರಂಜನ್ ದೇಶಪಾಂಡೆ

  ನಿರಂಜನ್ ದೇಶಪಾಂಡೆ

  'ವಾಣಿಶ್ರೀ, ಪ್ರಥಮ್, ದೊಡ್ಡ ಗಣೇಶ್, ಕಾರುಣ್ಯ ರಾಮ್, ಮೋಹನ್ ಹೆಸರನ್ನು ನಿರಂಜನ್ ಸೂಚಿಸಿದರು.

  ಶಾಲಿನಿ

  ಶಾಲಿನಿ

  ಗಣೇಶ್, ಮೋಹನ್, ಪ್ರಥಮ್, ಇವರು ಯಾಕೆಂದರೆ ಇವರಿಗೆ ಹೆಣ್ಣು ಮಕ್ಕಳ ಜೊತೆ ಹೇಗೆ ಮಾತಾಡಬೇಕು ಅಂತ ಗೊತ್ತಾಗದೇ ಹೋಗಿದೆ. ನನ್ನ ಹೆಸರನ್ನು ಅರ್ಧಂಬರ್ದ ಕೆಟ್ಟ-ಕೆಟ್ಟದಾಗಿ ಹೇಳೋದು ಮಾಡಿದ್ದಾರೆ ಅದು ನನಗೆ ಇಷ್ಟ ಆಗಿಲ್ಲ. ಸಂಜನಾ, ವಾಣಿಶ್ರೀ.

  ಭುವನ್

  ಭುವನ್

  ವಾಣಿಶ್ರೀ: ಅವರ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ. ಕಾರುಣ್ಯ ರಾಮ್, ಚೈತ್ರ, ಪ್ರಥಮ್ ಮತ್ತು ರೇಖಾ.

  ಈ ವಾರದ ಎಲಿಮಿನೇಷನ್

  ಈ ವಾರದ ಎಲಿಮಿನೇಷನ್

  ಪ್ರಥಮ್, ಭುವನ್ ಪೊನ್ನಣ್ಣ, ವಾಣಿ ಶ್ರೀ, ಸಂಜನಾ ಚಿದಾನಂದ್, ದೊಡ್ಡ ಗಣೇಶ್ ಈ ವಾರ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಆದ ಕಿರಿಕ್ ಕೀರ್ತಿ ಅವರಿಗೆ ನಾಮಿನೇಟ್ ಆಗುವ ಅವಕಾಶ ಇಲ್ಲದ ಕಾರಣ, ಮನೆಯ ಸದಸ್ಯರ ಒಮ್ಮತದ ಮೇರೆಗೆ 5 ಜನರನ್ನು ಆಯ್ಕೆ ಮಾಡುವ ಅಧಿಕಾರ ಇತ್ತು. ಇನ್ನು ಕ್ಯಾಪ್ಟನ್ ಆಗಿ 5 ಜನರಲ್ಲಿ ಒಬ್ಬರನ್ನು ಉಳಿಸುವ ಅಧಿಕಾರ ಕೂಡ ಬಿಗ್ ಬಾಸ್ ಕೀರ್ತಿ ಕುಮಾರ್ ಅವರಿಗೆ ನೀಡಿದರು. ಆದ್ದರಿಂದ ಕೀರ್ತಿ ಅವರು ದೊಡ್ಡ ಗಣೇಶ್ ಅವರನ್ನು ಉಳಿಸಿಕೊಂಡರು.

  ಮುಖವಾಡ ಹಾಕಿಲ್ಲ: ಪ್ರಥಮ್

  ಮುಖವಾಡ ಹಾಕಿಲ್ಲ: ಪ್ರಥಮ್

  ನಾಮಿನೇಟ್ ಆಗೋದಿಕ್ಕೆ ಮನೆಯ ಸದಸ್ಯರಿಂದ ಅತೀ ಹೆಚ್ಚು ಓಟುಗಳನ್ನು ಪಡೆದುಕೊಂಡಿದ್ದೇನೆ. ನಾನು ನಾನಾಗಿ ಇದ್ದಿದ್ದಕ್ಕೆ ಅಥವಾ ಮುಖವಾಡ ಹಾಕದೇ ಇದ್ದಿದ್ದಕ್ಕೆ ನನ್ನನ್ನು ಎಲ್ಲರೂ ಟಾರ್ಗೆಟ್ ಮಾಡಿದ್ದಾರೆ. ಮುಖವಾಡ ಹಾಕಿದ್ರೆ ನಾಮಿನೇಟ್ ಆಗ್ತಾ ಇರಲಿಲ್ಲವೇನೋ. ಆದ್ರೂ ನಾನು ನಾನಾಗಿರೋದಿಕ್ಕೆ ಹೆಮ್ಮೆ ಇದೆ. ನನ್ನ ನೇಚರ್, ಬಾಡಿ ಲಾಂಗ್ವೇಜ್ ಮತ್ತು ನನ್ನತನವನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ಅದಿಕ್ಕೆ ಹೆಮ್ಮೆ ಇದೆ. ಬಹುಶಃ ನನ್ನ ಕನ್ನಡ ಪ್ರೇಮ ಮನೆಯವರಿಗೆ ಕಿರಿ-ಕಿರಿ ಆಗಿರಬಹುದು. ಎಲ್ಲದಕ್ಕೂ ಕ್ಷಮೆ ಇರಲಿ.

  ಈ ವಾರ ಔಟ್ ಆಗೋರು ಯಾರು?

  ಈ ವಾರ ಔಟ್ ಆಗೋರು ಯಾರು?

  ನಾಲ್ಕು ಜನ ನಾಮಿನೇಷನ್ ಆಗಿದ್ದು, ಯಾರು ಹೊರ ಹೋಗುತ್ತಾರೆ ಅಂತ ಕಾದು ನೋಡಬೇಕಿದೆ.

  English summary
  Director Pratham, Serial Actress Vanishri and Sanjana and Reality Star Bhuvan Ponnappa have nominated for the first week elimination. Check who nominated whom on Day 1 in Bigg Boss Kannada 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X